• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Top-5 News: ಉಮೇಶ್ ಕತ್ತಿ ನಿಧನ, ಸಿಎಂ ಬೊಮ್ಮಾಯಿ ಕಣ್ಣೀರು, ಪಾಕ್​ನಿಂದ ಹನಿಟ್ರ್ಯಾಪ್; ಬೆಳಗಿನ ಟಾಪ್ ನ್ಯೂಸ್​ಗಳು

Top-5 News: ಉಮೇಶ್ ಕತ್ತಿ ನಿಧನ, ಸಿಎಂ ಬೊಮ್ಮಾಯಿ ಕಣ್ಣೀರು, ಪಾಕ್​ನಿಂದ ಹನಿಟ್ರ್ಯಾಪ್; ಬೆಳಗಿನ ಟಾಪ್ ನ್ಯೂಸ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Umesh Katti Death: ತೀವ್ರ ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ


ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ (Umesh Katti Death) ಮೃತಪಟ್ಟಿದ್ದಾರೆ. ಇಂದಿಡೀ ದಿನ ಚೆನ್ನಾಗಿಯೇ ಇದ್ದ ಉಮೇಶ್ ಕತ್ತಿ, ಬೆಂಗಳೂರಿನ (Bengaluru) ಡಾಲರ್ಸ್ ಕಾಲನಿಯ (Dollars Colony) ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇಂದು ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ಎದೆನೋವು (Pain) ಕಾಣಿಸಿಕೊಂಡಿತ್ತು. ಕೂಡಲೇ ಮನೆಯವರು, ಅವರ ಸಹಾಯಕರು ಅವರನ್ನು ಅಲ್ಲಿಯೇ ಹತ್ತಿರದಲ್ಲಿದ್ದ ಎಂಎಸ್ ರಾಮಯ್ಯ ಆಸ್ಪತ್ರೆಗೆ (MS Ramaiah Hospital) ಕರೆದುಕೊಂಡು ಹೋಗಿದ್ದರು. ಕೂಡಲೇ ಅವರನ್ನು ಪರೀಕ್ಷಿಸಿದ ವೈದ್ಯರು (Doctors), ಸದ್ಯ ತುರ್ತು ನಿಗಾ ಘಟಕಕ್ಕೆ (Emergency Care Unit) ದಾಖಲಿಸಿ, ಚಿಕಿತ್ಸೆ ನೀಡಿದ್ದರು. ತಡರಾತ್ರಿ ಹೃದಯಾಘಾತದಿಂದ ಸಂಭವಿಸಿದ ಹಿನ್ನೆಲೆಯಲ್ಲಿ ಸಚಿವ ಉಮೇಶ್ ಕತ್ತಿ ಅವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.


2.Umesh Katti Death: ಹಳೆಯ ಒಡನಾಟ ನೆನಪು ಮಾಡಿಕೊಳ್ಳುತ್ತಾ ಕಣ್ಣೀರಿಟ್ಟ ಸಿಎಂ; ಬೆಳಗಾವಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ


ಉತ್ತರ ಕರ್ನಾಟಕದ ಗಟ್ಟಿ ಧ್ವನಿ, ಸಚಿವ ಉಮೇಶ್ ಕತ್ತಿ (Minister Umesh Katti) ಮಂಗಳವಾರ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ವಿಷಯ ತಿಳಿಯುತ್ತಲೇ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ (MS Ramaiah Hospital) ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಉಮೇಶ್ ಕತ್ತಿ (Umesh Katti Death) ಅವರ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಭಾವುಕರಾಗಿಯೇ ತಮ್ಮ ಮಾತುಗಳನ್ನು ಆರಂಭಿಸಿದರು. ಇನ್ನು ಉಮೇಶ್ ಕತ್ತಿ ಅವರ ಜೊತೆಗಿನ ಒಡನಾಟ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಕಣ್ಣೀರು ಹಾಕಿದರು. ಉಮೇಶ್ ಕತ್ತಿ ಅವರ ನಿಧನಕ್ಕೆ ಕಣ್ಣೀರಿನ ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು, ಬೆಳಗ್ಗೆ ಏಳು ಗಂಟೆಗೆ ಪಾರ್ಥಿವ ಶರೀರವನ್ನು ಬೆಳಗಾವಿಗೆ (Belagavi) ತೆಗೆದುಕೊಂಡು ಹೋಗಲಾಗುತ್ತದೆ. ಸಂಜೆ ಐದು ಗಂಟೆಗೆ ಅವರ ಸ್ವಗ್ರಾಮ ಬೆಲ್ಲದ ಬಾಗೇವಾಡಿಯ ತೋಟದಲ್ಲಿ ಉಮೇಶ್ ಕತ್ತಿಯವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು. ಸಾರ್ವಜನಿಕರ ದರ್ಶನಕ್ಕಾಗಿ ಮಧ್ಯಾಹ್ನ ಎರಡು ಗಂಟೆವರೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು. ಇದೇ ವೇಳೆ ಬೆಳಗಾವಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದರು.


3.Gold-Silver Price Today: ಮತ್ತೆ ದುಬಾರಿಯಾಗ್ತಿದೆ ಚಿನ್ನ, ಬೆಳ್ಳಿ: ಹೀಗಿದೆ ಇಂದಿನ ದರ!


Gold and Silver Price on September 07, 2022: ಕೆಲ ದಿನಗಳಿಂದ ಚಿನ್ನ-ಬೆಳ್ಳಿ ದರಗಳ ಏರಿಳಿತಗಳ ಕಣ್ಣು ಮುಚ್ಚಾಲೆ ಆಟ ಮುಂದುವರೆದಿದೆ. ಇಂದು ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆ ಕಂಡಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,675 ರೂ ಇದ್ದದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,690 ರೂಗೆ ಜಿಗಿದಿದೆ. ಇತ್ತ ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,900 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,160 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,69,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,11,600 ಆಗಿದೆ.


4.Ponniyin Selvan: ರಜನಿಕಾಂತ್ ಕಾಲುಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ!


ಸೌತ್​​ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆಯಲಿರುವ ಸಿನಿಮಾ ಪೊನ್ನಿಯಿನ್ ಸೆಲ್ವನ್ (Ponniyin Selvan) ಬಿಡುಗಡೆಗೆ ಇನ್ನೂ ಒಂದು ತಿಂಗಳು ಕೂಡಾ ಬಾಕಿ ಉಳಿದಿಲ್ಲ. ಚಿತ್ರದ ಟ್ರೇಲರ್‌ಗಾಗಿ (Trailer) ಅಭಿಮಾನಿಗಳ ಕಾಯುವಿಕೆ ಕೊನೆಯಾಗಿದೆ. ಸೆಪ್ಟೆಂಬರ್ 6 ರಂದು ಚೆನ್ನೈನಲ್ಲಿ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಯಾಗಿದೆ. ಈ ಸಮಾರಂಭದಲ್ಲಿ ದಕ್ಷಿಣ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. ಸಮಾರಂಭದಲ್ಲಿ ರಜನಿಕಾಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರೆ, ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan), ನಾಸೀರ್, ಮಣಿರತ್ನಂ ಮತ್ತು ಚಿತ್ರದ ಇತರ ಕಲಾವಿದರು ಮತ್ತು ಸಿಬ್ಬಂದಿ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗೌರವದ ಸಂಕೇತವಾಗಿ, ಐಶ್ವರ್ಯಾ ಸಮಾರಂಭದಲ್ಲಿ ರಜನಿಕಾಂತ್ ಅವರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ.


5. Pakistan Honeytrap: ಭಾರತೀಯ ಯೋಧರಿಗೆ ಹನಿಟ್ರ್ಯಾಪ್ ಬಲೆ ಬೀಸ್ತಿದೆ ಪಾಕ್​ನ ISI, ಬಯಲಾಯ್ತು ಮೋಸದಾಟ!


ಹನಿಟ್ರ್ಯಾಪ್ (Honeytrap) ಅಂದ ಕೂಡಲೇ ಎಲ್ಲರ ಕಣ್ಣರಳುತ್ತದೆ. ಎಂಥೆಂತವರು ಈ ಮೋಸದ ಜಾಲಕ್ಕೆ (Fraud Network) ಸಿಲುಕಿಲ್ಲ ಹೇಳಿ? ಈಗ ದೇಶದ್ರೋಹಿಗಳು, ಪಾಪಿಸ್ತಾನ (Pakistan) ಕೂಡ ಭಾರತವನ್ನು (India) ಮಣಿಸಲು ಹನಿಟ್ರ್ಯಾಪ್ ಎಂಬ ನೀಚ ಕೃತ್ಯಕ್ಕೆ ಕೈ ಹಾಕಿದೆ. ಆಶ್ಚರ್ಯ ಆಗ್ತಿದ್ಯಾ? ಆದ್ರೆ ಇದು ಕಠು ಸತ್ಯ. ಸುಂದರ ಹುಡುಗಿಯರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಬಲೆ ಹೆಣೆಯಲಾಗ್ತಿದೆ. ಅವರ ಗುರಿ ಭಾರತದ ಮಿಲಿಟರಿ ಅಧಿಕಾರಿಗಳು ಮತ್ತು ಜವಾನರು. ಈ ಹನಿಟ್ರ್ಯಾಪ್ ಆಟದ ವಿಧಾನವನ್ನ ಮಾಡ್ಸ್ ಆಪರೇಂಡಿ ವಿಧಾನ ಎಂದು ಕರೆಯಲಾಗ್ತಿದೆ. ಅಂದ್ರೆ ಮಿಲಿಟರಿ ಅಧಿಕಾರಿಗಳು ಮತ್ತು ಜವಾನರನ್ನು ಸಿಹಿ ಮಾತು ಮತ್ತು ವಿಡಿಯೋ ಕಾಲ್ ಮಾಡಿ ಬಲೆಗೆ ಬೀಳಿಸುವ ವಿಧಾನವಾಗಿದೆ.

top videos
    First published: