Morning Digest: ಬೆಂಗಳೂರು ಮಳೆಗೆ ಯುವತಿ ಬಲಿ, ಬಿಗ್​​ಬಾಸ್​ ಮನೆಯಲ್ಲಿ ಚುಂಬನದಾಟ, ಮತ್ತೆ ಮಳೆ; ಬೆಳಗಿನ ಟಾಪ್ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Bengaluru Rains: ಬೆಂಗಳೂರು ಮಳೆ ಅವಾಂತರಕ್ಕೆ ಯುವತಿ ಬಲಿ; ವಿದ್ಯುತ್ ಸ್ಪರ್ಶಿಸಿ ಸಾವು

ರಾಜಧಾನಿ ಬೆಂಗಳೂರಿನ ಮಳೆಗೆ ಯುವತಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರದಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಅಖಿಲಾ ಮೃತ ಯುವತಿ. ಮಾರತ್​​ಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಸೋಮವಾರ ರಾತ್ರಿ ಸುಮಾರು 9.30ಕ್ಕೆ ಈ ಅವಘಡ ಸಂಭವಿಸಿದೆ. ಮೃತ ಯುವತಿ ಅಖಿಲಾ ಕಳೆದ ಎರಡು ವರ್ಷಗಳಿಂದ ಖಾಸಗಿ ಕಾಲೇಜ್​​ನಲ್ಲಿ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್​ಮೆಂಟ್​ನಲ್ಲಿ ಕೆಲಸ ಮಾಡಿಕೊಂಡಿದ್ದರು. ತಂದೆ ತಾಯಿ ಜೊತೆಗೆ ಸಿದ್ದಾಪುರದಲ್ಲಿ ವಾಸವಾಗಿದ್ದರು. ನೀರು ಹೆಚ್ಚಾಗಿದ್ದರಿಂದ ಸ್ಕೂಟರ್ ಆಫ್ ಆಗಿ ಬೀಳುವ ಸಮಯದಲ್ಲಿ ಸಹಾಯಕ್ಕೆ ಬಲ ಭಾಗದಲ್ಲೇ ಇದ್ದ ಎಲೆಕ್ಟ್ರಿಕಲ್ ಪೋಲ್ (ವಿದ್ಯುತ್ ಕಂಬ)2 ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಮೃತರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

2.Bigg Boss OTT Kannada: ಜಯಶ್ರೀಗೆ ಕಿಸ್ ಕೊಟ್ಟ ರಾಕೇಶ್! ಸೋನುಗೆ ಅಸೂಯೆ

ಬಿಗ್ ಬಾಸ್ ಮನೆಯಲ್ಲಿ ಲವ್ ಕಿಸ್ಸಿಂಗ್ ರೊಮ್ಯಾನ್ಸ್ ಎಲ್ಲಾ ತುಂಬಾ ಕಾಮನ್. ಇದಿಲ್ಲದೆ ಶೋ ನಡೆಯೋದೇ ಇಲ್ವೇನೋ ಎನ್ನುವಷ್ಟರ ಮಟ್ಟಿಗೆ ಬಿಗ್​ಬಾಸ್ ಮನೆಯಲ್ಲಿ ಪ್ರಣಯ ದೃಶ್ಯಗಳು ನಡೆಯುತ್ತವೆ. ಇದೀಗ ನಟ ರಾಕೇಶ್ ಅಡಿಗ ಇದನ್ನು ಸತ್ಯ ಎಂದು ಸಾಬೀತು ಮಾಡಿದ್ದಾರೆ. ಕಣ್ಸನ್ನೆ, ಕ್ರಶ್, ಲೈನ್ ಎಲ್ಲಾ ಬಿಟ್ಟು ಒಂದು ಹೆಜ್ಜೆ ಮುಂದೆ ಹೋಗಿ ಜಯಶ್ರೀ ಆರಾಧ್ಯ ಕೆನ್ನೆಗೆ ಮುತ್ತಿಟ್ಟು ಸುದ್ದಿಯಾಗಿದ್ದಾರೆ. ಈ ಸಿಹಿ ಮುತ್ತು ಕೊಟ್ಟಿರುವುದರ ಹಿಂದೆ ಬೇರೆಯೇ ಕಾರಣವಿದ್ದರೂ ಇಂಥದ್ದೊಂದು ಘಟನೆ ಪ್ರೇಕ್ಷಕರ ಮಧ್ಯೆ ಚರ್ಚೆಗೆ ಕಾರಣವಾಗಿದೆ.

3.Siddaramaiah: ಆದೇಶ ಹಿಂದಕ್ಕೆ ಪಡೆದಿರೋದು ಹಣದ ಕೊರತೆಯಿಂದಲೋ? ಕಮಿಷನ್ ನಿರೀಕ್ಷೆಯಿಂದಲೋ?; ಸಿದ್ದರಾಮಯ್ಯ ಪ್ರಶ್ನೆ

ಪರಿಶಿಷ್ಟ ಜಾತಿ/ಪಂಗಡದ ಬಿಪಿಎಲ್ ಕುಟುಂಬಗಳಿಗೆ (SC/ST BPL Family) ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು (Free Electricity Supply) 40 ಯುನಿಟ್ ಗಳಿಂದ 75 ಯುನಿಟ್​​ಗಳಿಗೆ ಹೆಚ್ಚಿಸುವ ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿರೋದಕ್ಕೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ (Former CM Siddaramaiah) ಆಕ್ರೋಶ ಹೊರ ಹಾಕಿದ್ದಾರೆ. ಸಾಲು ಸಾಲು ಟ್ವೀಟ್ (Siddaramaiah’s Tweet) ಮಾಡಿರುವ ವಿಪಕ್ಷ ನಾಯಕರು, ಇಂಧನ ಸಚಿವ ವಿ.ಸುನೀಲ್ ಕುಮಾರ್ (Power Minister V Sunil Kumar) ಅವರನ್ನ ಪ್ರಶ್ನೆ ಮಾಡಿದ್ದಾರೆ. ಪರಿಶಿಷ್ಟ ಜಾತಿ/ಪಂಗಡದ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ಪೂರೈಕೆಯನ್ನು 40 ಯುನಿಟ್ ಗಳಿಂದ 75 ಯುನಿಟ್ ಗಳಿಗೆ ಹೆಚ್ಚಿಸುವ ಆದೇಶವನ್ನು ರಾಜ್ಯ ಇಂಧನ ಸಚಿವ ವಿ.ಸುನೀಲ್ ಕುಮಾರ್ ಹಿಂದಕ್ಕೆ ಪಡೆದಿರುವುದು ಹಣದ ಕೊರತೆಯಿಂದಲೋ? ಕಮಿಷನ್ ನಿರೀಕ್ಷೆಯಿಂದಲೋ ಎಂದು ಕೇಳಿದ್ದಾರೆ.

4.Karnataka Weather Report: ಮಳೆ ನಿಂತ್ರೂ ಅವಾಂತರ ನಿಲ್ತಿಲ್ಲ; ಇಂದು, ನಾಳೆ ಸಹ ಅಬ್ಬರಿಸಲಿದ್ದಾನೆ ವರುಣದೇವ

ರಾಜ್ಯದಲ್ಲಿ ಸುರಿಯುತ್ತಿರುವ ಮಳೆ (Karnataka Rainfall) ಮುಂದುವರಿದಿದೆ. ರಾಜಧಾನಿ ಬೆಂಗಳೂರು (Bengaluru Weather) ಹವಾಮಾನ ಅಂದಾಜಿಸಲು ಸಾಧ್ಯವಾಗದಷ್ಟು ಕ್ಷಣಕ್ಕೊಮ್ಮೆ ಬದಲಾಗುತ್ತಿದೆ. ಇಂದು ಸಹ ಮೋಡ ಮುಸುಕಿದ ವಾತಾವರಣದ (Cloudy Weather) ಜೊತೆ ಬಿಸಿಲು ಸಹ ಇರಲಿದೆ. ಭಾನುವಾರ ರಾತ್ರಿ ಸುರಿದಿದ್ದ ಮಳೆಗೆ (Bengaluru Rains) ಬೆಂಗಳೂರು ನಗರ ತತ್ತರಿಸಿತ್ತು. ಆದ್ರೆ ಸೋಮವಾರ ಬೆಳಗ್ಗೆ ಬಿಸಿಲು ಜನರಿಗೆ ಚುರುಕು ಮುಟ್ಟಿಸುತ್ತಿತ್ತು. ಸಂಜೆ ಆಗುತ್ತಿದ್ದಂತೆ ವಾತಾವರಣ ಬದಲಾಗಿ ಗುಡುಗು-ಮಿಂಚು ಸಹಿತ ಮಳೆಯಾಗಲು (Rains) ಆರಂಭಿಸಿತು. ಸಿಲಿಕಾನ್ ಸಿಟಿಯಲ್ಲಿ ಇಂದು ಮತ್ತು ನಾಳೆ ಸಹ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

5.Guru Shishyaru: ಶಿಕ್ಷಕರ ದಿನ ಗುರುಶಿಷ್ಯರು ಟ್ರೈಲರ್ ರಿಲೀಸ್! ಗುರುವನ್ನು ಕಾಡೋ ಶಿಷ್ಯರ ಹಾಸ್ಯದ ಹೊನಲು !

ಹಾಸ್ಯ ನಾಯಕ ನಟ ಶರಣ್ (Comedy Hero Sharan)ಅಭಿನಯದ ಗುರು ಶಿಷ್ಯರು ಚಿತ್ರದ ಟ್ರೈಲರ್ (Cinema Trailer) ಸಖತ್ ಆಗಿಯೇ ಇದೆ. ಚಿತ್ರದ ಒಟ್ಟು ಚಿತ್ರಣವನ್ನೇ ಕಟ್ಟಿಕೊಡುವ ಈ ಟ್ರೈಲರ್ ನಲ್ಲಿ ಕಾಮಿಡಿ ಕಿಕ್ (Comedy Kick) ಕೊಡುವ ಡೈಲಾಗ್​ಗಳೂ ಇವೆ. ಆದರೆ, ಅವು ಒಂಚೂರು ಮುಜುಗುರ ಮೂಡಿಸಿದ್ರೂ ಕೂಡ ಹಾಸ್ಯ ಪ್ರಿಯರಿಗೆ ಮಜಾ ಕೊಡುವಂತಿದೆ. ಟ್ರೈಲರ್ ನಲ್ಲಿ ಇನ್ನೂ ಸಾಕಷ್ಟು ವಿಷಯ ಇದೆ. ಅದನ್ನ ಇಲ್ಲಿ ವಿಶ್ಲೇಷಣೆ ಮಾಡಿದ್ದೇವೆ. ಮುಂದೆ ಇದೆ ಓದಿ. ಗುರು ಶಿಷ್ಯರು ಸಿನಿಮಾ ಕಂಪ್ಲೀಟ್ ಹಾಸ್ಯಮಯ ಸಿನಿಮಾನೇ ಅಂತ ಚಿತ್ರದ ಟ್ರೈಲರ್ ನೋಡಿದ್ರೆ ಅನಿಸೋದಿಲ್ಲ. ಯಾಕೆಂದ್ರೆ, ಇಲ್ಲಿ ಗಂಭೀರವಾದ ಸುಮಾರು ವಿಷಯಗಳು ಇವೆ. ಅವುಗಳನ್ನ ಹಾಸ್ಯದ ಮೂಲಕ ಹೇಳೋ ಕೆಲಸ ಆಗಿದೆ ಅಂತಲೇ ಒಂದೊಮ್ಮೆ ಅನಿಸದೇ ಇರದು. ಆದರೂ ಇಲ್ಲಿ ತೆಗೆದುಕೊಂಡ ಆ ವಿಷಯ ಖೋ ಖೋ ಆಟ.
Published by:Mahmadrafik K
First published: