• Home
  • »
  • News
  • »
  • state
  • »
  • Top 5 News: ವಾಸುಕಿ ವೈಭವ್ ಗಲಾಟೆ, ಚೀನಾಗೆ ಮೋದಿ ಶಾಕ್, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್

Top 5 News: ವಾಸುಕಿ ವೈಭವ್ ಗಲಾಟೆ, ಚೀನಾಗೆ ಮೋದಿ ಶಾಕ್, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Singer Vasuki Vaibhav: ಥಿಯೇಟರ್​​ನಲ್ಲಿ ವಾಸುಕಿ ವೈಭವ್ ಹಾಗೂ ಯುವಕರ ನಡುವೆ ಗಲಾಟೆ


ಗಾಯಕ ವಾಸುಕಿ ವೈಭವ್ (Singer Vasuki Vaibhav) ಹಾಗೂ ಯುವಕರ ನಡುವೆ ಥಿಯೇಟರ್​​ನಲ್ಲಿ(Theatre) ಗಲಾಟೆಯಾಗಿದೆ. ಬೆಂಗಳೂರಿನ ಊರ್ವಶಿ ಥಿಯೇಟರ್​ನಲ್ಲಿ(Urvashi Theatre) ಘಟನೆ ನಡೆದಿದೆ. ವಾಸುಕಿ ವೈಭವ್ ತಮ್ಮ ಸ್ನೇಹಿತರ ಜೊತೆ ಕಾಂತಾರ ಸಿನಿಮಾ (Kantara Cinema) ನೋಡಲು ಹೋಗಿದ್ದರು. ಸೀಟಿನಲ್ಲಿ ಕೂರುವ ವಿಚಾರಕ್ಕೆ ಗಲಾಟೆ ಆಗಿದೆ. ನಾಲ್ಕೈದು ಮಂದಿ ವಾಸುಕಿ ಮತ್ತು ಸ್ನೇಹಿತರ ಜೊತೆ ಗಲಾಟೆ ಮಾಡುವುದಲ್ಲದೇ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಸ್ಟೇಷನ್​ನಲ್ಲಿ (Kalasipalya Police Station) ರಾಜಿ ಸಂಧಾನ ನಡೆದಿದೆ. ಯುವಕರು ಮತ್ತು ವಾಸುಕಿ ವೈಭವ್ ನಡುವೆ ಪೊಲೀಸರು ಸಂಧಾನ ನಡೆಸಿದ್ದಾರೆ.


2.Communal Clash: ರಾಮನಗರ, ಕೋಲಾರದಲ್ಲಿ ದಲಿತರು, ಸವರ್ಣಿಯರ ನಡುವೆ ಗಲಾಟೆ; ಪ್ರಕರಣ ದಾಖಲು


ದಲಿತರ ಬೀದಿಗೆ (Dalit Area) ದೇವರ ಉತ್ಸವ (Devara Utsava) ಹೋಗದಿದ್ದಕ್ಕೆ ಮಾರಾಮಾರಿ ನಡೆದಿದೆ. ಪೊಲೀಸರ ಎದುರೇ ದಲಿತರು- ಸವರ್ಣಿಯರು ಕೈಕೈ ಮಿಲಾಯಿಸಿದ್ದಾರೆ. ಈ ಘಟನೆ ಕೋಲಾರ ತಾಲೂಕಿನ ದಾನವಹಳ್ಳಿ‌ (Danavahalli, Kolar) ಗ್ರಾಮದಲ್ಲಿ ನಡೆದಿದೆ. ದೇವಾಲಯದ ಪ್ರವೇಶದ ವಿಚಾರದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷವಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಎಣ್ಣೇಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.


Morning Digest 6th october 2022 have quick look of important news today mrq
ಸಾಂದರ್ಭಿಕ ಚಿತ್ರ


3.Economy: ಚೀನಾದ ಕೈಗಾರಿಕಾ ಯೋಜನೆ ತನ್ನೆಡೆ ಸೆಳೆಯಲು ಭಾರತದ ಬಿಗ್ ಪ್ಲಾನ್!


ಭಾರತದಲ್ಲಿ ಎಲ್ಲಾ ಮೂಲಸೌಕರ್ಯ ಯೋಜನೆಗಳಲ್ಲಿ ಅರ್ಧದಷ್ಟು ವಿಳಂವಾಗಿದ್ದು ಇನ್ನುಳಿದ ಯೋಜನೆಗಳು ಅಂದಾಜು ಬಜೆಟ್‌ಗಿಂತ ಹೆಚ್ಚು ಹಣದಲ್ಲಿ ಚಾಲನೆಗೊಳ್ಳುತ್ತಿವೆ. ಈ ದೀರ್ಘಕಾಲಿಕ ಅಡೆತಡೆಗಳಿಗೆ ತಂತ್ರಜ್ಞಾನವೇ ಪರಿಹಾರವನ್ನೊದಗಿಸುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ನಂಬಿಕೆಯಾಗಿದೆ. 100-ಟ್ರಿಲಿಯನ್ ರೂಪಾಯಿಗಳ ($1.2 ಟ್ರಿಲಿಯನ್) ಮೆಗಾ ಯೋಜನೆಯ ಪಿಂ ಗತಿಶಕ್ತಿ ಯೋಜನೆಯು 16 ಸಚಿವಾಲಯಗಳನ್ನು ಸಂಯೋಜಿಸುವ ಡಿಜಿಟಲ್ ವೇದಿಕೆಯನ್ನು ರೂಪುಗೊಳಿಸುತ್ತದೆ.


Morning Digest 6th october 2022 have quick look of important news today mrq
ಚೀನಾ ವಿರುದ್ಧ ಭಾರತದ ಪ್ಲಾನ್

4.Bharat Jodo: ಮುಂಜಾನೆ 5 ಗಂಟೆಗೆ ಎದ್ದು ಪಾದಯಾತ್ರೆಗೆ ಹೊರಡುವ ರಾಗಾ, ಭೇಟಿಯಾಗಲು ಬಯಸುವವರ ಆಯ್ಕೆ ಹೇಗೆ ನಡೆಯುತ್ತೆ?


ಭಾರತ್ ಜೋಡೋ ಯಾತ್ರಾ (Bharat Jodo Yatra) ಅಭಿಯಾನದಡಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತುತ ಪಾದಯಾತ್ರೆ ನಡೆಸುತ್ತಿದ್ದಾರೆ. ಈ 150 ದಿನಗಳ ಸುದೀರ್ಘ ಕಾಂಗ್ರೆಸ್ ಅಭಿಯಾನವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಈ ವೇಳೆ ರಾಹುಲ್ ಗಾಂಧಿ (Rahul Gandhi) ಮತ್ತು ಅವರ ಸಹ ಪ್ರಯಾಣಿಕರ ಜೊತೆ ಸುಮಾರು 3,500 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ.


Morning Digest 6th october 2022 have quick look of important news today mrq
ಸಾಂದರ್ಭಿಕ ಚಿತ್ರ


ಇಂತಹ ಸಂದರ್ಭದಲ್ಲಿ ನ್ಯೂಸ್ 18 ಭಾರತ್ ಜೋಡೋ ಯಾತ್ರೆಯೊಂದಿಗೆ ಒಂದು ದಿನ ಕಳೆದಿದ್ದು, ರಾಹುಲ್ ಗಾಂಧಿ ಅವರ ಸಹ-ಪ್ರಯಾಣಿಕರು ಮತ್ತು ಸಾಮಾನ್ಯ ಜನರೊಂದಿಗೆ ಮಾತನಾಡಿ ಅವರ ಮನಸ್ಥಿತಿಯನ್ನು ತಿಳಿಯಲು ಪ್ರಯತ್ನಿಸಿದೆ.


5.Gold-Silver Price Today: ದಸರಾಗೆ ತೆರೆ ಗ್ರಾಹಕರಿಗೆ ಚಿನ್ನ-ಬೆಳ್ಳಿ ದರ ಏರಿಕೆ ಬರೆ: ಹೀಗಿದೆ ಇಂದಿನ ಬೆಲೆ


Gold And Silver Rate 06 October 2022: ಹಬ್ಬದ ದಿನವಾದ ನಿನ್ನೆ ಸಹಜವಾಗಿಯೇ ಬಂಗಾರದ ಬೆಲೆ ಏರಿಕೆ ಕಂಡಿದೆ ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,735 ರೂ ಇದ್ದದ್ದು, ಇಂದು ಸಹ ಅದೇ ಏರಿಕೆಯನ್ನು ಮುಂದುವರಿಸಿದ್ದು, ಇಂದು ಒಂದು ಗ್ರಾಂ ಚಿನ್ನದ ಬೆಲೆ 4,775 ರೂ ಆಗಿದೆ. ಕಳೆದ ಸ್ವಲ್ಪ ದಿನದಿಂದ 4,635 ಹೀಗೆ ಸಾಗುತ್ತಿದ್ದ ಚಿನ್ನ ನಿನ್ನೆ ದಿಢೀರ್‌ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,775 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,210 ಆಗಿದೆ.


Morning Digest 6th october 2022 have quick look of important news today mrq
ಸಾಂಕೇತಿಕ ಚಿತ್ರ


ಇದೇ ರೀತಿ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,200 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,680 ಆಗಿದೆ. ಇನ್ನು ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,750 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,100 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,77,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ 5,21,000 ಆಗಿದೆ.

Published by:Mahmadrafik K
First published: