• Home
  • »
  • News
  • »
  • state
  • »
  • Top 5 News: ದಸರಾ ಸಂಭ್ರಮ, ಕಾಲುಸಂಕ ನಿರ್ಮಾಣ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್

Top 5 News: ದಸರಾ ಸಂಭ್ರಮ, ಕಾಲುಸಂಕ ನಿರ್ಮಾಣ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Chikkamagaluru: ಸರ್ಕಾರಕ್ಕೆ ಸೆಡ್ಡು ಹೊಡೆದು ಸ್ಥಳೀಯರಿಂದಲೇ ಕಾಲುಸಂಕ ನಿರ್ಮಾಣ; ಪರಿಪರಿಯಾಗಿ ಬೇಡಿಕೊಂಡರೂ ಕ್ಯಾರೇ ಅನ್ನದ ಜನಪ್ರತಿನಿಧಿಗಳು!


ಅದು ತುಂಗಾ ನದಿಯ (Tunga River) ಆಚೆಗಿರುವ ಗ್ರಾಮ. ಮಳೆಗಾಲದಲ್ಲಿ (Rainy Season) ಅಲ್ಲಿನ ನಿವಾಸಿಗಳ ಸ್ಥಿತಿಯನ್ನಂತೂ ಹೇಳೋದೆ ಬೇಡ. ಒಂದು ರೀತಿ ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡು ಕಾಡುಪ್ರಾಣಿಗಳಂತೆ ದಯನೀಯವಾಗಿ ಬದುಕುವ ಬದುಕು ಅವರದ್ದು. ಹಾಗಾಗಿ ನಮಗೊಂದು ಸೇತುವೆ (Bridge) ಕಲ್ಪಿಸಿಕೊಡಿ ಎಂದು ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದ್ರೆ, ಹಳ್ಳಿಯ (Villagers) ಬಡಜನರ ಕೂಗು ದಪ್ಪ ಚರ್ಮದ ಅಧಿಕಾರಿಗಳು-ಜನನಾಯಕರಿಗೆ ಕೇಳಲೇ ಇಲ್ಲ. ಹಾಗಂತ ಆ ಹಳ್ಳಿಗರೇನು ಸುಮ್ನೆ ಕೂರಲಿಲ್ಲ. ತಲೆಯಲ್ಲಿ ಬುದ್ಧಿ ಇದೆ. ತೋಳಲ್ಲಿ ಶಕ್ತಿ ಇದೆ ಅಂತ ಸರ್ಕಾರಕ್ಕೆ (Government) ಸೆಡ್ಡು ಹೊಡೆದಿದ್ದಾರೆ.


Morning Digest 5th October 2022 have quick look of important news today mrq
ಕಾಲುಸಂಕ


2.Mysuru Dasara 2022: ಜಂಬೂಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನ; ಜಿಲ್ಲಾವಾರು, ಇಲಾಖಾವಾರು ಪಟ್ಟಿ ಇಲ್ಲಿದೆ


ಎರಡು ವರ್ಷ ಕೊರೊನಾದಿಂದ (Corona Virus) ಕಳೆಗುಂದಿದ್ದ ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2022) ಮಹೋತ್ಸವ ಈ ಬಾರಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಸಾಂಸ್ಕೃತಿಕ ನಗರಿ ವಿದ್ಯುತ್​ ದೀಪಗಳಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು (Tourist) ಕೈಬೀಸಿ ಕರೆಯುತ್ತಿದೆ. ಇಂದು ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ (Jambu Savari) ಆರಂಭವಾಗಲಿದೆ. ಜಿಲ್ಲಾಡಳಿತ ಈಗಾಗಲೇ ಜಂಬೂ ಸವಾರಿಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.


Morning Digest 5th October 2022 have quick look of important news today mrq
ದಸರಾ


ಮಧ್ಯಾಹ್ನ 2.36 ರಿಂದ 02:50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ನಂದಿ ಧ್ವಜ ಕಂಬಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ನಂತರ ಪೂಜೆ ಬಳಿಕ ಸಂಜೆ 05:07 ರಿಂದ 5.18ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗುತ್ತದೆ.


3.Gold-Silver Price Today: ದಸರಾ ಸಂಭ್ರಮದ ಮಧ್ಯೆ ದುಬಾರಿಯಾದ ಚಿನ್ನ, ಬೆಳ್ಳಿ: ಹೀಗಿದೆ ನೋಡಿ ಇಂದಿನ ರೇಟ್


ಇನ್ನು ಹಬ್ಬದ ದಿನವಾದ ಇಂದು ಸಹಜವಾಗಿಯೇ ಬಂಗಾರದ ಬೆಲೆ ಏರಿಕೆ ಕಂಡಿದೆ ನಿನ್ನೆ ಒಂದು ಗ್ರಾಂಗೆ 4,650ರೂ ಇದ್ದ ಚಿನ್ನದ ದರ ಇಂದು ಏರಿಕೆಯಾಗಿ ಕಂಡಿದ್ದು ಒಂದು ಗ್ರಾಂ ಚಿನ್ನದ ಬೆಲೆ 4,685 ರೂ ಆಗಿದೆ. ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,685 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,111 ಆಗಿದೆ. ಇದೇ ರೀತಿ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,480 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,888 ಆಗಿದೆ. ಇನ್ನು ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,850 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,110 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,68,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ 5,11,100 ಆಗಿದೆ.


Morning Digest 5th October 2022 have quick look of important news today mrq
ಸಾಂಕೇತಿಕ ಚಿತ್ರ


4.PFI, SDPI ಮುಖಂಡರಿಗೆ ಷರತ್ತು ಬದ್ಧ ಜಾಮೀನು ಮಂಜೂರು; ಪೊಲೀಸರ ಬಲೆಗೆ ಬೀಳದ ನವೀದ್ ಕಟಗಿ


ದೇಶಾದ್ಯಂತ ಪಿಎಫ್ಐ (PFI Ban) ಸೇರಿ ಹಲವು ಸಂಘಟನೆಗಳ ಬ್ಯಾನ್ ಬಳಿಕ ಮತ್ತೆ ಮಂಗಳೂರಿನಲ್ಲಿ (Mangaluru) ಬರಹ ಸಂಚಲನ ಮೂಡಿಸಿದೆ. ಈ ಮಧ್ಯೆ ಬೆಳಗಾವಿಯಲ್ಲಿ (Belagavi) ಅರೆಸ್ಟ್ ಆಗಿದ್ದ ಏಳು ಜನರಿಗೂ ಈಗ ಜಾಮೀನು (Bail) ಮಂಜೂರಾಗಿದೆ. ಆದ್ರೆ ಈವರೆಗೂ ಪಿಎಫ್​​ಐ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ (Naveed Katagi) ಬಂಧಿಸುವಲ್ಲಿ ಬೆಳಗಾವಿ ಪೊಲೀಸರು (Belagavi Police) ಸಫಲರಾಗಿಲ್ಲ. ದೇಶದ ಆಂತರಿಕ ಭದ್ರತೆ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ (Central Government) ಪಿಎಫ್ಐ ಸೇರಿ ಅದರ ಅಂಗ ಸಂಸ್ಥೆಗಳನ್ನ ಐದು ವರ್ಷ ಬ್ಯಾನ್ ಮಾಡಿದೆ.


Morning Digest 5th October 2022 have quick look of important news today mrq
ಬೆಳಗಾವಿ


5.Symphony: ಸಿಂಫೊನಿ ಕುಟುಂಬದಿಂದ ಐಷಾರಾಮಿ ಬಂಗಲೆ ಖರೀದಿ! ಮೌಲ್ಯ ಎಷ್ಟು ಗೊತ್ತಾ?


ವಾಣಿಜ್ಯ ನಗರಿ ಮುಂಬೈ ಒಂದು ಸುಂದರ ನಗರಿ. ಸಮುದ್ರ ಪಕ್ಕವೇ ಇರುವ ಈ ಸಿಟಿ ಸೌಂದರ್ಯಕ್ಕೆ ಹೆಸರಾಗಿದೆ. ಜಗತ್ತಿನಲ್ಲೇ ಶ್ರೀಮಂತರು ಎನಿಸಿಕೊಂಡವರು ಇಲ್ಲಿ ನೆಲೆಸಿದ್ದಾರೆ. ಬಹಳಷ್ಟು ಬಾಲಿವುಡ್‌ ಸೆಲೆಬ್ರಿಟಿಗಳು ವಾಸವೂ ಇಲ್ಲಿಯೇ. ದೇಶದ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿರುವ ಈ ಮುಂಬೈನಲ್ಲಿ (Mumbai) ಮತ್ತೊಬ್ಬ ಕುಬೇರ ಬಹುಕೋಟಿ ಅಪಾರ್ಟ್‌ ಮೆಂಟ್‌ ಖರೀದಿಸಿರುವುದು ವರದಿಯಾಗಿದೆ. ಅಷ್ಟಕ್ಕೂ ಕೋಟಿ ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ ಮೆಂಟ್‌ (Apaartment) ಖರೀದಿ ಮಾಡಿರುವ ವ್ಯಕ್ತಿ ಸಿಂಫೊನಿ (Symphony) ಲಿಮಿಟೆಡ್‌ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಚಲ್ ಬೆಕರಿ(Achal Bakeri) ಅವರ ಕುಟುಂಬ.

Published by:Mahmadrafik K
First published: