• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Morning Digest: ಸುಮಲತಾ ವಿರುದ್ಧ ಕಮಿಷನ್ ಆರೋಪ, ಮಳೆ ಅಲರ್ಟ್, ಚಿನ್ನ-ಬೆಳ್ಳಿ ಬೆಲೆ; ಬೆಳಗಿನ ಟಾಪ್ ನ್ಯೂಸ್​​ಗಳು

Morning Digest: ಸುಮಲತಾ ವಿರುದ್ಧ ಕಮಿಷನ್ ಆರೋಪ, ಮಳೆ ಅಲರ್ಟ್, ಚಿನ್ನ-ಬೆಳ್ಳಿ ಬೆಲೆ; ಬೆಳಗಿನ ಟಾಪ್ ನ್ಯೂಸ್​​ಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

 • Share this:

1.DC Tammanna: ಸುಮಲತಾ ಬಂಡವಾಳ ನಮ್ಗೆ ಗೊತ್ತು, ಬುಡು ಬುಡುಕೆ ಮಾಡ್ಕೊಂಡು ರಾಜಕಾರಣಕ್ಕೆ ಬಂದಿಲ್ಲ: ಡಿ ಸಿ ತಮ್ಮಣ್ಣ


ಇಂದು ಸಂಸದರ ಆರೋಪಕ್ಕೆ ಮಾಜಿ ಸಚಿವ, ಮದ್ದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ (JDS MLA DC Tammanna) ಪ್ರತಿಕ್ರಿಯೆ ನೀಡಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರೇನು ಸತ್ಯ ಹರಿಶ್ಚಂದ್ರರು ಅಲ್ಲ. ಕಮಿಷನ್ ಪಡೆದಿದ್ದಕ್ಕೆ ಸಂಸದರು ತಮ್ಮ ಬಳಿ ಸಾಕ್ಷ್ಯ ಇದ್ರೆ ನೀಡಲಿ. ನಮಗೆ ಸುಮಲತಾ ಅವರ ಬಂಡವಾಳ ಎಲ್ಲವೂ ಗೊತ್ತಿದೆ. ಇವರು ಗಣಿ ವಿಚಾರವಾಗಿ ಧ್ವನಿ ಎತ್ತಿದಾಗ ಏನ್ ಕೇಳಿದ್ರು ಅನ್ನೋದು ಎಲ್ಲೆಡೆ ಹರಿದಾಡಿದೆ. ಯಾತಕ್ಕಾಗಿ ಇವರು ಗಣಿ ವಿರೋಧ ಮಾಡ್ತಿದ್ದಾರೆ ಎಂದು ಎಲ್ಲೆಡೆ ಹರಿದಾಡ್ತು. ಗಣಿಗಾರಿಕೆ ವಿರೋಧ ಮಾಡಿದ್ರಲ್ಲಾ ಸಂಪೂರ್ಣವಾಗಿ ನಿಲ್ಲಿಸಿದ್ರಾ ಎಂದು ಸಂಸದರನ್ನು ಪ್ರಶ್ನೆ ಮಾಡಿದರು. ಎಲ್ಲಾ ನಾನೇ ಮಾಡಿದ್ದೀನಿ ಅಂತ ಅವರು ಕ್ರೆಡಿಟ್ ತೆಗೆದುಕೊಳ್ಳುವದರ ಬಗ್ಗೆ ನಮಗೆ ಗೊತ್ತಿದೆ. ಪ್ರಜ್ಞಾವಂತರಿಗೆ ಯಾರು ಏನು ಮಾಡ್ತಾರೆ ಅಂತ ಗೊತ್ತಿದೆ. ಸುಮಲತಾ ಅಂಬರೀಶ್ ಏನ್ ಕಮಿಷನ್ ತೆಗೆದುಕೊಂಡಿಲ್ಲವಾ? ಉದಾಹರಣೆ ಕೊಡಲೇ? ನಮ್ಮ ಬಳಿಯೂ ದಾಖಲೆಗಳಿದ್ದು, ಬೇಕು ಅಂದ್ರೆ ಕೊಡುತ್ತೇವೆ ಎಂದು ಆರೋಪ ಮಾಡಿದರು.


2.Karnataka Weather Report: ಮತ್ತೆ ಮಳೆ, ಪ್ರವಾಹ ಸಾಧ್ಯತೆ; ಬೆಂಗಳೂರು-ಮೈಸೂರು ಪ್ರಯಾಣಿಕರೇ ಎಚ್ಚರ


ರಾಜ್ಯದ ದಕ್ಷಿಣ ಒಳನಾಡು ಭಾಗದಲ್ಲಿ ಇಂದಿನಿಂದ ಬುಧವಾರದವರೆಗೆ ಮತ್ತೆ ಮಳೆಯಾಗುವ ಮಾಹಿತಿಯನ್ನು ಹವಾಮಾನ ಇಲಾಖೆ (IMD) ನೀಡಿದೆ. ಇನ್ನುಳಿದಂತೆ ಬೆಳಗಾವಿ, ಕಲಬುರಗಿ, ಧಾರವಾಡ, ಬೆಂಗಳೂರಿನಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. ಶನಿವಾರ ಸಂಜೆ ಬೆಂಗಳೂರಿನ (Bengaluru Rains) ಕೆಲವು ಕಡೆ ಮಳೆಯಾಗಿದೆ. ಇಂದು ಸಹ ವರುಣನ ಸಿಂಚನ ಇರಲಿದೆ. ರಾಮನಗರ (Ramanagara Rains) ಭಾಗದಲ್ಲಿ ಎರಡು ಗಂಟೆಗಳಷ್ಟು ಮಳೆಯಾದ್ರೂ ಪ್ರವಾಹ ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಬದಲಿ ಮಾರ್ಗ ಬಳಸಲು ಸೂಚಿಸಲಾಗಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru Weather) ಗರಿಷ್ಠ 29 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.


3. Sunny Leone: ಹಬ್ಬದ ಪಿಂಕ್ ಉಡುಗೆಯಲ್ಲಿ ಸನ್ನಿ ಲಿಯೋನ್! ಸೋ ಕ್ಯೂಟ್ ಎಂದ ಫ್ಯಾನ್ಸ್


ನೀವು ಇಲ್ಲಿಯವರೆಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಅನ್ನು ಗ್ಲಾಮರಸ್ ಮತ್ತು ಕೂಲ್ ಶೈಲಿಯಲ್ಲಿ ನೋಡಿರುತ್ತೀರಿ. ಆದರೆ ಎಥ್ನಿಕ್ ಡ್ರೆಸ್ ನಲ್ಲಿ ಸನ್ನಿ ಲಿಯೋನ್ ಸುಂದರವಾಗಿ ಕಾಣುತ್ತಿದ್ದಾರೆ. ಸನ್ನಿ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆ್ಯಕ್ಟಿವ್. ನಟಿ ಆಗಾಗ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಸನ್ನಿ ವಿದೇಶಿ ನೆಲದಲ್ಲಿ ಬೆಳೆದಿರಬಹುದು, ಆದರೆ ನಟಿ ಸಂಪೂರ್ಣವಾಗಿ ಭಾರತೀಯ ಸಂಸ್ಕೃತಿ ಅನುಸರಿಸುತ್ತಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಟಿ ಕುಟುಂಬ ಸಮೇತ ಹಬ್ಬ ಆಚರಿಸಿದರು.


4.Assam: ಅವಧಿಗೂ ಮುನ್ನ ಸಿಜೇರಿಯನ್, ಭ್ರೂಣ ಬೆಳೆದಿಲ್ಲವೆಂದು ಹೊಲಿಗೆ, ಗರ್ಭಿಣಿ ಸ್ಥಿತಿ ಗಂಭೀರ!


ಗುವಾಹಟಿ (ಸೆ.04): ಅಸ್ಸಾಂನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಗರ್ಭಿಣಿ ಮಹಿಳೆಗೆ ಅವಧಿಗೂ ಮುನ್ನ, ಮೂರು ತಿಂಗಳ ಮೊದಲೇ ವೈದ್ಯರು ಸಿಸೇರಿಯನ್ (ಸಿ-ಸೆಕ್ಷನ್) ಮಾಡಿದ ಆರೋಪವಿದೆ. ಗುವಾಹಟಿ ಪ್ಲಸ್ ವರದಿ ಮಾಡಿದಂತೆ, ಕಳೆದ ವಾರ ವೈದ್ಯರು ಗರ್ಭಿಣಿ ಮಹಿಳೆಯೊಬ್ಬರಿಗೆ ಆಪರೇಷನ್ ಮಾಡಿದ ಘಟನೆ ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ, ಆದರೆ, ಭ್ರೂಣ ಬೆಳೆದಿಲ್ಲವೆಂದು ತಿಳಿದ ನಂತರ, ವೈದ್ಯರು ಹೊಟ್ಟೆಯನ್ನು ಮತ್ತೆ ಹೊಲಿಗೆ ಹಾಕಿ ಮುಚ್ಚಿದ್ದಾರೆ. ಆದರೀಗ ಈ ಎಡವಟ್ಟಿನಿಂದಾಗಿ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಸಿಜೇರಿಯನ್ ನಡೆಸಿ ಮಹಿಳೆಯನ್ನು ಸುಮಾರು 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಬಳಿಕ ಆಗಸ್ಟ್ 31 ರಂದು ಅವರನ್ನು ಬಿಡುಗಡೆ ಮಾಡಲಾಯಿತು. ಡಾ ಎ ಕೆ ಬಿಸ್ವಾಸ್ ಅವರು ಕರೀಮ್‌ಗಂಜ್ ಸಿವಿಲ್ ಆಸ್ಪತ್ರೆಯಲ್ಲಿ ಈ ಆಪರೇಷನ್ ನಡೆಸಿದ್ದಾರೆ.


5. Gold Price: ವೀಕೆಂಡ್‌ನಲ್ಲಿ ದುಬಾರಿಯಾಯ್ತು ಬಂಗಾರ! ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ

top videos


  Gold and Silver Price on September 4, 2022: ನಿನ್ನೆ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿತ್ತು. ಕಾರಣ ನಿನ್ನೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಅದನ್ನು ನೋಡಿ ಭಾನುವಾರ, ವೀಕೆಂಡ್ ದಿನ ಚಿನ್ನ, ಬೆಳ್ಳಿ ಖರೀದಿಸಬೇಕು ಅಂತ ಹಲವರು ಪ್ಲಾನ್ ಮಾಡಿದ್ದರು. ಆದರೀಗ ಅವರಿಗೆ ಶಾಕ್ ಎದುರಾಗಿದೆ! ಯಾಕೆಂದ್ರೆ ಇಂದು ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಬೆಂಗಳೂರು- 46,700 ರೂ, ಮಂಗಳೂರು- 46,700 ರೂ, ಮೈಸೂರು- 46,700 ರೂ. ಇದೆ. ಇನ್ನು ಚೆನ್ನೈ- 47,220 ರೂ. ಮುಂಬೈ- 46,650 ರೂ, ದೆಹಲಿ- 46,800 ರೂ, ಕೊಲ್ಕತ್ತಾ- 46,650 ರೂ, ಹೈದರಾಬಾದ್- 46,650 ರೂ, ಕೇರಳ- 46,650 ರೂ, ಹಾಗೂ ಪುಣೆ- 46,680 ರೂಪಾಯಿ ನಿಗದಿಯಾಗಿದೆ.

  First published: