• Home
  • »
  • News
  • »
  • state
  • »
  • Top 5 News: ಕುಟುಂಬಸ್ಥರ ಸಾಮೂಹಿಕ ಆತ್ಮಹತ್ಯೆ, ಆಯುಧ ಪೂಜೆ, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್​

Top 5 News: ಕುಟುಂಬಸ್ಥರ ಸಾಮೂಹಿಕ ಆತ್ಮಹತ್ಯೆ, ಆಯುಧ ಪೂಜೆ, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್​

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Chikkaballapura: ಪ್ರಿಯಕರನ ಜೊತೆ ಓಡಿ ಹೋದ ಮಗಳು: ತಂದೆ, ತಾಯಿ, ತಮ್ಮ ಆತ್ಮಹತ್ಯೆ


ಮಗಳು ಪ್ರೀತಿಸಿದ (Love) ಯುವಕನ ಜೊತೆ ಓಡಿ ಹೋಗಿದ್ದಕ್ಕೆ ಕುಟುಂಬಸ್ಥರು ಸಾಮೂಹಿಕ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ (Shidlaghatta, Chikkaballapur) ತಾಲೂಕಿನ ಹಂಡಿಗನಾಳದಲ್ಲಿ ಈ ಘಟನೆ ನಡೆದಿದ್ದು, ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಶ್ರೀರಾಮಪ್ಪ, ಸರೋಜಮ್ಮ, ಮನೋಜ್ ಮೃತ ದುರ್ದೈವಿಗಳು. ಮಗಳು ಅರ್ಚನಾ ಗ್ರಾಮದ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ಳು. ಮದುವೆಗೆ ವಿರೋಧ ವ್ಯಕ್ತವಾಗಿದಕ್ಕೆ ಅರ್ಚನಾ ಇನಿಯನ ಜೊತೆ ಗ್ರಾಮ ತೊರೆದಿದ್ದಳು. ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅರ್ಚನಾ, ಅದೇ ಗ್ರಾಮದಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ನಾರಾಯಣಸ್ವಾಮಿ ಎಂಬಾತನನ್ನು ಪ್ರೀತಿಸುತ್ತಿದ್ದಳು.


ಗುರುವಾರ ಅರ್ಚನಾ ನಿಶ್ಚಿತಾರ್ಥ ಬೇರೆ ಯುವಕನ ಜೊತೆ ನಿಗಧಿಯಾಗಿತ್ತು. ಪೋಷಕರು ನೋಡಿದ ಯುವಕನನ್ನು ಒಪ್ಪದ ಅರ್ಚನಾ ಮನೆ ತೊರೆದಿದ್ದಳು.


2.Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಮೈಸೂರು ಅರಮನೆಯಲ್ಲಿ ಶಸ್ತ್ರಾಸ್ತ್ರಗಳಿಗೆ ಪೂಜೆ ಪುನಸ್ಕಾರ


ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ (Ayudha Puja Celebration) ಮನೆ ಮಾಡಿದೆ. ಜನರು ತಮ್ಮ ವಾಹನ, ಕೆಲಸ ಮಾಡುವ ವಸ್ತುಗಳು, ಕಂಪ್ಯೂಟರ್ ಸೇರಿದಂತೆ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ದೇವಸ್ಥಾನಗಳಲ್ಲಿ (Temples) ವಿಶೇಷ ಪೂಜೆಗಳು ನಡೆಯುತ್ತಿವೆ. ದೇವಸ್ಥಾನಗಳ ಮುಂಭಾಗ ವಾಹನಗಳನ್ನು ತಂದಿರುವ ಜನರು ಪೂಜೆ ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇತ್ತ ಮೈಸೂರು ಅರಮನೆಯಲ್ಲಿಯೂ (Mysuru Palace) ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ.


Ayudha puja celebration today mrq
ಆಯುಧ ಪೂಜೆ


ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜನರು, ಭಕ್ತರು, ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇಂದು ಅರಮನೆಯಲ್ಲಿ ಯದುವೀರ್ ಕೃಷದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar)‌ ಆಯುಧ ಪೂಜೆ ನೆರವೇರಿಸಲಿದ್ದಾರೆ.


3.PFI Ban: ನಿಷೇಧಿತ ಸಂಘಟನೆ ಪಿಎಫ್​ಐ ಬಗ್ಗೆ ಮತ್ತೊಂದು ಆಘಾತಕಾರಿ ಮಾಹಿತಿ ಬಯಲು!


PFI ಅಂದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front Of India) ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಮತ್ತೊಂದು ಸಂಚಲನದ ಮಾಹಿತಿ ಹೊರಬಿದ್ದಿದೆ. ಗುಪ್ತಚರ ಮೂಲಗಳ ಪ್ರಕಾರ, ಇಸ್ಲಾಮಿಕ್ ಸ್ಟೇಟ್ (ISIS) ನ ಪ್ರಮುಖ 22 ಭಯೋತ್ಪಾದಕರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಎರಡು ಸುತ್ತಿನ ಕ್ಷಿಪ್ರ ರಾಷ್ಟ್ರವ್ಯಾಪಿ ದಾಳಿಯ ನಂತರ ಅಪಾರ ಪ್ರಮಾಣದ ಡಿಜಿಟಲ್ ಡೇಟಾ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.


Morning Digest 4th october 2022 have quick look of important news today mrq
ಪಿಎಫ್​ಐ


ಕ್ರಿಮಿನಲ್ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುವಲ್ಲಿ ಪಿಎಫ್‌ಐ ಭಾಗಿಯಾಗಿರುವುದನ್ನು ಡಿಜಿಟಲ್ ಸಾಕ್ಷ್ಯಗಳು ಸೂಚಿಸುತ್ತವೆ ಎಂದು ಬಯಲಾಗಿದೆ ಎಂದಿದೆ. IS ಅಂದರೆ ಇಸ್ಲಾಮಿಕ್ ಎಸ್ಟೇಟ್ ಇದನ್ನು ISIS ಎಂದೂ ಕರೆಯಲಾಗುತ್ತದೆ.


4.Gold-Silver Price Today: ಹಬ್ಬದ ದಿನ ಚಿನ್ನ, ಬೆಳ್ಳಿ ಬಲು ದುಬಾರಿ, ಇಂದಿನ ರೇಟ್​ ಹೇಗಿದೆ? ಒಮ್ಮೆ ಕಣ್ಣಾಡಿಸಿ


Gold Silver Price 04 October 2022: ಹಬ್ಬದ ದಿನ ಸಹಜವಾಗಿಯೇ ಬಂಗಾರದ ಬೆಲೆ ಏರಿಕೆ ಕಂಡಿದೆ ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 4,650ರೂ ಇದ್ದದ್ದು, ಇಂದು ಏರಿಕೆ ಕಂಡಿದ್ದು ಒಂದು ಗ್ರಾಂ ಚಿನ್ನದ ಬೆಲೆ 4,685 ರೂ ಆಗಿದೆ.ಹಬ್ಬದ ದಿನ ಚಿನ್ನ ಖರೀದಿ ಮಾಡುವವರಿಗೆ ಸ್ವಲ್ಪ ನಿರಾಶೆಯಾಗಿದೆ ಎನ್ನಬಹುದು. ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,685 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,111 ಆಗಿದೆ. ಇದೇ ರೀತಿ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,480 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,888 ಆಗಿದೆ.


Morning Digest 4th october 2022 have quick look of important news today mrq
ಸಾಂದರ್ಭಿಕ ಚಿತ್ರ


ಇನ್ನು ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,850 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,110 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,68,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ 5,11,100 ಆಗಿದೆ


5.Karnataka Politics: ಕಾಂಗ್ರೆಸ್​​ ವಿರುದ್ಧ ಮೋದಿ ಅಸ್ತ್ರ; ಸಿದ್ದರಾಮೋತ್ಸವ, ಭಾರತ್ ಜೋಡೋಗೆ ಟಕ್ಕರ್ ನೀಡಲು ಬಿಜೆಪಿ ಪ್ಲ್ಯಾನ್


ಕಾಂಗ್ರೆಸ್‌ಗೆ (Congress) ಸಿದ್ದರಾಮೋತ್ಸವ (Siddaramotsava), ರಾಹುಲ್ ಗಾಂಧಿ (Congress Leader Rahul Gandhi) ಅವರ ಪಾದಯಾತ್ರೆಯಿಂದ ಬೂಸ್ಟ್ ಸಿಗ್ತಿದೆ. ಆದ್ರೆ ಕಾಂಗ್ರೆಸ್‌ಗೆ ಠಕ್ಕರ್ ನೀಡಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ರಾಷ್ಟ್ರೀಯ ನಾಯಕರನ್ನೇ ಕರೆಸಿ ಕ್ಯಾಂಪೇನ್ ಮಾಡಿಸಲು ಬಿಜೆಪಿ ನಿರ್ಧರಿಸಿದೆ.


BJP Plans Mega Rallies in karnataka mrq
ಸಾಂದರ್ಭಿಕ ಚಿತ್ರ


ಇದೇ ತಿಂಗಳಿನಲ್ಲಿ ರಾಜ್ಯಕ್ಕೆ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನ ಉದ್ಘಾಟಿಸಲಿದ್ದಾರೆ. ಪ್ರತ್ಯೇಕ ಸಮಾವೇಶಗಳನ್ನ ಆಯೋಜಿಸಿ ಮತಬೇಟೆಗೆ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ ಅಂತ್ಯಕ್ಕೆ ಮೋದಿ ಆಗಮಿಸಲಿದ್ದು, ಕೆಂಪೇಗೌಡ ಟರ್ಮಿನಲ್‌-2 ಹಾಗೂ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ.

Published by:Mahmadrafik K
First published: