Morning Digest: ಶಾಸಕ ಲಿಂಬಾವಳಿ ದರ್ಪ, ಡಿಸಿಪಿ ಆದ ನಟಿ, ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುತ್ತಂತೆ; ಬೆಳಗಿನ ಟಾಪ್ ನ್ಯೂಸ್​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.Aravind Limbavali: ಏ ಸುಮ್ನೆ ಇರು, ಬೇರೆ ಭಾಷೆ ಬರುತ್ತೆ, ನಾಚಿಕೆ ಆಗಲ್ವಾ ನಿಂಗೆ, ಒದ್ದು ಒಳಗೆ ಹಾಕಿ: ಮನವಿ ನೀಡಲು ಬಂದ ಮಹಿಳೆ ಮೇಲೆ ಲಿಂಬಾವಳಿ ದರ್ಪ

  ಜನಪ್ರತಿನಿಧಿಗಳು ತಮ್ಮ ಕ್ಷೇತ್ರಕ್ಕೆ ಅಥವಾ ಊರಿಗೆ ಬಂದರೆ ಸ್ಥಳೀಯರು (People) ತಮ್ಮ ಸಮಸ್ಯೆ ಹೇಳಿಕೊಳ್ಳಲು ಬರೋದು ಸಾಮಾನ್ಯ. ಜನಪ್ರತಿನಿಧಿಗಳು ಸಹ ಮನವಿ ಸ್ವೀಕರಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ತೆರಳುತ್ತಾರೆ. ಸಮಸ್ಯೆ ಬಗ್ಗೆ ಸ್ಪಂದಸುವಂತೆ ತಮ್ಮ ಅಧಿಕಾರಿಗಳಿಗೆ (Officers) ಸೂಚನೆ ನೀಡುತ್ತಾರೆ. ಅದೇ ರೀತಿ ಶಾಸಕ ಅರವಿಂದ್ ಲಿಂಬಾವಳಿ (MLA Aravind Limbavali) ಬಳಿ ಮಹಿಳೆಯೊಬ್ಬರು ಮನವಿ ಸಲ್ಲಿಸಲು ಬಂದಿದ್ದರು. ಆದ್ರೆ ಶಾಸಕರು (MLA) ಮಾತ್ರ ಮಹಿಳೆಗೆ ಗದರಿ, ಪೊಲೀಸ್ ಠಾಣೆಯಲ್ಲಿ ಕೂರಿಸಿ ಎಂದು ಅವಾಜ್ ಹಾಕಿ ಬೆದರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ (Aravind Limbavali Video) ನೋಡಿದ ನೆಟ್ಟಿಗರು ಇವರೇನಾ ನಮ್ಮ ಜನಪ್ರತಿನಿಧಿಗಳು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  2.Viral Story: ವಿಮಾನದಲ್ಲಿ ಕೆಟ್ಟ ವರ್ತನೆ ತೋರಿಸಿದ ಪ್ರಯಾಣಿಕರು! ಸಿಟ್ಟಿಗೆದ್ದ ಪೈಲಟ್ ಏನು ಮಾಡಿದ್ರು ಗೊತ್ತಾ?

  ಪ್ರಯಾಣಿಕರ ಕೆಟ್ಟ ವರ್ತನೆಯಿಂದಾಗಿ ಕೆಲವೊಮ್ಮೆ ಉಳಿದ ಪ್ರಯಾಣಿಕರ ಪ್ರಯಾಣಕ್ಕೆ ತೊಂದರೆಯಾಗುವುದು ಇದೆ. ಕೊರೊನಾ ಸಮಯದಲ್ಲಿ ವಿಮಾನದ ಒಳಕ್ಕೆ ಮಾಸ್ಕ್ ಧರಿಸದೇ ಇದ್ದದ್ದಕ್ಕೆ ವಿಮಾನ ಹಾರಾಟ ನಡೆಸದೇ ಇದ್ದದ್ದನ್ನು ಕೇಳಿರಬಹುದು ಮತ್ತು ನೋಡಿರಬಹುದು. ಸೌತ್​ ವೆಸ್ಟ್​ ವಿಮಾನ ಟೇಕ್ಆಪ್​ ಆಗುವುದಕ್ಕೂ ಮುನ್ನ ಪ್ರಯಾಣಿಕರಿಗೆ ಕೆಟ್ಟ ವರ್ತನೆ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮಾತ್ರವಲ್ಲದೆ, ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಕಮರ್ಷಿಯಲ್ ವಿಮಾನದ ಪ್ರಯಾಣಿಕರಿಗೆ ಏರ್​​ಡ್ರಾಪ್ ಮೂಲಕ ನಗ್ನ ಫೋಟೋವನ್ನು ಕಳುಹಿಸುತ್ತಿರುವ ಸಂಗತಿ ಪೈಲಟ್​ಗೆ ತಿಳಿದುಬರುತ್ತದೆ. ಕೂಡಲೇ ಪೈಲಟ್ ಮಾಹಿತಿ ಹೊರಡಿಸಿದ್ದು, ಟೇಕ್ಆಫ್​ಗೂ ಮುನ್ನ ಏರ್​​ಡ್ರಾಪ್ ಮಾಡುವುದು ನಿಲ್ಲಿಸದೇ ಇದ್ದರೆ ಕಾಬೋಗೆ ವಿಮಾನವನ್ನು ತಿರುಗಿಸುವುದಾಗಿ ಹೇಳಿದ್ದಾರೆ.

  3.Virat Kohli - Anushka Sharma: ಅಲಿಬಾಗ್​ನಲ್ಲಿ ಫಾರ್ಮ್​ ಹೌಸ್ ಖರೀದಿಸಿದ ಕೊಹ್ಲಿ-ಅನುಷ್ಕಾ! ಬೆಲೆ ಎಷ್ಟು ಗೊತ್ತೇ?

  ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೀತಿಸಿ ಮದುವೆಯಾಗಿರುವುದು ಗೊತ್ತೇ ಇದೆ. ಈ ದಂಪತಿಗೆ ಒಬ್ಬಳು ಮಗಳು ಕೂಡ ಇದ್ದಾಳೆ, ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಫಾರ್ಮ್ ಹೌಸ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಅಲಿ ಬಾಗ್ ಪ್ರದೇಶದಲ್ಲಿ ಹೊಸ ಫಾರ್ಮ್ ಹೌಸ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ವಿರಾಟ್ ಅನುಷ್ಕಾ ನಗರದ ಅಲಿ ಬಾಗ್ ಪ್ರದೇಶದಲ್ಲಿ 19.24 ಕೋಟಿ ಖರ್ಚು ಮಾಡಿ ಹೊಸ ಫಾರ್ಮ್ ಹೌಸ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಈ ಫಾರ್ಮ್‌ಹೌಸ್ ಅಲಿಬಾಗ್‌ನ ಜಿರಾದ್ ಗ್ರಾಮದ ಬಳಿ 8 ಎಕರೆ ಭೂಮಿಯಲ್ಲಿದೆ. ಆದರೆ ಮಾಧ್ಯಮ ವರದಿಗಳ ಪ್ರಕಾರ, ದಂಪತಿಗಳು ಸುಮಾರು ರೂ. 19.24 ಕೋಟಿ ವೆಚ್ಚ ಮಾಡಿದ್ದಾರೆ ಎನ್ನಲಾಗಿದೆ.

  4.Meghana Gaonkar: ನಂದು ಪೊಲೀಸ್ ಫ್ಯಾಮಿಲಿ! ಈಗ ಡಿಸಿಪಿ ಆಗಿದ್ದೇನೆ! ಮೇಘನಾ ಗಾಂವ್ಕರ್

  ಕನ್ನಡದ ಚೆಲುವೆಯರಲ್ಲಿ ಮೇಘನಾ ಗಾಂವ್ಕರ್ ಕೂಡ ಒಬ್ಬರು. ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಕ್ರಿಯೆಟ್ ಮಾಡಿಕೊಂಡಿದ್ದಾರೆ. ನಟಿಸೋ ಚಿತ್ರಗಳ ಪಾತ್ರಗಳಲ್ಲಿ ಬೋಲ್ಡ್​​ನೆಸ್​ ಇರುತ್ತದೆ. ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರೋದು ಇದೆ. ಮೇಘನಾ ಗಾಂವ್ಕರ್ ಈಗ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್-2 ಚಿತ್ರದ ಮೂಲಕ ಪೊಲೀಸ್ ಅಧಿಕಾರಿ ಆಗಿ ಗಮನ ಸೆಳೆದಿದ್ದಾರೆ. ಅಪ್ಪ ರಿಯಲ್ ಆಗಿಯೇ ಪೊಲೀಸ್ ಆಫೀಸರ್ (POLICE OFFICER) ಆಗಿದ್ದರು. ಆದರೆ ನಾನು ಬೆಳ್ಳಿ ತೆರೆಗಾಗಿ ಡಿಸಿಪಿ (DCP) ಪಾತ್ರ ಮಾಡುತ್ತಿದ್ದೇನೆ ಅಂತಾರೆ ಮೇಘನಾ ಗಾಂವ್ಕರ್.

  5.Edible Oil: ತಿಂಗಳ 3ನೇ ದಿನವೇ ಬಿಗ್​ ಬ್ರೇಕಿಂಗ್​ ನ್ಯೂಸ್​! ಸಿಕ್ಕಾಪಟ್ಟೆ ಕಡಿಮೆ ಆಗುತ್ತಂತೆ ಅಡುಗೆ ಎಣ್ಣೆ ಬೆಲೆ

  ಕೊರೋನಾ, ಉಕ್ರೇನ್-ರಷ್ಯಾ ಯುದ್ಧದ ಪರಿಣಾಮಗಳಿಂದಾಗಿ, ಪ್ರಪಂಚದಾದ್ಯಂತ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಈ ಅನುಕ್ರಮದಲ್ಲಿ, ಭಾರತದಲ್ಲಿ ಖಾದ್ಯ ತೈಲ ಅಥವಾ ಅಡುಗೆ ಎಣ್ಣೆಯ ಬೆಲೆಗಳು ಅಪಾರವಾಗಿ ಹೆಚ್ಚಿವೆ. ಸಾಮಾನ್ಯ ಜನರು ಅಡುಗೆ ಎಣ್ಣೆಯನ್ನು ಖರೀದಿಸಿ ಬಳಸಲಾಗದ ಪರಿಸ್ಥಿತಿ ಇತ್ತು. ಪ್ರಸ್ತುತ, ವಿಶ್ವದಾದ್ಯಂತ ಬೆಲೆ ಕುಸಿತ ಮತ್ತು ಆಮದು ಸುಂಕ ಕಡಿತದಿಂದಾಗಿ ಭಾರತದಲ್ಲಿ ಖಾದ್ಯ ತೈಲದ ಬೆಲೆಗಳು ಗಣನೀಯವಾಗಿ ಕುಸಿದಿವೆ. ಜಾಗತಿಕ ಬೆಲೆ ಕುಸಿತದ ಲಾಭವನ್ನು ದೇಶೀಯ ಗ್ರಾಹಕರಿಗೆ ವರ್ಗಾಯಿಸಲು ಆಹಾರ ಸಚಿವಾಲಯವು ಕಂಪನಿಗಳಿಗೆ ನಿರ್ದೇಶನ ನೀಡಿದೆ. ಅಡುಗೆ ಎಣ್ಣೆಗಳ ಆಮದಿನ ಮೇಲೆ ವಿಧಿಸಲಾಗಿರುವ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರವು ಇತ್ತೀಚೆಗೆ ಪ್ರಕಟಿಸಿದೆ. ಇದರೊಂದಿಗೆ ಖಾದ್ಯ ತೈಲದ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.
  Published by:Mahmadrafik K
  First published: