• Home
  • »
  • News
  • »
  • state
  • »
  • Top 5 News: ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ, ಹನುಮಂತನ ಪಾತ್ರಧಾರಿ ಸಾವು, ಭಾರತ್ ಜೋಡೋ ಯಾತ್ರೆ; ಬೆಳಗಿನ ಟಾಪ್ ನ್ಯೂಸ್

Top 5 News: ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ, ಹನುಮಂತನ ಪಾತ್ರಧಾರಿ ಸಾವು, ಭಾರತ್ ಜೋಡೋ ಯಾತ್ರೆ; ಬೆಳಗಿನ ಟಾಪ್ ನ್ಯೂಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Deadly Accident: ಭೀಕರ ಅಪಘಾತ, ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ; ನಾಲ್ವರು ಸಾವು, 18 ಮಂದಿ ಗಂಭೀರ


ಬೆಂಗಳೂರಿನ ಹೊಸಕೋಟೆ (Hosakote, Bengaluru) ಬಳಿ ಭೀಕರ ಅಪಘಾತ (Accident) ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕೆಎಸ್ಆರ್​ಟಿಸಿ ಬಸ್ (KSRTC Bus) ಡಿಕ್ಕಿಯಾಗಿದೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, 18ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿದೆ. ಕಲ್ಲು ತುಂಬಿದ್ದ ಲಾರಿಯನ್ನ (Lorry) ಹೆದ್ದಾರಿ ರಸ್ತೆ ಬದಿಯಲ್ಲೇ ನಿಲ್ಲಿಸಲಾಗಿತ್ತು. ಈ ವೇಳೆ ಕೋಲಾರದಿಂದ ವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದ ಕೆಎಸ್ಆರ್​ಟಿಸಿ ಚಾಲಕ, ನಿಂತಿದ್ದ ಲಾರಿಗೆ ಗುದ್ದಿದ್ದಾನೆ. ಅಪಘಾತ ನಡೆದ ಸ್ಥಳಕ್ಕೆ ಬೆಂ. ಗ್ರಾಮಾಂತರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಬಸ್ ಚಾಲಕ ಅತಿ ವೇಗ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು ಮೃತರ ಗುರುತು ಪತ್ತೆಯಾಗಿಲ್ಲ. ಬಸ್ನಲ್ಲಿ ಎಷ್ಟು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂಬುದರ ಬಗ್ಗೆಯೂ ತಿಳಿದು ಬಂದಿಲ್ಲ.


2.Navratri: ಲಂಕಾ ದಹನ ಪ್ರದರ್ಶನದ ವೇಳೆ ವೇದಿಕೆಯಿಂದ ಕುಸಿದು ಹನುಮಂತನ ಪಾತ್ರಧಾರಿ ಸಾವು, ವಿಡಿಯೋ ವೈರಲ್!


ಉತ್ತರ ಪ್ರದೇಶದ (Uttar Pradesh) ಫತೇಪುರ್ ಜಿಲ್ಲೆಯಲ್ಲಿ ಮಹಾಬಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ಕಲಾವಿದರೊಬ್ಬರು ವೇದಿಕೆಯಲ್ಲೇ ಸಾವನ್ನಪ್ಪಿದ್ದಾರೆ. ಧಾತಾ ಪೊಲೀಸ್ ಠಾಣೆ ವ್ಯಾಪ್ತಿಯ ಸೇಲಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. ದುರ್ಗಾ ಪಂಡಾಲ್​ನಲ್ಲಿ ಜಾಗರಣೆಯ ವೇಳೆ ಲಂಕಾ ದಹನದ ದೃಶ್ಯಕ್ಕೆ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಕಲಾವಿದ ರಾಮಸ್ವರೂಪ್ ಏಕಾಏಕಿ ಸಿಂಹಾಸನದಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಲಾಹಲ ಉಂಟಾಯಿತು.


Morning Digest 3rd october 2022 have quick look of important news today mrq
ಪ್ರಾತಿನಿಧಿಕ ಚಿತ್ರ


3.ಮೂವರು ಸ್ನೇಹಿತರಿಂದ 10 ವರ್ಷದ ಬಾಲಕನ ಅತ್ಯಾಚಾರ, ರಾಕ್ಷಸ ಕೃತ್ಯಕ್ಕೆ ನಲುಗಿದ ಹುಡುಗ ಸಾವು!


ದೇಶದ ರಾಜಧಾನಿ ದೆಹಲಿಯಲ್ಲಿ (New Delhi) ಈಗ ಹೆಣ್ಮಕ್ಕಳ ಜೊತೆಗೆ ಹುಡುಗರು ಕೂಡ ಸುರಕ್ಷಿತವಾಗಿಲ್ಲ. ದೆಹಲಿಯಲ್ಲಿ ಮಗುವಿನ ಮೇಲೆ ಅಸ್ವಾಭಾವಿಕ ಅತ್ಯಾಚಾರವೆಸಗಿದ (Rape) ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಸೀಲಾಂಪುರ ಪ್ರದೇಶದಲ್ಲಿ, 10 ವರ್ಷದ ಮಗುವಿಗೆ ಆತನ ಮೂವರು ಸ್ನೇಹಿತರು ಬಹಳಷ್ಟು ಚಿತ್ರಹಿಂಸೆ ನೀಡಿದ್ದಾರೆ, ಇದರ ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ. ಮೂವರು ಆರೋಪಿಗಳು 10 ರಿಂದ 12 ವರ್ಷ ವಯಸ್ಸಿನವರಾಗಿದ್ದು, ಮೂವರೂ ತಮ್ಮ 10 ವರ್ಷದ ಸ್ನೇಹಿತನೊಂದಿಗೆ ಅಸ್ವಾಭಾವಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


Morning Digest 3rd october 2022 have quick look of important news today mrq
ನಂಜನಗೂಡು ದೇವಾಲಯದಲ್ಲಿ ಕಾಂಗ್ರೆಸ್ ನಾಯಕರು


4.Bharat Jodo Yatra: ‘ಭಾರತ್‌ ಜೋಡೋ’ಗೆ ಸೋನಿಯಾ ‘ಬಲ’; ಅಕ್ಟೋಬರ್ 7ರಂದು ಮಂಡ್ಯಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ


ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು (AICC Interim president Sonia Gandhi) ಇಂದು ರಾಜ್ಯಕ್ಕೆ ಆಗಮಿಸ್ತಿದ್ದಾರೆ. ಸೋನಿಯಾ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್​​ನಿಂದ (KPCC) ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಮಧ್ಯಾಹ್ನ 3ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ಏರ್​ಪೋರ್ಟ್‌ಗೆ (Mysuru Airport) ಸೋನಿಯಾ ಗಾಂಧಿ ಬಂದಿಳಿಯಲಿದ್ದಾರೆ. ಏರ್​ಪೋರ್ಟ್​​ನಿಂದ 3.30ಕ್ಕೆ ಕೊಡಗಿಗೆ (Kodagu) ಹೆಲಿಕಾಪ್ಟರ್​​ನಲ್ಲಿ ಪ್ರಯಾಣಿಸಲಿದ್ದಾರೆ. ಅಕ್ಟೋಬರ್​ 4 ಮತ್ತು 5ರಂದು ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಬ್ರೇಕ್ ಹಾಕಿದ್ದು, ಕೊಡಗಿನಲ್ಲಿ ಚುನಾವಣೆ ಬಗ್ಗೆ ಸರಣಿ ಸಭೆ ನಡೆಯಲಿದೆ. ಅಕ್ಟೋಬರ್​​ 6ರಿಂದ ಮೇಲುಕೋಟೆಯಿಂದ ಮತ್ತೆ ಪಾದಯಾತ್ರೆ ಆರಂಭವಾಗಲಿದ್ದು. ಮೇಲುಕೋಟೆ (Melukote) ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗವಹಿಸಲಿದ್ದಾರೆ. ಬಳಿಕ ಅಲ್ಲಿಂದ ಸೋನಿಯಾ ಗಾಂಧಿ ದೆಹಲಿಗೆ ವಾಪಸ್​ ತೆರಳಲಿದ್ದಾರೆ.


Morning Digest 3rd october 2022 have quick look of important news today mrq
ಮಾರುಕಟ್ಟೆಯಲ್ಲಿ ಹೂವು ದರ ಏರಿಕೆ


5.Prices Hike: ಆಯುಧ ಪೂಜೆ ಹಿನ್ನೆಲೆ ಗಗನಕ್ಕೇರಿದೆ ಹೂವಿನ ಬೆಲೆ; ದುಪ್ಪಟ್ಟಾಯ್ತು ಕುಂಬಳಕಾಯಿ ರೇಟ್


ಹಬ್ಬ ಬಂತಂದ್ರೆ ಸಾಕು ಹೂ, ಹಣ್ಣು, ತರಕಾರಿ ರೇಟು (Price) ಗಗನಕ್ಕೇರುತ್ತೆ. ಈ ವರುಷ ದಸರಾ ಹಬ್ಬಕ್ಕೆ (Dasara Festival) ಹೂವಿನ ದರ ತುಂಬಾ ಏರಿಕೆಯಾಗಿದೆ. ಕುಂಬಳಕಾಯಿ (Pumpkin) ದರ ಡಬಲ್‌ ಆಗಿದೆ. ಸಮಾಧಾನ ಸಂಗತಿ ಎಂದ್ರೆ ತರಕಾರಿ, ಹಣ್ಣಿನ ದರ (Vegetables And Fruits) ತುಂಬ ಏರಿಕೆಯಾಗಿಲ್ಲ.

Published by:Mahmadrafik K
First published: