1.Gandhi Jayanti 2022: ಮಹಾತ್ಮಾ ಗಾಂಧಿ ಜನ್ಮದಿನ; ಪಿಎಂ ಮೋದಿ ಸೇರಿ ಹಲವರಿಂದ ಸ್ಮರಣೆ
ಮಹಾತ್ಮ ಗಾಂಧೀಜಿಯವರ 153 ನೇ ಜನ್ಮದಿನದಂದು (Gandhi Jayanti 2022) ಪ್ರಧಾನಿ ನರೇಂದ್ರ ಮೋದಿ ಅವರು (PM Narendra Modi) ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದರು. ದೆಹಲಿಯ ರಾಜ್ಘಾಟ್ಗೆ ಆಗಮಿಸಿ ನಮನ ಸಲ್ಲಿಸಿದ ಅವರು "ಗಾಂಧಿಜಯಂತಿಯಂದು ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ. ಈ ಗಾಂಧಿ ಜಯಂತಿಯು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಭಾರತವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ನಾವು ಯಾವಾಗಲೂ ಬಾಪು ಅವರ ಆದರ್ಶಗಳನ್ನು ಪಾಲಿಸುತ್ತೇವೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸಿ ಸಾರ್ವಜನಿಕರು ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.
2.Football Match: ಫುಟ್ಬಾಲ್ ಪಂದ್ಯದಿಂದ 127 ಜನರು ದುರ್ಮರಣ; 180 ಜನರಿಗೆ ಗಾಯ
ಪೂರ್ವ ಜಾವಾ ಪ್ರಾಂತ್ಯದಲ್ಲಿ ರಾತ್ರಿಯಿಡೀ ನಡೆದ ಫುಟ್ಬಾಲ್ ಪಂದ್ಯವೊಂದರಲ್ಲಿ ಪ್ರೇಕ್ಷಕರಿಂದಾಗಿ ನೂಕುನುಗ್ಗಲು ಉಂಟಾಗಿ 127 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 180 ಜನರು ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ ಪೊಲೀಸರು (Indonsia Police) ಭಾನುವಾರ ತಿಳಿಸಿದ್ದಾರೆ. ಇಂಡೋನೇಷ್ಯಾದ ಟಾಪ್ ಲೀಗ್ BRI ಲಿಗಾ 1 ಪಂದ್ಯದಲ್ಲಿ ಪರ್ಸೆಬಯಾ ತಂಡ 3-2 ರಿಂದ ಗೆದ್ದ ನಂತರ ಈ ದುರ್ಘಟನೆ ಸಂಭವಿಸಿದೆ. ಹೀಗಾಗಿ ಇಂಡೋನೇಷ್ಯಾದಲ್ಲಿ ಒಂದು ವಾರಗಳ ಕಾಲ ಆಟಗಳನ್ನು ಸ್ಥಗಿತಗೊಳಿಸಿ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಇಂಡೋನೇಷ್ಯಾದ ಫುಟ್ಬಾಲ್ ಅಸೋಸಿಯೇಷನ್ (PSSI) ತಿಳಿಸಿದೆ.
3.Tractor Accident: ಕೆರೆಗೆ ಬಿದ್ದ ಟ್ರ್ಯಾಕ್ಟರ್ ಟ್ರಾಲಿ; 26 ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವು
ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ (Tractor Trolley Accident) ಕೆರೆಗೆ ಬಿದ್ದು ಕನಿಷ್ಠ 26 ಯಾತ್ರಾರ್ಥಿಗಳು ಮೃತಪಟ್ಟ ದುರ್ಘಟನೆ ಶನಿವಾರ ಉತ್ತರ ಪ್ರದೇಶದ (Uttar Pradesh) ಕಾನ್ಪುರ ಜಿಲ್ಲೆಯಲ್ಲಿ (Kanpur) ಸಂಭವಿಸಿದೆ. ಮೃತಪಟ್ಟ ದುರ್ದೈವಿಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳೇ ಸೇರಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಈ ಭೀಕರ ದುರ್ಘಟನೆಯಲ್ಲಿ 20 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 50 ಜನರಿದ್ದ ಟ್ರ್ಯಾಕ್ಟರ್ ಉನ್ನಾವೊದ ಚಂದ್ರಿಕಾ ದೇವಿ ದೇವಸ್ಥಾನದಿಂದ ವಾಪಸಾಗುತ್ತಿದ್ದಾಗ ಕಾನ್ಪುರದ ಘಟಂಪುರ ಪ್ರದೇಶದಲ್ಲಿ ಈ ದುರಂತ (Tractor Accident) ಸಂಭವಿಸಿದೆ.
4.Teacher: ನಿವೃತ್ತ ಶಿಕ್ಷಕರಿಗೆ 50 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ನೀಡಿ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು
ವಿಜಯಪುರ ಜಿಲ್ಲೆಯ ತಿಕೋಟಾ (Tikota, Vijayapura) ತಾಲೂಕಿನ ಬಿಜ್ಜರಗಿ ಗ್ರಾಮ (Bijjaragi Village) ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಬಿ.ಎ.ಕೆ.ಪ್ರೌಢಶಾಲೆಯಲ್ಲಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತ (Retirement teacher) ಹೊಂದಿದ ದೈಹಿಕ ಶಿಕ್ಷಕ ಎನ್.ಜಿ.ಕೊಟ್ಯಾಳ ಅವರಿಗೆ ಗ್ರಾಮಸ್ಥರು (Villagers) ಅಭೂತಪೂರ್ವವಾಗಿ ಬೀಳ್ಕೊಡಿಗೆ (Sendup) ನೀಡಿದ್ದಾರೆ. ಬರೋಬ್ಬರಿ ಐದು ತೊಲೆ ಬಂಗಾರ (50 ಗ್ರಾಂ ಚಿನ್ನ) (Gold), ಎರಡು ಕೆಜಿ ಬೆಳ್ಳಿ ಮೂರ್ತಿಗಳನ್ನು (Silver Idols) ನೀಡಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ಮೂಲಕ ತಮ್ಮ ಗುರುಗಳಿಗೆ (Teacher) ಧನ್ಯವಾದ ಸಲ್ಲಿಸಿದ್ದಾರೆ.
5.Belagavi: ಮಾನವೀಯತೆ ಮರೆತ ಉಪ ನೋಂದಣಾಧಿಕಾರಿ; ಸ್ಟ್ರೆಚರ್ನಲ್ಲೇ ಕಚೇರಿಗೆ ಬಂದ ವೃದ್ಧೆ!
80 ವರ್ಷದ ವೃದ್ಧೆಯೋರ್ವಳನ್ನು ಸ್ಟ್ರೆಚರ್ (Stretcher) ಮೇಲೆ ಉಪನೋಂದಣಾಧಿಕಾರಿ ಕಚೇರಿಗೆ ಬಂದು ಹಕ್ಕಬಿಟ್ಟ ಪತ್ರಕ್ಕೆ ಹೆಬ್ಬಟ್ಟು ಒತ್ತಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.
ಮೂಲತಃ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ಮಹಾದೇವಿ ಅಗಸಿಮನಿ ವಯೋಸಹಜ ಕಾಯಿಲೆಗಳಿಂದ (Geriatric Disease) ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಗೆ (Private Hospital) ಕಳೆದ ವಾರ ದಾಖಲಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ