• Home
  • »
  • News
  • »
  • state
  • »
  • Top 5 News: SDPI ಕಚೇರಿ ಮೇಲೆ ದಾಳಿ, ಪೇ ಮೇಯರ್ ಅಭಿಯಾನ, IAS ಅಧಿಕಾರಿಗೆ ಬಾಲಕಿಯ ದಿಟ್ಟ ಉತ್ತರ; ಬೆಳಗಿನ ಟಾಪ್ ನ್ಯೂಸ್​ಗಳು

Top 5 News: SDPI ಕಚೇರಿ ಮೇಲೆ ದಾಳಿ, ಪೇ ಮೇಯರ್ ಅಭಿಯಾನ, IAS ಅಧಿಕಾರಿಗೆ ಬಾಲಕಿಯ ದಿಟ್ಟ ಉತ್ತರ; ಬೆಳಗಿನ ಟಾಪ್ ನ್ಯೂಸ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.SDPI ಕಚೇರಿ ಸೇರಿ 5 ಕಡೆ ದಾಳಿ; PFI ನಿಷೇಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್


ಶಿವಮೊಗ್ಗದ (Shivamogga) ಎಸ್​​ಡಿಪಿಐ ಕಚೇರಿ(SDPI Office) ಸೇರಿದಂತೆ 5 ಕಡೆಗಳಲ್ಲಿ ಪೊಲೀಸರು (Police) ಹಾಗೂ ತಹಶೀಲ್ದಾರ್ ಐವರು ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡಿದ್ದಾರೆ. ಮೊಬೈಲ್ ಸೇರಿದಂತೆ, ಹಲವು ದಾಖಲಾತಿಗಳು ವಶಪಡಿಸಿಕೊಂಡಿದ್ದಾರೆ. ನಗರದ ಬೈಪಾಸ್ ರಸ್ತೆಯಲ್ಲಿರುವ ಎಸ್​ಡಿಪಿಐ ಕಚೇರಿ ಬೀಗ ಒಡೆದು ಒಳಗೆ ನುಗ್ಗಿದ ಅಧಿಕಾರಿಗಳು, ಕಚೇರಿಯಲ್ಲಿದ್ದ ಕೆಲವು ಪಾಂಪ್ಲೆಟ್ ವಶಕ್ಕೆ ಪಡೆದು ವಾಪಸ್​ ಆಗಿದ್ದಾರೆ. ಬುಧವಾರ ತಡರಾತ್ರಿ ನಡೆದ ಪೊಲೀಸರು ಉಡುಪಿ (Udupi) ಜಿಲ್ಲೆಯ ವಿವಿಧೆಡೆ ಪಿಎಫ್ಐ (PFI) ಮತ್ತು ಎಸ್​ಡಿಪಿಐ ಸಂಘಟನೆಗೆ ಸೇರಿದ ಹಲವು ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಮತ್ತು ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಉಡುಪಿ ಜಿಲ್ಲೆಯಲ್ಲಿ PFI ನ ಯಾವುದೇ ಕಚೇರಿ ಇಲ್ಲ. ಹಾಗಾಗಿ SDPI ಕಚೇರಿಯಲ್ಲಿಯೇ PFI ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ಹಿನ್ನೆಲೆ SDPI ಕಚೇರಿಯಲ್ಲಿಯೇ ಇವರ ಚಟುವಟಿಕೆಗಳು ನಡೆಯುತ್ತಿದ್ದವು.


2.Hubballi: ಕಾಂಗ್ರೆಸ್​ನಿಂದ ಪೇ ಮೇಯರ್ ಅಭಿಯಾನ; ರಾಷ್ಟ್ರಪತಿ ಕಾರ್ಯಕ್ರಮದಲ್ಲಿಯೂ ನಡೀತಾ ಭ್ರಷ್ಟಾಚಾರ?


ರಾಜ್ಯದ ವಿವಿಧೆಡೆ ಕಾಂಗ್ರೆಸ್ ನಾಯಕರು (Congress Leaders) ಪೇ ಸಿಎಂ ಅಭಿಯಾನ (Pay CM Campaign) ನಡೆಸಿದ್ದರು. ಅದಕ್ಕೆ ವಿರುದ್ಧವಾಗಿ ಬಿಜೆಪಿ (BJP) ಸಹ ಅಭಿಯಾನ ನಡೆಸಿತ್ತು. ಇದೀಗ ಹುಬ್ಬಳ್ಳಿಯಲ್ಲಿ ಪೇ ಮೇಯರ್ ಅಭಿಯಾನ (Pay Mayor) ಆರಂಭಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಪೌರ ಸನ್ಮಾನ ಕಾರ್ಯಕ್ರಮದಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಅದನ್ನು ಖಂಡಿಸಿ ಪೇ ಮೇಯರ್ ಅಭಿಯಾನ ಆರಂಭಿಸಲಾಗಿದೆ. ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ವಿರುದ್ಧ ಪೇ ಮೇಯರ್ ಅಭಿಯಾನ ಆರಂಭಿಸಲಾಗಿದೆ. ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಭ್ರಷ್ಟಾಚಾರ ಆರೋಪಿಸಿ ಕೈ ನಾಯಕರು ಪೇ ಮೇಯರ್ ಅಭಿಯಾನ ಆರಂಭಿಸಿದ್ದಾರೆ.


Morning Digest 29 September 2022 have quick look of important news today mrq
ಪೇ ಮೇಯರ್ ಪೋಸ್ಟರ್


3.Arrest Warrant: ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್​ಗೆ ಬಂಧನ ಭೀತಿ, ಅರೆಸ್ಟ್ ವಾರೆಂಟ್ ಜಾರಿ!


ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ಮತ್ತು ಅವರ ತಾಯಿ ಶೋಭಾ ಕಪೂರ್ ಗೆ (Shobha Kapoor ) ಬಿಹಾರದ (Bihar) ಬೇಗುಸರಾಯ್ ಕೋರ್ಟ್ (Court) ಅರೆಸ್ಟ್ ವಾರೆಂಟ್ (Arrest Warrant) ಜಾರಿ ಮಾಡಿದೆ. ತಮ್ಮ 'XXX' ವೆಬ್ ಸರಣಿಯ ಎರಡನೇ ಸೀಸನ್‍ನಲ್ಲಿ ಹಲವಾರು ದೃಶ್ಯಗಳಲ್ಲಿ ಸೈನಿಕರನ್ನು (Soldiers ) ಮತ್ತು ಅವರ ಕುಟುಂಬದವರಿಗೆ ಅವಮಾನಿಸಿದ್ದಾರೆ. ಅಲ್ಲದೇ ಅವರ ಭಾವನೆಗಳಿಗೆ ನೋವುಂಟು (Hurting) ಮಾಡಿದ್ದಾರೆ. ಆ ಆರೋಪದ ಮೇಲೆ ನಿನ್ನೆ ರಾತ್ರಿ ವಾರೆಂಟ್ ಹೊರಡಿಸಲಾಗಿದೆ. ಈ ಸರಣಿಯಲ್ಲಿ ಸೈನಿಕನ ಪತ್ನಿಗೆ ಸಂಬಂಧಿಸಿದ ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಮಾಜಿ ಸೈನಿಕ ಶಂಭುಕುಮಾರ್ ಆರೋಪಿಸಿದ್ದರು. ಅಲ್ಲದೇ ಈ ಸರಣಿ ಸೈನಿಕರ ವಿರುದ್ಧವೇ ಮಾಡಿದ್ದಾರೆ ಎಂದು ಆಕ್ಷೇಪಿಸಿದ್ದರು. ಅದಕ್ಕೆ ಇಬ್ಬರಿಗೂ ವಾರೆಂಟ್ ಜಾರಿ ಆಗಿದೆ.


Morning Digest 29 September 2022 have quick look of important news today mrq
ಏಕ್ತಾ ಕಪೂರ್ ಮತ್ತ ಶೋಭಾ ಕಪೂರ್ ಗೆ ಅರೆಸ್ಟ್ ವಾರೆಂಟ್ ಜಾರಿ


4.Bihar: ನಾನು ಭಾರತೀಯಳು, ನಾನೇಕೆ ಪಾಕ್​ಗೆ ಹೋಗಲಿ?: IAS ಅಧಿಕಾರಿಯ ಸೊಕ್ಕಿಗೆ ಬಾಲಕಿಯ ದಿಟ್ಟ ಉತ್ತರ!


ಬಿಹಾರ ಸರ್ಕಾರ (Bihar Govt) ನಡೆಸುತ್ತಿರುವ ಕಾರ್ಯಕ್ರಮವಾದ ಸ್ಕೂಲ್​ಗಿರಿಯಲ್ಲಿ ಹಿರಿಯ ಐಎಎಸ್ ನೀಡಿದ ವಿಚಿತ್ರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳು ಐಎಎಸ್ ಅಧಿಕಾರಿಗೆ (IAS Officer), ಸರ್ಕಾರ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್ (Sanitary Pad) ನೀಡಬಹುದೇ? ಎಂದೇ ಪ್ರಶ್ನಿಸಿದ್ದಾಳೆ.


Morning Digest 29 September 2022 have quick look of important news today mrq
ಬಿಹಾರ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಹರ್ಜೋತ್ ಕೌರ್


ಈ ಬಗ್ಗೆ ಸಿಟ್ಟಾದ ಐಎಎಸ್ ಅಧಿಕಾರಿ, ಜನರ ಬೇಡಿಕೆಗೆ ಕೊನೆ ಇಲ್ಲದಂತಾಗಿದೆ. ಜನರು ಯಾವಾಗಲೂ ಒಂದಿಲ್ಲೊಂದು ಕೇಳುತ್ತಾರೆ. ನಾಳೆ ಅವರು ಕಾಂಡೋಮ್ (Condom) ಕೇಳಲು ಪ್ರಾರಂಭಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


5.Gold-Silver Price Today: ಚಿನ್ನ ದರ ಭಾರೀ ಅಗ್ಗ, ಬಂಗಾರ ಪ್ರಿಯರಿಗೆ ನಿರಾಳ: ಹೀಗಿದೆ ನೋಡಿ ಗೋಲ್ಡ್​, ಸಿಲ್ವರ್ ರೇಟ್!


ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಕುಸಿತವಾಗಿರುವುದನ್ನು ಕಾಣಬಹುದಾಗಿದೆ. ಇಂದು ಸಹ ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ರೂ. 4,580 ಆಗಿದೆ. ಅಲ್ಲದೆ ಕಳೆದ ಕೆಲ ದಿನಗಳಲ್ಲಿ ಆಗುತ್ತಿರುವ ಏರಿಳಿತವನ್ನು ಗಮನಿಸಿದರೆ ಸದ್ಯ ಇದು ಚಿನ್ನ ಕೊಳ್ಳಲು ಉತ್ತಮ ಸಮಯವೆಂದೇ ಎನ್ನಬಹುದು. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,580 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 4,997 ಆಗಿದೆ.


ಸಾಂದರ್ಭಿಕ ಚಿತ್ರ


ಅಲ್ಲದೇ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 36,640 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 39,976 ಆಗಿದೆ. ಇತ್ತ ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 45,800 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,970 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,58,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 4,99,700 ಆಗಿದೆ.

Published by:Mahmadrafik K
First published: