1.BREAKING| PFI Ban: ಐದು ವರ್ಷ ಪಿಎಫ್ಐ ಬ್ಯಾನ್; ಕೇಂದ್ರ ಸರ್ಕಾರದಿಂದ ಬಹುದೊಡ್ಡ ನಿರ್ಧಾರ
ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆ ನಿಷೇಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Fron of India)ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ಐದು ವರ್ಷ ಪಿಎಫ್ಐ ಬ್ಯಾನ್ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದಿಂದ (Central Government) ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದು, ಯುಎಪಿಎ ಕಾಯ್ದೆಯಡಿ ನಿಷೇಧ ಮಾಡಲಾಗಿದೆ. ಪಿಎಫ್ಐ ಸೇರಿ ಎಂಟು ಸಂಘಟನೆಗಳನ್ನು ನಿಷೇಧ ಮಾಡಲಾಗಿದೆ. PFIಗೆ ಸಂಬಂಧಿತ ಮತ್ತು ಅದರ ಜೊತೆಗೆ ಗುರುತಿಸಿಕೊಂಡಿದ್ದ ಎಂಟು ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
2.PFI Ban: ಪಿಎಫ್ಐಗೆ ಹರಿದು ಬರುತ್ತಿದ್ದ ಹಣಕ್ಕೆ ಅಪ್ಪ, ಅಮ್ಮನೇ ಇರಲಿಲ್ಲ; 120 ಕೋಟಿಗೂ ಅಧಿಕ ಹಣ ಸಂದಾಯ?
ಕೇಂದ್ರ ಸರ್ಕಾರ (Central Government) ಕೊನೆಗೂ ಪಿಎಫ್ಐ (Popular Front Of India) ಸೇರಿದಂತೆ ಎಂಟು ಸಂಘಟನೆಗಳನ್ನು ಮುಂದಿನ ಐದು ವರ್ಷ ನಿಷೇಧಿಸಿ ಆದೇಶ ಹೊರಡಿಸಿದೆ. 2018ರಲ್ಲಿ ಜಾರಿ ನಿರ್ದೇಶನಾಲಯ (enforcement directorate) ನ್ಯಾಯಾಲಯಕ್ಕೆ ಪಿಎಫ್ಐ ಸಂಘಟನೆಗೆ ಹರಿದು ಬರುತ್ತಿದ್ದ ಹಣದ ಕುರಿತು ಮಾಹಿತಿ ನೀಡಿತ್ತು. ಈ ವೇಳೆ ಪಿಎಫ್ಐ ಆರ್ಥಿಕವಾಗಿ ಹೇಗೆ ಪ್ರಬಲವಾಗಿದೆ ಎಂಬುದರ ಮಾಹಿತಿಯನ್ನು ತಿಳಿಸಿತ್ತು. ಪಿಎಫ್ಐ ಸಂಘಟನೆಗೆ ಹರಿದು ಬರುತ್ತಿದ್ದ ವಿದೇಶಿ ಹಣಕ್ಕೆ (Money Source) ಯಾವುದೇ ಮೂಲ ಇರುತ್ತಿರಲಿಲ್ಲ. ಬೋಗಸ್ ಖಾತೆಗಳ ಮೂಲಕ ಪಿಎಫ್ಗೆ ಹಣ ಬರುತ್ತಿತ್ತು ಎಂದು ವರದಿಯಾಗಿದೆ. ನಗದು ಹಣ ಹೂಡಿಕೆಗೆ ಅನಾಮಧೇಯರ ಹೆಸರು ಬಳಕೆ ಮಾಡಲಾಗುತ್ತಿತ್ತು.
3.Mahesh Babu: ನಟ ಮಹೇಶ್ ಬಾಬುಗೆ ಮಾತೃ ವಿಯೋಗ
ಟಾಲಿವುಡ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರ ತಾಯಿ, ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಇಂದಿರಾ ದೇವಿ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಇಂದಿರಮ್ಮ ಅವರ ನಿಧನಕ್ಕೆ ಚಿತ್ರರಂಗ, ರಾಜಕೀಯ ಸೇರಿದಂತೆ ಎಲ್ಲಾ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದಿರಾ ದೇವಿ ಅವರನ್ನು ಎಲ್ಲರೂ ಇಂದಿರಮ್ಮ ಅಂತ ಕರೆಯುತ್ತಿದ್ದರು. ಮಹೇಶ್ ಬಾಬು ಅವರ ತಂದೆ ಕೃಷ್ಣ ಹಿರಿಯ ಕಲಾವಿದರು. ಇದೀಗ ವಿಷಯ ಇಂದಿರಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಲೇ ಮಹೇಶ್ ಬಾಬು ಅವರ ನಿವಾಸದತ್ತ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,580 ಆಗಿದೆ. ಅಲ್ಲದೆ ಕಳೆದ ಕೆಲ ದಿನಗಳಲ್ಲಿ ಆಗುತ್ತಿರುವ ಏರಿಳಿತವನ್ನು ಗಮನಿಸಿದರೆ ಸದ್ಯ ಇದು ಚಿನ್ನ ಕೊಳ್ಳಲು ಉತ್ತಮ ಸಮಯವೆಂದೇ ಎನ್ನಬಹುದು. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,580 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 4,997 ಆಗಿದೆ. ಅಲ್ಲದೇ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 36,640 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 39,976 ಆಗಿದೆ.
5.Positive Story: ಕಂಪೌಂಡ್ ಮುಂದೆ ಮೂತ್ರ ವಿಸರ್ಜನೆ ತಪ್ಪಿಸೋಕೆ ಮಾಸ್ಟರ್ಪ್ಲಾನ್!
ಅರೇ! ಇದೇನಿದು? ಕಂಪೌಂಡ್ ಮೇಲೆಲ್ಲ ಸೂಪರ್ ಆಗಿರೋ ಚಿತ್ರಗಳು! ರಸ್ತೆ ಬದಿ ಇರುವ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರಗಳು, ಹಾರ್ತಿರೋ ಚಿಟ್ಟೆ ಪಕ್ಕ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರೋ ಸಾರ್ವಜನಿಕರು, ಇದ್ಯಾವುದೂ ಮ್ಯೂಸಿಯಂ ಅಂದುಕೊಂಡ್ರಾ. ಹಾಗಾದ್ರೆ ನಿಮ್ಮ ಊಹೆ ನಿಜಕ್ಕೂ ತಪ್ಪು! ಕಂಪೌಂಡ್ ಕಂಡ್ರೆ ಸಾಕು ಪೋಸ್ಟರ್ ಅಂಟಿಸೋದನ್ನೇ ಕಾಣೋ ಈ ಕಾಲ್ದಲ್ಲಿ ಉದ್ದುದ್ದಾ ಕಂಪೌಂಡ್ ಮೇಲ್ಗಡೆ ಈ ಸುಂದರ ಚಿತ್ರಗಳು ಹೇಗೆ ಬಂದ್ವು ಅಂದ್ಕೊಂಡ್ರಾ? ಕಂಪೌಂಡ್ ಗೋಡೆಗೆ ಮೂತ್ರ ವಿರ್ಜನೆ ಮಾಡೋದನ್ನು ತಡೆಯೋಕೆ ಕಲಬುರಗಿ (Kalaburagi) ಪಾಲಿಕೆ ಅಧಿಕಾರಿಗಳು ಕಂಡುಕೊಂಡ ಮಾಸ್ಟರ್ ಪ್ಲಾನ್ ಇದು! ಕಂಪೌಂಡ್ ಮೇಲೆ ಸುಂದರ ಚಿತ್ರಗಳನ್ನು ಬಿಡಿಸಿ ಜನರಲ್ಲಿ ಜಾಗೃತಿ ಮೂಡಿಸೋಕೆ ಕಲಬುರಗಿಲಿ (Kalaburagi Positive News) ಪ್ರಯತ್ನ ನಡೀತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ