• Home
  • »
  • News
  • »
  • state
  • »
  • Top 5 News: ಪಿಎಫ್​ಐ ನಾಯಕರಿಗೆ ಶಾಕ್, ಮಾಯವಾದ ರಸ್ತೆ, ಸಸ್ಯ ಆಧಾರಿತ ಮಾಂಸ ಬಂತು; ಬೆಳಗಿನ ಟಾಪ್ ನ್ಯೂಸ್​

Top 5 News: ಪಿಎಫ್​ಐ ನಾಯಕರಿಗೆ ಶಾಕ್, ಮಾಯವಾದ ರಸ್ತೆ, ಸಸ್ಯ ಆಧಾರಿತ ಮಾಂಸ ಬಂತು; ಬೆಳಗಿನ ಟಾಪ್ ನ್ಯೂಸ್​

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.PFI ಮುಖಂಡರಿಗೆ ಮುಗಿಯದ ಕಂಟಕ, ಅನುಮಾನಾಸ್ಪದರ ವಿಚಾರಣೆ; ಪೊಲೀಸರಿಂದ ಮಾರ್ನಿಂಗ್ ಶಾಕ್


ಪಿಎಫ್​ಐ ಮುಖಂಡರ (PFI Leaders) ನಿವಾಸ ಮತ್ತು ಕಚೇರಿಗಳ ಮೇಲೆ ಎರಡನೇ ಸುತ್ತಿನ ದಾಳಿ ನಡೆದಿದೆ. ಕರ್ನಾಟಕ ಸೇರಿ ಒಟ್ಟು ಏಳು ರಾಜ್ಯಗಳಲ್ಲಿ ಪಿಎಫ್​ಐ ವಿರುದ್ಧ ಎನ್​ಐಎ (NIA Raids) ಎರಡನೇ ಹಂತದ ಕಾರ್ಯಚರಣೆ ನಡೆಸಿದೆ. ಕರ್ನಾಟಕ, ಗುಜರಾತ್, ದೆಹಲಿ ಸೇರಿ 7 ರಾಜ್ಯಗಳಲ್ಲಿ ರೇಡ್ ಮಾಡಲಾಗಿದೆ. ಕರ್ನಾಟಕದ ಉಡುಪಿ, ಶಿವಮೊಗ್ಗ, ಕೋಲಾರ, ಚಿತ್ರದುರ್ಗ, ಚಾಮರಾಜನಗರ ರಾಯಚೂರು, ವಿಜಯಪುರ, ಕಲಬುರಗಿ ಸೇರಿ 10 ಜಿಲ್ಲೆಗಳಲ್ಲಿ ಪೊಲೀಸರು ಹಲವೆಡೆ ಕಾರ್ಯಾಚರಣೆ ನಡೆಸಿದೆ. ನಿದ್ದೆಯ ಮಂಪರಿನಲ್ಲಿದ್ದ ನಾಯಕರಿಗೆ ಪೊಲೀಸರು ಮಾರ್ನಿಂಗ್ ಶಾಕ್ ನೀಡಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.


Morning Digest 27 September 2022 have quick look of important news today mrq
ಪತಿಯ ಜೊತೆ ಕಾಜಲ್


2.Kajal Aggarwal: ಪತಿಯೊಂದಿಗೆ ತಿರುಪತಿಗೆ ಭೇಟಿ ಕೊಟ್ಟ ಕಾಜಲ್!


Kajal Aggarwal: ನಟಿ ಕಾಜಲ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಕಾಜಲ್ ತನ್ನ ಪತಿಯೊಂದಿಗೆ ಇಂದು ತಿರುಮಲಕ್ಕೆ ಭೇಟಿ ಕೊಟ್ಟಿದ್ದಾರೆ. ನಟಿ ಕಾಜಲ್ ಅಗರ್ವಾಲ್ ಇಂದು ತಿರುಮಲ ದರ್ಶನ ಪಡೆದರು. ಅವರು ತಮ್ಮ ಪತಿ ಗೌತಮ್ ಕಿಚ್ಲು ಅವರೊಂದಿಗೆ ಸೇವೆಯಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಕಾಜಲ್, ಇಂಡಿಯನ್ 2 ಚಿತ್ರದ ಶೂಟಿಂಗ್ ಗಾಗಿ ಇಲ್ಲಿಗೆ ಬಂದಿದ್ದೇನೆ, ಪತಿಯೊಂದಿಗೆ ಬಂದಿರುವುದು ಸಂತಸ ತಂದಿದೆ ಎಂದಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕಾಜಲ್ ಅಗರ್ವಾಲ್ ಗರ್ಭಾವಸ್ಥೆಯ ಕಾರಣದಿಂದ ಕಳೆದ ವರ್ಷ ಚಿತ್ರಗಳಿಂದ ವಿರಾಮ ತೆಗೆದುಕೊಂಡಿದ್ದರು. ಅವರು ಕೊನೆಯದಾಗಿ ಆಚಾರ್ಯ ಚಿತ್ರದಲ್ಲಿ ನಟಿಸಿದ್ದರು.


Morning Digest 27 September 2022 have quick look of important news today mrq
ರಸ್ತೆ


3.Mangaluru: ಒಂದೇ ಮಳೆಗೆ ಮಾಯವಾಯ್ತು 30 ಕೋಟಿ ವೆಚ್ಚದ ರಸ್ತೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ


ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣಗೊಳ್ಳುತ್ತಿರುವ ರಸ್ತೆಯೊಂದು ಒಂದೇ ಮಳೆಗೆ (Rains) ಕೊಚ್ಚಿ ಹೋಗಿದೆ. ಮಂಗಳೂರು (Mangaluru) ಹೊರವಲಯದ ತೊಕ್ಕೋಟಿನಿಂದ ದೇರಳಕಟ್ಟೆ (Tokkuttu To Deralakatte) ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ (Four lane Road) ಅಭಿವೃದ್ಧಿ ಪಡಿಸಲಾಗಿತ್ತು. ರಸ್ತೆಯನ್ನು ಅಗಲೀಕರಣಗೊಳಿಸಿ ಒಂದು ಹಂತದ ಡಾಂಬರೀಕರಣವೂ ನಡೆದಿದ್ದು, ಇದೀಗ ರಸ್ತೆಯೇ ಮಾಯವಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಅತ್ಯಂತ ಜನ ಹಾಗೂ ವಾಹನ ಜಂಗುಳಿಯಿರುವ ರಸ್ತೆಯೆಂದೇ ಗುರುತಿಸಿಕೊಂಡಿರುವ ಮಂಗಳೂರು ಹೊರವಲಯದ ತೊಕ್ಕೋಟಿನಿಂದ ಮುಡಿಪು ಸಂಪರ್ಕಿಸುವ ರಸ್ತೆ ಇದೀಗ ಸಂಪೂರ್ಣ ಹದಗೆಟ್ಟು ಹೋಗಿದೆ.


Morning Digest 27 September 2022 have quick look of important news today mrq
ಚಿನ್ನ, ಬೆಳ್ಳಿ


4.Gold-Silver Price Today: ಚಿನ್ನ ಕೊಳ್ಳೋರಿಗಿಲ್ಲ ಟೆನ್ಶನ್, ಬೆಳ್ಳಿ ದರದಲ್ಲೂ ಬದಲಾವಣೆ ಇಲ್ಲ: ಹೀಗಿದೆ ಇಂದಿನ ದರ


Gold and Silver Price on 27 Sep, 2022: ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದು ಭಾರತದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,600 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 46,050 ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,600 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,020 ಆಗಿದೆ. ಅಲ್ಲದೇ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 36,800 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,160 ಆಗಿದೆ.


Morning Digest 27 September 2022 have quick look of important news today mrq
ಸಸ್ಯ ಆಧಾರಿತ ಮಾಂಸ ಆಹಾರ


5.Plant Based Meat: ಭಾರತದ ಮೊದಲ ಸಸ್ಯ ಆಧಾರಿತ ಮಾಂಸ ಗುಜರಾತ್‌ನಿಂದ ಅಮೆರಿಕಾಕ್ಕೆ ರಫ್ತು


ಸಸ್ಯ ಆಧಾರಿತ ಪ್ರೋಟೀನ್ ಆಹಾರ ಕಂಪನಿ ಗ್ರೀನೆಸ್ಟ್ (GREENEST) ಯುಎಸ್‌ ಗೆ ಭಾರತದ ಸಸ್ಯ ಆಧಾರಿತ ಮಾಂಸದ ಮೊದಲ ರವಾನೆಯನ್ನು ಮಾಡಿದೆ. ಅಪೆಕ್ಸ್ ರಫ್ತು ಉತ್ತೇಜನಾ ಸಂಸ್ಥೆ, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಪ್ರಾಧಿಕಾರ (APEDA)ದ ಮೂಲಕ ಕೇಂದ್ರವು ಸಸ್ಯಾಧಾರಿತ ಮಾಂಸ ಉತ್ಪನ್ನಗಳ (plant-based meat product) ಮೊದಲ ರವಾನೆಯನ್ನು ಯುಸ್‌ ಗೆ ರಫ್ತು ಮಾಡಲು ಅನುವು ಮಾಡಿಕೊಟ್ಟಿದೆ. ಜನಪ್ರಿಯ ಸಸ್ಯ ಪ್ರೋಟೀನ್ ಆಹಾರ ಬ್ರಾಂಡ್ ಆಗಿರುವ ಗ್ರೀನ್‌ಸ್ಟ್, (Greenest ) ಭಾರತದ ಮೊದಲ ಸಸ್ಯ ಆಧಾರಿತ ಮಾಂಸ ರಫ್ತು ಸರಕುಗಳನ್ನು ಸಸ್ಯಾಹಾರಿ ಆಹಾರ ವರ್ಗದ ಅಡಿಯಲ್ಲಿ ಗುಜರಾತ್‌ನ (Gujarat) ನಾಡಿಯಾಡ್‌ನಿಂದ ಕ್ಯಾಲಿಫೋರ್ನಿಯಾಗೆ ಈ ಆಹಾರಗಳನ್ನು (Food) ರವಾನೆ ಮಾಡಲಾಗಿದೆ.

Published by:Mahmadrafik K
First published: