• Home
  • »
  • News
  • »
  • state
  • »
  • Top 5 News: ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು, ಮತಾಂತರ ಯತ್ನ, ಇಳಿದಿದೆ ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್​ಗಳು

Top 5 News: ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು, ಮತಾಂತರ ಯತ್ನ, ಇಳಿದಿದೆ ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್​ಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Hubballi: ಯುವಕನ ಮರ್ಮಾಂಗದ ತುದಿ ಕತ್ತರಿಸಿ ಮುಸ್ಲಿಂ ಧರ್ಮಕ್ಕೆ ಬಲವಂತದ ಮತಾಂತರ ಯತ್ನ


ಯುವಕನ ಮರ್ಮಾಂಗದ ತುದಿ ಕತ್ತರಿಸಿ ಮುಸ್ಲಿಂ ಧರ್ಮಕ್ಕೆ (Islam Convertion) ಬಲವಂತವಾಗಿ ಮತಾಂತರ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ (Hubballi) ನವನಗರದ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಡ್ಯದ ಯಾದವನಹಳ್ಳಿ ಗ್ರಾಮದ ಶ್ರೀಧರ್ ಗಂಗಾಧರ್ ಎಂಬವರ ಮರ್ಮಾಂಗಕ್ಕೆ ಕತ್ತರಿ ಹಾಕಲು 11 ಜನರು ಮುಂದಾಗಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿರ್, ಮಹ್ಮದ್ ಇಟ್ಬಾಲ್, ರಫಿಕ್, ಶಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ಶ್ರೀಧರ್ ದೂರು ದಾಖಲಿಸಿದ್ದಾರೆ.


2.SM Krishna: ಮಾಜಿ ಸಿಎಂ ಎಸ್ಎಂ ಕೃಷ್ಣ ಮಣಿಪಾಲ್ ಆಸ್ಪತ್ರೆಗೆ ದಾಖಲು


ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (Former CM SM Krishna) ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ತೀವ್ರ ಜ್ವರದ ಹಿನ್ನೆಲೆ ರಾತ್ರಿಯೇ ಮಣಿಪಾಲ್ ಆಸ್ಪತ್ರೆಗೆ ಎಸ್ಎಂಕೆ ಅವರನ್ನು ಶಿಫ್ಟ್ ಮಾಡಲಾಗಿದೆ. ಈ ಮೊದಲು ವೈದೇಹಿ ( ಮಲ್ಯ) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇಲ್ಲಿನ ವೈದ್ಯರ ಸಲಹೆ ಮೇರೆಗೆ ಕುಟುಂಬಸ್ಥರು ಎಸ್ಎಂಕೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.


Former CM SM Krishna admitted hospital mrq
SM Krishna


3.Viral Letter: ಐಶ್ವರ್ಯಾ ದಪ್ಪ ಆಗ್ಲಿ, ನನಗೆ ಮದುವೆ ಫಿಕ್ಸ್ ಆಗ್ಲಿ! ದೇವರ ಮುಂದೆ ಭಕ್ತನ ವಿಚಿತ್ರ ಡಿಮ್ಯಾಂಡ್


ನಮ್ಮ ಕಷ್ಟವನ್ನು ಕಳೆಯಪ್ಪಾ ಅಂತ ಭಕ್ತರು (Devotees) ದೇವರ (God) ಮುಂದೆ ಪ್ರಾರ್ಥನೆ (Prayer) ಮಾಡುತ್ತಾರೆ. ಕೆಲವರು ಹರಕೆ ಹೊತ್ತುಕೊಂಡು, ತಮ್ಮ ಕಷ್ಟದ ಭಾರವನ್ನು ದೇವರ ಮೇಲೆ ಹಾಕ್ತಾರೆ. ಇನ್ನೂ ಕೆಲವರು ಪತ್ರ (Letter) ಬರೆದು, ದೇವರ ಹುಂಡಿಗೆ ಹಾಕುತ್ತಾರೆ.


Morning Digest 25 September 2022 have quick look of important news today mrq
ಕಳಸೇಶ್ವರ ಸ್ವಾಮಿ


ಅದೇ ರೀತಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಕಳಸ (Kalasa) ಗ್ರಾಮದ ಪ್ರಸಿದ್ಧ ಕಳಸೇಶ್ವರ ಸ್ವಾಮಿ ದೇಗುಲದ (Kalaseshwara Swamy Temple) ಕಾಣಿಕೆ ಹುಂಡಿಯಲ್ಲಿ ಭಕ್ತನೊಬ್ಬ ಬರೆದ ವಿಚಿತ್ರ ರೀತಿಯ ಪತ್ರ ಪತ್ತೆಯಾಗಿದೆ. ಆ ಭಕ್ತ ಮಂಡ್ಯ (Mandya) ಜಿಲ್ಲೆಯಲ್ಲಿರುವ ಪ್ರಸಿದ್ಧ ಉಕ್ಕಡ ಮಾರಮ್ಮ ದೇವಿ (Ukkada Maramma Devi) ಹೆಸರಲ್ಲಿ ಪತ್ರ ಬರೆದು, ಅದನ್ನು ಕಳಸೇಶ್ವರ ಸ್ವಾಮಿ ದೇವರ ಹುಂಡಿಯಲ್ಲಿ ಹಾಕಿದ್ದಾನೆ.


4.Gold and Silver Price: ಮನೆಯಲಿ ಇದ್ದರೆ ಚಿನ್ನ, ಚಿಂತೆ ಏತಕೆ ಇನ್ನ! ಬೆಲೆ ಇಳಿದಿದೆ, ಬೇಗ ಖರೀದಿ ಮಾಡಿ


Gold and Silver Price on 25 Sep, 2022: ಚಿನ್ನದ ಬೆಲೆ ಕಡಿಮೆ ಆದಾಗಲೇ ಖರೀದಿ ಮಾಡ್ಬೇಕು, ಯಾಕೆಂದ್ರೆ ಹಣ ಯಾರಿಗೂ ಸುಮ್ನೆ ಬರೋದಿಲ್ಲ! ಹೀಗಂತ ನಾವ್ ಹೇಳ್ತಿಲ್ಲ ಆರ್ಥಿಕ ತಜ್ಞರು ಹೇಳ್ತಾರೆ. ಅಂದಹಾಗೆ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದ ಚೀನಿವಾರ ಪೇಟೆಯಲ್ಲಿ ಇಂದು ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,500 ರೂ. ಇತ್ತು.


Morning Digest 25 September 2022 have quick look of important news today mrq
ಸಾಂಕೇತಿಕ ಚಿತ್ರ


ಇಂದು 46,000 ರೂ. ಆಗಿದೆ. ಹಾಗೇಯೇ ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 50,730 ರೂಪಾಯಿ ಇತ್ತು. ಇಂದು ಅದೇ ಚಿನ್ನದ ಬೆಲೆ 50,200 ರೂಪಾಯಿ ಆಗಿದೆ. ಇಂದು 22 ಕ್ಯಾರೆಟ್ ಬಂಗಾರದ ಬೆಲೆ ಚೆನ್ನೈ- 46,500 ರೂ. ಮುಂಬೈ- 46,000 ರೂ, ದೆಹಲಿ- 46,150 ರೂ, ಕೊಲ್ಕತ್ತಾ- 46,000 ರೂ, ಹೈದರಾಬಾದ್- 46,000 ರೂ, ಕೇರಳ- 46,000 ರೂ, ಪುಣೆ- 46,030 ರೂ, ಮಂಗಳೂರು- 46,050 ರೂ, ಮೈಸೂರು- 46,050 ರೂ. ಇದೆ


5.DKD Winner: ಸಧ್ವಿನ್-ಶಾರಿಕಾ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ'! ಡಿಕೆಡಿ ಸೀಸನ್ -06ರ ವಿಜೇತ ಜೋಡಿ ಇದು


ಜೀ ಕನ್ನಡ (Zee Kannada) ವಾಹಿನಿ ಪ್ರತಿದಿನ ಧಾರಾವಾಹಿಗಳ ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ(Reality Show)ಮೂಲಕ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance), ಸರಿಗಮಪ ಮೂಲಕ ಹೆಸರುವಾಸಿಯಾಗಿದೆ.


Morning Digest 25 September 2022 have quick look of important news today mrq
ಸಧ್ವಿನ್ -ಶಾರಿಕಾ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ


ನಿರೂಪಕಿ ಅನುಶ್ರೀ ಈ ಕಾರ್ಯಕ್ರಮವನ್ನು ನಡೆಸಿಕೊಡ್ತಾ ಇದ್ರು. ಜಡ್ಜ್ ಗಳಾಗಿ, ನಟ ಶಿವರಾಜ್ ಕುಮಾರ್ (Hero Shiva Raj Kumar), ನಟಿ ರಕ್ಷಿತಾ, ಅರ್ಜುನ್ ಜನ್ಯ, ಚಿನ್ನಿ ಮಾಸ್ಟರ್ ತೀರ್ಪು ನೀಡುತ್ತಿದ್ದು. ಕಾರ್ಯಕ್ರಮ ಮುಗಿದಿದ್ದು, ಸದ್ವಿನ್ ಎಸ್ ಶೆಟ್ಟಿ ಮತ್ತು ಶಾರಿಕಾ ಶೆಟ್ಟಿ ವಿನ್ನರ್ (Winner) ಆಗಿ ಹೊರಹೊಮ್ಮಿದ್ದಾರೆ.

Published by:Mahmadrafik K
First published: