• Home
  • »
  • News
  • »
  • state
  • »
  • Top 5 News: ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಆಯ್ಕೆ, ಅಂಕಿತಾ ಕೊಲೆ, ಚಿನ್ನದ ಇಂದಿನ ಬೆಲೆ; ಬೆಳಗಿನ ಟಾಪ್ ನ್ಯೂಸ್​​ಗಳು

Top 5 News: ಏಮ್ಸ್ ನಿರ್ದೇಶಕರಾಗಿ ಕನ್ನಡಿಗ ಆಯ್ಕೆ, ಅಂಕಿತಾ ಕೊಲೆ, ಚಿನ್ನದ ಇಂದಿನ ಬೆಲೆ; ಬೆಳಗಿನ ಟಾಪ್ ನ್ಯೂಸ್​​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.ಕನ್ನಡಿಗನಿಗೆ AIMS ಪಟ್ಟ: ದೆಹಲಿಯ ಏಮ್ಸ್ ನಿರ್ದೇಶಕರಾಗಿ ಯಾದಗಿರಿಯ ಶ್ರೀನಿವಾಸ್ ಆಯ್ಕೆ


ದೆಹಲಿಯ ಪ್ರತಿಷ್ಠಿತ ಏಮ್ಸ್ (AIIMS Delhi) ಆಸ್ಪತ್ರೆಯ ಅಧ್ಯಕ್ಷರಾಗಿ ಯಾದಗಿರಿ (Yadagiri) ಮೂಲದ ಡಾಕ್ಟರ್ ಶ್ರೀನಿವಾಸ್ (Dr M Srinivas) ಆಯ್ಕೆಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್ನ ESICವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಡೀನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಕ್ಕೆ ಡಾ.ಶ್ರೀನಿವಾಸ್ ಅವರನ್ನು ಕೇಂದ್ರ ಸರಕಾರ ಏಮ್ಸ್ ನಿರ್ದೇಶಕರನ್ನಾಗಿ (AIIMS New Director) ಆಯ್ಕೆ ಮಾಡಿದೆ. ರಣದೀಪ್ ಗುಲೇರಿಯಾ ಅವರ ಅವಧಿ ಮುಕ್ತಾಯ ಹಿನ್ನೆಲೆ ಅವರ ಸ್ಥಾನಕ್ಕೆ ಶ್ರೀನಿವಾಸ್ ಅವರನ್ನು ಏಮ್ಸ್ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ. ಡಾ.ಶ್ರೀನಿವಾಸ್ ಹಿಂದುಳಿದ ಜಿಲ್ಲೆ ಯಾದಗಿರಿ ನಗರದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಾರೆ.


Karnataka Doctor M Srinivas appointed Director of AIIMS-Delhi
ಡಾ.ಎಂ ಶ್ರೀನಿವಾಸ್


ಶ್ರೀನಿವಾಸ್ ಅವರ ಆಯ್ಕೆಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಶ್ರೀನಿವಾಸ್ ಅವರು ಯಾದಗಿರಿಯ ಶಾಸ್ತ್ರೀ ವೃತ್ತದ ಸಮೀಪದ ನಿವಾಸಿಗಳಾಗಿದ್ದಾರೆ.


2.Dharwad IIIT: ರಾಷ್ಟ್ರಪತಿಗಳನ್ನು ಸ್ವಾಗತಿಸಲು ಸಿದ್ಧವಾಗ್ತಿದೆ ರೊಬೋಟ್; ಐಐಐಟಿಯಲ್ಲಿ ದೊಡ್ಡಮಟ್ಟದ ಸಂಶೋಧನೆ


ಧಾರವಾಡ: ಪ್ರತಿಷ್ಠಿತ ಐಐಐಟಿಯ (IIIT Dharwad) ಉದ್ಘಾಟನೆಗೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ (President Draupadi Murmu) ಮುರ್ಮು ಕರ್ನಾಟಕ ರಾಜ್ಯಕ್ಕೆ ಬರುತ್ತಿದ್ದಾರೆ. ಸೆಪ್ಟಂಬರ್ 26ರಂದು ರಾಷ್ಟ್ರಪತಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ರೊಬೋಟ್ (Robot) ಮೂಲಕವೇ ರಾಷ್ಟ್ರಪತಿಯವರನ್ನು ಸ್ವಾಗತಿಸುವ ಹಾಗೂ ಐಐಐಟಿಯನ್ನು ರಿಮೋಟ್ (Remote) ಮೂಲಕ ರಾಷ್ಟ್ರಪತಿಗಳು ಉದ್ಘಾಟನೆ (Inauguration) ಮಾಡಲಿದ್ದರೆ. ಆ ರಿಮೋಟ್ನ್ನು ಸಹ ರೊಬೋಟ್ ಮೂಲಕವೇ ರಾಷ್ಟ್ರಪತಿಗಳಿಗೆ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಈಗಾಗಲೇ ಆಡಳಿತ ಮಂಡಳಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ.


Morning Digest 24 September 2022 have quick look of important news today mrq
ರೊಬೋಟ್


3.Ankita Bhandari Murder: ನಾಪತ್ತೆಯಾಗಿದ್ದ ಅಂಕಿತಾ ಕೊಲೆ: BJP ನಾಯಕನ ಪುತ್ರ ಅರೆಸ್ಟ್,​ ರಾತ್ರೋ ರಾತ್ರಿ ರೆಸಾರ್ಟ್​ಗೆ ನುಗ್ಗಿದ ಬುಲ್ಡೋಜರ್!


ಶುಕ್ರವಾರ ತಡರಾತ್ರಿ ಅಂಕಿತಾ ಭಂಡಾರಿ (Ankita Bhandari) ಅವರನ್ನು ಕೊಂದ ಪುಲ್ಕಿತ್ ಆರ್ಯ ಒಡೆತನದ ರಿಷಿಕೇಶದಲ್ಲಿರುವ (Rishikesh) ವಂತರಾ ರೆಸಾರ್ಟ್‌ನ ಮೇಲೆ ಆಡಳಿತಾಧಿಕಾರಿಗಳು ಬುಲ್ಡೋಜರ್ ಏರಿಸಿದ್ದಾರೆ. ಸಿಎಂ ಸೂಚನೆ ಮೇರೆಗೆ ಆರೋಪಿಗಳ ಆಸ್ತಿಯನ್ನು ನೆಲಸಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಅವರ ವಿಶೇಷ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.


Morning Digest 24 September 2022 have quick look of important news today mrq
ಕೊಲೆಗೀಡಾದ ಅಂಕಿತಾ ಭಂಡಾರಿ


ಅಂಕಿತಾ ಈ ರೆಸಾರ್ಟ್‌ನಲ್ಲಿ ರಿಸೆಪ್ಶನಿಸ್ಟ್​ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಉಲ್ಲೇಖಾರ್ಹ. ಸೆಪ್ಟೆಂಬರ್ 18 ರಿಂದ ನಾಪತ್ತೆಯಾಗಿದ್ದ ಆಕೆಯ ಹುಡುಕಾಟಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದರು


4.Gold-Silver Price Today: ದಾಖಲೆಯ ಕುಸಿತ ಕಂಡಿದ್ದ ಚಿನ್ನದ ದರದಲ್ಲಿ ಮತ್ತೆ ಏರಿಕೆ, ಬೆಳ್ಳಿ ಅಗ್ಗ!


Gold and Silver Price on September 24, 2022: ದಾಖಲೆಯ ಕುಸಿತ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆ ಹಾದಿ ಹಿಡಿದಿದೆ. ಇದರಿಂದ ಮತ್ತಷ್ಟು ದರ ಕುಸಿಯಬಹುದೆಂದು ಚಿನ್ನ ಖರೀದಿಗೆ ವಿಳಂಬ ಮಾಡುತ್ತಿದ್ದ ಗ್ರಾಹಕರಿಗೆ ಭಾರೀ ನಿರಾಸೆಯಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ದರ 46,550 ರೂಪಾಯಿ ಆಗಿದೆ.


Morning Digest 24 September 2022 have quick look of important news today mrq
ಸಾಂದರ್ಭಿಕ ಚಿತ್ರ


ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,655 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,078 ಆಗಿದೆ. ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,240 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,624 ಆಗಿದೆ.


5.Kodagu: ಕುಡಿಯುವ ನೀರಿಲ್ಲದೇ ಟಾರ್ಪಲ್ ಟೆಂಟ್​​ನಲ್ಲಿ ವಾಸ; ಯಾವಾಗ ಸಿಗುತ್ತೆ ಸೂರು?


ಕೊಡಗು ಜಿಲ್ಲೆಯಲ್ಲಿ ಇಂದಿಗೂ ತಲತಲಾಂತರಗಳಿಂದ ಸ್ವಂತ ಸೂರಿಲ್ಲದೆ (House), ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದ ಸಾವಿರಾರು ಕುಟುಂಬಗಳು ಅತ್ಯಂತ ಹೀನಾಯ ಬದುಕು ದೂಡುತ್ತಿವೆ. ಅಂತಹ ಒಂದಷ್ಟು ಕುಟುಂಬಗಳ ಶೋಚನೀಯ ಬದುಕಿನ ವ್ಯಥೆ ಇಲ್ಲಿದೆ. ಟಾರ್ಪಲ್ ಹೊದಿಸಿ ನಿರ್ಮಿಸಿದ ಗುಡಿಸಲೇ (Huts) ಇವರ ಪಾಲಿನ ಮನೆಗಳು. ವಿದ್ಯುತ್ (Electricity) ಸೌಲಭ್ಯವಿಲ್ಲದೆ ಕಗ್ಗತ್ತಲ್ಲಿ ಮುಳುಗಿದ 59 ಕುಟುಂಬಗಳು.


People living tarpal tent in barikadu paisari kodagu rsk mrq
ಟೆಂಟ್​​


ಅತ್ಯಂತ ಕೊಳಚೆಯಂತ ಕಲುಷಿತ (Dirty Water) ನೀರೇ ಇವರಿಗೆ ಜೀವಜಲ. ಇಂತಹ ಅತೀ ಶೋಚಯನೀಯ ಬದುಕು ದೂಡುತ್ತಿರುವ ಈ ಕುಟುಂಬಗಳು ಇರುವುದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾರಿಕಾಡು ಪೈಸಾರಿಯಲ್ಲಿ.

Published by:Mahmadrafik K
First published: