Top 5 News: PFI-SDPIಗೆ NIA ಶಾಕ್, ಮುರುಘಾ ಸ್ವಾಮಿ ಆಸ್ಪತ್ರೆಗೆ ಶಿಫ್ಟ್, ಪೇಸಿಎಂ ಪೋಸ್ಟರ್ ಕೇಸ್ ಅಪ್​ಡೇಟ್; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.PAYCM Poster​; ಮೂವರು ಪೊಲೀಸರ ವಶಕ್ಕೆ; ಒಂದೊಂದು ಠಾಣಾ ವ್ಯಾಪ್ತಿಯಲ್ಲಿ ನಾಲ್ಕೈದು ಕಡೆ ಪೋಸ್ಟರ್

ಬುಧವಾರ ನಗರದ ಬಹುತೇಕ ಕಡೆ ಕಾಂಗ್ರೆಸ್ (Congress) ಪೇಸಿಎಂ (Pay CM Poster) ಹೆಸರಿನ ಪೋಸ್ಟರ್ ಅಂಟಿಸಿತ್ತು. ಫೋಟೋಗಳಿಂದ ಸರ್ಕಾರಕ್ಕೆ (BJP Government) ಮುಜುಗರವುನ್ನುಂಟು ಮಾಡಿತ್ತು. ಪೋಸ್ಟರ್ ಅಂಟಿಸಿದ ಪ್ರಕರಣವನ್ನು ಬುಧವಾರ ಸಂಜೆಯೇ ಸಿಸಿಬಿ (CCB) ವರ್ಗಾವಣೆ ಮಾಡಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ (Detained) ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಗಗನ್ ಯಾದವ್ ಮತ್ತು ಬಿ.ಆರ್.ನಾಯ್ಡು ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಇವರುಗಳು ಕೆಪಿಸಿಸಿ (KPCC) ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿರ್ವಹಣೆ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

2.Murugha Swamy: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮುರುಘಾ ಸ್ವಾಮಿ ಶಿಫ್ಟ್​

ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಸ್ವಾಮಿಯನ್ನು (Murugha Swamy) ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಕೊರೋನರಿ ಆಂಜಿಯೋಗ್ರಾಮ್ ಚಿಕಿತ್ಸೆಗೆ ಕೋರ್ಟ್ ಸೂಚನೆ ಹಿನ್ನೆಲೆ‌ ಮುರುಘಾ ಸ್ವಾಮಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ (Mcmeggan hospital Shivamogga) ಶಿಫ್ಟ್ ಮಾಡಲಾಗಿದೆ. ಪೊಲೀಸ್ ಎಸ್ಕಾರ್ಟ್ ಜೊತೆ ಶಿವಮೊಗ್ಗಕ್ಕೆ ಶಿಫ್ಟ್​ ಮಾಡಲಾಗಿದೆ. ಸೆಪ್ಟೆಂಬರ್​ 2 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Morning Digest 22nd September 2022 have quick look of important news today mrq
ಮುರುಘಾ ಸ್ವಾಮಿ


ಶಿವಮೊಗ್ಗದ ಆಸ್ಪತ್ರೆಗೆ ಮುರುಘ ಸ್ವಾಮಿ ಶಿಫ್ಟ್ ಆಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಹೃದಯ ಪರೀಕ್ಷೆ, ಇಕೋ, ಆಂಜಿಯೋಗ್ರಾಂ ಪರೀಕ್ಷೆ ಮಾಡಲಾಗುತ್ತೆ. ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಾರ್ಡ್​​ನಲ್ಲಿ ಪರೀಕ್ಷೆ ಮಾಡಲಿದ್ದು, ಪೊಲೀಸರ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

3.NIA Raids: ಮಂಗಳೂರಿನ PFI, SDPI ಕಚೇರಿ ಮೇಲೆ ಎನ್​ಐಎ ದಾಳಿ; ಅರೆ ಮೀಸಲು ಪಡೆಯಿಂದ ಭದ್ರತೆ

ಮಂಗಳೂರಿನ(Mangaluru) ಪಿಎಫ್ಐ (Popular Front of India), ಎಸ್​ಡಿಪಿಐ (Social Democratic Party of India) ಕಛೇರಿ (PFI And SDPI Office) ಮೇಲೆ ಬೆಳಗಿನ ಜಾವ NIA ರೇಡ್ (NIA Raid) ನಡೆದಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಛೇರಿ ಮೇಲೆ ದಾಳಿ ನಡೆದಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸದ್ಯ ಎನ್​ ಎ ದಾಳಿ ಖಂಡಿಸಿ ಪಿಎಫ್ಐ ಕಾರ್ಯಕರ್ತರಿಂದ (PFI Activist) ಪ್ರತಿಭಟನೆ ನಡೆಯುತ್ತಿದೆ. ಬೆಳಗಿನ ಜಾವ 3.30ರ ವೇಳೆಗೆ ಒಟ್ಟು 8 ಕಡೆ NIA ಟೀಂ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂಜಾಗ್ರತ ಕ್ರಮವಾಗಿ ನೆಲ್ಲಿಕಾಯಿ ರಸ್ತೆಯನ್ನು ಬಂದ್ ಮಾಡಲಾಗಿದೆ. ಸ್ಥಳೀಯ ಪೊಲೀಸರು ಮತ್ತು ಅರೆ ಮೀಸಲು ಪಡೆಯಿಂದ ಭದ್ರತೆಯನ್ನು ಕಲ್ಪಿಸಲಾಗಿದೆ.

ಸಾಂದರ್ಭಿಕ ಚಿತ್ರ


4.Karnataka Weather Report: ಮತ್ತೆ ರಾಜ್ಯದಲ್ಲಿ ಮಳೆ ಸಾಧ್ಯತೆ; ನದಿ ತೀರದ ಗ್ರಾಮಗಳಿಗೆ ಪ್ರವಾಹದ ಆತಂಕ

ಕಳೆದು ನಾಲ್ಕೈದು ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಿದೆ. ಇದರ ಜೊತೆಗೆ ಬಿಸಿಲಿನ ಧಗೆ ಸಹ ಇದೆ. ಇಂದು ಸಹ ಇದೇ ವಾತಾವರಣ ಮುಂದುವರಿಯಲಿದ್ದು, ಕೆಲವು ಭಾಗಗಳಲ್ಲಿ ಚದುರಿದ ರೀತಿ ಮಳೆಯಾಗುವ (Karnataka Rains) ಸಾಧ್ಯತೆಗಳಿವೆ. ಶುಕ್ರವಾರ ಮತ್ತು ಶನಿವಾರ ರಾಜ್ಯದ ದಕ್ಷಿಣ ಒಳನಾಡು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಲ್ಪ ಮಳೆಯಾಗುವ (Rain fall) ಸಾಧ್ಯತೆಗಳಿವೆ.

Karnataka Weather Report 21 September 2022 mrq
ಭೀಮಾ ನದಿ


ಕಳೆದ ಮೂರು ತಿಂಗಳಿನಿಂದ ಸುರಿದ ಮಳೆಗೆ ಭರ್ತಿಯಾಗಿರುವ ನದಿಗಳು ಶಾಂತವಾಗಿ ಹರಿಯುತ್ತಿವೆ. ಸಣ್ಣ ಪ್ರಮಾಣದ ಮಳೆಯಾದ್ರೂ ಪ್ರವಾಹ (Flood) ಉಂಟಾಗುವ ಸಾಧ್ಯತೆಗಳಿವೆ. ಅದರಲ್ಲಿಯೂ ವಿಶೇಷವಾಗಿ ಕೃಷ್ಣಾ ಮತ್ತು ಭೀಮಾ ನದಿ (Krishna And Bhima River) ತೀರದ ಗ್ರಾಮಗಳಿಗೆ ಪ್ರವಾಹದ ಆತಂಕ ಎದುರಾಗಿದೆ.

5.Kodagu: ಬನ್ನಿ, ಬನ್ನಿ ಸಬ್ಸಿಡಿ ಲೋನ್ ಕೊಡಸ್ತೀನಿ ಅಂತ ಹೇಳಿ ಟೋಪಿ ಹಾಕಿದ ಲೇಡಿ

ರ್ಕಾರದ ಯಾವುದಾದರು ಸಬ್ಸಿಡಿ ಲೋನ್ (Subsidy Loan) ಸಿಕ್ಕರೆ ಯಾರು ಬೇಡ ಅಂತಾರೆ ಹೇಳಿ. ಅದರಲ್ಲೂ ಮೂರು ಲಕ್ಷದವರೆಗೆ ಯಾವುದೇ ಬಡ್ಡಿ ಇಲ್ಲದೇ ಹಣ (Money) ಸಿಕ್ಕರೆ ನಮ್ಮ ಸಮಸ್ಯೆಗಳನ್ನು ನೀಗಿಸಿಕೊಳ್ಳಬಹುದಲ್ಲಾ ಎನ್ನುವ ಮಹದಾಸೆಯಲ್ಲಿ ಈ ಜನರಿದ್ದರು. ಜನರ ಈ ಆಸೆಯನ್ನೇ ದುರ್ಬಳಕೆ ಮಾಡಿಕೊಂಡ ಮಹಿಳೆಯರಿಬ್ಬರು (Woman) ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಿಂದ ಮೂರು ಲಕ್ಷ ರೂಪಾಯಿ ಸಬ್ಸಿಡಿ ಲೋನ್ ಮಾಡಿಸಿ ಕೊಡುತ್ತೇವೆ ಅಂತ ನೂರಾರು ಜನರಿಂದ ತಲಾ ಸಾವಿರ ರೂಪಾಯಿ ಹಣಪಡೆದು ಅಮಾಯಕ ಜನರಿಂದ ದೋಖಾ ಮಾಡಿದ್ದಾರೆ.

Morning Digest 22nd September 2022 have quick look of important news today mrq
ಸಾಂದರ್ಭಿಕ ಚಿತ್ರ


ಹೌದು, ಕೊಡಗು ಜಿಲ್ಲೆ ಕುಶಾಲನಗರ (Kushalanagara, Kodagu) ತಾಲ್ಲೂಕಿನ ಮಾದಾಪುರ, ಗುಮ್ಮನಕೊಲ್ಲಿ, ಏಳನೇ ಹೊಸಕೋಟೆ ಸೇರಿದಂತೆ ಸುತ್ತಮುತ್ತ ಗ್ರಾಮಗಳ ನೂರಾರು ಜನರಿಗೆ ಮೋಸ ಮಾಡಿದ್ದಾರೆ.
Published by:Mahmadrafik K
First published: