Morning Digest: ಈದ್ಗಾ ಮೈದಾನದಲ್ಲಿ ಸಾವರ್ಕರ್ ಫೋಟೋ, ಮುರುಘಾ ಮಠದ ಗೇಟ್ ಬಂದ್, ಚಿನ್ನದ ಬೆಲೆ ಇಳಿಕೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಇಂದಿನ ಟಾಪ್ ಸುದ್ದಿಗಳು

ಇಂದಿನ ಟಾಪ್ ಸುದ್ದಿಗಳು

  • Share this:
1.Idgah Maidan: ಈದ್ಗಾ ಮೈದಾನದಲ್ಲಿ ಗಣೇಶನ ಜೊತೆ ರಾರಾಜಿಸಿದ ಸಾವರ್ಕರ್ ; ಆದೇಶ ಉಲ್ಲಂಘಿಸಿದ್ರೂ ಸಂಘಟಕರ ಸಮರ್ಥನೆ

ಕರ್ನಾಟಕ ಹೈಕೋರ್ಟ್ (Karnataka Highcourt) ತೀರ್ಪು ನೀಡಿತು, ಗಣೇಶೋತ್ಸವ (Ganeshotsava) ಆರಂಭಗೊಂಡಿತು. ಎಲ್ಲವೂ ಸುಸೂತ್ರವಾಯಿತು ಅಂದುಕೊಳ್ಳುತ್ತಿರುವಾಗಲೇ ಇದೀಗ ಸಾವರ್ಕರ್ (Savarkar Row) ವಿವಾದ ಮುನ್ನಲೆಗೆ ಬಂದಿದೆ. ಹಲವು ಷರತ್ತುಗಳನ್ನು ವಿಧಿಸಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದರೂ, ಅದ್ಯಾವುದಕ್ಕೂ ಕ್ಯಾರೇ ಅನ್ನೋ ರೀತಿಯಲ್ಲಿ ಸಂಘಟಕರು ವರ್ತಿಸುತ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಣೇಶನ ಜೊತೆ ಸಾವರ್ಕರ್ ಫೋಟೋ (Veer Savarkar Photo) ವಿವಾದ ಸೃಷ್ಟಿಸಿದೆ. ಹುಬ್ಬಳ್ಳಿಯ ಈದ್ಗಾ ಮೈದಾನ (Hubballi Idgah Maidana) ಗಣೇಶೋತ್ಸವಲ್ಲಿ ಸಾವರ್ಕರ್ ಫೋಟೋ ಅಳವಡಿಸಿರೋದು ವಿವಾದದ ಸ್ವರೂಪ ಪಡೆಯುವಂತಾಗಿದೆ. ಪಾಲಿಕೆ ವಿಧಿಸಿದ್ಧ ನಿಬಂಧನೆಗಳನ್ನು ಉಲ್ಲಂಘಿಸಿದ (Rules Break) ಗಣೇಶ ಮಹಾಮಂಡಳ, ಸಾವರ್ಕರ್ ಫ್ಲೆಕ್ಸ ಜೊತೆಗೆ, ಗಣೇಶ ಮೂರ್ತಿ ಬಳಿ ಸಾವರ್ಕರ್ ಫೋಟೋ ಅಳವಡಿಸಿದೆ. ಮುಂದಿನ ವರ್ಷ ಗಣೇಶೋತ್ಸವ ಅನುಮತಿಗೆ ತೊಡಕಾಗುತ್ತಾ ಸಾವರ್ಕರ್ ಫೋಟೋ ವಿವಾದ ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ.

2.Murugha Shri: ಮುರುಘಾ ಮಠದ ಗೇಟ್​​ಗಳೆಲ್ಲಾ ಬಂದ್; ಹೆಚ್ಚುವರಿ ಪೊಲೀಸರ ನಿಯೋಜನೆ; ಏನಾಗುತ್ತೆ ಮುರುಘಾ ಶ್ರೀಗಳ ಭವಿಷ್ಯ?

ಚಿತ್ರದುರ್ಗದ ಮುರಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿ ಐದು ದಿನಗಳೇ ಕಳೆದಿವೆ. ಇತ್ತ ಮುರುಘಾ ಶ್ರೀಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯರು ನ್ಯಾಯಾಧೀಶರ ಮುಂದೆ ಸಿಆರ್​ಪಿಸಿ ಸೆಕ್ಷನ್ 164ರ ಅಡಿಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇಂದು ಈ ಹೇಳಿಕೆ ಮುಚ್ಚಿದ ಲಕೋಟೆಯಲ್ಲಿ ಪೊಲೀಸರ ಕೈ ಸೇರಲಿದೆ. ನಂತರ ಮುರುಘಾ ಶ್ರೀಗಳ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಬಹುದು. ಬುಧವಾರ ರಾತ್ರಿ ಮುರುಘಾ ಮಠದ ಎಲ್ಲಾ ದ್ವಾರಗಳನ್ನು ಬಂದ್ ಮಾಡಲಾಗಿದೆ. ರಾತ್ರಿ ಹೆಚ್ಚುವರಿಯಾಗಿ 25 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮುಖ್ಯದ್ವಾರವೊಂದು ತೆರೆಯಲಾಗಿದ್ದು, ಮಠದಿಂದ ಹೊರಗೆ ಮತ್ತು ಮಠದೊಳಗೆ ಪ್ರವೇಶಿಸುವ ಎಲ್ಲರನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

3. 50 ಬೆಡಗಿಯರ ಟೀಂ, ಹೋಟೆಲ್ ಕೊಠಡಿ, ಮೇಕಪ್ ಕಿಟ್: ಭಾರತೀಯ ಯೋಧರ ಹನಿಟ್ರ್ಯಾಪ್ ಮಾಡಲು Pak​ ಪ್ಲಾನ್!

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಮೂಲಕ ಭಾರತೀಯ ಭದ್ರತಾ ಪಡೆ (Indian Security Force) ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದೆ. ಇದಕ್ಕಾಗಿ 50ಕ್ಕೂ ಹೆಚ್ಚು ಯುವತಿಯರನ್ನು ಒಳಗೊಂಡ ಮಹಿಳಾ ಬ್ರಿಗೇಡ್ ಕೂಡ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ. ಸೇನೆ ಮತ್ತು ಬಿಎಸ್‌ಎಫ್ (BSF) ಸಿಬ್ಬಂದಿಗೆ ಭಾರತೀಯ ಗುಪ್ತಚರ ಸಂಸ್ಥೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬೇಡಿ ಎಂದು ಭಾರತೀಯ ಗುಪ್ತಚರ ಸಂಸ್ಥೆ ಹೇಳಿದೆ. ಭಾರತೀಯ ಸೇನಾ (Indian Army) ಯೋಧರನ್ನು ಬಲೆಗೆ ಬೀಳಿಸಲು ಪಾಕಿಸ್ತಾನದ (Pakistan)ಗುಪ್ತಚರ ಸಂಸ್ಥೆ ಐಎಸ್‌ಐ ಹನಿಟ್ರ್ಯಾಪ್‌ನ 10 ಮಾಡ್ಯೂಲ್‌ಗಳನ್ನು ಸಿದ್ಧಪಡಿಸಿದ್ದು, ಇದರಲ್ಲಿ 50ಕ್ಕೂ ಹೆಚ್ಚು ಹೆಣ್ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಸೇನೆಯಲ್ಲಿ ಯಾವ ರೀತಿ ತರಬೇತಿ ನೀಡಲಾಗುತ್ತದೆಯೋ ಅದೇ ರೀತಿ ಪಾಕಿಸ್ತಾನವೂ ಈ ಯುವತಿಯರಿಗೆ ಹನಿಟ್ರ್ಯಾಪ್ ತರಬೇತಿ ನೀಡುತ್ತಿದೆ.

4. Gold-Silver Price Today : ಆಭರಣ ಪ್ರಿಯರಿಗೆ ಬಂಪರ್: ಚಿನ್ನದ ಬೆಲೆ 2,500 ರೂ. ಕುಸಿತ: ಇಲ್ಲಿದೆ ಇಂದಿನ ದರ

ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,050 ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,700 ಆಗಿದ್ದರೆ, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,127 ಆಗಿದೆ. ಅಲ್ಲದೇ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,600 ಆಗಿದ್ದರೆ 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,016 ಆಗಿದೆ.

5.Bihar: ನಿತೀಶ್​ಗೆ ಶಾಕ್, ಸರ್ಕಾರ ರಚನೆಯಾದ 22 ದಿನದಲ್ಲೇ ಮೊದಲ ವಿಕೆಟ್​ ಪತನ, ಸಚಿವ ಸಿಂಗ್ ರಾಜೀನಾಮೆ!

ಆಗಸ್ಟ್ 10 ರಂದು ಬಿಹಾರದಲ್ಲಿ (Bihar) ಮಹಾಘಟಬಂಧನ್ ಸರ್ಕಾರ ರಚನೆಯಾಯಿತು. ಸರಿಯಾಗಿ 22 ದಿನಗಳ ನಂತರ ನಿತೀಶ್ ಕುಮಾರ್ ಅವರ ಸಂಪುಟದಿಂದ ಮೊದಲ ರಾಜೀನಾಮೆ ನಡೆದಿದೆ. ಕಬ್ಬು ಕೈಗಾರಿಕಾ ಸಚಿವ ಕಾರ್ತಿಕೇಯ ಸಿಂಗ್ (Kartikeya Singh) ಬುಧವಾರ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಕೂಡ ತಮ್ಮ ಶಿಫಾರಸನ್ನು ರಾಜ್ಯಪಾಲ ಫಗು ಚೌಹಾಣ್ (Bihar Governor Phagu Chauhan) ಅವರಿಗೆ ಕಳುಹಿಸಿದ್ದು, ತಡಮಾಡದೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಕಂದಾಯ ಮತ್ತು ಭೂ ಸುಧಾರಣಾ ಸಚಿವ ಅಲೋಕ್ ಕುಮಾರ್ ಮೆಹ್ತಾ ಅವರಿಗೆ ಕಬ್ಬು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ವಾಸ್ತವವಾಗಿ, ಹಳೆಯ ಅಪಹರಣ ಪ್ರಕರಣದಲ್ಲಿ ಆರ್‌ಜೆಡಿ ಶಾಸಕ ಕಾರ್ತಿಕೇಯ ಸಿಂಗ್ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಅಂದಿನಿಂದ ಅವರು ವಿವಾದದಲ್ಲಿ ಸಿಲುಕಿದ್ದರು ಎಂಬುವುದು ಉಲ್ಲೇಖನೀಯ.
Published by:Mahmadrafik K
First published: