Top 5 News: ಭಾರತ ತಲುಪಿದ ಚೀತಾ ಹಿಂದೆ ಕನ್ನಡಿಗ, ಟೀಂ ಇಂಡಿಯಾಗೆ ಶಾಕ್, ಶರಣಾದ ನಕ್ಸಲರು; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Namibia Cheetah: ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚೀತಾ ಕಥೆ ಹಿಂದೆ ಕನ್ನಡಿಗನ ಪರಿಶ್ರಮ

ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚಿರತೆಗಳು ಪ್ರಯಾಣ ತುಂಬಾನೇ ರೋಚಕವಾಗಿತ್ತು. ಯಾವುದೇ ಅಪಾಯವಾಗದಂತೆ ಚಿರತೆಗಳನ್ನು ಭಾರತಕ್ಕೆ ಕರೆತರುವಲ್ಲಿ ಕನ್ನಡಿಗ (Kannadiga) ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ ಡಾ.ಸನತ್ ಕೃಷ್ಣ ಮುಳಿಯ (Sanath Krishna Muliya) ಅವರ ಶ್ರಮ ಇದೆ. ಸನತ್ ಕೃಷ್ಣ ಮೂಲತಃ ಪುತ್ತೂರು (Putturu) ಪರಿಸರದ ನಿವಾಸಿಗಳು. ಸದ್ಯ ದೆಹಲಿಯ ಪರಿಸರ ಸಚಿವಾಲಯದಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವೇಕಾನಂದ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಸನತ್, ನಂತರ ಬೆಂಗಳೂರಿನ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿದ್ದಾರೆ.

Kannadiga Sanath Krishna Muliya is there behind the exciting story of cheetah coming from Namibia mrq
ಸನತ್ ಕೃಷ್ಣ ಮುಳಿಯ


2.IND vs AUS: ಆಸೀಸ್​ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​, ತಂಡದಿಂದ ಸ್ಟಾರ್ ​ಬೌಲರ್​ ಔಟ್​

ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಮೂರು T20 ಪಂದ್ಯಗಳ ಸರಣಿ ಮಂಗಳವಾರದಿಂದ (ಸೆಪ್ಟೆಂಬರ್ 20) ಆರಂಭವಾಗಲಿದೆ. ಎರಡೂ ತಂಡಗಳು ಮೊಹಾಲಿ (Mohali) ತಲುಪಿವೆ. ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಆದರೆ ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಇರುವ ಮುನ್ನವೇ ಟೀಂ ಇಂಡಿಯಾಗೆ ಸಂಕಷ್ಟವೊಂದು ಎದುರಾಗಿದೆ. ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೋವಿಡ್ ಪಾಸಿಟಿವ್ ಇರುವ ಕಾರಣ ಶಮಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ.

IND vs AUS mohammed shami tested covid 19 positive likely to miss australia series
ಟೀಂ ಇಂಡಿಯಾ


3.Naxals Surrendered: 700 ಸಕ್ರಿಯ ನಕ್ಸಲರು, ಮಾವೋವಾದಿ ಬೆಂಬಲಿಗರಿಂದ ಶರಣಾಗತಿ

300ಕ್ಕೂ ಹೆಚ್ಚು ಸಶಸ್ತ್ರ ಬಂಡುಕೋರರು ಸೇರಿದಂತೆ 700ಕ್ಕೂ ಹೆಚ್ಚು ನಕ್ಸಲರು (Naxals Surrendered) ಮತ್ತು ಮಾವೋವಾದಿ ಬೆಂಬಲಿಗರು (Maoist Supporters) ಪೊಲೀಸರಿಗೆ ಶರಣಾಗಿದ್ದಾರೆ. ಈ ಶರಣಾಗತಿಯಿಂದಾಗಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ಭಾರಿ ಹಿನ್ನಡೆಯಾಗಿದೆ. ಭದ್ರತಾ ಪಡೆಗಳು ಮತ್ತು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಂಡುಕೋರರಿಗೆ ಮಾವೋವಾದಿ ಬೆಂಬಲಿಗರು ಸಹಾಯ ಮಾಡುತ್ತಿದ್ದರು. ಬಂಡುಕೋರರ ಸಂಚಾರಕ್ಕೆ ಬೆಂಬಲವನ್ನೂ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Morning Digest 18 September 2022 have quick look of important news today mrq
ಶರಣಾಗತಿ ಪ್ರಕ್ರಿಯೆ


ಶರಣಾದ ಬಂಡುಕೋರರು ಮತ್ತು ಬೆಂಬಲಿಗರು ಮಾವೋವಾದಿ ಸಂಕೇತದ ಬಟ್ಟೆ, ಸಾಮಗ್ರಿಗಳು ಮತ್ತು ಪ್ರತಿಕೃತಿಗಳನ್ನು ಸುಟ್ಟುಹಾಕಿ ಅಧಿಕಾರಿಗಳು ಮತ್ತು ಮಾಧ್ಯಮದವರ ಮುಂದೆ ‘ಮಾವೋವಾದಿ ಮುರ್ದಾಬಾದ್ ಅಮ ಸರ್ಕಾರ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ.

4.Dharwad: ಬ್ಯೂಟಿಷಿಯನ್ ಜೊತೆ ಕಾಂಗ್ರೆಸ್ ಮುಖಂಡನ ಅನುಚಿತ ವರ್ತನೆ; ಪೊಲೀಸರ ವಶಕ್ಕೆ

ಧಾರವಾಡ ನಗರದ ಕಾಂಗ್ರೆಸ್ ಮುಖಂಡನೋರ್ವ (Congress Leader) ಬ್ಯೂಟಿಷಿಯನ್ (Beautician) ಜೊತೆ ಅನುಚಿತವಾಗಿ ವರ್ತಿಸುವ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಧಾರವಾಡದ ವಿದ್ಯಾಗಿರಿ (Vidyagiri, Dharwad) ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 54 ವರ್ಷದ ಮನೋಜ್ ಕರ್ಜಗಿ (Manoj Karjagi) ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ಮುಖಂಡ. ವಾಕರಸಾ ಸಂಸ್ಥೆ ಮಾಜಿ ನಿರ್ದೇಶನಾಗಿರುವ ಮನೋಜ್ ಕರ್ಜಗಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕ ಎಂಬ ಮಾಹಿತಿ ಲಭ್ಯವಾಗಿದೆ.

Morning Digest 18 September 2022 have quick look of important news today mrq
ಕಾಂಗ್ರೆಸ್ ನಾಯಕ


ವಿದ್ಯಾಗಿರಿ ಬಡವಾಣೆಯಲ್ಲಿ ಮನೋಜ್ ಕರ್ಜಗಿ ತನ್ನದೇ ಸಲೂನ್ ಮತ್ತು ಸ್ಪಾ ನಡೆಸುತ್ತಿದ್ದನು. ಇಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಬ್ಯೂಟಿಷಿಯನ್ ಜೊತೆ ಅಸಭ್ಯವಾಗಿ ವರ್ತಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.

5.Google CEO: ಉದ್ಯೋಗಿಗಳಿಗೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಸಲಹೆ!

ಟೆಕ್ ದೈತ್ಯ ಗೂಗಲ್ (Google) ಕಂಪನಿಯನ್ನು ಉತ್ಪಾದಕ ಕಂಪನಿಯನ್ನಾಗಿ ಮಾಡಬೇಕೆಂದು ಗೂಗಲ್‌ ಕಂಪನಿಯ ಸಿಇಒ ಹೆಚ್ಚಿನ ಉದ್ಯೋಗಗಳನ್ನು (Employees) ಕಡಿತಗೊಳಿಸಬೇಕೆಂದು ಸೂಚಿಸಿದ್ದಾರೆ. ಕಂಪನಿಯ ಉತ್ಪಾದಕತೆ ದಿನದಿಂದ ದಿನಕ್ಕೆ ಬಹಳಷ್ಟು ಕಡಿಮೆ ಆಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕಂಪನಿಯ (Company) ಉತ್ಪಾದಕತೆ ಹೆಚ್ಚಿಸಲು ಗೂಗಲ್‌ ಸಿಇಒ ಸುಂದರ್‌ ಪಿಚೈ (Google CEO Sundar Pichai) ಅವರು "ಉದ್ಯೋಗಿಗಳು ನಿಜವಾಗಿಯೂ ಉತ್ಪಾದಕರಾಗಿದ್ದಾರೆ..?" ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವ ಮೂಲಕ ಗೂಗಲ್‌ ಸಂಸ್ಥೆಯನ್ನು 20% ರಷ್ಟು ಹೆಚ್ಚು ಪರಿಣಾಮಕಾರಿಯಾಗಬೇಕು ಎಂದು ಬಯಸುತ್ತೇನೆ ಎಂದು ಅವರು ಹೇಳಿದರು.
Published by:Mahmadrafik K
First published: