Top 5 News: ಚಿತ್ರದುರ್ಗದ ಶಾಲೆಗಳಿಗೆ ರಜೆ, ಕಲ್ಯಾಣ ಕರ್ನಾಟಕ ಉತ್ಸವ, ಇಳಿಕೆಯಾಯ್ತು ಚಿನ್ನದ ಬೆಲೆ; ಬೆಳಗಿ ಟಾಪ್ ನ್ಯೂಸ್​​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Chitradurga: ಹಿಂದೂ ಮಹಾ ಗಣಪತಿ ವಿಸರ್ಜನೆ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಇಂದು ಕೋಟೆನಾಡಿ ಚಿತ್ರದುರ್ಗದಲ್ಲಿ (Chitradurga) ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಯ (Hindu Maha Ganapati) ವಿಸರ್ಜನೆ ಮತ್ತು ಶೋಭಾಯಾತ್ರೆ (Visarjana And Shobha Yatra) ನಡೆಯಲಿದೆ. ಈ ಹಿನ್ನೆಲೆ ನಗರದಲ್ಲಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಣೆ ಮಾಡಲಾಗಿದೆ. ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನೆಯ ಕಾರ್ಯಕ್ರಮ ನಡೆಯಲಿದೆ. ಮೆರವಣಿಗೆ ವೇಳೆ ಸುಮಾರು 1 ಲಕ್ಷಕ್ಕಿಂತ ಹೆಚ್ಚು ಜನರು ಸೇರುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆ.17ರಂದು ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಚಿತ್ರದುರ್ಗ ಪೊಲೀಸ್ ಅಧೀಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಪತ್ರದನ್ವಯ ರಜೆ ಘೋಷಣೆ ಮಾಡಲಾಗಿದೆ.

Chitradurga Hindu Maha Ganapati visarjana And Rally Schools colleges holiday today mrq
ಮಹಾಗಣಪತಿ


2.Hyderabad-Karnataka Liberation Day: ಕಲ್ಯಾಣ ಕರ್ನಾಟಕ ಉತ್ಸವ ಹೆಸರಿಗೆ ಮಾತ್ರ ಸೀಮಿತನಾ? ಕಲ್ಯಾಣ ಆಗುವುದು ಯಾವಾಗ?

ಹೈದರಾಬಾದ್ ಕರ್ನಾಟಕ ವಿಮೋಚನಾ (Hyderabad Karnataka Vimochana Day) ದಿನಾಚರಣೆಯನ್ನು ಸರಕಾರ ಕಲ್ಯಾಣ ಕರ್ನಾಟಕ ಉತ್ಸವನ್ನಾಗಿ (Kalyana Karnataka Utsava) ಆಚರಣೆ ಮಾಡುತ್ತಿದೆ.ಹೆಸರು ಬದಲಾವಣೆ ಮಾಡಿದರೆ ಸಾಲದು ಕಲ್ಯಾಣ ಕರ್ನಾಟಕ ಭಾಗ ಕಲ್ಯಾಣ ಆಗಬೇಕಿದೆ ಎಂದು ಈ ಭಾಗದ ಜನರು ಹೇಳುತ್ತಿದ್ದಾರೆ. ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಕಲಬುರಗಿಗೆ ಆಗಮಿಸಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಈ ಭಾಗಕ್ಕೆ ವಿಶೇಷ ಅನುದಾನ ಘೋಷಣೆ ಮಾಡಿ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯ ಮಾಡಬೇಕಿದೆ ಎಂಬುವುದು ಈ ಭಾಗದ ಜನರ ಒತ್ತಾಯವಾಗಿದೆ.

Prabhas Project K update hollywood directors to choreograph the action scenes here are the details
ಪ್ರಭಾಸ್


3.Prabhas Project K: ಪ್ರಭಾಸ್ ಸಿನಿಮಾಗೆ ಆ್ಯಕ್ಷನ್ ಡೈರೆಕ್ಟ್ ಮಾಡ್ತಾರೆ ಹಾಲಿವುಡ್ ಸಾಹಸ ನಿರ್ದೇಶಕರು! ಅಭಿಮಾನಿಗಳು ಥ್ರಿಲ್

Prabhas | Project K : ಪ್ರಾಜೆಕ್ಟ್ ಕೆ ಎಂಬುದು ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಇತ್ತೀಚಿನ ಬೃಹತ್ ವೈಜ್ಞಾನಿಕ ಕಾಲ್ಪನಿಕ ಸಿನಿಮಾ. ಚಿತ್ರ ಈಗಾಗಲೇ ಶೇ 55ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಇತ್ತೀಚೆಗೆ ಮತ್ತೊಂದು ಶೆಡ್ಯೂಲ್ ಶುರುವಾಗಿದೆ. ಈ ಶೆಡ್ಯೂಲ್‌ನಲ್ಲಿ ಚಿತ್ರತಂಡ ಭಾರೀ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿದೆ. ಇದಕ್ಕಾಗಿ ಹಾಲಿವುಡ್ ನಿಂದ ಖ್ಯಾತ ಸಾಹಸ ನಿರ್ದೇಶಕರನ್ನು ಕರೆಸಲಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿದ್ದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಪ್ರಭಾಸ್


ಈ ಚಿತ್ರದಲ್ಲಿ ಪ್ರಭಾಸ್ ಕರ್ಣನನ್ನು ಹೋಲುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬೃಹತ್ ಚಿತ್ರದಲ್ಲಿ ಐದು ದೀರ್ಘ ಆಕ್ಷನ್ ಬ್ಲಾಕ್‌ಗಳಿವೆ. ನಾಗ್ ಅಶ್ವಿನ್ ಈ ಸಾಹಸ ದೃಶ್ಯವನ್ನು ಈವರೆಗೂ ಭಾರತೀಯ ಬೆಳ್ಳಿತೆರೆಯ ಮೇಲೆ ಪ್ರೇಕ್ಷಕರು ನೋಡಿರದ ರೀತಿಯಲ್ಲಿ ನಿರ್ದೇಶಿಸುತ್ತಿದ್ದಾರೆ.ಇದರ ಭಾಗವಾಗಿ ಹಾಲಿವುಡ್ ನಿಂದ ನಾಲ್ವರು ಸಾಹಸ ನಿರ್ದೇಶಕರನ್ನು ಕರೆತರಲಿದ್ದಾರೆ.

4.Gold-Silver Price Today: ಮತ್ತೆ ಮುಗ್ಗರಿಸಿದ ಚಿನ್ನದ ದರ, ಭಾರೀ ಇಳಿಕೆ; ಬೆಳ್ಳಿ ಕೊಂಚ ಅಗ್ಗ

ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿದಾರರಿಗೆ ಬಹುದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಹೌದು ಸತತ ನಾಲ್ಕು ದಿನಗಳಿಂದ ಕುಸಿಯುತ್ತಿರುವ ಚಿನ್ನದ ದರ ಇಂದೂ ಭಾರೀ ಕುಸಿದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 45,850 ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ, ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,585 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,002 ಆಗಿದೆ. ಇತ್ತ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 36,680 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,016 ಆಗಿದೆ.

ಚಿನ್ನ


5. PM Modi 72nd Birthday: ಪ್ರಧಾನಿ ಮೋದಿ ಬರ್ತ್​ ಡೇ; ರಾಜ್ಯದ ಬಿಜೆಪಿ ನಾಯಕರಿಂದ ಶುಭಾಶಯ

PM Narendra Modi Birthday: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಹುಟ್ಟುಹಬ್ಬ (Birthday). ದೇಶ, ವಿದೇಶ ಗಣ್ಯರು ಪ್ರಧಾನಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ರಾಜ್ಯದಲ್ಲಿಯೂ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಹುತೇಕ ಎಲ್ಲಾ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಿಗಳಿಗೆ ಬರ್ತ್ ಡೇ ವಿಶ್ ತಿಳಿಸಿದ್ದಾರೆ.
Published by:Mahmadrafik K
First published: