Top-5 News: ಲವ್ ಜಿಹಾದ್ ಸದ್ದು, 800 ಕೋಟಿ ಆಸ್ತಿ ಮಾಡಿದ್ರಾ ಸಿ ಟಿ ರವಿ, ಮೆಟ್ರೋ ಸಂಚಾರದಲ್ಲಿ ವ್ಯತ್ಯಯ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Anand Mamani: ಉಪಸಭಾಪತಿ ಅನಂದ್ ಮಾಮನಿ ಆರೋಗ್ಯ ಸ್ಥಿತಿ ಗಂಭೀರ

ಕರ್ನಾಟಕ ವಿಧಾನಸಭೆಯ ಉಪ ಸಭಾಪತಿ ಆನಂದ್ ಮಾಮನಿ (Karnataka assembly deputy speaker Anand Mamani) ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನ್ನೈನ (Chennai) ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿದೆ. ಆನಂದ ಮಾಮನಿ ಸವದತ್ತಿ (Savadatti constituency) ಯಲ್ಲಮ್ಮ ಕ್ಷೇತ್ರದ ಶಾಸಕರಾಗಿದ್ದು, ಕಳೆದ ಕೆಲ ದಿನಗಳಿಂದ ಕ್ಯಾನ್ಸರ್​ನಿಂದ (Cancer) ಬಳಲುತ್ತಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಎರಡು ದಿನಗಳ ಹಿಂದೆ ಚೆನ್ನೈಗೆ ಶಿಫ್ಟ್ ಮಾಡಲಾಗಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವ ಹಿನ್ನೆಲೆ ನಾಳೆ ಅಥವಾ ನಾಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ (Bengaluru Private Hospital) ಶಿಪ್ಟ್ ಮಾಡುವ ಸಾಧ್ಯತೆ ಇದೆ.

2.Namma Metro: ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

ತಾಂತ್ರಿಕ ಕಾರಣಗಳಿಂದ ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೈಸೂರು ರಸ್ತೆ to ಕೆಂಗೇರಿ ಮಾರ್ಗದಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಕಳೆದ 25 ನಿಮಿಷದಿಂದ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಿದೆ. ಸದ್ಯ ಮೈಸೂರು ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಮಾತ್ರ ಮೆಟ್ರೋ ಸೇವೆ ಲಭ್ಯವಿದೆ.

metro purple lain variation due to technical reason
ನಮ್ಮ ಮೆಟ್ರೋ


ಮೈಸೂರು ರಸ್ತೆ ನಿಲ್ದಾಣದಿಂದಲೂ ತಡವಾಗಿ ಮೆಟ್ರೋ ರೈಲುಗಳು ಬರುತ್ತಿವೆ. ಬೆಳಗ್ಗೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿರೋದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಬಸ್, ಆಟೋ, ಕ್ಯಾಬ್ಗಳಲ್ಲಿ ತೆರಳುತ್ತಿದ್ದಾರೆ.ಸಾಮಾನ್ಯವಾಗಿ ಬೆಳಗ್ಗೆ 7 ರಿಂದ 11 ಗಂಟೆವರೆಗೆ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ.

3.Bharat Jodo Yatra: ಪತ್ರಕರ್ತರು ಭೋಜನ ಕೂಟ ನಿರಾಕರಿಸಿದ್ದಕ್ಕೆ ಕಾಂಗ್ರೆಸ್ ವಕ್ತಾರರು ಕಣ್ಣೀರಿಟ್ಟಿದ್ದೇಕೆ?

ಡಾ. ಭರತ್ ಅಗರವಾಲ್, MBBS MD MBA M.Phil – ವೈದ್ಯರಾದರೂ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದಾರೆ. ಪ್ರಸ್ತುತ ದೈನಿಕ್ ಭಾಸ್ಕರ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಂಕಣಕಾರರಾಗಿದ್ದಾರೆ. ದೈನಿಕ್ ಭಾಸ್ಕರ್ ದಿನಪತ್ರಿಕೆಯ ವಿಶೇಷ ಪ್ರಸ್ತುತಿಯ ಮೂಲಕ ಹಾಗೂ ಮೂಲ ಹಿಂದಿಯಲ್ಲಿರುವ ಅಂಕಣವನ್ನು ರಾಮ್‌ಲಾಲ್ ಖನ್ನಾ (Ramlal Khanna) ಅನುವಾದಿಸಿದ್ದಾರೆ ಹಾಗೂ ಅಂಕಣವನ್ನು ಅನುರಾಗ್ ಚೌಬೆ ಸಂಪಾದಿಸಿದ್ದಾರೆ.

Why were journalists denied dinner at Bharat Jodo What is the reason for Congress spokespersons tears stg asp
ಭಾರತ್ ಜೋಡೋ ಕಾರ್ಯಕ್ರಮ


ಗ್ರಾಮೀಣ ಕ್ರೀಡೆಯ (rural sports) ವಿಷಯದಲ್ಲಿ ಕಬಡ್ಡಿಗೆ (Kabaddi) ಈಗಲೂ ಮಾನ್ಯತೆ ಇದ್ದು ಈ ಕ್ರೀಡೆಯು (Sports) ಅವಿಭಾಜ್ಯ ಅಂಗವಾಗಿ ಉಳಿದಿದೆ. ರಾಜಸ್ಥಾನದಲ್ಲಿ 30 ಲಕ್ಷಕ್ಕೂ ಹೆಚ್ಚು ಗ್ರಾಮಸ್ಥರು ಗ್ರಾಮೀಣ ಆಟಗಳಲ್ಲಿ (Games) ಭಾಗವಹಿಸುತ್ತಿದ್ದಾರೆ.

4.Love Jihad: ಲವ್ ಜಿಹಾದ್ ಎಂದು ಮದ್ವೆ ನಿಲ್ಲಿಸಿದ ಹಿಂದೂ ಸಂಘಟನೆಗಳು; ಮಗಳ ಪ್ರೇಮ ವಿವಾಹಕ್ಕೆ ತಾಯಿಯ ಒಪ್ಪಿಗೆ; ನಾಲ್ವರ ವಿರುದ್ಧ FIR ದಾಖಲು

ಚಿಕ್ಕಮಗಳೂರು (Chikkamagaluru) ನಗರದಲ್ಲಿ ಲವ್ ಜಿಹಾದ್ (Love Jihad) ಸದ್ದು ಮತ್ತೆ ಕೇಳಿಬಂದಿದೆ. ಸಬ್ ರಿಜಿಸ್ಟ್ರಾರ್​ ಕಚೇರಿಗೆ ತೆರಳಿದ್ದ ಹಿಂದೂ ಹುಡುಗಿ (Hindu Girl)-ಮುಸ್ಲಿಂ ಹುಡುಗ (Muslim Boy) ವಿವಾಹ (Marriage) ಮಾಡಿಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು (Hindu organization), ಜೋಡಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Love Jihad allegation Hindu Organization Stopped marriage in chikkamagaluru mrq
ಸಾಂದರ್ಭಿಕ ಚಿತ್ರ


ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಪೊಲೀಸರಿಂದ ವಿಚಾರಣೆ ನಡೆದಿದೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್​ರಿಂದ ಯುವಕ-ಯುವತಿ ವಿಚಾರಣೆ ಮುಂದುವರಿದಿದೆ.

5.Corruption: ಬಾವ ಸುಂದರೇಶ್ ಹೆಸರಿನಲ್ಲಿ CT Ravi 800 ಕೋಟಿ ಆಸ್ತಿ: ಕಾಂಗ್ರೆಸ್ ಆರೋಪ

ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಪದ ಬಳಸಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (MLA CT Ravi) ಅವರು ತಮ್ಮ ಬಾವ ಸುಂದರೇಶ್ ಅವರ ಹೆಸರಿನಲ್ಲಿ ಪ್ರತಿಯೊಂದು ಗುತ್ತಿಗೆ ಕೆಲಸವನ್ನು ಮಾಡುತ್ತಿದ್ದಾರೆ.

Corruption allegation agains BJP MLA CT Ravi rsk mrq
ಸಿಟಿ ರವಿ


ಚಿಕ್ಕಮಗಳೂರಿನಲ್ಲಿ ಒಂದು ಸಣ್ಣ ಚರಂಡಿ ಆಗಬೇಕಾದರೂ ಅವರ ಹೆಸರಿನಲ್ಲಿಯೇ ಆಗುತ್ತದೆ. ಆ ಮೂಲಕ ಅವರು 800 ಕೋಟಿ ಆಸ್ತಿ ಹೊಂದಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
Published by:Mahmadrafik K
First published: