1.Karnataka Weather Report: ಗುಡುಗು ಮಳೆಗೆ ಬೆಂಗಳೂರು ಗಢ ಗಢ; ಗ್ರಾಮದ ಮಧ್ಯೆ ಸೃಷ್ಟಿಯಾದ ಹೊಳೆ
Bengaluru Heavy Rains: ಬೆಂಗಳೂರಿನಾದ್ಯಂತ ಮತ್ತೆ ವರುಣ ಅಬ್ಬರಿಸಿದ್ದಾನೆ. ಮೆಜೆಸ್ಟಿಕ್, ಕೆ.ಆರ್ ಮಾರುಕಟ್ಟೆ, ಶಾಂತಿನಗರ, ಕೋರಮಂಗಲ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಆರ್.ಟಿ.ನಗರ, ಹೆಬ್ಬಾಳ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ. ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ. ಕತ್ರಿಗುಪ್ಪೆ, ಕಾಮಾಕ್ಯ ಸುತ್ತಮುತ್ತ ಹೆಚ್ಚಿನ ಮಳೆ ಆರ್ಭಟ ಜೋರಾಗಿತ್ತು. ರಸ್ತೆಯಲ್ಲೇ ನೀರು ನಿಂತಿದೆ. ಕೆಲವೆಡೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ. ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ (IMD) ಕೊಟ್ಟಿದೆ. ರಾಜ್ಯದ ಸಚಿವರ ಸರ್ಕಾರಿ ನಿವಾಸ (Minister Houses) ಮುಂಭಾಗ ರಸ್ತೆ ಜಲಾವೃತವಾಗಿದೆ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯ ಅಂಡರ್ಪಾಸ್ನಲ್ಲಿ ಎರಡು ಅಡಿಗಳಷ್ಟು ನೀರು ನಿಂತಿದೆ. ಸಚಿವ ಸಿಸಿ ಪಾಟೀಲ್, ಮುರುಗೇಶ್ ನಿರಾಣಿ ಸೇರಿದಂತೆ ಏಳು ಮಂತ್ರಿಗಳ ಸರ್ಕಾರಿ ನಿವಾಸದ ಗೇಟ್ ಮುಂಭಾಗ ಕೆರೆಯಂತಾಗಿದೆ. ನೀರು ಹರಿಯಲು ಸೂಕ್ತ ಡ್ರೈನೇಜ್ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ನಿಂತಿದೆ.
2.Sriramulu: ಬಳ್ಳಾರಿಗೆ ಬಂದಿರುವ ರಾಹುಲ್ ಗಾಂಧಿಯನ್ನು ಶ್ರೀರಾಮುಲು ಸ್ವಾಗತಿಸಿದ್ದು ಹೀಗೆ
ಇಂದು ಕಾಂಗ್ರೆಸ್ (Congress) ಬಳ್ಳಾರಿಯಲ್ಲಿ (Bellary) ಬೃಹತ್ ಸಮಾವೇಶ ನಡೆಸಲಿದೆ. ಭಾರತ್ ಜೋಡೋ ಯಾತ್ರೆ (Bharat Jodo Yatre) ಸಹ ಬಳ್ಳಾರಿಯಲ್ಲಿಯೇ ಸಂಚರಿಸುತ್ತಿದೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಾಯಕ, ಸಚಿವ ಶ್ರೀರಾಮುಲು (Minister B.Sriramulu) ವ್ಯಂಗ್ಯ ಮಾಡಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿರುವ ಸಚಿವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1999ರ ಲೋಕಸಭಾ ಚುನಾವಣೆ (Loksabha Election 1999) ವೇಳೆ ಅಮೇಥಿಯಲ್ಲಿ (Amethie) ಸೋಲಬಹುದು ಎಂಬ ಭೀತಿಯಿಂದ ಬಳ್ಳಾರಿಗೆ ಓಡೋಡಿ ಬಂದು ರಾಜಕೀಯ ಪುನರ್ ಜನ್ಮ ಪಡೆದಿದ್ದಕ್ಕೆ ಪ್ರತಿಯಾಗಿ, ಜಿಲ್ಲೆಯ ಜನತೆಗೆ ಚೂರಿ ಹಾಕಿ ಹೋಗಿದ್ದ ಕಾಂಗ್ರೆಸ್ ಪಕ್ಷದ ಭಾರತ್ ತೋಡೋ ಯಾತ್ರೆಗೆ ಹಾರ್ದಿಕ ಸುಸ್ವಾಗತ ಎಂದು ವ್ಯಂಗ್ಯವಾಡಿದ್ದಾರೆ.
3.Allahabad HC: ಹೆಂಡತಿ, ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದ ಮುಸ್ಲಿಂ ವ್ಯಕ್ತಿ ಮರು ಮದುವೆಯಾಗುವಂತಿಲ್ಲ
ಮುಸ್ಲಿಂ ಪುರುಷನಿಗೆ (Muslim Man) ತನ್ನ ಮೊದಲ ಹೆಂಡತಿ ಮತ್ತು ಮಕ್ಕಳನ್ನು ಸಾಕುವ ಶಕ್ತಿ ಅಥವಾ ಅವರ ಬಗ್ಗೆ ಕಾಳಜಿ ತೋರಿಸಲು ಸಾಧ್ಯವಾಗದೇ ಇದ್ದರೆ ಮತ್ತು ಮೊದಲ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಎರಡನೇ ಮದುವೆಯಾಗಿರುವ ಮುಸ್ಲಿಂ ಪುರುಷ ತನ್ನ ಮೊದಲ ಪತ್ನಿ ತನ್ನೊಂದಿಗೆ ಇರಬೇಕೆಂದು ಒತ್ತಾಯಿಸುವಂತಿಲ್ಲ ಎಂದು ಕುರಾನ್ (Quran) ಉಲ್ಲೇಖದ ಪ್ರಕಾರ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ.
ಸೆಪ್ಟೆಂಬರ್ 19ರಂದು ಹೊರಬಿದ್ದ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಸೂರ್ಯ ಪ್ರಕಾಶ್ ಕೇಸರ್ವಾನಿ ಮತ್ತು ರಾಜೇಂದ್ರ ಕುಮಾರ್-IV ಅವರನ್ನೊಳಗೊಂಡ ಪೀಠವು "ಮುಸ್ಲಿಂ ಪುರುಷನಿಗೆ ತನ್ನ ಮೊದಲ ಹೆಂಡತಿ ಮತ್ತು ಮಕ್ಕಳನ್ನು (Wife and Children) ನೋಡಿಕೊಳ್ಳಲು ಸಾಧ್ಯವಾಗದಿದ್ದರೆ, ಕುರಾನ್ ಆತನಿಗೆ ಎರಡನೇ ಮದುವೆಯಾಗಲು ಅನುಮತಿಸುವುದಿಲ್ಲ.
4.Gold-Silver Price Today: ಚಿನ್ನದ ದರದ ಓಟಕ್ಕೆ ಬಿತ್ತು ಬ್ರೇಕ್, ಹೀಗಿದೆ ನೋಡಿ ಇಂದಿನ ರೇಟ್
Gold-Silver Price Today:ಏರಿಕೆ, ಇಳಿಕೆ ಎಂದು ಕಣ್ಣಾಮುಚ್ಚಾಲೆ ಆಡುತ್ತಿರುವ ಚಿನ್ನದ ಓಟ ಸದ್ಯ ಸಣ್ಣದೊಂದು ವಿರಾಮ ಪಡೆದಿದೆ. ಹೌದು ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 46,800 ಆಗಿದೆ. ಇನ್ನು ಇಂದಿನ ಚಿನ್ನದ ದರ ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,675 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,100 ಆಗಿದ್ದು, ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,400 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,800 ಆಗಿದೆ.
5.Robbie Coltrane-Harry Potter: ಹ್ಯಾರಿ ಪಾಟರ್ ನಟ ರೋಬಿ ಇನ್ನಿಲ್ಲ
Robbie Coltrane: ಹ್ಯಾರಿ ಪಾಟರ್ ಸಿನಿಮಾ ನೋಡಿದವರಿಗೆ ರಾಬಿ ಕೊಲ್ಟ್ರೇನ್ ಅವರ ಪಾತ್ರ ಎಂದಿಗೂ ಮರೆಯಲಾಗದು. ಹಿರಿಯ ಹಾಲಿವುಡ್ ನಟ 72ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಹ್ಯಾರಿ ಪಾಟರ್ ಸಿನಿಮಾದಲ್ಲಿ ರೂಬಿಯಸ್ ಹ್ಯಾಗ್ರಿಡ್ ಪಾತ್ರದಲ್ಲಿ ಹೆಸರುವಾಸಿಯಾದ ಸ್ಕಾಟಿಷ್ ನಟ ರಾಬಿ ಕೋಲ್ಟ್ರೇನ್ ನಿಧನರಾಗಿದ್ದಾರೆ.
ಅವರು 72 ವರ್ಷದಲ್ಲಿ ಮೃತಪಟ್ಟಿದ್ದಾರೆ. ಜನಪ್ರಿಯ ಸೀಕ್ವೆಲ್ ಸಿನಿಮಾದಲ್ಲಿ ಅಪರಾಧಗಳನ್ನು ಪರಿಹರಿಸುವ ಮನಶ್ಶಾಸ್ತ್ರಜ್ಞನ ಪಾತ್ರಕ್ಕಾಗಿ ನಟ ಖ್ಯಾತಿಯನ್ನು ಗಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ