Top-5 News: ಹೆಸ್ಕಾಂ ಉದ್ಯೋಗಿ ಆತ್ಮಹತ್ಯೆ, ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್​​ಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Suicide: ನನ್ನ ಸಾವಿಗೆ ಇವರಿಬ್ಬರೇ ಕಾರಣ, ಐ ಲವ್ ಹೆಸ್ಕಾಂ; ಡೆತ್ ನೋಟ್ ಬರೆದು ಉದ್ಯೋಗಿ ಆತ್ಮಹತ್ಯೆ

ಬೆಳಗಾವಿ ಜಿಲ್ಲೆಯ ಅಥಣಿಯ (Athani, Belagavi) ಹೆಸ್ಕಾಂ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಶರಣಾಗಿದ್ದ ಉದ್ಯೋಗಿ ಬರೆದಿಟ್ಟ ಡೆತ್ ನೋಟ್ (Death Note) ಲಭ್ಯವಾಗಿದೆ. ಡೆತ್​​ ನೋಟ್​​ನಲ್ಲಿ ಸಹೋದ್ಯೋಗಿಗಳ (Colleague) ಕಿರುಕುಳ ಕಾರಣ ಎಂದು ಬರೆಯಲಾಗಿದೆ. ಮಂಜುನಾಥ್ ಮುತ್ತಗಿ ಮೃತ ಉದ್ಯೋಗಿ. ಮಂಜುನಾಥ್ ಹೆಸ್ಕಾಂನಲ್ಲಿ (HESCOM) ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಸೋಮವಾರ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್​​ನಲ್ಲಿ ನನಗೆ ಈ ಕೆಲಸ ತುಂಬಾ ಇಷ್ಟ. ಐ ಲವ್ ಹೆಸ್ಕಾಂ ಎಂದು ಬರೆಯಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

2.Team India: ಆಸೀಸ್- ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ತಂಡದಿಂದ ಸ್ಟಾರ್​ ಆಲ್​ರೌಂಡರ್​ ಔಟ್​

ಟಿ20 ವಿಶ್ವಕಪ್ (T20 World Cup) ಮುನ್ನ ಭಾರತ ತಂಡವು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಈಗಾಗಲೇ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾವನ್ನು (Team India) ಪ್ರಕಟಿಸಲಾಗಿದ್ದು, ಇದೀಗ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸರಣಿಗೂ ತಂಡವನ್ನು ಪ್ರಕಟಿಸಲಾಗಿದೆ.

Team India squads for Australia and South Africa T20Is announced
ಸಾಂದರ್ಭಿಕ ಚಿತ್ರ


ಆದರೆ ಮುಂಬರುವ ವಿಶ್ವಕಪ್​ ಹಿನ್ನಲೆ ಈ 2 ಪ್ರಮುಖ ಸರಣಿಗಳಿಗೆ ಯಾವುದೇ ಹಿರಿಯ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಿಲ್ಲ ಎನ್ನುವುದೇ ವೀಶೇಷವಾಗಿದೆ. ಟಿ20 ವಿಶ್ವಕಪ್​ನಂತೆ ಆಸೀಸ್​ ಮತ್ತು ಆಫ್ರಿಕಾ ಸರಣಿಗೂ ರೋಹಿತ್ ಶರ್ಮಾ (Rohit Sharma) ನೇತೃತ್ವದಲ್ಲಿ 16 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ ಆಫ್ರಿಕಾ ಸರಣಿಗೆ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ.

3.Bengaluru: ಜೈಲು ಸೇರಿದ BBMP ಜಂಟಿ ಆಯುಕ್ತ

ಆರು ವರ್ಷಗಳ ಬಳಿಕ ಭ್ರಷ್ಟ ಸರ್ಕಾರಿ ನೌಕರರ ಬೇಟೆ ಆರಂಭಿಸಿರುವ ಲೋಕಾಯುಕ್ತ ಪೊಲೀಸರ (Lokayukta Police) ಬಲೆಗೆ ಲಂಚ (Bribe) ಸ್ವೀಕರಿಸುತ್ತಿದ್ದ ಕೆಎಎಸ್‌ ಅಧಿಕಾರಿ (KAS Officer) ಬಿದ್ದಿದ್ದಾರೆ. BBMP ಖಾತೆ ಬದಲಾವಣೆಗೆ ಜಂಟಿ ಆಯುಕ್ತರು ಆಪ್ತ ಸಹಾಯಕನ ಮೂಲಕ 4 ಲಕ್ಷ ಡೀಲ್​​ ಮಾಡಿದ್ರು ಅನ್ನೋ ದೂರಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್​ (Lokayukta Raid) ಮಾಡಿ ರೆಡ್​ ಹ್ಯಾಂಡಾಗಿ ಲಾಕ್​ ಮಾಡಿದ್ದಾರೆ.

Karnataka government shuts down acb pending cases transfer to lokayukta mrq
ಲೋಕಾಯುಕ್ತ ಕಚೇರಿ


ಬಿಬಿಎಂಪಿ ಪಶ್ಚಿಮ ವಿಭಾಗ ಜಂಟಿ ಆಯುಕ್ತ ಶ್ರೀನಿವಾಸ್, ಪಿಎ ಉಮೇಶ್ ಮೂಲಕ ಹಣ ಪಡೆಯುತ್ತಿದ್ದಾಗ ಬಂಧನ ಮಾಡಲಾಗಿದೆ. ಮಂಜುನಾಥ್​ ಎಂಬುವರ ಬಳಿ ಹಣ (money) ಕೇಳಿದ್ರಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ರು. ಸೈಟುಗಳ ಖಾತೆ ಬದಲಾವಣೆಗೆ 12 ಲಕ್ಷ ಲಂಚ ಕೇಳ್ತಿದ್ದಾರೆ ಎಂದು ದೂರು ಸಲ್ಲಿಸಲಾಗಿತ್ತು.

4.Gold-Silver Price Today: ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡ ಚಿನ್ನ, ಅಲ್ಪ ಏರಿಕೆ ಕಂಡ ಬೆಳ್ಳಿ ದರ!

ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 46,800 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,800 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,450, ರೂ. 46,750, ರೂ. 46,750 ಆಗಿದೆ.

Gold Rate
ಚಿನ್ನ


ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,900 ರೂ. ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 614, ರೂ. 6,140 ಹಾಗೂ ರೂ. 61,400 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 61,400 ಆಗಿದ್ದರೆ ದೆಹಲಿಯಲ್ಲಿ ರೂ. 55,200 ಮುಂಬೈನಲ್ಲಿ ರೂ. 55,200 ಹಾಗೂ ಕೊಲ್ಕತ್ತದಲ್ಲೂ ರೂ. 55,200 ಗಳಾಗಿದೆ.

5.Viral Video: ವೀಲ್ ಚೇರ್​ನಲ್ಲಿದ್ದ ಹುಡುಗನಿಗೆ ರೈಲು ಹತ್ತಲು ಸಹಾಯ ಮಾಡಿದ ಭದ್ರತಾ ಸಿಬ್ಬಂದಿ! ಹೃದಯಸ್ಪರ್ಶಿ ವಿಡಿಯೋ ವೈರಲ್

ರೈಲ್ವೇಯ ಭದ್ರತಾ ಪಡೆಯಲ್ಲಿ (RPF) ಸಹಾಯಕ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುವ ಎಮ್ ಶರವಣನ್ 19 ರ ಹರೆಯದ ಕಡಲೂರು ಜಿಲ್ಲೆಯ ವಿರುಧಾಚಲಂ ನ ಶಿವಕುಮಾರ್‌ಗೆ ಸಹಾಯ ಮಾಡಿದ್ದು ಈ ಸುದ್ದಿ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಗಾಲಿಕುರ್ಚಿಯನ್ನೇ ಆಧರಿಸಿಕೊಂಡಿರುವ ಶಿವಕುಮಾರ್ ತಮ್ಮ ಅಜ್ಜಿಯೊಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಕಡಲೂರು ಜಿಲ್ಲೆಯ ವಿರುಧಾಚಲಂನಿಂದ ಕೇರಳದ ವಡಕರಕ್ಕೆ ಪ್ರಯಾಣಿಸುತ್ತಿದ್ದರು.

A cop helped a boy in a wheelchair board the train in Tamilnadu stg asp
ರೈಲು ಹತ್ತಲು ಹುಡುಗನ ನೆರವಿಗೆ ಆಗಮಿಸಿದ ಅಧಿಕಾರಿ


ರಾತ್ರಿ ಸಮಯದಲ್ಲಿ ತಮಿಳುನಾಡಿ ರೈಲು ಏರಲು ಆಗದೆ ಶಿವಕುಮಾರ್ ಹಾಗೂ ಆತನ ಅಜ್ಜಿ ಕಂಗೆಟ್ಟಿದ್ದ ಸಮಯದಲ್ಲಿ ಸರವಣನ್ ಯಾರ ನಿರ್ದೇಶನವೂ ಇಲ್ಲದೆ ಹುಡುಗನ ಸಹಾಯಕ್ಕೆ ಬಂದಿದ್ದಾರೆ. ಗಾಲಿ ಕುರ್ಚಿಯಿಂದ ಶಿವಕುಮಾರ್‌ನನ್ನು ನಿಧಾನಕ್ಕೆ ಎಬ್ಬಿಸಿದ ಸರವಣನ್ ನಂತರ ಹುಡುಗನನ್ನು ಎತ್ತಿಕೊಂಡೇ ಸೀಟ್ ಮೇಲೆ ಮಲಗಿಸುತ್ತಾರೆ. ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
Published by:Mahmadrafik K
First published: