• Home
  • »
  • News
  • »
  • state
  • »
  • Top 5 News: ಸುಪ್ರೀಂನಲ್ಲಿ ‘ಹಿಜಾಬ್‌’ ಭವಿಷ್ಯ, ಮಳೆಯಲ್ಲಿ ಹೆಜ್ಜೆ ಹಾಕಿದ ರಾಗಾ, ಪಾಕ್​ಗೆ ತಕ್ಕ ಉತ್ತರ; ಬೆಳಗಿನ ಟಾಪ್ ನ್ಯೂಸ್​​ಗಳು

Top 5 News: ಸುಪ್ರೀಂನಲ್ಲಿ ‘ಹಿಜಾಬ್‌’ ಭವಿಷ್ಯ, ಮಳೆಯಲ್ಲಿ ಹೆಜ್ಜೆ ಹಾಕಿದ ರಾಗಾ, ಪಾಕ್​ಗೆ ತಕ್ಕ ಉತ್ತರ; ಬೆಳಗಿನ ಟಾಪ್ ನ್ಯೂಸ್​​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Hijab: ಇಂದು ಸುಪ್ರೀಂನಲ್ಲಿ ‘ಹಿಜಾಬ್‌’ ಭವಿಷ್ಯ; ತೀರ್ಪು ಪ್ರಕಟಿಸುವ ಸಾಧ್ಯತೆ


Hijab Row: ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ್ದ ಹಿಜಾಬ್‌ ವಿವಾದದ (Hijab Row) ತೀರ್ಪಅನ್ನು ಇಂದು ಸುಪ್ರೀಂಕೋರ್ಟ್ ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ. ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಕೆಲವು ಮುಸ್ಲಿಂ ಮಹಿಳೆಯರು (Muslim Woman) ಧರಿಸುವ ಹಿಜಾಬ್​​ಗೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ದ್ವಿ ಸದಸ್ಯ ಪೀಠ ಪ್ರಕಟಿಸಲಿದೆ. ಈ ಪೀಠವು 10 ದಿನಗಳ ವಾದಗಳನ್ನು ಆಲಿಸಿದ ನಂತರ ಸೆಪ್ಟೆಂಬರ್ 22ರಂದು ಹಿಜಾಬ್ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿಗಳ ತೀರ್ಪನ್ನು ಮೂರು ವಾರಗಳ ಹಿಂದೆಯೇ ಕಾಯ್ದಿರಿಸಿತ್ತು. ಪೀಠದ ನೇತೃತ್ವದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಭಾನುವಾರ ನಿವೃತ್ತರಾಗಲಿರುವ ಕಾರಣ ಹಿಜಾಬ್‌ ತೀರ್ಪು ಪ್ರಕಟಿಸಲಾಗುತ್ತಿದೆ.


ಹಿಜಾಬ್


2.UNGA: ಮತ್ತೆ ಕಾಶ್ಮೀರ ರಾಗ ಎಳೆದ ಪಾಕಿಸ್ತಾನ, ನೆರೆ ರಾಷ್ಟ್ರಕ್ಕೆ ತಕ್ಕ ಉತ್ತರ ಕೊಟ್ಟ ಭಾರತ!


ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೇ ಚಕಾರವೆತ್ತುವ ಪಾಕಿಸ್ತಾನ (Pakistan) ತನ್ನ ಕುಚೇಷ್ಟೆಗಳಿಂದ ವಿಮುಖವಾಗುತ್ತಿಲ್ಲ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UN General Assembly) ಮತ್ತೊಮ್ಮೆ ಪಾಕಿಸ್ತಾನ ಕಾಶ್ಮೀರ (Kashmir) ರಾಗ ಎಳೆದಿದೆ. ಬುಧವಾರ ನಡೆದ ರಷ್ಯಾ ಕುರಿತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.


Morning Digest 13 october 2022 have quick look of important news today mrq
ಕಾಶ್ಮೀರ ರಾಗ ಎಳೆದ ಪಾಕಿಸ್ತಾನಕ್ಕೆ ಪಾಠ


ವಾಸ್ತವವಾಗಿ, ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಯುಎನ್‌ಜಿಎಯಲ್ಲಿ ಮತದಾನದ ಚರ್ಚೆಯ ಸಂದರ್ಭದಲ್ಲಿ, ಪಾಕಿಸ್ತಾನಿ ರಾಜತಾಂತ್ರಿಕ ಮುನೀರ್ ಅಕ್ರಮ್ ಅವರು ತಮ್ಮ ಸ್ಪಷ್ಟೀಕರಣದಲ್ಲಿ ಕಾಶ್ಮೀರದ ವಿಷಯವನ್ನು ಎತ್ತಿದರು.


3.Bharat Jodo Vs Janasankalpa: ಮಳೆಯಲ್ಲಿಯೂ ಹೆಜ್ಜೆ ಹಾಕಿದ ರಾಗಾ; ಕಾಂಗ್ರೆಸ್‌ ವಿರುದ್ಧ ಕೇಸರಿ ಪಡೆ ವಾಗ್ದಾಳಿ


Bharat Jodo Yatre: ರಾಜ್ಯದಲ್ಲಿಯ ಭಾರತ್ ಜೋಡೋ ಪಾದಯಾತ್ರೆ 14ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ ರಾತ್ರಿ ಸುರಿಯುತ್ತಿರುವ ಮಳೆಯ ನಡುವೆಯೇ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು. ಇತ್ತ ಬಿಜೆಪಿಯ ಜನಸಂಕಲ್ಪ ಯಾತ್ರೆ (Jana Sankalpa Yatre) ಮೂರನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ (Congress Leader Rahul Gandhi) ನೇತೃತ್ವದ ‘ಭಾರತ್‌ ಜೋಡೋ’ ಯಾತ್ರೆ ಚಿತ್ರದುರ್ಗದ ಚಳ್ಳಕೆರೆಯ ‌ಹಿರೇಹಳ್ಳಿ ಟೋಲ್ ತಲುಪಿದೆ.


Morning Digest 13 october 2022 have quick look of important news today mrq
ರಾಹುಲ್ ಗಾಂಧಿ


ಬುಧವಾರ ಕೋಡಿಹಳ್ಳಿ ಸುತ್ತಾಮುತ್ತ ಭಾರೀ ಮಳೆಯಾಗಿತ್ತು. ಸುರಿಯುವ ಮಳೆಯಲ್ಲೂ ರಾಹುಲ್ ಗಾಂಧಿ ಹೆಜ್ಜೆ ಹಾಕಿದ್ರು. ಇನ್ನು ರಾಹುಲ್ ಗಾಂಧಿ ಬಚ್ಚಾ ಎಂದಿದ್ದ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ. ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿದ್ದು, BSYರಂತೆ ಚೆಕ್ ಮೂಲಕ ಲಂಚ ತೆಗೆದುಕೊಂಡು ಕುಖ್ಯಾತರಾಗಿಲ್ಲ, ಸಿಎಂ ಸ್ಥಾನ ಕಳೆದುಕೊಂಡ ಬಿಎಸ್‌ವೈಗೆ ಬುದ್ಧಿಭ್ರಮಣೆಯಾಗಿದೆ ಅಂತ ಲೇವಡಿ ಮಾಡಿದ್ರು.


4.Solar System: ಸೋಲಾರ್ ಶಕ್ತಿಯ ಮೂಲಕ ವಿದ್ಯುತ್​ನಲ್ಲಿ ಸ್ವಾವಲಂಬಿಯಾದ ಪುತ್ತೂರಿನ ಗ್ರಾಮ ಪಂಚಾಯತ್


ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಬಿಲ್ (Electricity Bill) ವರ್ಷದಿಂದ ವರ್ಷಕ್ಕೆ ಏರಿಕೆಯಾಗುವುದು ಬಿಟ್ಟರೆ ಇಳಿಕೆಯಾಗುವ ಲಕ್ಷಣವೇ ಗೋಚರಿಸುತ್ತಿಲ್ಲ. ಇದರಿಂದಾಗಿ ಇತರ ಖರ್ಚುಗಳ ಜೊತೆಗೆ ವಿದ್ಯುತ್​ಗಾಗಿಯೂ ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾದ ಅನಿವಾರ್ಯ ಸ್ಥಿತಿಯೂ ನಿರ್ಮಾಣವಾಗಿದೆ. ಈ ನಡುವೆ ವಿದ್ಯುಚ್ಛಕ್ತಿಗೆ ಪರ್ಯಾಯವಾಗಿ ಸೋಲಾರ್ (Solar System) ಸೇರಿದಂತೆ ಇತರ ವ್ಯವಸ್ಥೆಗಳನ್ನು ಬಳಸಿಕೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿದೆ.


Morning Digest 13 october 2022 have quick look of important news today mrq
ಸೋಲಾರ್ ವ್ಯವಸ್ಥೆ


ಈ ಮಧ್ಯೆ ಗ್ರಾಮದ ಜನತೆಗೆ ಪ್ರತಿದಿನ ನೀರು ಸರಬರಾಜು (Water Supply) ಮಾಡಲೆಂದೇ ತಿಂಗಳಿಗೆ ಸಾವಿರಾರು ರೂಪಾಯಿ ಹಣವನ್ನು ವಿದ್ಯುತ್ ಗಾಗಿ ಖರ್ಚು (Electricity Expenses) ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯಿತಿ (Gram Panchayat) ಇಂದು ಯಾವುದೇ ಖರ್ಚಿಲ್ಲದೆ ಗ್ರಾಮದ ಮನೆಗಳಿಗೆ ನೀರುಣಿಸುತ್ತಿದೆ.


5.Gold-Silver Price Today: ವಾರೆವ್ಹಾ, ಮತ್ತಷ್ಟು ಹಗುರವಾದ ಚಿನ್ನ-ಬೆಳ್ಳಿ: ಸತತ ಮೂರನೇ ದಿನವೂ ದರ ಕುಸಿತ!


Gold And Silver Price 13 October 2022: ನಿನ್ನೆಯೇ ಸಾಕಷ್ಟು ಕುಸಿದಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ಕುಸಿದಿದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 25 ಗಳಷ್ಟು ಕುಸಿತವಾಗಿದೆ. ಹಾಗಾಗಿ ಇಂದು ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಚಿನ್ನವನ್ನು ಕೊಳ್ಳಲು ಸೂಕ್ತ ದಿನ ಎಂದೇ ಹೇಳಬಹುದು. ಇಂದು ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ರೂ. 4,665 ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,665 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,089 ಆಗಿದೆ. ಇದೇ ರೀತಿ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,320 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,712 ಆಗಿದೆ.


Morning Digest 13 october 2022 have quick look of important news today mrq
ಸಾಂದರ್ಭಿಕ ಚಿತ್ರ


ಇತ್ತ ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,650 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 50,890 ಆಗಿದೆ. ಅಲ್ಲದೇ ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,66,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,08,900 ಆಗಿದೆ.

Published by:Mahmadrafik K
First published: