Top-5 News: ಇಂದಿನಿಂದ ಅಧಿವೇಶನ, ರಾಜ್ಯದಲ್ಲಿ ಮಳೆ ಅಲರ್ಟ್, ಕಣ್ಣೀರಿನ ವಿದಾಯ ಹೇಳಿದ ಹಸು; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Assembly Session: ಇಂದಿನಿಂದ ವಿಧಾನಮಂಡಲ ಅಧಿವೇಶನ; ಸರ್ಕಾರದ ವಿರುದ್ಧ ಕಾಂಗ್ರೆಸ್ ಬ್ರಹ್ಮಾಸ್ತ್ರ; ಇತ್ತ ಪ್ರತ್ಯಸ್ತ್ರ ಪ್ರಯೋಗಿಸಲು ಕಮಲ ಪಾಳಯ ಪ್ಲ್ಯಾನ್

ಇಂದಿನಿಂದ ವಿಧಾನಸಭೆ ಜಂಟಿ ಕಲಾಪ (Assembly Joint Session) ಶುರುವಾಗುತ್ತಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನ ಕಾಂಗ್ರೆಸ್ (Congress)​ ಮತ್ತು ಬಿಜೆಪಿಯವರ (BJP) ಮಧ್ಯೆ ಗಲಾಟೆ, ಗದ್ದಲ, ವಾಕ್ಸಮರಕ್ಕೆ ಸಾಕ್ಷಿಯಾಗಲಿದೆ. 10 ದಿನಗಳ ಅಧಿವೇಶನದಲ್ಲಿ (Session) ಆರೋಪ-ಪ್ರತ್ಯಾರೋಪಕ್ಕೆ ಬೇಕಾದ ಅಸ್ತ್ರಗಳನ್ನ ಕಾಂಗ್ರೆಸ್​​-ಜೆಡಿಎಸ್​-ಬಿಜೆಪಿ ರೆಡಿಮಾಡಿಕೊಂಡಿವೆ. ಸರ್ಕಾರದ ವಿರುದ್ಧ ಕಾಂಗ್ರೆಸ್ 40% ಕಮಿಷನ್ (Commission Allegation)​​ ದಂಧೆ, PSI ನೇಮಕಾತಿ ಹಗರಣ (PSI Scam), ಬೆಂಗಳೂರು ನೆರೆಹಾನಿ (Bengaluru Flood) ಬಗ್ಗೆಯೂ ಪ್ರಸ್ತಾಪಿಸುವ ಸಾಧ್ಯತೆಯಿದೆ. ಇನ್ನು ಕಾಂಗ್ರೆಸ್​ ಆರೋಪಕ್ಕೆ ಬಿಜೆಪಿ ಸದನದಲ್ಲಿ ಸಮರ್ಪಕ ಉತ್ತರದ ಮೂಲಕ ತಿರುಗೇಟು ನೀಡಲು ಅಣಿಯಾಗಿದೆ.

2.Karnataka Rain Alert: ಮಳೆಯ ಮುನ್ಸೂಚನೆ​; ಬೆಳಗಾವಿಗೆ ಆರೆಂಜ್, 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ರಾಜ್ಯದಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿಗೆ ಆರೆಂಜ್ ಮತ್ತು 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಳೆಯವರೆಗೂ ಮಳೆಯ ಅಲರ್ಟ್ ನೀಡಲಾಗಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

Karnataka Weather Report 12th September 2022 mrq
ಬೀದರ್ ಮಳೆ


3.Gold-Silver Price Today: ಬದಲಾಗಿಲ್ಲ ಚಿನ್ನದ ಬೆಲೆ, ಬೆಳ್ಳಿ ಖರೀದಿಸುವವರಿಗೆ ಸುವರ್ಣಾವಕಾಶ: ಹೀಗಿದೆ ಇಂದಿನ ದರ

ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 46,800 ಆಗಿದೆ. ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 46,800 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 47,400, ರೂ. 46,750, ರೂ. 46,750 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 46,900 ರೂ. ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ದರಗಳು ಕ್ರಮವಾಗಿ ರೂ. 604, ರೂ. 6,040 ಹಾಗೂ ರೂ. 60,400 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 60,400 ಆಗಿದ್ದರೆ ದೆಹಲಿಯಲ್ಲಿ ರೂ. 55,000 ಮುಂಬೈನಲ್ಲಿ ರೂ. 55,000 ಹಾಗೂ ಕೊಲ್ಕತ್ತದಲ್ಲೂ ರೂ. 55,000 ಗಳಾಗಿದೆ.

Gold Rate
ಚಿನ್ನ


4.Viral: ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಕರು, ಹಣೆಗೆ ಮುತ್ತಿಕ್ಕಿ ಕಣ್ಣೀರಿನ ವಿದಾಯ: ಭಾವುಕರಾದ ಜನ!

ಪ್ರಾಣಿಗಳು (Animal) ಮತ್ತು ಮನುಷ್ಯರ ನಡುವಿನ ಪ್ರೀತಿ ಅನೇಕ ಪ್ರಕರಣಗಳು ಸದ್ದು ಮಾಡುತ್ತಲೇ ಇರುತ್ತವೆ. ಆದರೀಗ ಬೆಳಕಿಗೆ ಬಂದ ಪ್ರಕರಣ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಹೌದು ಈ ಪ್ರಕರಣವು ಹಜಾರಿಬಾಗ್ (Hazaribagh) ಜಿಲ್ಲೆಯದ್ದಾಗಿದ್ದು, ವ್ಯಕ್ತಿಯೊಬ್ಬ ಸಾವನ್ನಪ್ಪಿದ ಬಳಿಕ, ಆತ ಸಾಕಿದ್ದ ಕರು ಅವನ ಮೃತದೇಹದ ಬಳಿಗೆ ತಲುಪಿದೆ. ಅಲ್ಲದೇ ಎಲ್ಲರಂತೆ ತಾನೂ ಮೃತ ದೇಹಕ್ಕೆ ಪ್ರದಕ್ಷಿಣೆ ಹಾಕಿ ತನ್ನ ಯಜಮಾನನ ಪಾದಗಳಿಗೆ ಮತ್ತು ಹಣೆಗೆ ಮುತ್ತಿಟ್ಟಿದೆ. ಈ ದೃಶ್ಯವನ್ನು ನೋಡಿದ ಜನರು ಭಾವುಕರಾಗಿದ್ದಾರೆ. ಜಾರ್ಖಂಡ್‌ನ (Jharkhand) ಹಜಾರಿಬಾಗ್‌ನಲ್ಲಿ ನಡೆದ ಮಾನವ ಮತ್ತು ಪ್ರಾಣಿ ಪ್ರೀತಿಯ ಈ ವಿಶಿಷ್ಟ ಘಟನೆ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.

ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಕರು, ಹಣೆಗೆ ಮುತ್ತಿಕ್ಕಿ ಕಣ್ಣೀರಿನ ವಿದಾಯ


5.Kohinoor Diamond: ಕೊಹಿನೂರ್ ವಜ್ರ ವಾಪಸ್ ಮಾಡಿ; ಭಾರತೀಯರ ಆಗ್ರಹ

800 ವರ್ಷಗಳ ಭಾರತದ ಇತಿಹಾಸ (Indian History) ಹೊಂದಿರುವ ಕೊಹಿನೂರು ವಜ್ರ (Kohinoor Diamond) 1937ರಲ್ಲಿ ಬ್ರಿಟಿಷ್ ರಾಣಿಯ ಕಿರೀಟ (Crown) ಸೇರಿತ್ತು. ಈ ಬೆಲೆಬಾಳುವ ವಜ್ರ ಇಲ್ಲಿಯವರೆಗೂ ರಾಣಿ ಎಲಿಜಬೆತ್ 2ರ (Queen Elizabeth II) ಬಳಿ ಇತ್ತು. ಪ್ರಸ್ತುತ ರಾಣಿಯ ಮರಣದ ನಂತರ ಪ್ರತಿಷ್ಠಿತ ಕಿರೀಟ ಯಾರ ಕೈಗೆ ಸಿಗಲಿದೆ ಎಂಬ ಬಗ್ಗೆ ಭಾರಿ ಕೂತೂಹಲ ವ್ಯಕ್ತವಾಗಿತ್ತು.

Indians demands the return of the Kohinoor diamond crown following Queen Elizabeth IIs demise stg asp
ರಾಣಿ ಎಲಿಜಬೆತ್ IIರ ಕೊಹಿನೂರ್ ಕಿರೀಟ


ಬ್ರಿಟನ್ ರಾಣಿ ಎಲಿಜಬೆತ್ II ರ ಮರಣದ ನಂತರ ರಾಜಮನೆತನದ ಜವಾಬ್ದಾರಿ ಚಾರ್ಲ್ಸ್ ಗೆ (Charles) ವರ್ಗಾವಣೆಯಾಗಿದೆ. ರಾಜಕುಮಾರ ಚಾರ್ಲ್ಸ್ ಅವರನ್ನು ಔಪಚಾರಿಕವಾಗಿ ಬ್ರಿಟನ್‌ನ ಹೊಸ ರಾಜ ಎಂದು ಘೋಷಣೆ ಮಾಡಲಾಗುವುದು.
Published by:Mahmadrafik K
First published: