• Home
  • »
  • News
  • »
  • state
  • »
  • Top 5 News: ರೈಲ್ವೆ ಸಚಿವರಿಗೆ ಸಿಕ್ತು ಧಾರವಾಡ ಪೇಡ, ಅರೆಬೆತ್ತಲಾದ ಖ್ಯಾತ ನಟಿ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್​

Top 5 News: ರೈಲ್ವೆ ಸಚಿವರಿಗೆ ಸಿಕ್ತು ಧಾರವಾಡ ಪೇಡ, ಅರೆಬೆತ್ತಲಾದ ಖ್ಯಾತ ನಟಿ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್​

 ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Kannada: ಕನ್ನಡದಲ್ಲಿ ಮಾತಾಡಿ ಪಾಸ್ ಆದ ರೈಲ್ವೆ ಸಚಿವರು; ಧಾರವಾಡ ಪೇಡೆ ಸಿಗುತ್ತೆ ಅಂತ ಅಶ್ವಿನಿ ವೈಷ್ಣವ್ ಖುಷಿ


ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗೋಕೆ ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw, Union Minister)), ಕನ್ನಡದಲ್ಲಿ (Kannada) ಮಾತನಾಡಿ, ನನಗೆ ಧಾರವಾಡ ಪೇಡೆ (Dharwad Peda) ಸಿಗೋದು ಗ್ಯಾರಂಟಿ ಎಂದು ಸಂತಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪಂಡಿತ ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಕೇಂದ್ರ ರೈಲ್ವೆ, ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅಂಚೆ ಚೀಟಿ ಬಿಡುಗಡೆಗೊಳಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi, Union Minister) ಅವರನ್ನು ಅಶ್ವಿನ್ ಹಾಡಿ ಹೊಗಳಿದರು. ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಮಾತನಾಡಿದ ಅಶ್ವಿನ್, ಕನ್ನಡ ಮಾತನಾಡುವಲ್ಲಿ ಪಾಸ್ ಆದೆನೆಲ್ಲಾ ಅಂತ ಸಭಿಕರನ್ನು ಪ್ರಶ್ನೆ ಮಾಡಿದರು. ಪಾಸ್ ಆಗಿದ್ದೀರಿ ಅಂತ ಜನ ಹೇಳ್ತಿದ್ದಂತೆಯೇ ಸಂತಸ ವ್ಯಕ್ತಪಡಿಸಿದ ಸಚಿವರು, ಈಗಲಾದ್ರೂ ಧಾರವಾಡ ಪೇಡೆ ಸಿಗುತ್ತೆ ಎಂದು ನಕ್ಕರು.


2.Elnaaz Norouzi: ಹಿಜಾಬ್​ಗೆ ವಿರೋಧ, ಕ್ಯಾಮೆರಾದೆದುರೇ ಬಟ್ಟೆ ಕಳಚಿಟ್ಟು ಅರೆಬೆತ್ತಲಾದ ಖ್ಯಾತ ನಟಿ!


ಹಿಜಾಬ್ ವಿಚಾರವಾಗಿ ಇರಾನ್​ನಲ್ಲಿ (Protest Against Hijab) ಕಾಣಿಸಿಕೊಂಡ ಕಿಚ್ಚು ಈಗ ಭಾರತಕ್ಕೂ ಲಗ್ಗೆ ಇಟ್ಟಿದೆ. ನೆಟ್‌ಫ್ಲಿಕ್ಸ್‌ನ (Netflix) ಹಿಟ್ ಸೀರೀಸ್ 'ಸೇಕ್ರೆಡ್ ಗೇಮ್ಸ್' ನಲ್ಲಿ ಕೆಲಸ ಮಾಡಿದ್ದ ಬಾಲಿವುಡ್ ನಟಿ ಎಲ್ನಾಜ್ ನೊರೌಜಿ (Bollwyood Actress Elnaaz Norouzi) ಕೂಡ ಈ ಹಿಜಾಬ್ ವಿವಾದಕ್ಕೆ ಧುಮುಕಿದ್ದಾರೆ. ಇರಾನ್‌ನಲ್ಲಿ (Iran) ಹಿಜಾಬ್ ವಿರುದ್ಧ ಮಹಿಳೆಯರು ನಡೆಸಿದ ಪ್ರತಿಭಟನೆಯನ್ನು ಎಲ್ನಾಜ್ ನೊರೌಜಿ ಬೆಂಬಲಿಸಿದರು, ಮಹಿಳೆಯರಿಗೆ ಅವರು ಏನು ಬೇಕಾದರೂ ಧರಿಸುವ ಹಕ್ಕಿದೆ ಎಂದು ಹೇಳಿದರು.


ಕ್ಯಾಮೆರಾದೆದುರೇ ಬಟ್ಟೆ ಕಳಚಿಟ್ಟು ಅರೆಬೆತ್ತಲಾದ ನಟಿ


ಎಲ್ನಾಜ್ ಮಂಗಳವಾರ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಿಜಾಬ್ ಅನ್ನು ವಿರೋಧಿಸುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.


3.Gold-Silver Price Today: ಚಿನ್ನ ಪ್ರಿಯರಿಗೆ ಬಂಪರ್: ಸತತ ಎರಡನೇ ದಿನ ಬಂಗಾರ ದರ ಕುಸಿತ: ಹೀಗಿದೆ ನೋಡಿ ಇಂದಿನ ರೇಟ್


ನಿನ್ನೆಯೇ ಸಾಕಷ್ಟು ಕುಸಿದಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ಕುಸಿದಿದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 70 ಗಳಷ್ಟು ಕುಸಿತವಾಗಿದೆ. ಹಾಗಾಗಿ ಇಂದು ಆಭರಣ ಪ್ರಿಯರಿಗೆ ಅಥವಾ ಹೂಡಿಕೆದಾರರಿಗೆ ಚಿನ್ನವನ್ನು ಕೊಳ್ಳಲು ಅತಿ ಉತ್ತಮ ದಿನ ಎಂದೇ ಹೇಳಬಹುದು. ಇಂದು ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ರೂ. 4,690 ಆಗಿದೆ.


ಸಾಂದರ್ಬೀಕ ಚಿತ್ರ


ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,690 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,116 ಆಗಿದೆ. ಅಲ್ಲದೇ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,520 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,928 ಆಗಿದೆ.


4.Dalit Family: ದಲಿತ ಕಾರ್ಮಿಕರನ್ನು ಹಲ್ಲೆಗೈದು ಕೊಠಡಿಯಲ್ಲಿ ಕೂಡಿ ಹಾಕಿದ ಮಾಲೀಕ; ತೀವ್ರ ರಕ್ತಸ್ರಾವವಾಗಿ ಮಹಿಳೆಗೆ ಗರ್ಭಪಾತ


ಕಾಫಿ ತೋಟದ ಮಾಲೀಕನೋರ್ವ (Coffee plant Owner) ಆರು ಕುಟುಂಬದ 14 ಕೂಲಿ ಕಾರ್ಮಿಕರನ್ನು (Worker Family) ಇಡೀ ದಿನ ಕೊಠಡಿಯಲ್ಲಿ ಕೂಡಿ ಹಾಕಿ ಬೀಗ ಹಾಕಿರುವ ಅಮಾನವೀಯ ಘಟನೆ ಚಿಕ್ಕಮಗಳೂರು (Chikkamagalur) ತಾಲೂಕಿನ ಜೇನುಗದ್ದೆ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಸಮೀಪದ ಪುರ ಗ್ರಾಮದಲ್ಲಿ ಆರು ಕುಟುಂಬಗಳು ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿವೆ.


Kodagu Asha teacher saves lives of eight through her organs rsk mrq
ಆಶಾ, ಶಿಕ್ಷಕಿ


ತೋಟದ ಲೈನ್ ಮನೆಯಲ್ಲಿ ಚಿಕ್ಕ ಮಕ್ಕಳ ಜಗಳ ದೊಡ್ಡವರನ್ನ ತಲುಪಿ ಮಾಲೀಕರ ಬಳಿಯೂ ಹೋಗಿತ್ತು. ಆಗ ಮಾಲೀಕರು ಹುಡುಗರ ಗಲಾಟೆ ಎಂದು ಸುಮ್ಮನಾಗಬಹುದಿತ್ತು. ಆದರೆ ಕೂಲಿ ಕಾರ್ಮಿಕರು ಹಾಗೂ ಮಹಿಳೆಯರ (Women) ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾಗಿ ಗರ್ಭಪಾತವಾದ ಗರ್ಭಿಣಿ ಆರೋಪಿಸಿದ್ದಾರೆ.


5.Bathroom Commodes: ಒಂದೇ ಸ್ನಾನ ಗೃಹದಲ್ಲಿ ಎರಡು ಕಮೋಡ್​​ಗಳಿರುವ ಕಟ್ಟಡ ಉದ್ಘಾಟಿಸಿದ ತಮಿಳುನಾಡು ಸಿಎಂ ಸ್ಟಾಲಿನ್!


ತಮಿಳುನಾಡು ಮುಖ್ಯಮಂತ್ರಿ (Tamil Nādu Chief Minister) ಎಂ.ಕೆ ಸ್ಟಾಲಿನ್ (M.K Stalin) ಅವರು ಸೋಮವಾರ ಕಟ್ಟಡವೊಂದನ್ನು (Building) ಉದ್ಘಾಟನೆ (Inauguration) ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಉದ್ಘಾಟನೆ ಮಾಡಿರುವ ಈ ಕಟ್ಟಡ ಶ್ರೀಪೆರಂಬದೂರಿನಲ್ಲಿದೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ (Viral) ಆಗಿದೆ.


Tamil Nadu CM Stalin inaugurated a building with two commodes in the same bathroom video viral
ಒಂದೇ ಬಾತ್‍ ರೂಂ ನಲ್ಲಿ ಎರಡು ಕಮೋಡ್‍


ಹಲವು ರೀತಿಯ ಕಟ್ಟಡಗಳನ್ನು ನೀವು ನೋಡಿರುತ್ತೀರಿ. ಆದರೆ ಸಿಎಂ ಉದ್ಘಾಟನೆ ಮಾಡಿರುವ ಈ ಕಟ್ಟಡ ಯಾಕೆ ಇಷ್ಟೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ನೀವು ಯೋಚನೆ ಮಾಡುತ್ತಿದ್ದರೆ ಈ ಇದನ್ನು ಓದಿ. ನೀವು ಒಂದು ಕ್ಷಣ ನಕ್ಕು ಬಿಡುತ್ತೀರಿ.

Published by:Mahmadrafik K
First published: