Top-5 News: ಬೆಕ್ಕಿಗೆ ಬಣ್ಣ ಹಚ್ಚಿ ಮಾರಾಟ, 8 ಕೋಟಿ ವಿಮೆ ಕಥೆ, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

  • Share this:
1.Tiger Cub: ಬೆಕ್ಕಿಗೆ ಬಣ್ಣ ಹಚ್ಚಿ ಹುಲಿಮರಿ ಎಂದು ಮಾರಾಟ!

ಬೆಕ್ಕನ್ನು ಹುಲಿಮರಿ ಎಂದು ನಂಬಿಸಿ ಮೋಸ ಮಾಡಲು ಯತ್ನಿಸಿದ್ದ ಅಪರೂಪದ ಆರೋಪದ ಕೃತ್ಯವೊಂದು ನಡೆದಿದೆ. ಬೆಕ್ಕಿಗೆ ಹುಲಿಮರಿಯ (Tiger Cub) ಬಣ್ಣ ಬಳಿದು ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ ಯುವಕನೊಬ್ಬನನ್ನು ಕೇರಳದ ಇಡುಕ್ಕಿಯಲ್ಲಿ ಬಂಧಿಸಲಾಗಿದೆ. ತಮಿಳುನಾಡಿನ (Tamil Nadu) ಗಡಿ ಗ್ರಾಮವಾದ ತಿರುವಣ್ಣಾಮಲ ಅರಣಿ ನಿವಾಸಿ ಪಾರ್ಥಿಬನ್ (24) ಎಂಬ ವ್ಯಕ್ತಿಯೇ ಬೆಕ್ಕಿಗೆ (Cat) ಹುಲಿ ಮರಿಯ ಬಣ್ಣ ಬಳಿದು ಮಾರಾಟ ಮಾಡಲು ಯತ್ನಿಸಿದ ಪೊಲೀಸರು ಬಂಧಿಸಿದ ಆರೋಪಿ. ಈ ಮೂಲಕ ಬೆಕ್ಕಿಗೆ ಬಣ್ಣ ಬಳಿದು ಹುಲಿಮರಿ ಎಂದು ಜನರನ್ನು ನಂಬಿಸಿಯೂ ಹಣ ಮಾಡಬಹುದು ಎಂದು ಖತರ್ನಾಕ್ ಯೋಜನೆ ರೂಪಿಸಿದ ವ್ಯಕ್ತಿ ಬಂಧನವಾಗಿದೆ.

2.Insurance Scam: ಸಾಲ ತೀರಿಸಲು ಭಯಾನಕ ಹಾದಿ ಹಿಡಿದ ಮಹಿಳೆ: 8 ಕೋಟಿ ವಿಮೆ ಮೊತ್ತಕ್ಕಾಗಿ ಹೀಗಾ ಮಾಡೋದು?

ಸಾಲವು (Debt) ಒಬ್ಬ ವ್ಯಕ್ತಿಯನ್ನು ಅದ್ಯಾವ ರೀತಿ ಕಾಡುತ್ತದೆ ಎಂದರೆ, ತಾನು ಮಾಡಲು ಬಯಸದ ಕೆಲಸ ಮಾಡಲೂ ಕೆಲವೊಮ್ಮೆ ಮುಂದಾಗಬೇಕಾಗುತ್ತದೆ. ಸಾಲದಲ್ಲಿರುವ ವ್ಯಕ್ತಿಯ ಜೀವನವು ತುಂಬಾ ನಿರಾಶಾದಾಯಕವಾಗಿರುತ್ತದೆ ಎಂದು ಜನರು ಸಾಮಾನ್ಯವಾಗಿ ಹೇಳುತ್ತಾರೆ. ತಾನು ಗಳಿಸಿದ ಬಹುಪಾಲು ಹಣವನ್ನು ಸಾಲ ತೀರಿಸಲು ವ್ಯಯಿಸಬೇಕಾಗುತ್ತದೆ. ಸದ್ಯ ಸ್ಲೋವೇನಿಯನ್​ನಲ್ಲೂ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ಮಹಿಳೆ ವಿಮೆಯ (Insurance) ಹಣ ಕ್ಲೈಮ್ ಮಾಡಲು ಕೈ ಕತ್ತರಿಸಿಕೊಂಡಿದ್ದಾಳೆ. ಆಕೆಗೆ ಭಾರೀ ಪ್ರಮಾಣದ ಸಾಲವಿತ್ತೆನ್ನಲಾಗಿದೆ.

ವಿಮೆಗಾಗಿ ಕೈಕತ್ತರಿಸಿಕೊಂಡ ಜೂಲಿಜಾ ಅಡ್ಲೆಸಿಕ್


ಹೀಗಿರುವಾಗ ಆಕೆ ತನ್ನ ಸಾಲ ತೀರಿಸಲು ಅನೇಕ ಮಾರ್ಗಗಳನ್ನು ಹುಡುಕಿದ್ದಾಳೆ. ಈ ನಡುವೆ ಆಕೆ ಬಳಸಿದ ಮಾರ್ಗ ಆಕೆಯನ್ನು ನೇರವಾಗಿ ಜೈಲುಪಾಲಾಗುವಂತೆ ಮಾಡಿದೆ. ಇದೀಗ ಜೈಲಿನಿಂದ (Jail) ಮುಕ್ತಿ ಸಿಕ್ಕಿದ್ದರಿಂದ ಮತ್ತೆ ಚರ್ಚೆಯಲ್ಲಿದ್ದಾರೆ. ಆದರೆ ಈ ಬಾರಿ ಆಕೆಯ ಒಳ್ಳೆಯ ಕೆಲಸಗಳ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

3.Hassanamba Temple: ಅಕ್ಟೋಬರ್ 13 ರಿಂದ 27ರವರೆಗೆ ಹಾಸನಾಂಬೆ ದೇವಾಲಯ ಓಪನ್

ಹಾಸನಾಂಬ ದೇವಾಲಯ (Hasanamba Temple) ಮುಂದಿನ ತಿಂಗಳು ಅಂದ್ರೆ ಅಕ್ಟೋಬರ್ 13ರಿಂದ ತೆರೆಯಲಿದೆ. ಪ್ರತಿವರ್ಷದಂತೆ ಈ ಬಾರಿಯೂ ಅಧಿದೇವತೆಯ ದರ್ಶನವನ್ನು ಭಕ್ತರು (Devotees) ಪಡೆಯಬಹುದಾಗಿದೆ. ಒಟ್ಟು 12 ದಿನಗಳ ಕಾಲ ದೇವಾಲಯ (Temple) ತೆರೆಯಲಿದೆ. ಆಶ್ವಿಜ ಮಾಸದ ಶುಕ್ಲ ಪಕ್ಷದ ಮೊದಲ ಗುರುವಾರದಂದು ಹಾಸನಾಂಬೆಯ ಬಾಗಿಲು ತೆರೆಯಲಿದ್ದು, ಬಲಿಪಾಡ್ಯಮಿಯ ಮಾರನೇಯ ದಿನ ಶಾಸ್ತ್ರೋಕ್ತವಾಗಿ ಗರ್ಭಗುಡಿಗೆ ಬಾಗಿಲು ಹಾಕಲಾಗುತ್ತದೆ. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಧಿಕಾರಿಗಳು ಬಾಗಿಲು ತೆರೆಯುವ ಮತ್ತು ಮುಚ್ಚುವ ವೇಳೆ ಉಪಸ್ಥಿತರಿರುತ್ತಾರೆ. ಕಳೆದ ಎರಡು ವರ್ಷ ಕೊರೊನಾ (COVID 19) ಹಿನ್ನೆಲೆ ಭಕ್ತರಿಗೆ ಹಲವು ನಿಬಂಧನೆಗಳನ್ನು ಹಾಕಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ.

Is Hasanamba temple open, What is the story of Hasanamba Temple, Which are the temples of India which open once in a year,hasanamba temple opening 2022,hasanamba temple mystery, hasanamba temple story, hasanamba temple contact number, hasanamba temple website, hasanamba temple timings, bangalore to hasanamba temple distance, ಹಾಸನಾಂಬಾ ದೇವಸ್ಥಾನ ದರ್ಶನದ ಸಮಯ, ಹಾಸನಾಂಬಾ ದೇವಸ್ಥಾನ ಓಪನ್, Kannada News, Karnataka News
ಹಾಸನಾಂಬೆ ದೇವಸ್ಥಾನ


4.Kodagu: ರಾಜಕೀಯದ ರಾಡಿಯಾದ ಕೊಡಗಿನ ಕೊಯಿನಾಡಿನ ಕಿಂಡಿ ಅಣೆಕಟ್ಟು

ತಲೆತಲಾಂತರಗಳಿಂದ ತಣ್ಣಗೆ ಹರಿಯುತ್ತಿದ್ದ ಪಯಸ್ವಿನಿ ನದಿ (Payaswini River) ಕಿಂಡಿ ಅಣೆಕಟ್ಟೆಯಿಂದಾಗಿ (Kindi Dam) ಈಗ ಪ್ರವಾಹದ ರೂಪ ಪಡೆಯುತ್ತಿದ್ದಾಳೆ. ಇದರಿಂದ ಉಂಟಾದ ಕೆಸರನ್ನು ಎರಡು ರಾಷ್ಟ್ರೀಯ ಪಕ್ಷಗಳು (National Political Party) ಪರಸ್ಪರ ಎರಚಿಕೊಳ್ಳುತ್ತಿವೆ. ಹೌದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಸಂಪಾಜೆ (Sampaje , Madikeri) ಹೋಬಳಿಯಲ್ಲಿರುವ ಕೊಯಿನಾಡಿನಲ್ಲಿ (Koinadu Flood) ಪಯಸ್ವಿನಿ ನದಿಗೆ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಮೂರು ಕೋಟಿ ರೂಪಾಯಿ ವ್ಯಯಿಸಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಈ ವರ್ಷದಲ್ಲಷ್ಟೇ ಕಾಮಗಾರಿಯನ್ನು ಬಹುತೇಕ ಮುಗಿಸಲಾಗಿದೆ. ಆದರೆ ಉದ್ಘಾಟನೆಗೆ ಮೊದಲೇ ಎರಡು ತಿಂಗಳ ಅವಧಿಯಲ್ಲಿ ಪಯಸ್ವಿನಿ (Payaswini Flood) ಮೂರು ಬಾರಿ ಉಗ್ರ ರೂಪ ತಾಳಿ ಕೊಯಿನಾಡಿನ ಹತ್ತಾರು ಕುಟುಂಬಗಳ ಬದುಕನ್ನು ಮೂರಾಬಟ್ಟೆ ಮಾಡಿದ್ದಾಳೆ. ಇದಕೆಲ್ಲಾ ಕಿಂಡಿ ಅಣೆಕಟ್ಟೆ ನಿರ್ಮಾಣವೇ ಮುಖ್ಯ ಕಾರಣ ಅಂತ ಅಲ್ಲಿನ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.

Payaswini river Flood subject turn to political issue rsk mrq
ಕಿಂಡಿ ಆಣೆಕಟ್ಟು


5.Gold-Silver Price Today: ಭಾನುವಾರ ಹೇಗಿದೆ ಚಿನ್ನ-ಬೆಳ್ಳಿ ದರ? ಖರೀದಿಗೆಷ್ಟು ಸೂಕ್ತ? ಇಲ್ಲಿದೆ ನೋಡಿ ಇಂದಿನ ರೇಟ್

ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,680 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,105 ಆಗಿದೆ. ಇನ್ನು ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,440 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,840 ಆಗಿದೆ.

how to clean clean your gold jewelry at home
ಸಾಂದರ್ಭಿಕ ಚಿತ್ರ


ಇತ್ತ ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,800 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,050 ಆಗಿದೆ. ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,68,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,10,500 ಆಗಿದೆ.
Published by:Mahmadrafik K
First published: