• Home
  • »
  • News
  • »
  • state
  • »
  • Top 5 News: ಕಾಂಗ್ರೆಸ್​ಗೆ ಕೌಂಟರ್​ ಸಮಾವೇಶ, ನವಾಜ್ ಹೀಗೆ ಹೇಳಿದ್ಯಾಕೆ?, ಮುಸ್ಲಿಮರ ಮೀಸಲಾತಿ ಹೋಗುತ್ತಾ? ಬೆಳಗಿನ ಟಾಪ್ ನ್ಯೂಸ್​ಗಳು

Top 5 News: ಕಾಂಗ್ರೆಸ್​ಗೆ ಕೌಂಟರ್​ ಸಮಾವೇಶ, ನವಾಜ್ ಹೀಗೆ ಹೇಳಿದ್ಯಾಕೆ?, ಮುಸ್ಲಿಮರ ಮೀಸಲಾತಿ ಹೋಗುತ್ತಾ? ಬೆಳಗಿನ ಟಾಪ್ ನ್ಯೂಸ್​ಗಳು

ಈವರೆಗಿನ ಪ್ರಮುಖ ಸುದ್ದಿಗಳು

ಈವರೆಗಿನ ಪ್ರಮುಖ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Karnataka Politics: ಬಿಜೆಪಿಯಿಂದ ಕಾಂಗ್ರೆಸ್​ಗೆ ಕೌಂಟರ್​ ಸಮಾವೇಶ, ಭಾರತ್ ಜೋಡೋ ಯಾತ್ರೆಗೆ ಮತ್ತೆ ಪೋಸ್ಟರ್ ಬಿಸಿ


ಭಾರತ್ ಜೋಡೋ ಪಾದಯಾತ್ರೆಗೆ (Bharar Jodo Yatre) ಬಿಜೆಪಿ (BJP) ಜನಸಂಕಲ್ಪ ಯಾತ್ರೆ (Jana Sankalpa Yatre) ಮೂಲಕ ಟಕ್ಕರ್ ಕೊಡಲು ತಯಾರಿ ಮಾಡಿಕೊಂಡಿದೆ. ಬಿಜೆಪಿ ಪಕ್ಷದಿಂದ ಇಂದಿನಿಂದ ಜನಸಂಕಲ್ಪ ಯಾತ್ರೆ ಪ್ರಾರಂಭ ಆಗ್ತಿದೆ. ರಾಯಚೂರು ಗ್ರಾಮಾಂತರ ಕ್ಷೇತ್ರದ ಗಿಲ್ಲೆಸೂಗೂರು ಕ್ಯಾಂಪ್​​ನಿಂದ ಯಾತ್ರೆ ಪ್ರಾರಂಭವಾಗಲಿದೆ. ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurapa) ಹಾಗೂ ಬಿಜೆಪಿ ನಾಯಕರು (BJP Leaders) ಭಾಗವಹಿಸಲಿದ್ದಾರೆ. ಇಂದಿನ ಬಿಜೆಪಿ rallyಯಲ್ಲಿ (BJP Rally) ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿದಿನ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಯಲಿದೆ.


2.Reservation: ಮುಸ್ಲಿಮರ ಮೀಸಲಾತಿ ತೆಗೆಯುವ ಚರ್ಚೆ ಅಂದ್ರು ಬೆಲ್ಲದ್, ಯತ್ನಾಳ್


ಮುಸ್ಲಿಮರ 2ಎ ಮೀಸಲಾತಿ (2A Reservation) ತೆಗೆಯುವ ಬಗ್ಗೆ‌ ಚರ್ಚೆ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಅರವಿಂದ್​ ಬೆಲ್ಲದ್ (BJP MLA Aravind Bellad) ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagowda Patil Yatnal) ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಅಲ್ಪಸಂಖ್ಯಾತ (Minority) ಹಾಗೂ 2ಎ ಎರಡೆರೆಡು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ.


Reservation politics in karnataka Basanagowda patil Yatnal Arvind bellad statements mrq
ಮೀಸಲಾತಿ ರಾಜಕೀಯ


ಆದ್ದರಿಂದ 2ಎ ಮೀಸಲಾತಿಯಿಂದ ತೆಗೆದು ಹಾಕಲು ತಯಾರಿ ನಡೆದಿದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ. ಅಲ್ಪಸಂಖ್ಯಾತ ಮತ್ತು ಕೆಲ ಮುಸ್ಲಿಂ ಒಳಪಂಗಡಗಳು 2ಎ ಮೀಸಲಾತಿಯ ಲಾಭ ಸಹ ಪಡೆಯುತ್ತಿವೆ ಎಂದು ಬೆಲ್ಲದ್ ಹೇಳಿದರು. ಇತ್ತ ಬಸನಗೌಡ ಪಾಟೀಲ್ ಯತ್ನಾಳ್ ಸಹ ಬ್ರಾಹ್ಮಣರು ನಿಜವಾದ ಅಲ್ಪಸಂಖ್ಯಾತರು ಎಂದರು.


3.Maharashtra: ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣಕ್ಕೆ ಹೊಸ ಹೆಸರು, ಚಿಹ್ನೆ ಕೊಟ್ಟ ಚುನಾವಣಾ ಆಯೋಗ!


ಚುನಾವಣಾ ಆಯೋಗವು (Election Commission Of India) ಶಿವಸೇನೆಯ ಉದ್ಧವ್ ಠಾಕ್ರೆ(Uddhav Thackeray) ಮತ್ತು ಏಕನಾಥ್ ಶಿಂಧೆ (Eknath Shinde) ಬಣಕ್ಕೆ ಹೊಸ ಹೆಸರು ಮತ್ತು ಚಿಹ್ನೆಯನ್ನು ನಿಗದಿಪಡಿಸಿದೆ. ಆಯೋಗವು ಶಿಂಧೆ ಬಣವನ್ನು ಬಾಳಾಸಾಹೇಬಚಿ ಶಿವಸೇನೆ ಎಂದು ನಿಗದಿಪಡಿಸಿದೆ, ಆದರೆ ಉದ್ಧವ್ ಠಾಕ್ರೆ ಬಣಕ್ಕೆ ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ನಿಗದಿಪಡಿಸಲಾಗಿದೆ.


Morning Digest 11th October 2022 have quick look of important news today mrq
ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ


ಮತ್ತೊಂದೆಡೆ, ಉದ್ಧವ್ ಬಣಕ್ಕೆ ಜ್ಯೋತಿಯ ಚಿಹ್ನೆಯನ್ನು ನೀಡಲಾಗಿದೆ. ಆದರೆ, ಧಾರ್ಮಿಕ ಕಾರಣಗಳಿಂದಾಗಿ ಚುನಾವಣಾ ಆಯೋಗವು ಶಿಂಧೆ ಬಣಕ್ಕೆ ಮೂರು ಚಿಹ್ನೆಗಳಲ್ಲಿ ಯಾವುದನ್ನೂ ನೀಡಿಲ್ಲ. ಅಲ್ಲದೇ ಉದಯಿಸುವ ಸೂರ್ಯ ಇತರ ಪಕ್ಷದ ಚಿಹ್ನೆಯಾಗಿರುವುದರಿಂದ ಆಯೋಗವು ಹೊಸ ಚುನಾವಣಾ ಚಿಹ್ನೆಯನ್ನು ಪ್ರಸ್ತುತಡಿಸುವಂತೆ ತಿಳಿಸಿದೆ.


4.Gold-Silver Price Today: ಏರುತ್ತಿದ್ದ ಚಿನ್ನದ ದರ ಮತ್ತೆ ಕುಸಿತ, ಖರೀದಿಗೆ ಇದು ಸೂಕ್ತ ದಿನ: ಹೀಗಿದೆ ನೋಡಿ ಇಂದಿನ ರೇಟ್


Gold And Silver Rate 11 October 2022: ಈಗಷ್ಟೇ ಚೇತರಿಕೆಯ ಹಾದಿ ಹಿಡಿಯುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಕುಸಿತ ಉಂಟಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಆಭರಣ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 25 ಗಳಷ್ಟು ಕುಸಿತವಾಗಿದೆಇಂದು ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ರೂ. 4,760 ಆಗಿದೆ.


Morning Digest 11th October 2022 have quick look of important news today mrq
ಸಾಂದರ್ಭಿಕ ಚಿತ್ರ


ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ, ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,760 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,193 ಆಗಿದೆ. ಅದೇ ರೀತಿ ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,080 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,544 ಆಗಿದೆ.


5.Bigg Boss Saik Nawaz: ಅಪ್ಪ ನಾನೇನೂ ಸಾಧನೆ ಮಾಡಲೇ ಇಲ್ಲ! ಹೊರಗೆ ಬಂದ ನವಾಜ್ ಹೀಗೆ ಹೇಳಿದ್ಯಾಕೆ?


ಸೈಕ್ ನಾವಾಜ್ ಬಗ್ಗೆ ಮೊದಲ ದಿನದಿಂದಲೂ ಅಂತಹ ಏನೂ ಒಳ್ಳೆ ಅಭಿಪ್ರಾಯ ಇರಲಿಲ್ಲ ಬಿಡಿ. ಸಿನಿಮಾ ಥಿಯೇಟರ್​ ಮುಂದೆ ರಿವ್ಯೂ ಮಾಡೋದಷ್ಟೇ ಈ ಸೈಕ್ ನವಾಜ್ ಕೆಲಸ, ಬೇರೆ ಏನೂ ಬರೋದಿಲ್ಲ ಅನ್ನೋದೇ ಎಲ್ಲರ ನಂಬಿಕೆ ಆಗಿತ್ತು.


Morning Digest 11th October 2022 have quick look of important news today mrq
ನವಾಜ್


ಪ್ರಶಾಂತ್ ಸಂಬರ್ಗಿ ಕೂಡ ಇದನ್ನೆ ಹೇಳಿದ್ದರು. ನವಾಜ್ ಬತ್ತಳಿಕೆಯಲ್ಲಿ ಬೇರೆ ಏನೂ ಇರಲಿಲ್ಲ. ಇರೋದು ರಿವ್ಯೂ ಮಾಡೋದು ಒಂದೇ ಒಂದು ಟ್ರ್ಯಾಲೆಂಟ್ ಎಂದು ಶರಾ ಬರೆದು ಬಿಟ್ಟಿದ್ದರು.

Published by:Mahmadrafik K
First published: