Top-5 News: ಆರೋನ್​ ಫಿಂಚ್ ನಿವೃತ್ತಿ, ಮಹಿಳೆಯ ಕೊಲೆ, ಚಿನ್ನದ ದರ ಇಲ್ಲಿದೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Crime News: ಚಾಕುವಿನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ನಿ ಶವ, ಆತ್ಮಹತ್ಯೆಗೆ ಯತ್ನಿಸಿದ ಪತಿ

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಶಿವಮೊಗ್ಗದಲ್ಲಿ ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತಿಯೋರ್ವ ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಶಿವಮೊಗ್ಗ ನಗರದ ಪ್ರಿಯಾಂಕ ಲೇಔಟ್​​ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಸಾವನ್ನಪ್ಪಿದ್ದು, ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. 30 ವರ್ಷದ ಮಂಜುಳಾ ಮೃತ ಮಹಿಳೆ. ಮಂಜುಳಾ ಪತಿ ದಿನೇಶ್ ಚಾಕುವಿನಿಂದ ಕೈ ಕುಯ್ದುಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಂಜುಳಾ ಮೃತದೇಹ ಚಾಕುವಿನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತ್ನಿಯ ಕೊಲೆಯ ಬಳಿಕ ದಿನೇಶ್ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

2.Madikeri: ಡಿಜೆ ಸೌಂಡ್ಸ್ ಇಲ್ಲದೇ ಜನೋತ್ಸವವಾಗುವುದೇ ಮಡಿಕೇರಿ ದಸರಾ? ಸುಪ್ರೀಂಗೆ ಹೋಗಿ ಅನುಮತಿ ತರ್ತಾರಾ ಸಂಸದರು?

ಹಗಲು ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ನಡೆದರೆ, ರಾತ್ರಿ ಬೆಳಕಿನೋಕುಳಿಯಲ್ಲಿ ಮಿಂದೇಳುವ ಮಡಿಕೇರಿಯ ದಸರಾ (Madikeri Dasara) ಜನೋತ್ಸವ ನಡೆಯುತ್ತದೆ. ಅಲ್ಲಿನ ಹತ್ತು ಮಂಟಪಗಳು ಸಾದರಪಡಿಸುವ ಐತಿಹಾಸಿಕ ಮತ್ತು ಪೌರಾಣಿಕ ಕಥಾ ಹಂದರಗಳನ್ನು ಒಳಗೊಂಡ ಚಲವನಗಳ ಹೊಂದಿದ ಪುರಾಣದ ವ್ಯಕ್ತಿಗಳ ಗೊಂಬೆಗಳು ಕಿವಿಗಡಿಚಿಕ್ಕುವ ಧ್ವನಿ ಬೆಳಕಿನಲ್ಲಿ ಮಡಿಕೇರಿ (Madikeri) ನಗರದೊಳಗೆ ಸುರಾಸುರರ ಲೋಕವನ್ನೇ ಸೃಷ್ಟಿಸಿ ಬಿಡುತ್ತವೆ. ಅದೆಲ್ಲದಕ್ಕೂ ಮುಖ್ಯವಾಗಿ ಸಾಥ್ ನೀಡುವುದು ಧ್ವನಿವರ್ಧಕವೇ (DJ Sounds). ಆದರೆ ಸುಪ್ರಿಂಕೋರ್ಟ್ (Supreme Court) ಹೊರಡಿಸಿರುವ ಆದೇಶದಿಂದಾಗಿ ಅದ್ಧೂರಿಯ ಜನೋತ್ಸವದ ಮೇಲೆ ತೂಗುಗತ್ತಿ ನೇತಾಡುತ್ತಿದೆ.

Madikeri people demands to DJ Sound permission in dasara celebration rsk mrq
ಮಡಿಕೇರಿ ದಸರಾ


3.Ganesh Laddu: ಗಣೇಶನ ಲಡ್ಡುಗೆ ಬರೋಬ್ಬರಿ 24 ಲಕ್ಷ 60 ಸಾವಿರ ರೂಪಾಯಿ! ಇದನ್ನು ಖರೀದಿಸಿದ್ರೆ ಅದೃಷ್ಟವಂತೆ

ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್‌ನ ಅತ್ಯಂತ ಜನಪ್ರಿಯ ಬಾಲಾಪುರ ಗಣೇಶೋತ್ಸವ ಅದ್ಧೂರಿಯಾಗಿ ನಡೆದಿದೆ. ಇಲ್ಲಿನ ವಿಶೇಷ ಆಕರ್ಷಣೆ ಅಂದರೆ ಗಣೇಶನ ನೈವೇಧ್ಯಕ್ಕೆ ಇಡುವ ಲಡ್ಡು. ಇದನ್ನು ಹರಾಜು ಹಾಕಲಾಗಿದ್ದು, ಇದನ್ನು ಕೊಳ್ಳಲು ಜನರು ಮುಗಿಬೀಳುತ್ತಾರೆ. ಹೈದರಾಬಾದ್ ನಗರದ ಹೊರವಲಯದಲ್ಲಿರುವ ಬಾಲಾಪುರದಲ್ಲಿ ಶುಕ್ರವಾರ ಹರಾಜು ಪ್ರಕ್ರಿಯೆ ನಡೆದಿದೆ. 21 ಕೆಜಿ ಬಾಳಾಪುರ ಗಣೇಶ್ ಲಡ್ಡು ಸಾರ್ವಕಾಲಿಕ ದಾಖಲೆಯ ಬೆಲೆಗೆ ಹರಾಜಾಗಿದೆ. ಭಕ್ತರೊಬ್ಬರು ಇದನ್ನು ಬರೋಬ್ಬರಿ 24.60 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ.

telangana s balapur ganesh laddu auctioned for 24 lakh 60 thousand rupees
ದಾಖಲೆ ಮೊತ್ತಕ್ಕೆ ಹರಾಜಾದ ಲಡ್ಡು


4.Gold-Silver Price Today: ಚಿನ್ನ ಖರೀದಿಗೆಷ್ಟು ಸೂಕ್ತ ಇಂದಿನ ದಿನ? ಇಲ್ಲಿದೆ ನೋಡಿ ಬೆಳ್ಳಿ-ಬಂಗಾರ ದರ!

ನಿನ್ನೆಗೆ ಹೋಲಿಸಿದರೆ ಇಂದು ಹತ್ತು ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 100 ರರೂಪಾಯಿ ಏರಿಕೆಯಾಗಿದೆ. ಈ ಮೂಲಕ ಹತ್ತು ಗ್ರಾಂ ಚಿನ್ನದ ದರ 46,750 ರೂಪಾಯಿ ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,680 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,105 ಆಗಿದೆ. ಇನ್ನು ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,440 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,840 ಆಗಿದೆ.

Gold Rate
ಚಿನ್ನ


5.Aaron Finch Retires: ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಆಸೀಸ್​ ದಿಗ್ಗಜ ಆಟಗಾರ ಆರೋನ್ ಫಿಂಚ್

ಟಿ20 ವಿಶ್ವಕಪ್‌ಗೂ ಮುನ್ನ ಕ್ರಿಕೆಟ್ ಲೋಕದ ದಿಗ್ಗಜ ಕ್ರಿಕೆಟಿಗರೊಬ್ಬರು ನಿವೃತ್ತಿ ಘೋಷಿಸಿದ್ದಾರೆ. ಜೊತೆಗೆ ತಮ್ಮ ಕೊನೆಯ ಪಂದ್ಯ ಆಡುವ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಹೌದು, ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಹಾಗೂ ನಾಯಕ ಆರೋನ್​ ಫಿಂಚ್ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

Australia captain Aaron Finch has announced his retirement from ODI cricket
ಅರೋನ್ ಪಿಂಚ್​


ಅವರ ಈ ದಿಢೀರ್ ನಿರ್ಧಾರ ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ. ಅವರು ನ್ಯೂಜಿಲೆಂಡ್ ವಿರುದ್ಧ ತಮ್ಮ 146ನೇ ಮತ್ತು ಅಂತಿಮ ODI ಪಂದ್ಯವನ್ನು ಆಡಿದ ನಂತರ ನಿವೃತ್ತಿ ಆಗುವುದಾಗಿ ತಿಳಿಸಿದ್ದಾರೆ. ಆದರೆ ಒಂದು ಸಮತಸದ ವಿಚಾರವೆಂದರೆ ಅವರು ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸುವುದಾಗಿಯೂ ಘೋಷಿಸಿದ್ದಾರೆ.
Published by:Mahmadrafik K
First published: