• Home
  • »
  • News
  • »
  • state
  • »
  • Top 5 News: ಆಪರೇಷನ್ ಬುಲ್ಡೋಜರ್, ಐದು ದಿನ ಮಳೆ ಅಲರ್ಟ್​, ಚಿನ್ನದ ಬೆಲೆ ಎಷ್ಟಿದೆ?; ಬೆಳಗಿನ ಟಾಪ್ ನ್ಯೂಸ್​​

Top 5 News: ಆಪರೇಷನ್ ಬುಲ್ಡೋಜರ್, ಐದು ದಿನ ಮಳೆ ಅಲರ್ಟ್​, ಚಿನ್ನದ ಬೆಲೆ ಎಷ್ಟಿದೆ?; ಬೆಳಗಿನ ಟಾಪ್ ನ್ಯೂಸ್​​

ಇಂದಿನ ಟಾಪ್ ಸುದ್ದಿಗಳು

ಇಂದಿನ ಟಾಪ್ ಸುದ್ದಿಗಳು

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Karnataka Weather Report: ಜನರೇ ಗಮನಿಸಿ, ಮುಂದಿನ 5 ದಿನ ರಾಜ್ಯದಲ್ಲಿ ಭಾರೀ ಮಳೆ; ಯೆಲ್ಲೋ ಅಲರ್ಟ್​ ಪ್ರಕಟ


ಕಳೆದ ಒಂದು ವಾರದಿಂದ ತಣ್ಣಗಾಗಿದ್ದ ವರುಣದೇವ (Heavy Rainfall) ಮತ್ತೆ ಅಬ್ಬರಿಸಲು ಸಿದ್ಧನಾಗಿದ್ದಾನೆ. ಈಗಾಗಲೇ ನಿನ್ನೆಯೇ ಬೆಂಗಳೂರು ಸೇರಿದಂತೆ ಹಲವೆಡೆ ತುಂತುರು ಮಳೆ ಆರಂಭಗೊಂಡಿದೆ. ಕರ್ನಾಟಕದಲ್ಲಿ (karnataka Rains) 5 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಅದರಲ್ಲಿಯೂ ಒಳನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮಂಡ್ಯ, ತುಮಕೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಯೆಲ್ಲೋ ಅಲರ್ಟ್ (Yellow Alert) ಪ್ರಕಟಿಸಲಾಗಿದೆ.


2.Gold-Silver Price Today: ಚಿನ್ನದ ದರ ಏರಿಕೆಗೆ ಬಿತ್ತು ಬ್ರೇಕ್, ಹೀಗಿದೆ ಇಂದಿನ ರೇಟ್


ಆಭರಣ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ರೂ. 4,785 ಆಗಿದೆ. ಅಲ್ಲದೆ ಕಳೆದ ಕೆಲ ದಿನಗಳಲ್ಲಿ ಆಗುತ್ತಿರುವ ಏರಿಳಿತವನ್ನು ಗಮನಿಸಿದರೆ ಸದ್ಯ ಇದು ಚಿನ್ನ ಕೊಳ್ಳಲು ಉತ್ತಮ ಸಮಯವೆಂದೇ ಎನ್ನಬಹುದು. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳನ್ನು ನೋಡುವುದಾದರೆ ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,785 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,220 ಆಗಿದೆ. ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 38,280 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,760 ಆಗಿದೆ. ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 47,850 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,200 ಆಗಿದೆ.


Morning Digest 10th october 2022 have quick look of important news today mrq
ಸಾಂದರ್ಭಿಕ ಚಿತ್ರ


ಇತ್ತ ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,78,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,22,000 ಆಗಿದೆ.


3.BBMP: ಇಂದಿನಿಂದ ಮತ್ತೆ ಬುಲ್ಡೋಜರ್ ಘರ್ಜನೆ; 30 ವಿಲ್ಲಾಗಳ ಡೆಮಾಲಿಷನ್ ಆಗುತ್ತಾ?


ನಾಡಹಬ್ಬ ದಸರಾ ಆಚರಣೆ ಮುಗಿಯುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಆಪರೇಷನ್ ಒತ್ತುವರಿ ತೆರವು (encroachment) ಇಂದಿನಿಂದ ಆರಂಭವಾಗಲಿದೆ. ರಾಜಕಾಲುವೆ (Raja Kaluve) ಒತ್ತುವರಿ ಮಾಡಿಕೊಂಡ ಜಾಗವನ್ನು ವಶಕ್ಕೆ ಪಡೆಯಲು ಬಿಬಿಎಂಪಿ (BBMP) ಭರ್ಜರಿ ತಯಾರಿ ನಡೆಸಿದ್ದು, ಪ್ರತಿಷ್ಠಿತ ಕಂಪನಿಗಳಿಗೆ ನಡುಕ ಶುರುವಾಗಿದೆ. ಕಳೆದ ತಿಂಗಳು ನಗರದಲ್ಲಿ ಜೆಸಿಬಿ ಘರ್ಜನೆ ಸದ್ದು ಮಾಡಿತ್ತು.


Morning Digest 10th october 2022 have quick look of important news today mrq
ಸಾಂದರ್ಭಿಕ ಚಿತ್ರ


ಮಳೆಯ (Bengaluru Rains) ಪರಿಣಾಮ ಮುಳುಗಡೆಯಾದ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮಾಡಲಾಗಿತ್ತು. ಆದರೆ ಕೆಲವರು ಇದರ ವಿರುದ್ಧ ಹೈಕೋರ್ಟ್ (Highcourt) ಮೊರೆ ಹೋಗಿದ್ದರು. ಈ ಸಂಬಂಧ ಕೋರ್ಟ್ ಪ್ರಕರಣ ಇತ್ಯರ್ಥ ಮಾಡಿದ್ದು, ಜಂಟಿ ಸರ್ವೇ ನಡೆಸಿ ಡೆಮಾಲಿಷನ್ ಪ್ರಕ್ರಿಯೆ ನಡೆಸುವಂತೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆಗೆ ಸೂಚನೆ ನೀಡಿತ್ತು.


4.BJP Vs AAP: ಮೋದಿ ನಿಂದಿಸಿದ ಆಪ್​ ಅಧ್ಯಕ್ಷ: ಇದು ಗುಜರಾತಿಗರಿಗೆ ಅವಮಾನ ಎಂದ ಬಿಜೆಪಿ!


ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆಗೂ (Gujarat Assembly Elections) ಮುನ್ನವೇ ವಿವಾದಾತ್ಮಕ ಮಾತುಗಳು ಶುರುವಾಗಿದೆ. ಆಮ್ ಆದ್ಮಿ (Aam Aadmi Party) ಪಕ್ಷದ ರಾಜ್ಯಾಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ನಿಂದಿಸಿರುವ ವಿಡಿಯೋ ಇದೀಗ ಹೊರಬಿದ್ದಿದೆ.


Morning Digest 10th october 2022 have quick look of important news today mrq
ನರೇಂದ್ರ ಮೋದಿ


ಇದರಲ್ಲಿ ಗೋಪಾಲ್ ಇಟಾಲಿಯಾ ಮಾತುಗಾರಿಕೆಯಲ್ಲಿ ಎಲ್ಲ ಮಿತಿಗಳನ್ನು ದಾಟಿದ್ದಾರೆ. ಗೋಪಾಲ್ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಈ ಬಗ್ಗೆ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದೆ.


5.Caste Certificate: ವಿದ್ಯಾರ್ಥಿಗಳಿಗೆ 'ಶಾಪ'ವಾದ ಜಾತಿ ಪ್ರಮಾಣಪತ್ರ: ಸರ್ಟಿಫಿಕೇಟ್ ಇಲ್ಲದೆ ಪರದಾಟ!


ದೇಶಾದ್ಯಂತ, ವಿದ್ಯಾರ್ಥಿಗಳಿಗೆ (Students) ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ (Educational Institution) ಪ್ರವೇಶ ಪಡೆಯುವುದರಿಂದ ಹಿಡಿದು, ವಿದ್ಯಾರ್ಥಿವೇತನ (Scholarship), ಕೆಲಸಕ್ಕೆ ಅರ್ಜಿ ಸೇರಿ ಯಾವುದೇ ಸೌಲಭ್ಯ ಪಡೆಯಲೂ ಕೂಡ ಅವಶ್ಯಕವಾಗಿ ಜಾತಿ ಪ್ರಮಾಣಪತ್ರ (Caste Certificate) ಬೇಕಿದೆ.


Morning Digest 10th october 2022 have quick look of important news today mrq
ಸಾಂಕೇತಿಕ ಚಿತ್ರ


ಈ ಪದ್ಧತಿ ನಿಜಕ್ಕೂ ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ಉರುಳಾಗಿ ಬಿಡುತ್ತದೆ. ಹಲವಾರು ವಿದ್ಯಾರ್ಥಿಗಳು ಈ ಒಂದೇ ಒಂದು ಜಾತಿ ಪ್ರಮಾಣಪತ್ರದಿಂದಾಗಿ ಅವಕಾಶಗಳಿಂದ, ಸೌಲಭ್ಯಗಳಿಂದ ವಂಚಿತರಾಗಿರುವ ಹಲವಾರು ನಿದರ್ಶನಗಳಿವೆ. ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕಾಗಿ (Income certificate) ದಿನಗಟ್ಟಲೆ, ತಿಂಗಳುಗಟ್ಟಲೆ ನಾಡಕಛೇರಿ ಬಳಿ ಅಲೆಯುವ ಅದೆಷ್ಟೋ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ.

Published by:Mahmadrafik K
First published: