Morning Digest: ನಿನ್ನೆಯ ಕೆಲ ಪ್ರಮುಖ ವಿಚಾರಗಳು, ಇಂದು ಗಮನಿಸಲೇಬೇಕಾದ ಸುದ್ದಿಗಳು

ನಿನ್ನೆ ಸಂಜೆಯ ಮೇಲೆ ನಡೆದ ಬೆಳವಣಿಗೆಗಳು, ಇಂದು ಗಮನ ಹರಿಸಲೇಬೇಕಾದ ಸುದ್ದಿಗಳು. ಅವುಗಳ ಬಗ್ಗೆ ಚಿಕ್ಕದಾಗಿ ಬರೆದು ನಿಮ್ಮ ಮುಂದಿಡುತ್ತಿದ್ದೇವೆ. ಒಮ್ಮೆ ಗಮನ ಹರಿಸಿ.

Harshith AS | news18
Updated:March 24, 2019, 8:28 AM IST
Morning Digest: ನಿನ್ನೆಯ ಕೆಲ ಪ್ರಮುಖ ವಿಚಾರಗಳು, ಇಂದು ಗಮನಿಸಲೇಬೇಕಾದ ಸುದ್ದಿಗಳು
top news on a newspaper page
Harshith AS | news18
Updated: March 24, 2019, 8:28 AM IST
ಇಂದು ಗಮನಿಸಲೇಬೇಕಾದ ಸುದ್ದಿಗಳು:

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ, ಕಾಂಗ್ರೆಸ್​ ಅಭ್ಯರ್ಥಿ ಫೋಷಣೆ ಸಾಧ್ಯತೆ

ಲೋಕಸಭಾ ಚುನಾವಣೆಗೆ  ಬಿಜೆಪಿ ಮತ್ತು ಕಾಂಗ್ರೆಸ್​​  ಈಗಾಗಲೇ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದೆ. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ-ಕಾಂಗ್ರೆಸ್  ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಫೋಷಿಸಿದೆ.  ಲೋಕಸಭಾ ಚುನಾವಣೆಯ ಬಿಜೆಪಿ ಗೆಲುವು ಸಾಧಿಸಲು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮೋದಿ ಕಣಕ್ಕಿಳಿಯುವ ಊಹಾಪೋಹಗಳು ಹರಿದಾಡುತ್ತಿದೆ. ಇಂದು ಈ ಬಗ್ಗೆ ಅಧಿಕೃತವಾಗಿ ಫೋಷಣೆಯಾಗುವ ಸಾಧ್ಯತೆ ಇದೆ.

ನಿನ್ನೆ ಸಂಜೆಯಮೇಲೆ ಏನೆಲ್ಲ ಆಯ್ತು?:

ಕಡೆಗೂ ಬಿಡುಗಡೆಯಾಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಲೋಕಸಭೆ ಚುನಾವಣೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ ತನ್ನ ಮೊದಲ ಪಟ್ಟಿಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್-ಜೆಡಿಎಸ್ ನಡುವಿನ ಸೀಟು ಹಂಚಿಕೆ ವಿಚಾರ ಅಂತಿಮವಾಗಿತ್ತು. ಎರಡು ಕ್ಷೇತ್ರಗಳಿಗಾಗಿ ಹಗ್ಗ-ಜಗ್ಗಾಟ ನಡೆಸಿದ್ದ ಕಾಂಗ್ರೆಸ್​​​ ಕೊನೆಗೂ ಜೆಡಿಎಸ್​​​ಗೆ 8 ಲೋಕಸಭಾ ಕ್ಷೇತ್ರಗಳನ್ನು ಹಂಚಿಕೊಡಿತ್ತು. ಉಭಯ ಪಕ್ಷಗಳ ನಡುವೇ ಮೈಸೂರು-ಕೊಡಗು ಮತ್ತು ತುಮಕೂರು ಕ್ಷೇತ್ರಗಳಿಗೆ ಭಾರೀ ಪೈಪೋಟಿ ನಡೆದಿತ್ತು. ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಕಾಂಗ್ರೆಸ್​ ತನ್ನ ಪಾಲಿನ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.ಕಾಂಗ್ರೆಸ್​ನ ನವರಂಧ್ರಗಳಿಗೂ ಫೆವಿಕಾಲ್​ ಅಂಟಿಸಬೇಕು; ಗೋ. ಮಧುಸೂದನ್​

ಡೈರಿಯಲ್ಲಿನ ಹಸ್ತಾಕ್ಷರಕ್ಕೂ ಯಡಿಯೂರಪ್ಪನವರ ಹಸ್ತಾಕ್ಷರಕ್ಕೂ ಹೊಂದಾಣಿಕೆ ಆಗುತ್ತಿಲ್ಲ ಎಂದು ಹೇಳುವ ಮೂಲಕ ಐಟಿ ಮುಖ್ಯಸ್ಥರೇ ಕಾಂಗ್ರೆಸ್ಸಿಗರ ಬಾಯಿಗೆ ಫೆವಿಕಾಲ್ ಹಾಕಿದ್ದಾರೆ. ಕಾಂಗ್ರೆಸ್ಸಿಗರ ಬಾಯಿಗೆ ಮಾತ್ರವಲ್ಲ, ನವರಂಧ್ರಗಳಿಗೂ ಫೆವಿಕಾಲ್ ಹಾಕಬೇಕಿದೆ ಎಂದು ಬಿಜೆಪಿ ವಕ್ತಾರ ಗೋ. ಮಧುಸೂದನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಿರುದ್ಧ ಸ್ಪರ್ಧಿಸಲು ಪ್ರಬಲ ಅಭ್ಯರ್ಥಿಗಳಿಲ್ಲದೆ ಕಾಂಗ್ರೆಸ್​ ಮೊರೆಹೋದ ಜೆಡಿಎಸ್​

ದೇಶ ಕಂಡ ಚಾಣಾಕ್ಷ ರಾಜಕಾರಣಿಯಾಗಿರುವ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ತಮ್ಮ ಹಾಸಿಗೆಗಿಂತ ಉದ್ದಕ್ಕೆ ಕಾಲು ಚಾಚಲು ಹೋದರಾ? ಕರ್ನಾಟಕದ ಮಟ್ಟಿಗೆ ಇದು ನಿಜದಂತೆ ಕಾಣುತ್ತದೆ. ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಹಾಸಿಗೆಗಿಂತ ಉದ್ದಕ್ಕೆ ಕಾಲು ಚಾಚಲು ಹೋದ ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವೇಳೆ 8 ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೀಗ ಬಿಜೆಪಿ ವಿರುದ್ಧ ಸೆಣಸಾಡಲು ಪ್ರಬಲ ಅಭ್ಯರ್ಥಿಗಳಿಲ್ಲದೆ ಕಾಂಗ್ರೆಸ್​ ಮೊರೆ ಹೋಗುವಂತಾಗಿರುವುದು ವಿಪರ್ಯಾಸ.

ಸಚಿವ ರೇವಣ್ಣ ವಿರುದ್ಧ ಆರೋಪಿಸಿದ್ದ ಹಾಸನ ಕಾಂಗ್ರೆಸ್​ ಮುಖಂಡರು

ಸಚಿವ ಎಚ್.ಡಿ. ರೇವಣ್ಣನವರ ಕ್ಷೇತ್ರದಲ್ಲಿ ತಮಗೆ ಕಿರುಕುಳ  ನೀಡಲಾಗುತ್ತಿದೆ ಎಂದು ಆರೋಪ ಮಾಡಿದ್ದ ಹಾಸನದ ಕಾಂಗ್ರೆಸ್​ ಮುಖಂಡರ ಜೊತೆಗೆ ಇಂದು ರೇವಣ್ಣನವರ ಸಮ್ಮುಖದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.

ಆರನೇ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ಕೇಂದ್ರ ಸಚಿವ ಜಗತ್​ ಪ್ರಕಾಶ್​ ನಡ್ಡಾ ನವೆದಹಲಿಯಲ್ಲಿ ಇಂದು ಬಿಜೆಪಿಯ ಆರನೇ ಸುತ್ತಿನ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಜತೆಗೆ ಸುಮಲತಾಗೆ ಬೆಂಬಲ ನೀಡಲು ಅಧಿಕೃತವಾಗಿ ನಿರ್ಧರಿಸಲಾಗಿದೆ. ಈ ಬಗ್ಗೆಯೂ ಮಾತನಾಡಿದ ಜೆಪಿ ನಡ್ಡಾ, "ಕರ್ನಾಟಕದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಮುಂದೆ ಬಿಜೆಪಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಿಲ್ಲ. ಅವರಿಗೆ ಬಿಜೆಪಿ ಬೆಂಬಲ ನೀಡಲು ನಿರ್ಧರಿಸಿದೆ," ಎಂದರು.

First published:March 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ