• Home
  • »
  • News
  • »
  • state
  • »
  • Stingray Fish: ಕಡಲ ಮಕ್ಕಳಿಗೆ ತೊರಕೆ ಮೀನುಗಳ ಸುಗ್ಗಿ; ಒಂದೊಂದು 50 ಕೆಜಿ ತೂಕ

Stingray Fish: ಕಡಲ ಮಕ್ಕಳಿಗೆ ತೊರಕೆ ಮೀನುಗಳ ಸುಗ್ಗಿ; ಒಂದೊಂದು 50 ಕೆಜಿ ತೂಕ

ತೊರಕೆ ಮೀನು

ತೊರಕೆ ಮೀನು

ತೊರಕೆ ಮೀನು ಮಾರುಕಟ್ಟೆಯಲ್ಲಿ (Stingray Fish Price) ಕೆಜಿಗೆ 250 ರಿಂದ 300 ರಷ್ಟು ಮಾರಾಟ ಆಗುತ್ತವೆ. ಮಾರುಕಟ್ಟೆಯಲ್ಲಿಯೂ ಈ ಮೀನುಗಳಿಗೆ ಉತ್ತಮ ಬೇಡಿಕೆ ಹೊಂದಿವೆ.

  • Share this:

ಉಡುಪಿ ಕಡಲ ತೀರದಲ್ಲಿ (Udupi Beach) ಮೀನಿನ ಸುಗ್ಗಿ ಶುರುವಾಗಿದೆ. ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿವೆ.  ಕಾಪು ಮಾಳೂರ್ ಕಡಲ ತೀರದಲ್ಲಿ ದೊಡ್ಡ ದೊಡ್ಡ ತೊರಕೆಗಳು (Stingray Fish) ಬಲೆಗೆ ಬಿದ್ದಿವೆ. ಬರೋಬ್ಬರಿ 50 ಕೆಜೆ ಯಷ್ಟು ಗಾತ್ರದ ನೂರಾರು ತೊರಕೆ ಮೀನುಗಳನ್ನು ನೋಡಲು ಸೇರಿದ್ದಾರೆ. ಒಂದೊಂದು ತೊರಕೆ ಮೀನುಗಳು ಸುಮಾರು 50 ಕೆಜಿಯಷ್ಟು ತೂಗುತ್ತಿವೆ. ದೊಡ್ಡ ದೊಡ್ಡ ಕಟ್ಟಿಗೆಗಳಿಗೆ ತೊರಕೆ ಮೀನುಗಳನ್ನು ಕಟ್ಟಿ ಕಡಲ ತೀರದಿಂದ ಶಿಫ್ಟ್ ಮಾಡಲಾಗುತ್ತಿದೆ. ತೊರಕೆ ಮೀನು ಮಾರುಕಟ್ಟೆಯಲ್ಲಿ (Stingray Fish Price) ಕೆಜಿಗೆ 250 ರಿಂದ 300 ರಷ್ಟು ಮಾರಾಟ ಆಗುತ್ತವೆ. ಮಾರುಕಟ್ಟೆಯಲ್ಲಿಯೂ ಈ ಮೀನುಗಳಿಗೆ ಉತ್ತಮ ಬೇಡಿಕೆ ಹೊಂದಿವೆ. ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದ ಕಡಲಿನಲ್ಲಿ ಹೇರಳವಾಗಿ ವಿವಿಧ ಜಾತಿಯ ಮೀನುಗಳ ಲಭ್ಯವಾಗುತ್ತಿದ್ದು, ಕಡಲ ಮಕ್ಕಳು ಸಂತಸದಲ್ಲಿದ್ದಾರೆ.


ನೂರಾರು ತೊರಕೆ ಮೀನುಗಳು ಬಲೆಗೆ ಬಿದ್ದಿರುವ ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ವಿಡಿಯೋ ಮಾಡಿಕೊಂಡು ಸಂಭ್ರಮಿಸಿದರು.


ದಡಕ್ಕೆ ಬಂದು ಬಿದ್ದ ಬೂತಾಯಿ ಮೀನಿನ ರಾಶಿ


ಸೆಪ್ಟೆಂಬರ್ 20ರಂದು ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಬಡನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚ್‌ನಲ್ಲಿ ಕಡಲ ತೀರಕ್ಕೆ ಸಮುದ್ರದ ಪಶ್ಚಿಮದ ಕಡೆಯಿಂದ ಪೂರ್ವದ ಕಡೆಗೆ ಸಾಗಿ ಅಲೆಗಳೊಂದಿಗೆ ತೀರಕ್ಕೆ ರಾಶಿ ರಾಶಿ ಮೀನುಗಳು ಅಪ್ಪಳಿಸಿ  ಬಂದಿದ್ದವು. ಬೀಚ್‌ನ ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ ರಾಶಿ ರಾಶಿ ಬೂತಾಯಿ ಮೀನುಗಳು ಬಿದ್ದಿದ್ದವು.


ಮತ್ಸ್ಯಕ್ಷಾಮದ ಸಂದರ್ಭದಲ್ಲಿ ರಾಶಿ ರಾಶಿ ಮೀನು


ಪ್ರಾಕೃತಿಕ ವಿಕೋಪ, ಭಾರೀ ಮಳೆ, ಬಿರುಗಾಳಿ ಅಬ್ಬರದ ಜೊತೆಗೆ ಕರಾವಳಿ ಭಾಗದಲ್ಲಿ ಈ ಸಮಯದಲ್ಲಿ ಮತ್ಸ್ಯಕ್ಷಾಮ ಸಾಮಾನ್ಯವಾಗಿ ಇರುತ್ತದೆ. ಇಂತ ಹೊತ್ತಲ್ಲೇ ಬೀಚ್‌ನ ಮೇಲೆ ರಾಶಿ ರಾಶಿ ಮೀನುಗಳು ಬಂದು ಬಿದ್ದಿದ್ದು ಸ್ಥಳೀಯರ ಆಶ್ಚರ್ಯಕ್ಕೆ ಕಾರಣವಾಗಿತ್ತು.


ಮೀನುಗಳ ರಾಶಿ ಮನೆಗೆ ಹೊತ್ತೊಯ್ದ ಜನರು


ಮನೆಯಿಂದ ಬುಟ್ಟಿ, ಚೀಲ, ಮನೆಯಲ್ಲಿದ್ದ ಪಾತ್ರೆ, ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಜನರು ನಾ ಮುಂದು, ತಾ ಮುಂದು ಅಂತ ಬೀಚ್‌ನಲ್ಲಿ ಬಿದ್ದಿದ್ದ ಮೀನುಗಳನ್ನು ತುಂಬಿ ಕೊಳ್ಳುತ್ತಿದ್ದರು. ಇನ್ನು ಕೆಲವರು ಏನದು ನೋಡುವಾ ಅಂತ ಬಂದವರು ಕೈಯಲ್ಲಿ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಳ್ಳುತ್ತಿದ್ದರು. ಕೊನೆಗೆ ರಾಶಿ ರಾಶಿ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋದರು.


ಇದನ್ನೂ ಓದಿ:  Davanagere: ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ ಧರ್ಮದೇಟು


500ರಿಂದ 600 ಕೆಜಿಗೂ ಅಧಿಕ ಮೀನು


ಮಧ್ಯಾಹ್ನದ ಹೊತ್ತಿಗೆ 100-200 ಮೀಟರ್ ಉದ್ದಕ್ಕೂ ತೀರಕ್ಕೆ ಬೂತಾಯಿ ಮೀನು ಅಪ್ಪಳಿಸಿದ್ದವು. ಸುಮಾರು  500ರಿಂದ 600 ಕೆ.ಜಿ.ಗೂ ಅಧಿಕ ಬೂತಾಯಿ ಮೀನು ದಡದಲ್ಲಿ ರಾಶಿ ಬಿದ್ದಿದ್ದವು. ಈ ಮೀನುಗಳನ್ನು ಕಡಲ ಸಮೀಪದ ನಿವಾಸಿಗಳು, ಮೀನುಗಾರರು ಹೆಕ್ಕಲು ಮುಗಿ ಬಿದ್ದಿದ್ದು, ಮನೆಗೆ ತೆಗೆದುಕೊಂಡು ಹೋಗಿದ್ದಾರೆ.


ಗಾಢ ಪಿಂಕ್ ಬಣ್ಣದ ಮೀನು ಮಾಲ್ಡೀವ್ಸ್​ನಲ್ಲಿ ಪತ್ತೆ


ಮಾಲ್ಡೀವ್ಸ್ (Maldives) ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣ. ಕಡಲು, ಮರಳು, ಗಾಳಿ, ಸೀಫುಡ್ ಎಂಜಾಯ್ ಮಾಡುತ್ತಾ ಜಾಲಿಯಾಗಿರಬಹುದು ಇಲ್ಲಿ. ಸುಂದರವಾದ ದ್ವೀಪರಾಷ್ಟ್ರದಲ್ಲಿ ಪ್ರವಾಸಿಗರ (Tourists) ಸಂಖ್ಯೆ ಹೆಚ್ಚಿದೆ.


ಕೊರೋನಾ ಸಂದರ್ಭದಲ್ಲಿಯೂ ಬಹಳಷ್ಟು ಸೆಲೆಬ್ರಿಟಿಗಳು ಮಾಲ್ಡೀವ್ಸ್​ಗೆ ಹಾರಿದ್ದರು. ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬೀಚ್ ಡೆಸ್ಟಿನೇಷನ್ ಮಾಲ್ಡೀವ್ಸ್​​ನಲ್ಲಿ ಮಾಲ್ಡೀವ್ಸ್ ಮೆರೈನ್ ರಿಸರ್ಚ್ ಇನ್​ಸ್ಟಿಟ್ಯೂಶನ್ ಕೂಡಾ ಇದೆ.


ಇದನ್ನೂ ಓದಿ: HDK Vs CPY: ಚನ್ನಪಟ್ಟಣದಲ್ಲಿ ಜೆಡಿಎಸ್ vs ಬಿಜೆಪಿ ವಾಕ್ಸಮರ; ಯೋಗೇಶ್ವರ್ ಕಾರ್​ಗೆ ಮೊಟ್ಟೆ


ಈ ಸಂಶೋಧನಾ ಸಂಸ್ಥೆ (Research Center) ಹೊಸ ಸಂಗತಿಯೊಂದನ್ನು ತನ್ನ ಫೇಸ್​ಬುಕ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಪಿಂಕ್ ಬಣ್ಣದ ಮೀನಿನ ಫೋಟೋಗಳು ಈಗ ವೈರಲ್ ಆಗಿದೆ. ಅಲಂಕಾರಿಕಾ ಮೀನಾಗಿ ಬಳಸಲು ಬೆಸ್ಟ್ ಎನಿಸುವ ಸುಂದರವಾದ ಮೀನು ಮಾಲ್ಡೀವ್ಸ್​ನ ಯಾವ ಮೂಲೆಯಲ್ಲಿ ಅಡಗಿತ್ತೋ ಇಷ್ಟು ದಿನ.

Published by:Mahmadrafik K
First published: