ಕಳೆದ ಏಳೆಂಟು ತಿಂಗಳಿನಿಂದ ಶಾಂತವಾಗಿದ್ದ ಧರ್ಮ ದಂಗಲ್ ಮತ್ತೆ ಶುರುವಾಗಿದೆ. ಇಂದು ಬೆಂಗಳೂರಿನ ವಿವಿ ಪುರಂ (VV Puram, Bengaluru) ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ (Subramanya Temple) ನಡೆಯಲಿದೆ. ಜಾತ್ರೆಯಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ಅವಕಾಶ ಕೊಡದಂತೆ ಹಿಂದೂ ಸಂಘಟನೆಗಳು (Hindu Organizations) ಒತ್ತಾಯಿಸಿದ್ದವು. ಹಿಂದೂ ಸಂಘಟನೆಗಳಿಂದ ಆಂತರಿಕ ಸಭೆ ನಡೆದಿದ್ದು, ಅನ್ಯಧರ್ಮೀಯರ ವ್ಯಾಪಾರಕ್ಕೆ (Non Hindu Traders) ಅವಕಾಶ ಕೊಡಬಾರದು ಎಂಬ ನಿರ್ಣಯ ಮಾಡಿದ್ದಾರೆ. ಆದರೆ ಶಾಸಕ ಉದಯ್ ಗರುಡಾಚಾರ್ (MLA Uday Garudachar) ಎಲ್ಲಾ ಧರ್ಮದವರಿಗೂ ಅವಕಾಶ ನೀಡಲಾಗುವುದು ಎಂದು ಹೇಳುವ ಮೂಲಕ ಹಿಂದೂ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದರು. ಜಾತ್ರೆಯಲ್ಲಿ ಗಲಭೆಗಳಿಗೆ ಅವಕಾಶ ಇಲ್ಲ. ಹಾಗೇನಾದ್ರೂ ಗಲಭೆ ಮಾಡಲು ಮುಂದಾದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಅಂತಾ ಎಚ್ಚರಿಕೆ ಕೊಟ್ಟಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ
ಇತ್ತ ಶಾಸಕರ ಎಚ್ಚರಿಕೆ ಬೆನ್ನಲ್ಲೇ ಟ್ವಿಟರ್, ವಾಟ್ಸಾಪ್ನಲ್ಲಿ ಹಿಂದೂ ಸಂಘಟನೆಗಳು ಅನ್ಯ ಧರ್ಮೀಯರ ಅಂಗಡಿಗಳಿಗೆ ಹೋಗದಂತೆ ಅಭಿಯಾನ ಆರಂಭಿಸಿವೆ. ಜಾತ್ರೆಯಲ್ಲಿ ಹಿಂದೂಗಳ ಬಳಿಯೇ ಖರೀದಿಸಿ ಎಂದು ಅಭಿಯಾನ ಮಾಡುತ್ತಿವೆ.
ಇನ್ನು ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಲ್ಲ ಎಂದು ಹೇಳಿದ್ದ ಭಜರಂಗದಳದ ಸಂಚಾಲಕ ತೇಜಸ್ ಗೌಡ ವಶಕ್ಕೆ ಪಡೆಯಲಾಗಿದೆ.
ಅನುಮತಿ ನೀಡಿದ್ದಕ್ಕೆ ಹಿಂದೂ ಸಂಘಟನೆಗಳ ಆಕ್ರೋಶ
ಎಲ್ಲಾ ಧರ್ಮದವರಿಗೆ ವ್ಯಾಪಾರ ಅವಕಾಶ ನೀಡಿದ್ದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಈ ಹಿನ್ನೆಲೆ ಫೀಲ್ಡ್ಗಿಳಿದು ವ್ಯಾಪಾರ ಮಾಡಬೇಡಿ ಎಂದು ಹಿಂದೂ ಕಾರ್ಯಕರ್ತರು ಜಾತ್ರೆಯಲ್ಲಿ ಸುತ್ತಲೂ ಪ್ಲಾನ್ ಮಾಡಿದ್ದರು.
ಈ ಹಿನ್ನೆಲೆ ಜಾತ್ರೆ ಮತ್ತು ದೇವಸ್ಥಾನದ ವ್ಯಾಪ್ತಿಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ರಾತ್ರೋರಾತ್ರಿ ತೇಜಸ್ ಗೌಡ ಸೇರಿದಂತೆ ಕೆಲ ಹಿಂದೂ ಕಾರ್ಯಕರ್ತರು ವಶಕ್ಕೆ ಪಡೆಯಲಾಗಿದೆ.
600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
49 ಪಿಎಸ್ಐ, 14 ಇನ್ಸ್ಪೆಕ್ಟರ್, 16 ಎಸಿಪಿ ಸೇರಿದಂತೆ 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆ.
ಮನೆಯಲ್ಲಿ ಬ್ರಾಹ್ಮಣ, ಹೊರಗೆ ವಿಶ್ವ ಮಾನವ
ವಿವಿ ಪುರಂನಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರು, ದರ್ಶನ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದರು. ನಾಳೆಯ ಜಾತ್ರೆಯಲ್ಲಿ (Fair) ಗಲಭೆಗಳಿಗೆ ಅವಕಾಶ ಇಲ್ಲ. ಹಾಗೇನಾದ್ರೂ ಗಲಭೆ ಮಾಡಲು ಮುಂದಾದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
ಇದನ್ನೂ ಓದಿ: Non Hindu Traders: ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡಿ: ಸರ್ಕಾರಕ್ಕೆ ಮನವಿ ಸಲ್ಲಿಕೆ
ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀನಿ. ಶಾಸಕ ಸ್ಥಾನದಲ್ಲಿ ಕುಳಿತ ಮೇಲೆ ನನಗೆ ಜಾತಿ, ಧರ್ಮದ ಬೇಧಭಾವ ಇಲ್ಲ. ಎಲ್ಲಾ ಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು,
ನಾನು ಮನೆಯಲ್ಲಿ ಬ್ರಾಹ್ಮಣ, ಆಚೆ ಬಂದರೆ ನಾನು ವಿಶ್ವ ಮಾನವ. ದರ್ಗಾ, ಮಸೀದಿಗಳ ಮುಂದೆ ಹಿಂದೂಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರುವ ವಿಷಯ ನನ್ನ ಗಮನಕ್ಕೆ ತಂದಿಲ್ಲ ಎಂದರು.
ಕೆಲ ಹಿಂದೂ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ತರಲೆ ಮಾಡುತ್ತಿದ್ದಾರೆ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Belagavi Politics: ಹಳೇ ದ್ವೇಷ, ಹೊಸ ಲೆಕ್ಕಾಚಾರ; ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಮಿಂಚಿನ ಸಂಚಾರ
ಹಿಂದೂ ಸಂಘಟನೆಗಳ ಮನವಿ ಏನಾಗಿತ್ತು?
ಹಿಂದೂಗಳ ಧಾರ್ಮಿಕ ಭಾವನೆಗೆ ಬೆಲೆ ಕೊಡದೇ ಇರುವುದು, ದೇಶದ ಕಾನೂನಿಗೆ ಬೆಲೆ ಕೊಡದೇ ಇರುವುದು, ಮೂರ್ತಿ ಪೂಜೆಯನ್ನು ನಂಬದೇ ಇರುವುದು, ವ್ಯಾಪಾರದ ಹೆಸರಿನಲ್ಲಿ ಜಿಹಾದ್ ಮಾಡುವುದು, ಹಿಂದೂಗಳ ದೇವರುಗಳನ್ನು ಸಾಮಾಜಿಕ ಜಾಲತಾಣದಲ್ಲಿ ವಿಕೃತಗೊಳಿಸುವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ