Bengaluru Street Dogs: 2020ರಿಂದ ಇಲ್ಲಿಯವರೆಗೆ 52 ಸಾವಿರ ಜನರಿಗೆ ಬೀದಿ ನಾಯಿ ಕಡಿತ

ಬೀದಿ ಬದಿ ನಾಯಿಗಳ ನಿಯಂತ್ರಣ ಮಾಡಲು ABC ಮತ್ತು ARV ಅಭಿಯಾನ ಮಾಡಲು ಸೂಚನೆ ನೀಡಲಾಗಿದೆ. ಆದ್ರೆ ಈ ಅಭಿಯಾನಗಳ ಜೊತೆಗೂಡಲು NGOಗಳು ಮುಂದಾಗ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
2020ರಿಂದ ಇಲ್ಲಿಯವರೆಗೆ ಬಿಬಿಎಂಪಿ (Bruhat Bengaluru Mahanagara Palike- BBMP) ವ್ಯಾಪ್ತಿಯಲ್ಲಿ 52,262 ಜನರು ಬೀದಿ ನಾಯಿಗಳ (Street Dogs) ಕಡಿತಕ್ಕೆ ಒಳಗಾಗಿರುವ ಮಾಹಿತಿ ಪಾಲಿಕೆಯ ಸಮೀಕ್ಷೆಯಲ್ಲಿ (Survey) ಬಹಿರಂಗಗೊಂಡಿದೆ. ಈ ಸಂಬಂಧ ಬೀದಿ ಬದಿ ಶ್ವಾನಗಳ ಜನನ ನಿಯಂತ್ರಣದ ಕಾರ್ಯವನ್ನು ಕ್ಷಿಪ್ರಗತಿಯಲ್ಲಿ ನಡೆಸುವಂತೆ ಪಾಲಿಕೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ (AWBI- Animal Welfare Board of India) ಮನವಿ ಮಾಡಿಕೊಂಡಿದೆ. ಹೆಚ್ಚಿನ ಸಂಖ್ಯೆಯ NGOಗಳ ಜೊತೆ ಸೇರಿ ಶ್ವಾನಗಳ ಸಂತಾನಹರಣ ಚಿಕಿತ್ಸೆ, ರೇಬಿಸ್ ಲಸಿಕೆಯನ್ನು ತ್ವರಿತಗತಿಯಲ್ಲಿ ಪೂರೈಸುವ ಕಾರ್ಯ ನಡೆಸಬೇಕೆಂದು ಪಾಲಿಕೆ ಮನವಿ ಮಾಡಿದೆ. ವಿಳಂಬ ಪಾವತಿ ಹಿನ್ನೆಲೆ ಪಾಲಿಕೆ (BBMP) ಜೊತೆ ಕೆಲಸ ಮಾಡಲು ಬಹುತೇಕ NGO ಮತ್ತು ಕಾರ್ಯಕರ್ತರು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕಾರಣದಿಂದ NGOಗಳು ಮುಂದಾಗುತ್ತಿಲ್ಲ ಎಂದು ವರದಿಯಾಗಿದೆ.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಗುರುತಿಸಲ್ಪಟ್ಟ ಎನ್‌ಜಿಒಗಳು ಪಾಲಿಕೆಯ ಜೊತೆಗೂಡಿ ಅನಿಮಲ್ ಬರ್ತ್ ಕಂಟ್ರೋಲ್ (ABC) ಅಭಿಯಾನ ಮತ್ತು ಆ್ಯಂಟಿ ರೇಬೀಸ್ ಲಸಿಕೆ (ARV) ಕಾರ್ಯಕ್ರಮ (Animal Birth Control campaign and Anti-Rabies Vaccination programme) ಮಾಡಬೇಕಿದೆ ಎಂದು ಬಿಬಿಎಂಪಿ ಜಂಟಿ ನಿರ್ದೇಶ ಚಂದ್ರಯ್ಯ ಐ ಹೇಳುತ್ತಾರೆ.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಪಾಲಿಕೆ ಪತ್ರ

ಬೀದಿ ಬದಿ ನಾಯಿಗಳ ನಿಯಂತ್ರಣ ಮಾಡಲು ABC ಮತ್ತು ARV ಅಭಿಯಾನ ಮಾಡಲು ಸೂಚನೆ ನೀಡಲಾಗಿದೆ. ಆದ್ರೆ ಈ ಅಭಿಯಾನಗಳ ಜೊತೆಗೂಡಲು NGOಗಳು ಮುಂದಾಗ್ತಿಲ್ಲ. ಈ ಅಭಿಯಾನದ ಕುರಿತು ಆಸಕ್ತಿ ಹೊಂದಿರುವ NGOಗಳನ್ನು ಗುರುತಿಸುವಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಪತ್ರ ಬರೆಯಲಾಗಿದೆ ಎಂದು ಚಂದ್ರಯ್ಯ ಐ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  Buffalo: ಕಿತ್ತೋದ ಬಸ್ ನಿಲ್ದಾಣದ ಅದ್ಧೂರಿ ಉದ್ಘಾಟನೆ; ಚೀಫ್ ಗೆಸ್ಟ್ ಆಗಿ ಬಂದಿದ್ದು ಎಂಎಲ್ಎ ಅಲ್ಲ, ಎಮ್ಮೆ!

NGOಗಳ ಆರೋಪ ಏನು?

ಅಭಿಯಾನದಲ್ಲಿ ಭಾಗಿಯಾದ ಕಾರ್ಯಕರ್ತರಿಗೆ ಬಿಬಿಎಂಪಿ ಸರಿಯಾದ ಸಮಯದಲ್ಲಿ ಹಣ ಪಾವತಿಸದೇ ಸತಾಯಿಸುತ್ತದೆ. ಇದರ ಜೊತೆ ಕಾರ್ಯಕರ್ತರಿಗೆ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು NGOಗಳು ಆರೋಪಿಸಿವೆ.

More than 52 thousand bitten by dogs since 2020 in BBMP limits
ಸಾಂದರ್ಭಿಕ ಚಿತ್ರ


ಎಬಿಸಿ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು (ಎಸ್‌ಒಪಿ) ಅನುಸರಿಸುವ ಬಗ್ಗೆ ಪಾಲಿಕೆಯು ಕನಿಷ್ಠ ತಲೆಕೆಡಿಸಿಕೊಳ್ಳದ ಕಾರಣ ಎನ್‌ಜಿಒಗಳು ನಿರಾಸಕ್ತಿ ತೋರುತ್ತಿವೆ.

BBMP ಜೊತೆ ಕೆಲಸ ಮಾಡಲು ನಿರಾಕರಣೆ

CUPA ದಕ್ಷಿಣ ವಲಯದಲ್ಲಿ ABC ಮತ್ತು ARV ಕಾರ್ಯಕ್ರಮಗಳನ್ನು ನಡೆಸುತ್ತಿದೆ. AASARA ಮತ್ತು CARE ನಂತಹ ಕೆಲ ಎನ್‌ಜಿಒಗಳು ಬಿಬಿಎಂಪಿ ಜತೆ ಕೆಲಸ ಮಾಡಲು ನಿರಾಕರಿಸುತ್ತಿವೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ನವೀನಾ ಕಾಮತ್ ಹೇಳುತ್ತಾರೆ.

ABC ಕೇಂದ್ರಗಳಲ್ಲಿ ನಡೆಯುತ್ತಿಲ್ಲ ಪರಿಣಾಮಕಾರಿ ಕೆಲಸ

ಈ ಕುರಿತು ಮಾತನಾಡಿರುವ ಮತ್ತೋರ್ವ ಕಾರ್ಯಕರ್ತ ಸಹ ಕಾಮತ್ ಅವರ ರೀತಿಯಲ್ಲಿಯೇ ಮಾತನಾಡಿದ್ದಾರೆ. ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಹಲವಾರು ನಾಯಿಗಳನ್ನು ಒಂದೇ ಕಡೆ ಇರಿಸಲಾಗುತ್ತದೆ. ಅವಧಿಗೂ ಮುನ್ನವೇ ಅವುಗಳನ್ನು ಹೊರಗೆ ಬಿಡಲಾಗುತ್ತದೆ. ಯಲಹಂಕ ಹೊರತುಪಡಿಸಿ ಬೇರೆ ಯಾವುದೇ ABC ಕೇಂದ್ರಗಳಲ್ಲಿ ಸಂತಾನಹರಣ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂದು ಹೇಳುತ್ತಾರೆ.

More than 52 thousand bitten by dogs since 2020 in BBMP limits
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Tushar Girinath: ಬೊಮ್ಮನಹಳ್ಳಿ ವಲಯದಲ್ಲಿ ಸಮಸ್ಯೆಗಳೇನು? ಜನರ ಪ್ರಶ್ನೆ, ಮುಖ್ಯ ಆಯುಕ್ತರ ಉತ್ತರ

ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ ಶಾಕ್ ನೀಡಿದ ಬಿಬಿಎಂಪಿ

ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶಾಕ್ ನೀಡಿದೆ. ಇನ್ನುಂದೆ ವಾಹನ ದಟ್ಟಣೆ ಇರೋ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ನಡೆಸುವ ವ್ಯಾಪಾರಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಮುಂದಾಗಿದೆ. ಪಾಲಿಕೆಯ ಈ ನಿರ್ಧಾರಕ್ಕೆ ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
Published by:Mahmadrafik K
First published: