Midday Meals: ಮಂಡ್ಯದಲ್ಲಿ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ತಿಂದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ವಾಂತಿ, ಭೇದಿಯಿಂದ ಮಕ್ಕಳು ನರಳುತ್ತಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಡ್ಯ (ಸೆ.16) : ಬಿಸಿಯೂಟ (Bisiyuta) ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರೋ ಘಟನೆ ಮಂಡ್ಯ (Mandya) ಜಿಲ್ಲೆ ಮದ್ದೂರು ತಾಲೂಕಿನ ಹಂಬರಹಳ್ಳಿಯ ಸರ್ಕಾರಿ ಶಾಲೆಯಲ್ಲಿ (Government School) ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ತಿಂದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ವಾಂತಿ, ಭೇದಿಯಿಂದ ಮಕ್ಕಳು ನರಳುತ್ತಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವೈದ್ಯರು ಅಸ್ವಸ್ಥಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡ್ತಿದ್ದು, ಮೇಲ್ನೋಟಕ್ಕೆ ಫುಡ್ ಪಾಯಿಸನ್ (Food Poison) ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳುತ್ತಿರುವ ಘಟನೆ ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಬಿಸಿಯೂಟ  ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ರು

ಚಾಮರಾಜನಗರ: ಮಧ್ಯಾಹ್ನ ಬಿಸಿಯೂಟ  ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿರೋ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು. ಬಿಸಿಯೂಟ ತಿಂದ ಬಳಿಕ ಸುಮಾರು 100 ರಿಂದ 120 ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಪೋಷಕರು ಹಾಗೂ ಶಿಕ್ಷಕರು (Teacher) ಸೇರಿ ವಿದ್ಯಾರ್ಥಿಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು.

ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ

ಇದು ಚಾಮರಾಜನಗರ ತಾಲೂಕಿನ ಕುಮಚಳ್ಳಿ ಗ್ರಾಮಸ್ಥರ ಸ್ಥಿತಿ ಹೇಳತೀರದಾಗಿದೆ. ಈ ಗ್ರಾಮಕ್ಕೆ ಈವರೆಗೂ ಕೆಎಸ್ಆರ್ಟಿಸಿ ಬಸ್ ಸೌಲಭ್ಯ ಸಿಕ್ಕಿಲ್ಲ. ರಸ್ತೆಯ ಸ್ಥಿತಿಯಂತೂ ಅಧೋಗತಿಯಾಗಿದೆ. ಪ್ರತಿ ದಿನ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಕಷ್ಟಕೇಳೋರಿಲ್ಲ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ಒಂದು ಖಾಸಗಿ ಬಸ್ ಅವಲಂಬಿಸಬೇಕಿದೆ. ಸರ್ಕಾರಿ ಬಸ್ ಇಲ್ಲದೇ ಪ್ರತಿದಿನ ಹಣ ಕೊಟ್ಟು ವಿದ್ಯಾರ್ಥಿಗಳು ಪ್ರಯಾಣಿಬೇಕಿದೆ.

ಇದನ್ನೂ ಓದಿ; Murder: ಗಂಡ ಬಿಟ್ಟವಳಿಗೆ ಅವನ ಮೇಲೆ ಪ್ರೇಮ, ಇವನ ಮೇಲೆ ಮೋಹ! ಅಕ್ರಮ ಸಂಬಂಧಕ್ಕೆ ನಡೆಯಿತು ಮಹಿಳೆ ಕೊಲೆ

ಹದಗೆಟ್ಟ ರಸ್ತೆಯಿಂದ ಬೇಸತ್ತ ಗ್ರಾಮಸ್ಥರು

ರಸ್ತೆ ಸಂಪೂರ್ಣ ಹಾಳಾಗಿದ್ದು, ದ್ವಿಚಕ್ರ ವಾಹನ ಹಾಗೂ ಸೈಕಲ್‌ನಲ್ಲೂ ಹೋಗಲಾರದಷ್ಟು ರಸ್ತೆ ಹದಗೆಟ್ಟಿದೆ. ಕುಮಚಳ್ಳಿಯಿಂದ ತಮ್ಮಡಹಳ್ಳಿವರೆಗೆ  5 ಕಿಲೋ ಮೀಟರ್ ರಸ್ತೆ ಹಳ್ಳಕೊಳ್ಳಗಳೇ ತುಂಬಿ ಹೋಗಿದೆ. ಇಲ್ಲಿ ರಸ್ತೆ ಯಾವುದು ಗುಂಡಿ ಯಾವುದು? ದುರ್ಬೀನು ಹಾಕಿ ಹುಡುಕಬೇಕು. ಹದಗೆಟ್ಟ ರಸ್ತೆಯಿಂದ ಬೇಸತ್ತ ಗ್ರಾಮಸ್ಥರು ಒಮ್ಮೆ ಮಾತ್ರ ಭೇಟಿ ನೀಡಿ ಮತ್ತೆ ತಲೆ ಹಾಕದ ಗುಂಡ್ಲುಪೇಟೆ ಶಾಸಕ ನಿರಂಜನ್‌ಕುಮಾರ್, ಹಲವು ಬಾರಿ ಮನವಿ ಮಾಡಿದರು ಶಾಸಕರು ನಿರ್ಲಕ್ಷ್ಯ ತೋರಿದ್ದಾರೆ.

ಬೈಕ್ ಸವಾರನಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರದಲ್ಲಿ ಟಿಪ್ಪರ್ ಹಾಗೂ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಸ್ಥಳದಲ್ಲಿ ಸಾವನ್ನಪ್ಪಿರೋ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಬೆಂಗಳೂರು ಮೂಲದ ಖಾಸಗಿ ಕಾಲೇಜು ವಿದ್ಯಾರ್ಥಿನಿ ಚೈತ್ರಾ (19) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಸ್ನೇಹಿತನ ಜೊತೆ ವಿದ್ಯಾರ್ಥಿನಿ ಬೈಕ್​ ನಲ್ಲಿ ಹೋಗ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ವಿದ್ಯಾರ್ಥಿನಿಯ ಸ್ನೇಹಿತ ಬೈಕ್ ಸವಾರನಿಗೆ ಗಂಭೀರವಾಗಿ ಗಾಯಗೊಂಡಿದೆ. ಇಬ್ಬರು ಟ್ರಿಪ್​ಗೆ ಹೊರಟಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ.

ಗದಗದಲ್ಲಿ 5 ವರ್ಷದ ಬಾಲಕನೋರ್ವ ತನ್ನ ಹುಟ್ಟುಹಬ್ಬದ ನಿಮಿತ್ತ ತಾಲೂಕಿನ ಬಿಂಕದಕಟ್ಟಿ ಮೃಗಾಲಯದ ಭೀಮಾ ಎಂಬ ಚಿರತೆಯನ್ನು ದತ್ತು ಪಡೆದಿದ್ದಾನೆ. ಬಿಂಕದಕಟ್ಟಿ ಮೃಗಾಲಯದ ಅಧಿಕಾರಿಯಾಗಿರುವ ಆರ್​​ಎಫ್​ಓ ಮಹೇಶ್ ಮರೆಣ್ಣವರ್ ಅವರ ಪುತ್ರ ಶೌರ್ಯ ಚಿರತೆ ದತ್ತು ಪಡೆದವರು.

ಇದನ್ನೂ ಓದಿ: Residential School: ವಿದ್ಯಾರ್ಥಿನಿಯರು ಮಲಗಿದ್ದ ವೇಳೆ ಇಣುಕಿ ನೋಡ್ತಿದ್ದ ಶಿಕ್ಷಕ; ಕಿರುಕುಳ ಕೊಟ್ಟ ಟೀಚರ್ಸ್​ಗೆ ಬಿತ್ತು ಗೂಸಾ!

ದತ್ತು ಪಡೆಯಲು ನಿಗದಿ ಪಡೆಸಿದ 50 ಸಾವಿರ ರೂಪಾಯಿ ಪಾವತಿಸಿ ಒಂದು ವರ್ಷಕ್ಕೆ ಚಿರತೆಯನ್ನು ದತ್ತು ಸ್ವೀಕಾರ ಮಾಡಲಾಗಿದೆ. ಶೌರ್ಯನಿಗೆ ಚಿರತೆ ಅಂದರೆ ಬಹಳ ಇಷ್ಟ, ಹೀಗಾಗಿ ಹುಟ್ಟುಹಬ್ಬದ ಉಡುಗೊರೆ ರೂಪದಲ್ಲಿ ಚಿರತೆ ದತ್ತು ಪಡೆಯಲಾಗಿದೆ ಎಂದು ಮಹೇಶ್ ಮರೆಣ್ಣವರ್ ತಿಳಿಸಿದ್ದಾರೆ.
Published by:ಪಾವನ ಎಚ್ ಎಸ್
First published: