Male Mahadeshwra: ಮಾದಪ್ಪನಿಗೆ ಉಘೇ ಎಂದ ಭಕ್ತರು, 35 ದಿನಗಳಲ್ಲಿ 2 ಕೋಟಿಕೂ ಅಧಿಕ ಕಾಣಿಕೆ ಸಂಗ್ರಹ!

ಏಳು ಮಲೆಗಳ ಒಡೆಯ ಮಾದಪ್ಪನಿಗೆ "ಉಘೇ" ಎಂದರೆ ಬದುಕಿನಲ್ಲಿ ಬೆಟ್ಟದಂತೆ ಬರುವ ಕಷ್ಟಗಳೆಲ್ಲ ಮಂಜಿನಂತೆ ಕರಗಿ ಹೋಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ಇಲ್ಲಿಗೆ ಬರುವ ಭಕ್ತರು ವಿವಿಧ ರೀತಿಯ ಹರಕೆ ಹೊತ್ತು, ಕಾಣಿಕೆ ಸಲ್ಲಿಸುತ್ತಾರೆ. ಹೀಗೆ ಭಕ್ತರು ಹಾಕುವ ಕಾಣಿಕೆಯಿಂದ ಮಾದಪ್ಪ ಮತ್ತಷ್ಟು ಶ್ರೀಮಂತನಾಗಿದ್ದಾನೆ!

ಮಲೆ ಮಹದೇಶ್ವರ ದೇಗುಲ

ಮಲೆ ಮಹದೇಶ್ವರ ದೇಗುಲ

  • Share this:
ಚಾಮರಾಜನಗರ: ನಾಡಿನ ಪ್ರಸಿದ್ಧ ದೇಗುಲಗಳಲ್ಲಿ (Famous Temple) ಚಾಮರಾಜನಗರದ (Chamarajnagar) ಮಲೆ ಮಹದೇಶ್ವರ ದೇಗುಲವೂ (Male Mahadeshwara Temple) ಒಂದು. ರಾಜ್ಯದ ಶ್ರೀಮಂತ ದೇವಾಲಯವೂ (richest temple in the state) ಕೂಡ ಆಗಿರುವ ಮಲೆ ಮಹದೇಶ್ವರದಲ್ಲಿ ಭಕ್ತರ (Devotees) ಸಂಖ್ಯೆ ಕಡಿಮೆ ಆಗಿದ್ದೇ ಇಲ್ಲ. ‘ಏಳು ಮಲೆಗಳ ಒಡೆಯ’ ಮಾದಪ್ಪನಿಗೆ (Madappa) “ಉಘೇ” ಎಂದರೆ ಬದುಕಿನಲ್ಲಿ ಬೆಟ್ಟದಂತೆ ಬರುವ ಕಷ್ಟಗಳೆಲ್ಲ ಮಂಜಿನಂತೆ ಕರಗಿ ಹೋಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ ಇಲ್ಲಿಗೆ ಬರುವ ಭಕ್ತರು ವಿವಿಧ ರೀತಿಯ ಹರಕೆ ಹೊರುತ್ತಾರೆ. ಅದು ಇಡೇರಿದ ನಂತರ ಸ್ವಾಮಿಗೆ ಕಾಣಿಕೆ, ಚಿನ್ನ ಬೆಳ್ಳಿಯ (Gold, Silver) ರೂಪದಲ್ಲಿ ಹರಕೆ ತೀರಿಸುತ್ತಾರೆ. ಹೀಗೆ ಭಕ್ತರು ಹಾಕುವ ಕಾಣಿಕೆಯಿಂದ ಮಾದಪ್ಪ ಮತ್ತಷ್ಟು ಶ್ರೀಮಂತನಾಗಿದ್ದಾನೆ. ಈ ಬಾರಿ ಕೇವಲ 35 ದಿನದಲ್ಲಿ 2 ಕೋಟಿ ರೂಪಾಯಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದ್ಯಂತೆ.

 ಮಾದಪ್ಪನ ಹುಂಡಿಯಲ್ಲಿ 35 ದಿನದಲ್ಲಿ 2 ಕೋಟಿ ಸಂಗ್ರಹ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಿನ್ನೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಕೇವಲ 35 ದಿನಗಳಲ್ಲಿ 2 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಅಂದರೆ 203,25,354 ರೂಪಾಯಿ ಸಂಗ್ರಹವಾಗಿದೆ.

110 ಗ್ರಾಂ ಚಿನ್ನ, 3560 ಗ್ರಾಂ ಬೆಳ್ಳಿ ಕೊಟ್ಟಿರುವ ಭಕ್ತರು

ಈ ಬಾರಿ ಅಮವಾಸ್ಯೆ ಹಾಗೂ ಸರ್ಕಾರಿ ರಜಾದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಕಳೆದ 35 ದಿನಗಳ ಅವಧಿಯಲ್ಲಿ 2ಕೋಟಿ 3 ಲಕ್ಷದ 25,354 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಇನ್ನು ಭಕ್ತರು ಹರಕೆ ರೂಪದಲ್ಲಿ 110 ಗ್ರಾಂ ಚಿನ್ನ ಹಾಗೂ 3,560 ಗ್ರಾಂ ಬೆಳ್ಳಿಯನ್ನು ಸ್ವಾಮಿ ಸನ್ನಿಧಾನಕ್ಕೆ ನೀಡಿದ್ದಾರೆ.

ಇದನ್ನೂ ಓದಿ: Tirupati: ತಿರುಪತಿ ಗಿರಿವಾಸ 'ಸಿರಿ' ವೆಂಕಟೇಶ, ಒಂದೇ ತಿಂಗಳಲ್ಲಿ ತಿಮ್ಮಪ್ಪನ ಹುಂಡಿಗೆ ಬಿತ್ತು 139 ಕೋಟಿ ರೂಪಾಯಿ!

ಪೊಲೀಸ್ ಬಂದೋಬಸ್ತ್‌ನಲ್ಲಿ ಹುಂಡಿ ಎಣಿಕೆ ಕಾರ್ಯ

ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ನಿನ್ನೆ ಬೆಳಿಗ್ಗೆ 11 ಗಂಟೆಗೆ ಸಾಲೂರು ಬೃಹನ್ಮಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನಸ್ವಾಮಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತಿನಲ್ಲಿ ಎಣಿಕೆ ಕಾರ್ಯ ಪ್ರಾರಂಭ ಮಾಡಲಾಯಿತು. ಏಣಿಕೆ ಕಾರ್ಯವು ರಾತ್ರಿ 9  ಗಂಟೆ ವರೆಗೆ ನಡೆಯಿತು.

ಜೂನ್ 23ರಂದು ಉಚಿತ ಸಾಮೂಹಿಕ ವಿವಾಹ

ಮಲೆ ಮಹದೇಶ್ವರ ಬೆಟ್ಟದಲ್ಲಿ ಶ್ರೀಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಜೂನ್ ೨೩ರಂದು ಏರ್ಪಡಿಸಲಾಗಿದ್ದು, ಈ ಉಚಿತ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲು ಬಯಸುವವರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮದುವೆ ಆಗುವವರಿಗೆ ನಿಯಮಗಳು

ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ, ರವಿಕೆ ಹಾಗೂ ವರನಿಗೆ ಪಂಚೆ, ಶರ್ಟ್, ಟವಲ್‌ನ್ನು ಪ್ರಾಧಿಕಾರದ ವತಿಯಿಂದ ಉಚಿತವಾಗಿ ನೀಡಲಾಗುವುದು. ಮದುವೆ ಆಗಬಯಸುವ ವರ ಹಾಗೂ ವಧುವಿಗೆ ಸರ್ಕಾರ ನಿಗದಿಪಡಿಸಿರುವ ವಯ್ಸಸು ಆಗಿರಬೇಕು. ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ದಾಖಲಾತಿ ಪತ್ರ ಅಥವಾ ಮೂಳೆ ತಜ್ಞರಿಂದ ಪಡೆದ ದೃಢೀಕರಣ ಪತ್ರ ಲಗತ್ತಿಸಬೇಕು. ವರ ಮತ್ತು ವಧುವಿನ 3 ಜೋಡಿ ಭಾವಚಿತ್ರ ಲಗತ್ತಿಸಬೇಕು. ತಹಶೀಲ್ದಾರ್‌ರವರಿಂದ ಪಡೆದ ಜಾತಿ ದೃಢೀಕರಣ ಪತ್ರ ಲಗತ್ತಿಸಬೇಕು.

ಇದನ್ನೂ ಓದಿ: Spiritual Tourism: ಕೋವಿಡ್ ಬಂದ್ಮೇಲೆ ಭಾರತದಲ್ಲಿ ದೇವರ ದರ್ಶನ ಮಾಡುವವರ ಸಂಖ್ಯೆ ಹೆಚ್ಚಳ! ಕಾರಣ ಏನು ಗೊತ್ತಾ?

ಬಾಲ್ಯ ವಿವಾಹ, ಮರು ಮದುವೆಗಿಲ್ಲ ಅವಕಾಶ

ಬಾಲ್ಯವಿವಾಹ ಹಾಗೂ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ. ಈ ಹಿಂದೆ ಮದುವೆ ಆಗಿರದ ಬಗ್ಗೆ ಅವರು ವಾಸಿಸುವ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿ ಅಥವಾ ನಗರ ಸ್ಥಳೀಯ ಸಂಸ್ಥೆಯಿಂದ ರುಜುವಾತ ಪತ್ರ ಪಡೆದಿರಬೇಕು. ಆಯಾ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಮದುವೆ ನೋಂದಣಿ ಪ್ರಮಾಣ ಪತ್ರ ಪಡೆದು ಪ್ರಾಧಿಕಾರದ ಕಚೇರಿಗೆ ಒಪ್ಪಿಸಬೇಕು. ಆಧಾರ್ ಕಾರ್ಡ್ ಮತ್ತು ವಾಸಸ್ಥಳ ದೃಢೀಕರಣ ಪತ್ರ ಲಗತ್ತಿಸಬೇಕು.
Published by:Annappa Achari
First published: