• Home
  • »
  • News
  • »
  • state
  • »
  • Krishna River: ಜಲಾಶಯದಿಂದ 1 ಲಕ್ಷ ಕ್ಯೂಸೆಕ್​ಗೂ ಆಧಿಕ ನೀರು ಬಿಡುಗಡೆ; ನದಿ ತೀರದಲ್ಲಿಯೇ ಜನರ ಹುಚ್ಚಾಟ

Krishna River: ಜಲಾಶಯದಿಂದ 1 ಲಕ್ಷ ಕ್ಯೂಸೆಕ್​ಗೂ ಆಧಿಕ ನೀರು ಬಿಡುಗಡೆ; ನದಿ ತೀರದಲ್ಲಿಯೇ ಜನರ ಹುಚ್ಚಾಟ

ಕೃಷ್ಣ ನದಿ ತೀರ

ಕೃಷ್ಣ ನದಿ ತೀರ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಹೊರಭಾಗದ ಬ್ಯಾರೇಜ್ ನಿಂದ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ನದಿ ತೀರದಲ್ಲಿರುವ ಕಂಗಳೇಶ್ವರ ಹಾಗೂ ವಿರಾಂಜನೇಯ ದೇಗುಲಗಳು ಮುಳುಗಡೆಯಾಗಿವೆ.

  • Share this:

ಯಾದಗಿರಿ: ಒಂದು ಕಡೆ ಕೃಷ್ಣ ಹಾಗೂ ಭೀಮಾ ನದಿಯ (Krishna And Bhima River) ಅಬ್ಬರಕ್ಕೆ ನದಿ ತೀರದ ಜನರು ಆತಂಕದಲ್ಲಿದ್ದರೆ ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ವರುಣನ (Rainfall) ಅಬ್ಬರಕ್ಕೆ ಜನರು ಸಂಕಷ್ಟ ಎದುರಿಸುವಂತಾಗಿದೆ. ಸ್ವಲ್ಪ ದಿನಗಳ ಕಾಲ ಕೃಷ್ಣೆಯು ಶಾಂತವಾಗಿದ್ದಳು. ಕೃಷ್ಣಾ ನದಿಯಲ್ಲಿ ನೀರಿನ ಹರಿವು ಇಳಿಮುಖವಾದ ಹಿನ್ನೆಲೆ ಕೃಷ್ಣ ನದಿ ತೀರದ ಜನರು ನೆಮ್ಮದಿಯಾಗಿದ್ದರು. ಆದರೆ ಕಳೆದ ಮೂರು ದಿನಗಳಿಂದ ಕೃಷ್ಣಾ ನದಿಯು ಉಕ್ಕಿ ಹರಿಯುತ್ತಿದೆ. ಅದೇ ರೀತಿ ಭೀಮಾ ನದಿಯು ಉಕ್ಕಿ ಹರಿಯುತ್ತಿದೆ. ಕೃಷ್ಣ ಹಾಗೂ ಭೀಮಾ ನದಿಯ ಅಬ್ಬರಕ್ಕೆ (Flood) ಜನರು ನಲುಗಿ ಹೋಗಿದ್ದಾರೆ.


ಪ್ರವಾಹ ಭೀತಿ ಪೊಲೀಸರ ಕಟ್ಟೆಚ್ಚೆರ


ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ 1,42,648 ಕ್ಯೂಸೆಕ್ ನೀರು ಬಿಡಲಾಗಿದೆ. ಜಲಾಶಯಕ್ಕೆ1.35 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದೆ. ಇನ್ನೂ ಜಲಾಶಯದಿಂದ ಕೃಷ್ಣ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.


ಇಂದು ಜಲಾಶಯದಿಂದ ಕೃಷ್ಣಾ ನದಿಗೆ 1,26,836 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯಕ್ಕೆ 1.30 ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದೆ. ನದಿ ತೀರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.


More than 1 Lakh Cusecs Of Water To Be Released from basava sagar dam nmpg mrq
ಬಸವ ಸಾಗರ ಜಲಾಶಯ


ಇದನ್ನೂಓದಿ: Vani Vilasa Sagar: 6 ದಶಕಗಳ ಬಳಿಕ ದಾಖಲೆ ಮಟ್ಟಕ್ಕೆ ಭರ್ತಿಯಾದ ವಾಣಿ ವಿಲಾಸ ಸಾಗರ


ಡಂಗೂರು ಮೂಲಕ ಎಚ್ಚರಿಕೆ


ಜಿಲ್ಲೆಯ ಸುರಪುರ, ಹುಣಸಗಿ, ವಡಗೇರಾ ಹಾಗೂ ಶಹಾಪುರ ನಾಲ್ಕು ತಾಲೂಕುಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣಾ ನದಿ ತೀರದ ಗ್ರಾಮಗಳಾದ ತಿಂಥಣಿ, ಶೆಳ್ಳಗಿ, ದೇವಾಪುರ, ಕೊಳ್ಳೂರು ಎಂ, ಯಕ್ಷಿಂತಿ, ಗೌಡೂರು ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳು ಕೃಷ್ಣ ನದಿ ತೀರದಲ್ಲಿವೆ.


ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್


ನದಿ ತೀರಕ್ಕೆ ತೆರಳಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಆದರೆ ಜನರು ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದು ನದಿಗೆ ಇಳಿದು ಸ್ನಾನ ಮಾಡುವ ಜೊತೆ, ವಾಹನ ತೊಳೆಯುವ ಹುಚ್ಚು ಸಾಹಸ ಕೆಲಸ ಮಾಡುತ್ತಿದ್ದಾರೆ.


ತಿಂಥಣಿ ಗ್ರಾಮದ ಕೃಷ್ಣಾ ನದಿಯೊಳಗೆ ಸ್ನಾನ ಮಾಡುವುದು ಹಾಗೂ ವಾಹನ ತೊಳೆಯುವ ಕೆಲಸಕ್ಕೆ ಜನ ಮುಂದಾಗಿದ್ದಾರೆ. ಅದೇ ರೀತಿ ನದಿ ತೀರದಲ್ಲಿ ಬಟ್ಟೆ ತೊಳೆಯಲು ಮಹಿಳೆಯರು ಮುಂದಾಗಿದ್ದಾರೆ.


ಸ್ಥಳಕ್ಕೆ ಪೊಲೀಸರು ಆಗಮಿಸಿ ನದಿ ತೀರಕ್ಕೆ ತೆರಳಬಾರದೆಂದು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಲಾಗಿದೆ.


ಜಿಲ್ಲೆಯ ನಾರಾಯಣಪುರ, ಕೊಡೇಕಲ್, ಹಯ್ಯಾಳ ಬಿ, ತಿಂಥಣಿ ಸೇರಿದಂತೆ ಮೊದಲಾದ ಗ್ರಾಮಗಳಲ್ಲಿ ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ಜನರಿಗೆ ಎಚ್ಚರಿಕೆಯ ಸಂದೇಶ


ಈ ಬಗ್ಗೆ SP ಡಾ.ಸಿ.ಬಿ.ವೇದಮೂರ್ತಿ ಅವರು ಮಾತನಾಡಿ, ಬಸವಸಾಗರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚು ನೀರು ಬಿಡುಗಡೆ ಮಾಡಲಾಗುತ್ತಿದ್ದು, ಜನರು ಯಾರು ನದಿ ತೀರಕ್ಕೆ ತೆರಳಬಾರದು. ಪಂಪ್​ಸೆಟ್​ಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ನದಿ ತೀರದಲ್ಲಿ ಸೆಲ್ಫಿ ತೆಗೆದುಕೊಳ್ಳಬಾರದು ಜನರು ಎಚ್ಚರ ವಹಿಸಬೇಕೆಂದರು.


More than 1 Lakh Cusecs Of Water To Be Released from basava sagar dam nmpg mrq
ಕೃಷ್ಣ ನದಿ ತೀರ


ಭೀಮಾನದಿಗೆ ಕೂಡ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.


ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಹೊರಭಾಗದ ಬ್ಯಾರೇಜ್ ನಿಂದ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ನದಿ ತೀರದಲ್ಲಿರುವ ಕಂಗಳೇಶ್ವರ ಹಾಗೂ ವಿರಾಂಜನೇಯ ದೇಗುಲಗಳು ಮುಳುಗಡೆಯಾಗಿವೆ.


ಇದನ್ನೂ ಓದಿ:  Damaged Road: ಒಂದೂವರೆ ತಿಂಗಳಲ್ಲೇ ಕಿತ್ತುಹೋದ ರಸ್ತೆ, ಕಾಮಗಾರಿಗೂ ಮುನ್ನವೇ 1 ಕೋಟಿ ಪಡೆದ ಗುತ್ತಿಗೆದಾರ!


ತುಂಗಭದ್ರಾ ಪ್ರವಾಹ


ತುಂಗಭದ್ರಾ ನದಿಯಲ್ಲಿ ಪ್ರವಾಹ ಮುಂದುವರಿದಿದ್ದು, ಜಲಾಶಯದಿಂದ ನದಿಗೆ 1.64 ಲಕ್ಷ ಕ್ಯೂಸೆಕ್ಟ್ ನೀರು ಬಿಡಲಾಗಿದೆ. ಜಲಾಶಯಕ್ಕೆ ಈಗ 1.48 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದು 2 ಲಕ್ಷ ಕ್ಯೂಸೆಕ್​ನಷ್ಟು ನದಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ವಿರುಪಾಪುರಗಡ್ಡೆ, ನವವೃಂದಾವನ ಗಡ್ಡೆ ಗಂಗಾಪತಿ ಕಂಪ್ಲಿ ಸೇತುವೆ, ಆನೆಗೊಂದಿ ಬಳಿಯ ಶ್ರೀಕೃಷ್ಣ ದೇವರಾಯ ಸಮಾಧಿ ಮಂಟಪ ಮುಳುಗಡೆಯಾಗಿದೆ.

Published by:Mahmadrafik K
First published: