Accident: ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಗೂಡ್ಸ್ ವಾಹನ ಮತ್ತು ಖಾಸಗಿ ಬಸ್ ಡಿಕ್ಕಿ ಹೊಡೆದು ಸುಮಾರು 5 ರಿಂದ 6 ಜನರು ಸಜೀವ ದಹನವಾಗಿರುವ ಅಪಘಾತ ಕಲಬುರಗಿ ನಗರದ ಹೊರವಲಯದ ಕಮಲಾಪುರ (Kamalapura, Kalaraburagi) ಬಳಿಯ ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದಿದೆ. ವಾಹನಕ್ಕೆ ಡಿಕ್ಕಿಯಾದ ಬಸ್, ಸೇತುವೆ ಮೇಲಿನಿಂದ ಕೆಳಗೆ ಉರುಳಿದಿದೆ. ಕೆಲ ಪ್ರಯಾಣಿಕರು (Passengers) ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನೊಳಗೆ ಸಿಲುಕಿದ 5 ರಿಂದ 6 ಜನರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ಕೆಲವರ ಮೃತದೇಹಗಳು (Deaddody) ಸುಟ್ಟು ಕರಕಲಾಗಿದ್ದು, ಸಾವನ್ನಪ್ಪಿದವರ ಗುರುತು ಪತ್ತೆಯಾಗಿಲ್ಲ. ಬಸ್ ನಲ್ಲಿ 30 ಜನರು ಪ್ರಯಾಣಿಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಒಂದೇ ಕುಟುಂಬದ 30 ಕ್ಕೂ ಅಧಿಕ ಜನ ಹೈದರಾಬಾದ್‌ನಿಂದ ಗೋವಾ ಪ್ರವಾಸಕ್ಕೆ ತೆರಳಿದ್ದರು. ಗೋವಾದಿಂದ ಹೈದರಾಬಾದ್‌ಗೆ ವಾಪಸ್ ಆಗುವಾಗ ಎದುರಿಗೆ ಬಂದ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಸೇತುವೆ ಮೇಲಿಂದ ಕೆಳಗೆ ಉರಳುಬಿದ್ದ ಪರಿಣಾಮ ಡೀಸೆಲ್ ಟ್ಯಾಂಕರ್ ಡ್ಯಾಮೇಜ್ ನಿಂದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಗಾಯಾಳುಗಳು ಕಲಬುರಗಿ ಜಿಲ್ಲಾಸ್ಪತ್ರೆಗೆ ಶಿಫ್ಟ್
ಗಂಭೀರವಾಗಿ ಗಾಯಗೊಂಡ 12 ಜನ ಕಲಬುರಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ ನಲ್ಲಿ 5 ರಿಂದ 6 ಜನ ಸಜೀವ ದಹನ ಶಂಕೆಗಳು ವ್ಯಕ್ತವಾಗಿವೆ. ಚಾಲಕ ಬಸ್ ಅತ್ಯಂತ ವೇಗವಾಗಿ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: Daughter Kidnap: ತಂದೆಯಿಂದಲೇ ಮಗಳ ಅಪಹರಣ ಪ್ರಕರಣಕ್ಕೆ ರೋಚಕ ಟ್ವಿಸ್ಟ್
ಅಪಘಾತದ ಮಾಹಿತಿ ನೀಡಿದ ಶಾಸಕ ಮತ್ತಿಮೂಡ್
ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್, ಇಂದು ಬೆಳಗ್ಗೆ ಅಪಘಾತ ನಡೆದಿರುವ ಮಾಹಿತಿ ಬಂತು. ಕೂಡಲೇ ಎಸ್.ಪಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಮಾಹಿತಿ ನೀಡಿ ಘಟನಾ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಸದ್ಯ ನಾನು ಹುಬ್ಬಳ್ಳಿಯಲ್ಲಿದ್ದು, ನಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೂ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ನೆರವು ಆಗುವಂತೆ ಹೇಳಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿರುವ ಗಾಯಾಳುಗಳಿಗೆ ಕಮಲಾಪುರದಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ದುರ್ಘಟನೆಯಲ್ಲಿ 4 ರಿಂದ 5 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸಾವಿನ ಸಂಖ್ಯೆ ಬಗ್ಗೆ ನಿಖರವಾಗಿ ತಿಳಿದು ಬಂದಿಲ್ಲ ಎಂದು ಮಾಹಿತಿ ನೀಡಿದರು.
Hubballi Accident: ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ
ಹುಬ್ಬಳ್ಳಿ - ಧಾರವಾಡ ಬೈಪಾಸ್ (Hubballi-Dharwad Bypass) ರಸ್ತೆ ಸಾವಿನ ಹೆದ್ದಾರಿ ಎಂದು ಬಿಂಬಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯೂ (National Highway) ಆಗಿರೋ ಇಲ್ಲಿ, ಆಗಾಗ ಅಪಘಾತಗಳು (Accident) ಸಂಭವಿಸುತ್ತಲೇ ಇರುತ್ತೆ. ಈ ಹಿನ್ನೆಲೆಯಲ್ಲಿ ಇದನ್ನು ದಶ ಪಥ ರಸ್ತೆಯನ್ನಾಗಿಸೋಕೆ (Ten Lane) ಶಿಲನ್ಯಾಸ ನೆರವೇರಿಸಲಾಗಿತ್ತು. ಇದರ ಬೆನ್ನ ಹಿಂದೆಯೇ ಇದೇ ರಸ್ತೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಹಾಗೂ ಲಾರಿಗಳ (Private Bus And Lorry) ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಜನ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ (Hubballi) ಹೊರವಲಯದಲ್ಲಿ ನಡೆದಿದೆ. ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: Dead Body: ಮಾಜಿ ಶಾಸಕರು ಬಾಡೂಟ ಹಾಕಿಸಿದ್ದ ಸ್ಥಳದಲ್ಲಿ ಡೆಡ್ ಬಾಡಿ! ಪೆಂಡಾಲ್ ಒಳಗೆ ಸತ್ತು ಮಲಗಿದ್ದವ ಯಾರು?
ಸ್ಥಳದಲ್ಲಿಯೇ ಆರು ಜನರ ಸಾವನ್ನಪ್ಪಿದ್ದರೆ, ಓರ್ವ ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ. ಘಟನೆಯಲ್ಲಿ 25 ಜನರಿಗೆ ಗಾಯಗಳಾಗಿವೆ. ಕೆಲವರ ಸ್ಥಿತಿ ಗಂಭೀರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ