Farmers Protest: ಬಾಲಿವುಡ್‌ನಲ್ಲಿರುವವರಿಗಿಂತ ಗಟ್ಟಿಯಾದ ಬೆನ್ನು ಮೂಳೆ ಇದೆ; ಗ್ರೇಟಾ ಥನ್ಬರ್ಗ್​ ಬೆಂಬಲಿಸಿ ರಮ್ಯಾ ಟ್ವೀಟ್​

ಈ ನಡುವೆ ಗ್ರೇಟಾ ಥನ್ಬರ್ಗ್​ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಟಿ-ರಾಜಕಾರಣಿ ರಮ್ಯಾ ಸ್ಪಂದನ ಇದೀಗ ಗ್ರೇಟಾ ಥನ್ಬರ್ಗ್​ಗೆ ಬೆಂಬಲ ಸೂಚಿಸಿದ್ದಾರೆ. ಈ ವಿಚಾರ ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಲಿದೆ ಎನ್ನಲಾಗುತ್ತಿದೆ.

ನಟಿ ರಾಜಕಾರಣಿ ರಮ್ಯಾ

ನಟಿ ರಾಜಕಾರಣಿ ರಮ್ಯಾ

 • Share this:
  ಬೆಂಗಳೂರು (ಫೆಬ್ರವರಿ 05); ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಯ ವಿರುದ್ಧ ಕಳೆದ ಎರಡು ತಿಂಗಳಿನಿಂದ ದೇಶದ ರೈತರು ದೆಹಲಿ ಹೊರ ವಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ದೇಶದಾದ್ಯಂತ ಬೆಂಬಲ ವ್ಯಕ್ತವಾ್ಗುತ್ತಿದೆ. ಈ ನಡುವೆ ಭಾರತದ ರೈತ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಕೆನಡಾ ಪ್ರಧಾನಿ ಸೇರಿದಂತೆ ಅನೇಕರು ರೈತ ಹೋರಾಟವನ್ನು ಬೆಂಬಲಿಸಿದ್ದಾರೆ. ಅಲ್ಲದೆ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್​ ಹಾಗೂ ಅಮೆರಿಕದ ಖ್ಯಾತ ಪಾಪ್​ ಹಾಡುಗಾರ್ತಿ ರಿಹಾನಾ ಸಹ ಇತ್ತೀಚೆಗೆ ಟ್ವೀಟ್ ಮೂಲಕ ಭಾರತದ ರೈತ ಹೋರಾಟದ ಪರ ಧ್ವನಿ ಎತ್ತಿದ್ದರು. ಆದರೆ, ಗ್ರೇಟಾ ಥನ್ಬರ್ಗ್​ ಟೀಟ್​ ವಿರುದ್ಧ ಭಾರತದ ಅನೇಕ ಸೆಲೆಬ್ರೆಟಿಗಳು ಅಪಸ್ವರ ಎತ್ತಿದ್ದಾರೆ. ಅಲ್ಲದೆ, ಅವರ ವಿರುದ್ಧ ದೆಹಲಿಯಲ್ಲಿ ಪ್ರಕರಣವೂ ದಾಖಲಾಗಿದೆ. ಈ ಸುದ್ದಿ ಇದೀಗ ವಿವಾದವಾಗಿ ಬದಲಾಗುತ್ತಿದ್ದು, ಸ್ಯಾಂಡಲ್​ವುಡ್​ ಚಿತ್ರನಟಿ ಹಾಗೂ ರಾಜಕಾರಣಿ ರಮ್ಯಾ ಸ್ಪಂದನ ಸಹ ಇದೀಗ ರೈತ ಹೋರಾಟವನ್ನು ಬೆಂಬಲಿಸಿದ್ದಾರೆ. ಅಲ್ಲದೆ, ಗ್ರೇಟಾ ಥನ್ಬರ್ಗ್​ ಬೆನ್ನಿಗೆ ನಿಂತಿದ್ದಾರೆ.  ಗ್ರೇಟಾ ಥನ್ಬರ್ಗ್​ ಅವರ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿ ತನ್ನ ಅಭಿಪ್ರಾಯವನ್ನು ಮಂಡಿಸಿರುವ ರಮ್ಯಾ, "ಬಾಲಿವುಡ್‌ನಲ್ಲಿರುವವರಿಗಿಂತ ಗಟ್ಟಿಯಾದ ಬೆನ್ನು ಮೂಳೆ ಇದೆ" ಎಂದು ಎಂದು ಹೇಳುವ ಮೂಲಕ ರೈತ ಹೋರಾಟವನ್ನು ಬೆಂಬಲಿಸುತ್ತಿರುವ ಬಾಲಿವುಡ್ ತಾರೆಗಳನ್ನು​ ಪರೋಕ್ಷವಾಗಿ ಪರಾವಲಂಭಿಗಳು ಎಂದು ಹಂಗಿಸಿದ್ದಾರೆ.

  ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ದೆಹಲಿ ಪೊಲೀಸರು ಘರ್ಷಣೆ ನಡೆಸಿದ ನಂತರ ಅಲ್ಲಿ ಇಂಟರ್ನೆಟ್ ಕಡಿತಗೊಳಿಸಿರುವುದನ್ನು ಈ ಕುರಿತ ಸಿಎನ್​ಎನ್​ ವರದಿಯನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದ ಪಾಪ್​ ಹಾಡುಗಾರ್ತಿ ರಿಹಾನಾ ಸಹ "ರೈತ ಹೋರಾಟದ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ" ಎಂದು ಪ್ರಶ್ನಿಸಿದ್ದರು.

  ಇದನ್ನೂ ಓದಿ: Farmers Protest: ರಿಹಾನಾ ಅವರ ಮುಂದಿನ ವಿಡಿಯೋದಲ್ಲಿ ನೀವಿರುತ್ತೀರಿ; ತಾಪ್ಸಿ, ಸ್ವರ ಭಾಸ್ಕರ್​ ಬೆನ್ನಿಗೆ ನಿಂತ ಅಭಯ್​ ಡಿಯೋಲ್

  ರಿಹಾನಾ ಟ್ವೀಟ್ ಮಾಡಿದ ನಂತರ ಭಾರತದ ರೈತ ಹೋರಾಟ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಕ್ರೀಡಾಪಟುಗಳು ರೈತ ಹೋರಾಟದ ಪರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಇದರಿಂದ ಅಸಮಧಾನ ಗೊಂಡಿದ್ದ ಕೇಂದ್ರ ಸರ್ಕಾರ ರೈತರ ಸಮಸ್ಯೆಯು ದೇಶದ ಆಂತರಿಕ ವಿಷಯ, ವಿದೇಶಿಯರು ತಲೆ ಹಾಕಬಾರದು ಎಂದು ಹೇಳಿತ್ತು. ಜೊತೆಗೆ ರೈತರನ್ನು ಬೆಂಬಲಿಸಿದ ಕೆಲ ಹ್ಯಾಶ್‌ಟ್ಯಾಗ್‌ಗಳನ್ನು ತೆಗೆದುಹಾಕುವಂತೆ ಟ್ವಿಟರ್​ಗೆ ಎಚ್ಚರಿಕೆ ನೀಡಿತ್ತು.

  ಈ ನಡುವೆ ಗ್ರೇಟಾ ಥನ್ಬರ್ಗ್​ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಟಿ-ರಾಜಕಾರಣಿ ರಮ್ಯಾ ಸ್ಪಂದನ ಇದೀಗ ಗ್ರೇಟಾ ಥನ್ಬರ್ಗ್​ಗೆ ಬೆಂಬಲ ಸೂಚಿಸಿದ್ದಾರೆ. ಈ ವಿಚಾರ ರಾಜ್ಯ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಲಿದೆ ಎನ್ನಲಾಗುತ್ತಿದೆ.
  Published by:MAshok Kumar
  First published: