Student Missing: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ; ಕ್ಯಾಂಪಸ್ ಒಳಗೆ ಬಂದ ಬಾಲಕ ಮಿಸ್ಸಿಂಗ್

ಗಣೇಶ ಹಬಕ್ಕೆ ಮಗನನ್ನು ಕರೆಯಲು ಬಂದ ಈರೇಗೌಡರಿಗೆ ಶಾಕ್ ಎದುರಾಗಿತ್ತು. ನಿಮ್ಮ ಮಗ ಕಳೆದ 20 ದಿನದಿಂದ ಶಾಲೆಗೆ ಬಂದಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿದ್ಯಾರ್ಥಿ (Student Missing) ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮಂಡ್ಯದ ತಂಗಳಗೆರೆ (Tangalagere, Mandya) ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ (Morarji Desai Residential School) ನಡೆದಿದೆ. ಬಾಲಕ ನಾಪತ್ತೆಯಾದ 25 ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. 9ನೇ ತರಗತಿ ಓದುತ್ತಿರುವ ಕಿಶೋರ್ ನಾಪತ್ತೆಯಾದ ಬಾಲಕ. ಶಾಲೆಯ ಸಿಸಿಟಿವಿಯಲ್ಲಿ (CCTV Footage) ಬಾಲಕ ಕ್ಯಾಂಪಸ್ (School Campus) ಒಳಗೆ ಎಂಟ್ರಿಕೊಡುವ ದೃಶ್ಯ ಸೆರೆಯಾಗಿದೆ. ಆದ್ರೆ ಸಿಸಿಟಿವಿಯಲ್ಲಿ ಹೊರಗೆ ಹೋಗಿರುವ ದೃಶ್ಯಗಳು ದಾಖಲಾಗಿಲ್ಲ. ಮಗನನ್ನು ಗಣೇಶ ಹಬ್ಬಕ್ಕೆ (Ganesha Festival) ಕರೆದುಕೊಂಡು ಹೋಗಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕ 25 ದಿನಗಳಿಂದ ಕಾಣೆಯಾಗಿದ್ದರೂ ಶಾಲೆ ಸಿಬ್ಬಂದಿ ಪೋಷಕರಿಗೆ (Parents) ಯಾವುದೇ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ.

ಜುಲೈ 27ರಂದು ಕಿಶೋರ್ ತನ್ನೂರಾದ ಪಾಂಡವಪುರ ತಾಲೂಕಿನ ಹಿರೇಮರಳ್ಳಿ ಗ್ರಾಮಕ್ಕೆ ಹೋಗಿದ್ದನು. ನಂತರ ಕಿಶೋರ್ ತಂದೆ ಈರೇಗೌಡರು ಮಗನನ್ನು ಆಗಸ್ಟ್ 8 ರಂದು ಶಾಲೆಗೆ ಕರೆದುಕೊಂಡು ಬಂದಿದ್ದರು. ನಂತರ ಮಗನನ್ನ ಶಾಲೆಗೆ ಬಿಟ್ಟು ತಮ್ಮ ಗ್ರಾಮಕ್ಕೆ ಮರಳಿದ್ದರು.

ಶಾಲೆಯ ಸಿಬ್ಬಂದಿ ವಿರುದ್ಧ ಪೋಷಕರ ಆಕ್ರೋಶ

ಗಣೇಶ ಹಬ್ಬಕ್ಕೆ  ಮಗನನ್ನು ಕರೆಯಲು ಬಂದ ಈರೇಗೌಡರಿಗೆ ಶಾಕ್ ಎದುರಾಗಿತ್ತು. ನಿಮ್ಮ ಮಗ ಕಳೆದ 20 ದಿನದಿಂದ ಶಾಲೆಗೆ ಬಂದಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ. 20 ದಿನಗಳಿಂದ ಮಗ ಶಾಲೆಗೆ ಬರದಿರುವ ವಿಷಯವನ್ನು ನಮ್ಮ ಗಮನಕ್ಕೆ ತರಬೇಕಿತ್ತು ಎಂದು ಕಿಶೋರ್ ಕುಟುಂಬಸ್ಥರು ಶಾಲೆಯ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕಿಶೋರ್ ಬರೆದಿದ್ದಾನೆ ಎನ್ನಲಾದ ಪತ್ರ  ಲಭ್ಯ

ವಿದ್ಯಾರ್ಥಿಗಳ‌ ಕೊಠಡಿಯಲ್ಲಿ ಕಿಶೋರ್ ಬರೆದಿದ್ದಾನೆ ಎನ್ನಲಾದ ಪತ್ರವೊಂದು ಸಿಕ್ಕಿದೆ. ಈ ಶಾಲೆಯಲ್ಲಿ ಓದಲು ಇಷ್ಟವಿಲ್ಲ, ಇದನ್ನ ಸಾಕಷ್ಟು ಸಲ ಹೇಳಲು ಪ್ರಯತ್ನಿಸಿದ್ದೇನೆ. ಅಪ್ಪ, ಚಿಕ್ಕಪ್ಪ ದಯವಿಟ್ಟು ನನ್ನನ್ನು ಹುಡುಕಬೇಡಿ ಎಂದು ಬರೆಯಲಾಗಿದೆ.

ಇದನ್ನೂ ಓದಿ:  Child Marriage: 16ರ ಬಾಲಕಿಯನ್ನ ಮದ್ವೆಯಾದ 52ರ ಅಂಕಲ್; 3 ತಿಂಗಳ  ಬಳಿಕ ಬಯಲಾಯ್ತು ರಹಸ್ಯ

ಹಲವು  ಆಯಾಮಗಳಲ್ಲಿ ಪೊಲೀಸರ ತನಿಖೆ

ಆದರೆ ಅದು ನನ್ನ ಮಗ ಬರೆದ ಪತ್ರ ಅಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಲವು ಆಯಾಮಾಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಇತ್ತ ಶಿಕ್ಷಕರು ಮತ್ತು ಪ್ರಾಂಶುಪಾಲರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಶಾಲೆಯ ಪ್ರಾಂಶುಪಾಲರ ನಿರ್ಲಕ್ಷ್ಯತೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ವರದಿ ಪಡೆದು ಸಸ್ಪೆಂಡ್ ಮಾಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಈಜಲು ಹೋಗಿದ್ದ ಮೆಡಿಕಲ್​ ಸ್ಟೂಡೆಂಟ್ ಸಾವು

ವೀಕೆಂಡ್​ ಎಂಜಾಯ್​ ಮಾಡಲು ಬಂದಿದ್ದ ಮೆಡಿಕಲ್​ ವಿದ್ಯಾರ್ಥಿ (Medical Student) ಸಾವನ್ನಪ್ಪಿರೋ ಘಟನೆ ಚಿಕ್ಕಬಳ್ಳಾಪುರದ (Chikkaballapura) ಶ್ರೀನಿವಾಸ ಸಾಗರ ಜಲಾಶಯದ ಬಳಿ ನಡೆದಿದೆ. ನೀರಲ್ಲಿ ಮುಳುಗುತ್ತಿದ್ದ ಯುವಕನನ್ನು ಕಾಪಾಡಲು ಹೋಗಿದ್ದ ಗ್ರಾಮಸ್ಥ ಕೂಡ ನೀರು ಪಾಲಾಗಿರೋ ಘಟನೆ ನಡೆದಿದೆ.

ಇದನ್ನೂ ಓದಿ:  KSRTC ಯಿಂದ ಶುಭಸುದ್ದಿ; ಹೊಸ ಸೇವೆ ಆರಂಭ

ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಚ್ಚಿದಾನಂದ ಸಾವನ್ನಪ್ಪಿರೋ ಮೃತ ದುರ್ದೈವಿಯಾಗಿದ್ದಾರೆ. ಮೆಡಿಕಲ್ ಕಾಲೇಜು ವಸತಿ ನಿಲಯದಲ್ಲಿದ್ದ (Hostel) ಸಚ್ಚಿದಾನಂದ, ಸ್ನೇಹಿತರ ಜೊತೆ ವೀಕೆಂಡ್ ಎಂಜಾಯ್​ ಮಾಡಲು ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯಕ್ಕೆ ತೆರಳಿದ್ದ.

ರಾಯಚೂರಲ್ಲಿ ವಿದ್ಯಾರ್ಥಿ ಮೇಲೆ ನೀರು ಎರಚಿದ ಶಿಕ್ಷಕ

ಶಾಲೆಯಲ್ಲಿ (School) ಮಲ–ಮೂತ್ರ ಮಾಡಿಕೊಂಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ಬಿಸಿ ನೀರು (Hot Water) ಚೆಲ್ಲಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಸ್ಕಿ ತಾಲ್ಲೂಕಿನ‌ ಖಾಸಗಿ ಶಾಲೆಯಲ್ಲಿ ಓದುತ್ತಿರುವ 2ನೇ ತರಗತಿ ವಿದ್ಯಾರ್ಥಿಯೊಬ್ಬನ ಸೊಂಟದ ಸುತ್ತಲೂ ಸುಟ್ಟಗಾಯಗಳಾಗಿದ್ದು (Burn), ಆತ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Mahmadrafik K
First published: