• Home
  • »
  • News
  • »
  • state
  • »
  • Moral Policing: ಹಿಂದೂ ಹುಡುಗ‌ನ‌ ಜೊತೆ ಮುಸ್ಲಿಂ ಹುಡುಗಿ ಹೋಗ್ತಿದ್ದಕ್ಕೆ ಕಿರಿಕ್!

Moral Policing: ಹಿಂದೂ ಹುಡುಗ‌ನ‌ ಜೊತೆ ಮುಸ್ಲಿಂ ಹುಡುಗಿ ಹೋಗ್ತಿದ್ದಕ್ಕೆ ಕಿರಿಕ್!

ನೈತಿಕ ಪೊಲೀಸ್​ಗಿರಿ

ನೈತಿಕ ಪೊಲೀಸ್​ಗಿರಿ

ರೆಡ್​ ಟೀ ಶರ್ಟ್​ ಧರಿಸಿದ ಯುವಕನ ಜೊತೆ ಸ್ಕೂಟಿಯಲ್ಲಿ ತೆರಳುತ್ತಿದ್ದವರನ್ನು ತಡೆಯಲಾಗಿದೆ. ಯುವತಿಗೆ ಮೊದಲು ಗಾಡಿಯಿಂದ ಕೆಳಗೆ ಇಳಿಯುವಂತೆ ಅವಾಜ್ ಹಾಕಿದ್ದಾರೆ. ಈ ವೇಳೆ ನಾನ್ಯಾಕೆ ಇಳಿಯಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

  • Share this:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ಪಟ್ಟಣದಲ್ಲಿ ಯುವಕರು ನೈತಿಕ ಪೊಲೀಸ್​ಗಿರಿ (Moral Policing) ನಡೆಸಿರುವ ವಿಡಿಯೋ ಸಾಮಾಜಿಕ  ಜಾಲತಾಣಗಳಲ್ಲಿ (Social Media) ವೈರಲ್ (Video Viral) ಆಗಿದೆ. ಸ್ಕೂಟಿಯಲ್ಲಿ ಹಿಂದೂ ಯುವಕನ (Hindu Youth) ಜೊತೆ ಮುಸ್ಲಿಂ ಯುವತಿ (Muslim Girl) ತೆರಳುತ್ತಿದ್ದಳು. ಈ ವೇಳೆ ಬೈಕ್ ಅಡ್ಡಗಟ್ಟಿದ ಇಸ್ಲಾಂಪುರ ನಿವಾಸಿ ಹೂಜೂರ್ ಮತ್ತು ತಂಡ, ಯುವತಿಯ ಬಳಿ ಆಕೆಯ ಪೋಷಕರ ಫೋನ್ ನಂಬರ್ ಕೇಳಿ, ಯುವಕನಿಗೆ ಅವಾಜ್ ಹಾಕಿದ್ದಾರೆ. ಇದೇ ತಂಡದ ಕೆಲ ಸದಸ್ಯರು ನಡೆದ ಘಟನೆಯನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ದೊಡ್ಡಬಳ್ಳಾಪುರ ನಗರದ ತೇರಿನ ಬೀದಿಯಲ್ಲಿ ಕಳೆದ ಭಾನುವಾರ ಘಟನೆ ನಡೆದಿದೆ. ಮನೆಯವರ ಪೋನ್ ನಂಬರ್ ಕೊಡು ಅಂತ ಯುವತಿ ಮೇಲೆ ದಬ್ಬಾಳಿಕೆ ಮಾಡಲಾಗಿದೆ.


ಘಟನೆ ಸಂಬಂದ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ದೂರು ದಾಖಲಿಸಿಕೊಂಡ ಪೊಲೀಸರು, 30 ವರ್ಷದ ಅಕ್ಬರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ವೈರಲ್ ವಿಡಿಯೋದಲ್ಲಿ ಏನಿದೆ?


ರೆಡ್​ ಟೀ ಶರ್ಟ್​ ಧರಿಸಿದ ಯುವಕನ ಜೊತೆ ಸ್ಕೂಟಿಯಲ್ಲಿ ತೆರಳುತ್ತಿದ್ದವರನ್ನು ತಡೆಯಲಾಗಿದೆ. ಯುವತಿಗೆ ಮೊದಲು ಗಾಡಿಯಿಂದ ಕೆಳಗೆ ಇಳಿಯುವಂತೆ ಅವಾಜ್ ಹಾಕಿದ್ದಾರೆ. ಈ ವೇಳೆ ನಾನ್ಯಾಕೆ ಇಳಿಯಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಕಪಾಳಕ್ಕೆ ಹೊಡದ್ರೆ ಕಿವಿ ಗೊಂಯ್ ಅನ್ನಬೇಕು ಎಂದು ಹೇಳುತ್ತಾ ಅವಾಚ್ಯ ಪದ  ಬಳಸಿ ನಿಂದಿಸಿದ್ದಾರೆ.


ಸ್ಕೂಟಿ ನಿಲ್ಲಿಸಿದ ಯುವಕ, ಏನ್ ನಿಮ್ಮ ಗಲಾಟೆ? ಪೊಲೀಸ್ ಠಾಣೆಗೆ ಹೋಗಬೇಕಾ? ಬನ್ನಿ ಹೋಗೋಣ ಎಂದು ಹೇಳಿದ್ದಾನೆ. ಯುವತಿ ಪೊಲೀಸ್ ಠಾಣೆಗೆ ಹೋಗೋದೆಲ್ಲ ಬೇಡ, ಇಲ್ಲಿಂದ ಹೊರಡೋಣ ಅಂತ ಗೆಳೆಯನಿಗೆ ಹೇಳಿದ್ದಾಳೆ.


ಇದನ್ನೂ ಓದಿ:  Love Jihad Case: ನಮ್ದು ಲವ್ ಜಿಹಾದ್ ಅಲ್ಲ; ನಾನೇ ಮೆಚ್ಚಿ ಮದುವೆಯಾಗಿದ್ದು ಎಂದ ಚೈತ್ರಾ!


ನಿಮಗ್ಯಾಕೆ ನಾನು ನಂಬರ್ ಕೊಡಲಿ?


ಈ ಯುವಕನನ್ನು ಮದುವೆ ಆಗ್ತಿದ್ದಿಯಾ  ಅಲ್ಲವಾ? ನಿಮ್ಮ ಪೋಷಕರ ನಂಬರ್ ಕೊಡು. ನಾವೇ ನಿಮ್ಮ ಮದುವೆ ಮಾಡಿಸುತ್ತೇನೆ ಎಂದು ಮತ್ತೆ ನಂಬರ್ ಕೇಳಿದ್ದಾನೆ. ಹೌದು, ಮದುವೆ ಆಗ್ತಿನಿ. ನಿಮಗ್ಯಾಕೆ ನಾನು ನಂಬರ್ ಕೊಡಲಿ ಎಂದು ಯುವತಿ ಮರು ಪ್ರಶ್ನೆ ಮಾಡಿದ್ದಾಳೆ. ಇತ್ತ ಯುವಕ ತನ್ನ ಸ್ನೇಹಿತರಿಗೆ ಮಾಡಿ ತಮ್ಮ ಆಪ್ತರನ್ನು ಘಟನಾ ಸ್ಥಳಕ್ಕೆ ಬರುವಂತೆ ಹೇಳಿದ್ದಾನೆ.


ಜೋಡಿಯ ಮೇಲೆ ಗ್ಯಾಂಗ್​ನಿಂದ ಹಲ್ಲೆ!


ಇತ್ತ ಯುವಕರು ಮಾತ್ರ ಯುವತಿಗೆ ನಿಮ್ಮ ಮನೆ ಎಲ್ಲಿದೆ? ಯಾವ ಏರಿಯಾ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಿದ್ದರು. ಮಧ್ಯ ಪ್ರವೇಶಿಸಿದ ಗೆಳೆಯ, ರಸ್ತೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ನೀನು ದೂರು ದಾಖಲಿಸು ಎಂದು ಹೇಳಿದ್ದಕ್ಕೆ, ಕಪ್ಪು ಬಣ್ಣದ ಟೀ ಶರ್ಟ್​ ಧರಿಸಿದ ದಡೂತಿ ದೇಹದ ವ್ಯಕ್ತಿ ಸ್ಕೂಟಿ ಸ್ಟಾರ್ಟ್​ ಮಾಡಲು ಮುಂದಾಗುತ್ತಾನೆ.


ಇದಕ್ಕೆ ಕೋಪಗೊಂಡ ಯುವಕ ನೀನ್ ಯಾವನೋ ನನ್ನ ಗಾಡಿ ಸ್ಟಾರ್ಟ್​ ಮಾಡೋಕೆ ಅಂದಾಗ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಹೀಗೆ ಗಲಾಟೆ ಮುಂದುವರಿದಿದೆ.


ಇದನ್ನೂ ಓದಿ:  ಲವ್​ ಜಿಹಾದ್​ ಪದ ಬಳಸಿ ವಿವಾದಕ್ಕೀಡಾದ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ; ನೆಟ್ಟಿಗರಿಂದ ರಾಜೀನಾಮೆಗೆ ಒತ್ತಾಯ




ಚಿಕ್ಕಮಗಳೂರು: ಮುಸ್ಲಿಂ ಹುಡುಗ-ಹಿಂದೂ ಹುಡುಗಿ ಮದುವೆ


ಸೆಪ್ಟೆಂಬರ್ 14ರ ಸಂಜೆ ಚಿಕ್ಕಮಗಳೂರು ನಗರದಲ್ಲಿ ಸೂರ್ಯ ಮುಳುಗುತ್ತಿದ್ದರೂ ಲವ್‍ ಜಿಹಾದ್ ಆರೋಪದ ಬಿಸಿಯ ತಾಪ ಏರಿತ್ತು. ಮುಸ್ಲಿಂ ಹುಡುಗ-ಹಿಂದೂ ಹುಡುಗಿ ಮದುವೆಯಾಗುವ ವಿಷಯ ತಿಳಿದು ಹಿಂದೂಪರ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಪೊಲೀಸರೂ ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದರು. ನೈತಿಕ ಪೊಲೀಸ್ ಗಿರಿಯ ಆರೋಪದಡಿ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿದ್ದರು. ಹುಡುಗ-ಹುಡುಗಿ ಇಬ್ಬರೂ ಮೇಜರ್ ಆದ ಕಾರಣ ಪ್ರಕರಣವನ್ನ ತಿಳಿಗೊಳಿಸಿದ್ದರು.

Published by:Mahmadrafik K
First published: