Monsoon ಆರಂಭಕ್ಕೂ ಮುನ್ನ ಕೊಡಗಿಗೆ ಆಗಮಿಸಿದ NDRF ತಂಡ; ಪ್ರವಾಹ, ಭೂಕುಸಿತ ಸ್ಥಳಗಳ ಗುರುತಿಸುವಿಕೆ

ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಪ್ರವಾಹದ ಸ್ಥಿತಿಯನ್ನು ನಿಭಾಯಿಸಿ, ಇಲ್ಲಿನ ಪ್ರಾಕೃತಿಕ ಸ್ಥಿತಿ ಗತಿ ಗೊತ್ತಿರುವ ಎನ್  ಡಿಆರ್ ಎಫ್ ಸಿಬ್ಬಂದಿಯನ್ನು ಮತ್ತೆ ಇಲ್ಲಿಗೆ ಕರೆಸಲಾಗಿದೆ.

NDRF ತಂಡ

NDRF ತಂಡ

  • Share this:
ಕೊಡಗು (Kodagu) ಜಿಲ್ಲೆ ಮಳೆಗಾಲ (Rain Season) ಬಂದ್ರೆ ಸಾಕು ಇಲ್ಲಿನ ಜನ ನಿಜಕ್ಕೂ ಜೀವವನ್ನೆ ಕೈಯಲ್ಲಿ‌ ಹಿಡಿದು ಬದುಕುವಷ್ಟರ ಮಟ್ಟಿಗೆ ಭಯ ಪಡುತ್ತಾರೆ. ಆದರೆ  ಇದೆಲ್ಲವನ್ನ ದೂರ ಮಾಡಲು ಮುಂಗಾರಿಗೆ (Monsoon) ಮುಂಚಿತವಾಗಿ ಎನ್.ಡಿ.ಆರ್.ಎಫ್ ತಂಡ (NDRF Team) ಜಿಲ್ಲೆಗೆ ಆಗಮಿಸಿದ್ದು ಮಡಿಕೇರಿ (Madikeri) ನಗರದ ಮೈತಿಹಾಲ್ ನಲ್ಲಿ ವಾಸ್ತವ್ಯ ಹೂಡಿದೆ. ಮಳೆಗಾಲದಲ್ಲಿ ಪ್ರವಾಹ (Flood), ಭೂ ಕುಸಿತ (Land Slide) ಆದರೆ ಅದನ್ನು ನಿಬಾಯಿಸುವುದು ಹೇಗೆ ಎನ್ನುವ ಸಿದ್ಧತೆಯಲ್ಲಿ ತೊಡಗಿದೆ. ಕೊಡಗು ಜಿಲ್ಲೆಯಲ್ಲಿ (Kodagu Rain) ಕಳೆದ ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ನಿರಂತವಾಗಿ ಒಂದಿಲ್ಲೊಂದು ಅಪಾಯಗಳು ಸಂಭವಿಸುತ್ತಿದ್ದು ಜಿಲ್ಲೆಯ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ.

ಒಂದು ಕಾಲದಲ್ಲಿ ಎಂತ ಮಳೆಯಾದರೂ ಜಿಲ್ಲೆಯ ಜನತೆ ಜಪ್ಪಯ್ಯ ಅಂದ್ರು ಜಗ್ತಾ ಇರಲಿಲ್ಲಾ. ಆದ್ರೆ ಇದೀಗ ಒಂದು ಸಣ್ಣ ಮಳೆ  ಬಂದ್ರು ಸಾಕು ಜಿಲ್ಲೆಯ ಜನತೆ ಆತಂಕದಿಂದ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಜೀವನ ಸಾಗಿಸೋ ದುಸ್ಥಿತಿ ಎದುರಾಗಿದೆ. ಅದಕ್ಕೆ ಕಾರಣ 2018  ರ ಆಗಸ್ಟ್ 15 ರಿಂದ ಜಿಲ್ಲೆಯಲ್ಲಿ ಎದುರಾದ ಭೂ ಕುಸಿತ. ಅದಾದ ನಂತರ ಜಿಲ್ಲೆಯಲ್ಲಿ ಸತತ ಮೂರು ವರ್ಷಗಳು ಕೂಡ ಭೂಕುಸಿತ ಮತ್ತು ಪ್ರವಾಹದಿಂದ ಜಿಲ್ಲೆಯ  ಜನತೆ ಬೇಸತ್ತು ಹೋಗಿದ್ದಾರೆ.

ಮಡಿಕೇರಿಯಲ್ಲಿ NDRF ತಂಡ ವಾಸ್ತವ್ಯ

ಹೀಗಾಗಿ ಜಿಲ್ಲೆಯ ಜನತೆ ಸಣ್ಣ ಮಳೆಗೂ ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಅಂತಹ ಸ್ಥಿತಿ ಎದುರಾಗಬಹುದೆಂದು ಪ್ರತಿ ವರ್ಷದಂತೆ ಈ ಭಾರಿ ಕೂಡ ಜಿಲ್ಲೆಗೆ ಎನ್.ಡಿ.ಆರ್ ಎಫ್ ತಂಡ ಆಗಮಿಸಿದ್ದು ಮಡಿಕೇರಿ ನಗರದ ಪೊಲೀಸ್ ಭವನದಲ್ಲಿ ವಾಸ್ತವ್ಯ ಹೂಡಿದೆ.

ಇದನ್ನೂ ಓದಿ:  Mining: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಗಾಮಿಲ್ಲದೇ ನಡೆಯುತ್ತಿದೆ ಮಣ್ಣು-ಕಲ್ಲು ಗಣಿಗಾರಿಕೆ!

ಜಿಲ್ಲಾಡಳಿತ ಈಗಾಗಲೇ ಪ್ರವಾಹ ಮತ್ತು ಭೂ ಕುಸಿತದ ಸೂಕ್ಷ್ಮ ಪ್ರದೇಶಗಳನ್ನು ಗುರುತು ಮಾಡಿರುವ ಸ್ಥಳಗಳಿಗೆ ಶನಿವಾರದಿಂದ ಈ ತಂಡ ಭೇಟಿ ಮಾಡಿ ಪರಿಶೀಲನೆ ನಡೆಸಲಿದೆ.  ಆಂಧ್ರ ಪ್ರದೇಶದ ವಿಜಯವಾಡದಿಂದ 22 ಮಂದಿ ಪರಿಣಿತರಿರುವ ಎನ್.ಡಿ.ಆರ್.ಎಫ್ ತಂಡ ಕೊಡಗು ಜಿಲ್ಲೆಗೆ ಆಗಮಿಸಿದೆ. ಸಾಕಷ್ಟು ಕಡೆಗಳಲ್ಲಿನ  ಪ್ರವಾಹ ಸಂದರ್ಭದಲ್ಲಿ ಭಾಗಿಯಾಗಿದ್ದ ನುರಿತರು ಈ ತಂಡದಲ್ಲಿದ್ದಾರೆ.

ಬೋಟ್, ಓಪಿ, ಸ್ಟ್ರಚರ್ ಸಮೇತ NDRF ಆಗಮನ

ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಪ್ರವಾಹದ ಸ್ಥಿತಿಯನ್ನು ನಿಭಾಯಿಸಿ, ಇಲ್ಲಿನ ಪ್ರಾಕೃತಿಕ ಸ್ಥಿತಿ ಗತಿ ಗೊತ್ತಿರುವ ಎನ್  ಡಿಆರ್ ಎಫ್ ಸಿಬ್ಬಂದಿಯನ್ನು ಮತ್ತೆ ಇಲ್ಲಿಗೆ ಕರೆಸಲಾಗಿದೆ.

ಪ್ರವಾಹ, ಭೂಕುಸಿತ ಎದುರಾದಾಗ ಜನರನ್ನ ರಕ್ಷಿಸಲು ಬೇಕಾದ, ಓಪಿ, ಬೋಟ್ ಗಳು, ಸ್ಟ್ರಚರ್ ಗಳು  ಸೇರಿದಂತೆ ವಿವಿಧ  ಸಾಧನ ಸಲಕರಣೆಗಳೊಂದಿಗೆ NDRF ತಂಡ ಕೊಡಗು ಜಿಲ್ಲೆಗೆ ಆಗಮಿಸಿದೆ ಎಂದು ಅಧಿಕಾರಿ ನಾಗರಾಜು ಹೇಳಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳ ಗುರುತಿಸುವಿಕೆ

ಇನ್ನೂ ಜಿಲ್ಲಾಡಳಿತ ಈಗಾಗಲೇ ಪ್ರವಾಹ ಪ್ರವಾಹ ಪೀಡಿತ ಪ್ರದೇಶಗಳನ್ನ ಗುರುತು ಮಾಡಿದೆ. 44 ಪ್ರದೇಶಗಳಲ್ಲಿ ಪ್ರವಾಹ ಹಾಗೂ 43 ಪ್ರದೇಶಗಳಲ್ಲಿ ಭೂಕುಸಿತ ಪ್ರದೇಶಗಳೆಂದು  ಗುರುತಿಸಲಾಗಿದ್ದು ಅಂತಹ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ. ಮಳೆಗಾಲ ಮುಗಿಯುವ ವರೆಗೂ ತಂಡ ಜಿಲ್ಲೆಯಲ್ಲಿ ತಂಗಲಿರುವುದಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಅನನ್ಯವಾಸುದೇವ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  Karnataka: ಮುಳುಗಿದ ಮತ್ತೊಂದು Bank, ಮಹಾರಾಷ್ಟ್ರದ ಬಳಿಕ ಕರ್ನಾಟಕದಲ್ಲಿಯ ಬ್ಯಾಂಕ್ ನ ಲೈಸೆನ್ಸ್ ರದ್ದುಗೊಳಿಸಿದ RBI

ಈಗಾಗಲೇ ಮಾನ್ಸೂನ್ ಮಳೆ ಆರಂಭವಾಗಿದೆ. ಬೆಂಗಳೂರು ಸೇರಿದಂತೆ  ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಇತ್ತ ಚಿಕ್ಕಮಗಳೂರು ಜಿಲ್ಲಾಡಳಿತ ಸಹ ಪ್ರವಾಹ ಮುನ್ನೇಚ್ಚರಿಕೆ ತೆಗೆದುಕೊಂಡಿದ್ದು, ಅಪಾಯದಲ್ಲಿರುವ ಸ್ಥಳಗಳನ್ನು ಗುರುತಿಸಿದೆ. ಸಾರ್ವಜನಿಕರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
Published by:Mahmadrafik K
First published: