• Home
  • »
  • News
  • »
  • state
  • »
  • Chikkamagaluru: ಮುಂಗಾರು ಅಬ್ಬರದ ಮುನ್ಸೂಚನೆ; ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ

Chikkamagaluru: ಮುಂಗಾರು ಅಬ್ಬರದ ಮುನ್ಸೂಚನೆ; ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರದ ಮುನ್ಸೂಚನೆ ಇರೋದ್ರಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ. . 64 ಜೆಸಿಬಿ. 65 ಹಿಟಾಚಿ. 83 ಟ್ರ್ಯಾಕ್ಟರ್. 155 ಟಿಪ್ಪರ್ಗಳ ಮೂಲಕ ಮಲೆನಾಡು-ಅರೆಮಲೆನಾಡಿನ ಮೇಲೆ ಹದ್ದಿನ ಕಣ್ಣಿಟ್ಟಿದೆ.

  • Share this:

ಚಿಕ್ಕಮಗಳೂರು : ರಾಜ್ಯದಲ್ಲಿ ಮುಂಗಾರು ಮಳೆ (Monsoon Rains) ಅಬ್ಬರದ ಮುನ್ಸೂಚನೆ ಇರೋದ್ರಿಂದ ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತ ಜಿಲ್ಲಾದ್ಯಂತ ಹೈ ಅಲರ್ಟ್ (High Alert) ಘೋಷಿಸಿದೆ.  64 ಜೆಸಿಬಿ, 65 ಹಿಟಾಚಿ. 83 ಟ್ರ್ಯಾಕ್ಟರ್. 155 ಟಿಪ್ಪರ್ ಗಳ ಮೂಲಕ ಮಲೆನಾಡು-ಅರೆಮಲೆನಾಡಿನ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಷ್ಟೆ ಅಲ್ಲ. ಜಿಪಿಎಸ್ (GPS) ಮೂಲಕ ಅಪಾಯದ 47 ಸ್ಥಳಗಳನ್ನ (Dangerous Place) ಗುರುತಿಸಿದ್ದರೆ, ಸ್ಯಾಟಲೈಟ್ ಮೂಲಕ 108 ಸ್ಥಳಗಳನ್ನ ಪತ್ತೆ ಹಚ್ಚಲಾಗಿದೆ. ಜಿಲ್ಲಾಡಳಿತ ಕೂಡ 77 ಗ್ರಾಮಗಳನ್ನ ಅಪಾಯದ ಗ್ರಾಮಗಳೆಂದು (Villages) ಐಡೆಂಟಿಫೈ ಮಾಡಿದೆ.


ಪ್ರವಾಹವನ್ನ ಎದುರಿಸಲು ಸನ್ನದ್ದವಾಗಿರುವ ಕಾಫಿನಾಡ ಜಿಲ್ಲಾಡಳಿತ ತುರ್ತು ಸಂದರ್ಭದ ಅನುಕೂಲಕಕ್ಕಾಗಿ 34 ತಂಡಗಳನ್ನೂ ನಿಯೋಜನೆ ಮಾಡಿದೆ. ಈ ವರ್ಷವೂ ಮುಂಗಾರಿನ ಅಬ್ಬರ ಹೆಚ್ಚಿರುತ್ತೆ ಎಂಬ ಮಾಹಿತಿಯಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಹೈಅಲರ್ಟ್ ಘೋಷಿಸಿದೆ.


ಅಪಾಯ ಗ್ರಾಮಗಳ ಗುರುತಿಸುವಿಕೆ


ಮುಂಜಾಗೃತ ಕ್ರಮವಾಗಿ ಅಪಾಯದ ಗ್ರಾಮಗಳು ಹಾಗೂ ಸ್ಥಳಗಳನ್ನ ಐಡೆಂಟಿಫೈ ಮಾಡಿದೆ. ಜಿಪಿಎಸ್ ಮೂಲಕ 47 ಸ್ಥಳ, ಸ್ಯಾಟಲೈಟ್ ಮೂಲಕ 108 ಸ್ಥಳ ಹಾಗೂ ಜಿಲ್ಲಾಡಳಿತ 77 ಗ್ರಾಮಗಳನ್ನ ಅಪಾಯದ ಗ್ರಾಮಗಳೆಂದು ಗುರುತಿಸಿದೆ.


ಎನ್.ಆರ್.ಪುರ 21, ಮೂಡಿಗೆರೆ 33, ಚಿಕ್ಕಮಗಳೂರು 5, ಕೊಪ್ಪ 6, ಶೃಂಗೇರಿ 9, ಕಡೂರು 2, ತರೀಕೆರೆಯಲ್ಲಿ 1 ಗ್ರಾಮವನ್ನ ಜಿಲ್ಲಾಡಳಿತ ಅಪಾಯದ ಗ್ರಾಮಗಳೆಂದು ಗುರುತಿಸಿದೆ.


ಇದನ್ನೂ ಓದಿ:  BY Vijayendraಗೆ ಒಳ್ಳೆಯ ಭವಿಷ್ಯ ಇದೆ, ಎಲ್ಲೇ ನಿಂತರೂ ಗೆಲ್ತಾರೆ: ಪುತ್ರನ ಬಗ್ಗೆ BSY ಮೆಚ್ಚುಗೆ ಮಾತು


ತರಬೇತಿ ಪಡೆದ ತಂಡದ ನಿಯೋಜನೆ


ಮಳೆ ಹೆಚ್ಚಾಗಿ ಯಾವುದೇ ರೀತಿಯ ತೊಂದರೆಯಾದರೂ ಅಧಿಕಾರಿಗಳು ಅಲ್ಲಿರಬೇಕೆಂದು ಸೂಚಿಸಿ 64 ಜೆಸಿಬಿ. 65 ಹಿಟಾಚಿ. 83 ಟ್ರ್ಯಾಕ್ಟರ್. 155 ಟಿಪ್ಪರ್‍ಗಳನ್ನ ಪ್ರವಾಹವನ್ನ ಎದುರಿಸಲು ಸನ್ನದ್ಧವಾಗಿರುವಂತೆ ಆದೇಶಿಸಿದೆ. ಜೊತೆಗೆ, ಜಿಲ್ಲಾದ್ಯಂತ ಹೋಬಳಿವಾರು ತರಬೇತಿಯುಳ್ಳ 34 ತಂಡವನ್ನೂ ರಚಿಸಿದ್ದು, 290 ಹೋಂ ಗಾರ್ಡ್, 70 ಈಜು ತಜ್ಞರು ಹಾಗೂ 40 ಸ್ವಯಂ ಸೇವಕರನ್ನ ನಿಯೋಜಿಸಿದೆ.


ಸುರಕ್ಷಿತ ಪ್ರದೇಶ ಗುರುತಿಸುವಿಕೆ


ಇನ್ನು ಜಿಲ್ಲಾಡಳಿತ ಮಳೆಯ ಪ್ರಮಾಣ ಹೇಗಿರುತ್ತೋ ಎಂಬ ಕಾರಣದಿಂದ ಜಿಪಿಎಸ್ ಹಾಗೂ ಸ್ಯಾಟಲೈಟ್ ಮೂಲಕವೂ ಅಪಾಯದ ಸ್ಥಳಗಳನ್ನ ಗುರುತಿಸಿದೆ. ಜಿಪಿಎಸ್ ಮೂಲಕ 47, ಸ್ಯಾಟಲೈಟ್ ಮೂಲಕ 108 ಸ್ಥಳಗಳನ್ನ ಅಪಾಯದ ಸ್ಥಳ ಎಂದು ಗುರುತಿಸಲಾಗಿದೆ. ಇದರ ಜೊತೆ ಮಳೆ ಹೆಚ್ಚಾಗಿ ಸಾವು-ನೋವು ಸಂಭವಿಸುವ ಸಂದರ್ಭ ಬಂದರೆ ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸುರಕ್ಷಿತ ಪ್ರದೇಶವನ್ನೂ ಐಡೆಂಟಿಫೈ ಮಾಡಿದೆ.


ಎನ್.ಆರ್.ಪುರ 17, ಮೂಡಿಗೆರೆ 24, ಶೃಂಗೇರಿ 7 ಹಾಗೂ ಚಿಕ್ಕಮಗಳೂರು-ಕೊಪ್ಪದಲ್ಲಿ ತಲಾ 6 ಗ್ರಾಮಗಳನ್ನ ಸುರಕ್ಷಿತ ಪ್ರದೇಶವೆಂದು ಪಟ್ಟಿ ಮಾಡಿದೆ. ಚಾರ್ಮಾಡಿ ಘಾಟ್ ಸೇರಿದಂತೆ ಜಲಪಾತ ಹಾಗೂ ಅಪಾಯದ ಸ್ಥಳಗಳಲ್ಲಿ ಜನಸಾಮಾನ್ಯರು-ಪ್ರವಾಸಿಗರು ಮೋಜು-ಮಸ್ತಿ ಮಾಡಲು ಹೋಗಿ ಅಪಾಯಕ್ಕೆ ಸಿಲುಕಬಹುದು.


ಕೊಟ್ಟ ಮಾತು ಮರೆತಿರುವ ಜನಪ್ರತಿನಿಧಿಗಳು


ಅಂತಹಾ ಜಾಗದಲ್ಲಿ ಕಡ್ಡಾಯವಾಗಿ ನಾಮಫಲಕ ಹಾಕಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮಳೆ ಹೆಚ್ಚಾಗಿ ಆಪಾಯದ ಮುನ್ಸೂಚನೆ ಸಿಕ್ಕರೆ ಕೂಡಲೇ ಜನಸಾಮಾನ್ಯರನ್ನ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಕ್ರಮಕೈಗೊಂಡಿದ್ದಾರೆ.


ಇದನ್ನೂ ಓದಿ:  Dharwad: ಬಡತನದಲ್ಲಿ ಅರಳಿದ ಪ್ರತಿಭೆ; 9 ಚಿನ್ನದ ಪದಕ ಪಡೆದ ಸುಜಾತಾ ಜೋಡಳ್ಳಿ


ಒಟ್ಟಾರೆ, ಕಳೆದ ಮೂರು ವರ್ಷದ ಮಳೆ ಮಲೆನಾಡಿಗರ ಬದುಕನ್ನ ಮೂರಾಬಟ್ಟೆಯನ್ನಾಗಿಸುತ್ತು. ಎಲ್ಲಾ ಇದ್ದವರು ಎಲ್ಲಾ ಕಳೆದುಕೊಂಡು ಏನೂ ಇಲ್ಲದವರಂತೆ ನಿರ್ಗತಿಕರಾಗಿದ್ದರು. ನಿಮ್ಮ ಜೊತೆ ಸರ್ಕಾರ ಇದೆ ಎಂದ ಜನಪ್ರತಿನಿಧಿಗಳು ಮಳೆ ಮುಗಿದ ಬಳಿಕ ಕೊಟ್ಟ ಮಾತನ್ನ ಮರೆತಿರೋದು ವಿಪರ್ಯಸ.


ಸೂಕ್ತ ಪರಿಹಾರಕ್ಕೆ ಸ್ಥಳೀಯರ ಒತ್ತಾಯ


ಈ ಮಧ್ಯೆ ಜಿಲ್ಲಾಡಳಿತ ಮಳೆ ಆರಂಭಕ್ಕೂ ಮುನ್ನವೇ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ, ಮನೆ-ಮಠ-ಆಸ್ತಿ-ಪಾಸ್ತಿ ಎಲ್ಲಾ ಕಳೆದುಕೊಂಡು ಮೇಲೆ ಸರ್ಕಾರ ಸೂಕ್ತ ಪರಿಹಾರ ನೀಡದಿದ್ದರೆ ಜೀವ ಉಳಿಸಿಕೊಂಡು ಉಪಯೋಗವೇನು ಎಂಬ ಪ್ರಶ್ನೆ ಮಲೆನಾಡಿಗರದ್ದು. ಹಾಗಾಗಿ, ಸರ್ಕಾರ ಪ್ರವಾಹದಿಂದ ಜನರನ್ನ ರಕ್ಷಣೆ ಮಾಡುವುದರ ಜೊತೆ ಎಲ್ಲಾ ಕಳೆದುಕೊಂಡವರಿಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನಾದರೂ ನೀಡಲಿ ಅನ್ನೋದು ಜನರ ಆಗ್ರಹವಾಗಿದೆ.

Published by:Mahmadrafik K
First published: