ಈ ಬಾರಿ ತಡವಾಗಿ ಆರಂಭವಾಗಲಿದೆ ಮಳೆಗಾಲ; ಜೂನ್​ 6ರಂದು ಕೇರಳಕ್ಕೆ ಕಾಲಿಡಲಿರುವ ಮುಂಗಾರು

ಮಳೆ ತರಲಿರುವ ನೈರುತ್ಯ ಮಾನ್ಸೂನ್​ ಮಾರುತಗಳು ಜೂನ್​ 1ರಿಂದ ಸಾಮಾನ್ಯವಾಗಿ ಕೇರಳ ಮೂಲಕ ದೇಶಕ್ಕೆ ಆಗಮಿಸುತ್ತದೆ. ಆದರೆ, ಈ ಬಾರಿ ಆರುದಿನ ತಡವಾಗಿ ಮಾನ್ಸೂನ್​ ದೇವರ ನಾಡಿಗೆ ಕಾಲಿಡಲಿದ್ದು, ಸೆಪ್ಟೆಂಬರ್​ನಲ್ಲಿ ರಾಜಸ್ಥಾನದ ಮೂಲಕ ಮಳೆಗಾಲ ನಿರ್ಗಮಿಸಲಿದೆ.

Seema.R | news18
Updated:May 15, 2019, 6:05 PM IST
ಈ ಬಾರಿ ತಡವಾಗಿ ಆರಂಭವಾಗಲಿದೆ ಮಳೆಗಾಲ; ಜೂನ್​ 6ರಂದು ಕೇರಳಕ್ಕೆ ಕಾಲಿಡಲಿರುವ ಮುಂಗಾರು
ಸಾಂದರ್ಭಿಕ ಚಿತ್ರ
  • News18
  • Last Updated: May 15, 2019, 6:05 PM IST
  • Share this:
ಈ ಬಾರಿ ಮಳೆಗಾಲ ತಡವಾಗಿ ಆರಂಭವಾಗಲಿದ್ದು, ಜೂನ್​ 6ರಂದು ಕೇರಳಕ್ಕೆ ಮಾನ್ಸೂನ್​ ಕಾಲಿಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆ ತರಲಿರುವ ನೈರುತ್ಯ ಮಾನ್ಸೂನ್​ ಮಾರುತಗಳು ಜೂನ್​ 1ರಿಂದ ಸಾಮಾನ್ಯವಾಗಿ ಕೇರಳ ಮೂಲಕ ದೇಶಕ್ಕೆ ಆಗಮಿಸುತ್ತದೆ. ಆದರೆ, ಈ ಬಾರಿ ಆರು ದಿನ ತಡವಾಗಿ ಮಾನ್ಸೂನ್​ ದೇವರ ನಾಡಿಗೆ ಕಾಲಿಡಲಿದ್ದು, ಸೆಪ್ಟೆಂಬರ್​ನಲ್ಲಿ ರಾಜಸ್ಥಾನದ ಮೂಲಕ ಮಳೆಗಾಲ ನಿರ್ಗಮಿಸಲಿದೆ.

ಮಳೆ ಆಗಮನ ಕುರಿತು ನಿನ್ನೆ ಸುದ್ದಿ ನೀಡಿದ್ದ ಖಾಸಗಿ ಹವಾಮಾನ ಏಜೆನ್ಸಿ ಸ್ಕೈಮ್ಯಾಟ್​ ದಕ್ಷಿಣ ಕರಾವಳಿ ಮೂಲಕ ಜೂನ್​ 4ರಿಂದ  ಕೇರಳದಲ್ಲಿ ಮುಂಗಾರು​ ಆರಂಭವಾಗಲಿದ್ದು, ಈ ಬಾರಿ ಸಾಮಾನ್ಯ ಮಳೆಯಾಗಲಿದೆ ಎಂದು ತಿಳಿಸಿತು.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆಗಾಲ  ತಡವಾಗಿ ಆರಂಭವಾಗಲಿದೆ. ಇನ್ನು ಅಂಡಮಾನ್​ ಮತ್ತು ನಿಕೋಬರ್​ ದ್ವೀಪಗಳಲ್ಲಿ ಸಾಮಾನ್ಯವಾಗಿ ಮೇ 15ರಿಂದ 20ರ ಒಳಗೆ ಮಾನ್ಸೂನ್​ ಆರಂಭವಾದರೆ, ಕೇರಳದಲ್ಲಿ ಮೇ ಕಡೆಯವಾರ ಮಳೆಗಾಲ ಶುರುವಾಗಲಿದೆ.

ಇದನ್ನು ಓದಿ: ಒಡಲಲ್ಲಿ ಕಾಳಿ ನದಿ ಇದ್ದರೂ ಅಂತರ್ಜಲದಲ್ಲಿ ಉಪ್ಪುನೀರು; ಕುಡಿಯುವ ನೀರಿಗೆ 3 ಕಿಮೀ ಅಲೆಯುವ ಕಿನ್ನರ ಗ್ರಾ.ಪಂ. ಹಳ್ಳಿಗರು

ಕೇರಳಕ್ಕೆ  ತಡವಾಗಿ ಆಗಮಿಸಲಿರುವ ಮಾನ್ಸೂನ್​ ದೇಶದ ಉಳಿದೆಲ್ಲಾ ಕಡೆಯೂ ಮಳೆ ವಿಳಂಬಕ್ಕೆ ಕಾರಣವಾಗಲಿದೆ. ಕಳೆದ ಬಾರಿ ಮೇ 29ರಂದು ಕೇರಳದಲ್ಲಿ ಮಳೆಗಾಲ ಆರಂಭವಾಗಿತ್ತು.

ತಡವಾಗಿ ಶುರುವಾಗಲಿರುವ ಮಳೆಗಾಲದಿಂದಾಗಿ ಒಟ್ಟಾರೆ ಮಳೆಯ ಪ್ರಮಾಣದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೂ, ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನು ಇಲಾಖೆ ಹೇಳಿದೆ.'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

First published: May 15, 2019, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading