HOME » NEWS » State » MONSOON KARNATAKA DAM WATER LEVEL RAIN CONTINUE TO DRY IN OVERALL KARNATAKA RMD

Karnataka Dam Water Level: ಮಳೆ ಇಲ್ಲದೆ ತುಂಬುತ್ತಿಲ್ಲ ಜಲಾಶಯಗಳ ಒಡಲು; ಇಲ್ಲಿದೆ ಅಣೆಕಟ್ಟಿನ ನೀರಿನ ಮಟ್ಟ

ದಕ್ಷಿಣದಲ್ಲಿ ಹಾಸನ ಮೈಸೂರು ಸೇರಿದಂತೆ ಕಾವೇರಿ ಕೊಳ್ಳ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ರೈತರಿಗೆ ಅನುಕೂಲ. ಆದರೆ, ಮೈಸೂರು, ಹಾಸನಕ್ಕಿಂತ ಬೆಂಗಳೂರು ನಗರ ಪ್ರದೇಶದಲ್ಲೇ ಅಧಿಕ ಮಳೆಯಾಗಿರುವ ಕಾರಣ ಕಾವೇರಿ ಆಶ್ರಿತ ಅಣೆಕಟ್ಟೆಗಳು ಈ ವರ್ಷ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

news18-kannada
Updated:July 31, 2020, 9:11 AM IST
Karnataka Dam Water Level: ಮಳೆ ಇಲ್ಲದೆ ತುಂಬುತ್ತಿಲ್ಲ ಜಲಾಶಯಗಳ ಒಡಲು; ಇಲ್ಲಿದೆ ಅಣೆಕಟ್ಟಿನ ನೀರಿನ ಮಟ್ಟ
ಆಲಮಟ್ಟಿ ಅಣೆಕಟ್ಟು
  • Share this:
ಬೆಂಗಳೂರು (ಜು.31): ಜುಲೈ ತಿಂಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಕಳೆದ ವರ್ಷ ಈ ಹೊತ್ತಿಗೆ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಬಾರಿ ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೇಸಿಗೆ ಸಮಯದಲ್ಲಿ ನೀರಿಗೆ ಹಾಹಾಕಾರ ಏಳುವುದು ಗ್ಯಾರಂಟಿ . ಏಕೆಂದರೆ ಈಗ ಅಂದುಕೊಂಡ ಮಟ್ಟಕ್ಕೆ ಜಲಾಶಯಗಳು ತುಂಬುತ್ತಿಲ್ಲ.

ಮಲೆನಾಡು ಹಾಗೂ ಕರಾವಳಿ ತೀರ ಪ್ರದೇಶದಲ್ಲಿ ಜೂನ್​ ಹಾಗೂ ಜುಲೈ ಆರಂಭದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿತ್ತು. ಆದರೆ, ನಂತರ ಮಳೆ ಆಗಲೇ ಇಲ್ಲ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.

ದಕ್ಷಿಣದಲ್ಲಿ ಹಾಸನ ಮೈಸೂರು ಸೇರಿದಂತೆ ಕಾವೇರಿ ಕೊಳ್ಳ ಪ್ರದೇಶಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ರೈತರಿಗೆ ಅನುಕೂಲ. ಆದರೆ, ಮೈಸೂರು, ಹಾಸನಕ್ಕಿಂತ ಬೆಂಗಳೂರು ನಗರ ಪ್ರದೇಶದಲ್ಲೇ ಅಧಿಕ ಮಳೆಯಾಗಿರುವ ಕಾರಣ ಕಾವೇರಿ ಆಶ್ರಿತ ಅಣೆಕಟ್ಟೆಗಳು ಈ ವರ್ಷ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ-554.4 ಮೀಟರ್​
ಇಂದಿನ ಮಟ್ಟ- 539.79 ಮೀಟರ್​
ಗರಿಷ್ಠ ಸಾಮರ್ಥ್ಯ- 151.75 ಟಿಎಂಸಿಇಂದಿನ ನೀರು ಸಂಗ್ರಹ- 40.92 ಟಿಎಂಸಿ
ಇಂದಿನ ಒಳಹರಿವು- 5,403 ಕ್ಯೂಸೆಕ್ಸ್​
ಇಂದಿನ ಹೊರ ಹರಿವು-5,866ಕ್ಯೂಸೆಕ್ಸ್​

ವರಾಹಿ ಜಲಾಶಯ
ಗರಿಷ್ಠ ಮಟ್ಟ-594.36 ಮೀಟರ್​
ಇಂದಿನ ಮಟ್ಟ- 576.36 ಮೀಟರ್​
ಗರಿಷ್ಠ ಸಾಮರ್ಥ್ಯ- 31.10 ಟಿಎಂಸಿ
ಇಂದಿನ ನೀರು ಸಂಗ್ರಹ-6.53  ಟಿಎಂಸಿ
ಇಂದಿನ ಒಳಹರಿವು- 505  ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 505 ಕ್ಯೂಸೆಕ್ಸ್​

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ-871.42 ಮೀಟರ್​
ಇಂದಿನ ಮಟ್ಟ- 870.98 ಮೀಟರ್​
ಗರಿಷ್ಠ ಸಾಮರ್ಥ್ಯ- 8.50 ಟಿಎಂಸಿ
ಇಂದಿನ ನೀರು ಸಂಗ್ರಹ-7.99 ಟಿಎಂಸಿ
ಇಂದಿನ ಒಳಹರಿವು- 566 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 738 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ-890.63 ಮೀಟರ್​
ಇಂದಿನ ಮಟ್ಟ- 882.88 ಮೀಟರ್​
ಗರಿಷ್ಠ ಸಾಮರ್ಥ್ಯ- 35.76 ಟಿಎಂಸಿ
ಇಂದಿನ ನೀರು ಸಂಗ್ರಹ- 17.74  ಟಿಎಂಸಿ
ಇಂದಿನ ಒಳಹರಿವು- 1, 260 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 500 ಕ್ಯೂಸೆಕ್ಸ್​

ಕೆಆರ್​ಎಸ್​ ಜಲಾಶಯ​
ಗರಿಷ್ಠ ಸಂಗ್ರಹ ಸಾಮರ್ಥ್ಯ- 45.5 ಟಿಎಂಸಿ
ಇಂದಿನ ನೀರು ಸಂಗ್ರಹ- 28.13 ಟಿಎಂಸಿ
ಇಂದಿನ ಒಳಹರಿವು- 1420 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 4021 ಕ್ಯೂಸೆಕ್ಸ್​

ಕಬಿನಿ ಜಲಾಶಯ
ಗರಿಷ್ಠ ಮಟ್ಟ-696.16 ಮೀಟರ್​
ಇಂದಿನ ಮಟ್ಟ- 694.04 ಮೀಟರ್​
ಗರಿಷ್ಠ ಸಾಮರ್ಥ್ಯ- 19.52 ಟಿಎಂಸಿ
ಇಂದಿನ ನೀರು ಸಂಗ್ರಹ-15.38 ಟಿಎಂಸಿ
ಇಂದಿನ ಒಳಹರಿವು- 2084 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1663 ಕ್ಯೂಸೆಕ್ಸ್​

ತುಂಗಾ ಜಲಾಶಯ
ಗರಿಷ್ಠ ಮಟ್ಟ-497.74 ಮೀಟರ್​
ಇಂದಿನ ಮಟ್ಟ- 491.45  ಮೀಟರ್​
ಗರಿಷ್ಠ ಸಾಮರ್ಥ್ಯ- 103.16 ಟಿಎಂಸಿ
ಇಂದಿನ ನೀರು ಸಂಗ್ರಹ- 39.93 ಟಿಎಂಸಿ
ಇಂದಿನ ಒಳಹರಿವು- 5134 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 4237 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ-662.94 ಮೀಟರ್​
ಇಂದಿನ ಮಟ್ಟ- 652.36  ಮೀಟರ್​
ಗರಿಷ್ಠ ಸಾಮರ್ಥ್ಯ- 48.98 ಟಿಎಂಸಿ
ಇಂದಿನ ನೀರು ಸಂಗ್ರಹ- 27.16 ಟಿಎಂಸಿ
ಇಂದಿನ ಒಳಹರಿವು- 2,407 ​ಕ್ಯೂಸೆಕ್ಸ್
ಇಂದಿನ ಹೊರ ಹರಿವು- 143 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ-633.83 ಮೀಟರ್​
ಇಂದಿನ ಮಟ್ಟ- 628.20 ಮೀಟರ್​
ಗರಿಷ್ಠ ಸಾಮರ್ಥ್ಯ- 34.35 ಟಿಎಂಸಿ
ಇಂದಿನ ನೀರು ಸಂಗ್ರಹ- 17.38 ಟಿಎಂಸಿ
ಇಂದಿನ ಒಳಹರಿವು- 627 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 164ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ-519.63ಮೀಟರ್​
ಇಂದಿನ ಮಟ್ಟ- 517.37 ಮೀಟರ್​
ಗರಿಷ್ಠ ಸಾಮರ್ಥ್ಯ- 119.26 ಟಿಎಂಸಿ
ಇಂದಿನ ನೀರು ಸಂಗ್ರಹ- 88. 76 ಟಿಎಂಸಿ
ಇಂದಿನ ಒಳಹರಿವು- 12,257 ಕ್ಯೂಸೆಕ್ಸ್​
ಇಂದಿನ ಹೊರ ಹರಿವು- 1,922 ಕ್ಯೂಸೆಕ್ಸ್​
Published by: Rajesh Duggumane
First published: July 31, 2020, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories