(ವರದಿ: ಡಿಪಿ ಸತೀಶ್)
ಜೂನ್ ತಿಂಗಳ ಅವಧಿಯಲ್ಲಿ ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಮಳೆ ಎರೆಯುವ ನೈರುತ್ಯ ಮಾನ್ಸೂನ್ ಅಂತ್ಯಗೊಂಡಿದೆ. ಈ ಬಾರಿ ಅಂದುಕೊಂಡ ಮಟ್ಟಿಗೆ ಈ ಮಾನ್ಸೂನ್ ಮಳೆ ನೀಡಿಲ್ಲ. ಇದು ನಾಲ್ಕು ರಾಜ್ಯಗಳನ್ನು ಚಿಂತೆಗೀಡು ಮಾಡಿದೆ.
ಒಂದು ಲೆಕ್ಕಾಚಾರದ ಪ್ರಕಾರ ಜೂನ್ ಅವಧಿಯಲ್ಲಿ ಶೇ.25-40 ರಷ್ಟು ಮಳೆಯ ಕೊರತೆ ಆಗಿದೆಯಂತೆ. ಇದು, ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಆತಂಕವನ್ನು ತಂದೊಡ್ಡಿದೆ. ಭಾರತೀಯ ಹವಾಮಾನ ಇಲಾಖೆ ಈ ಬಾರಿ ಮಾನ್ಸೂನ್ನಲ್ಲಿ ಯಾವುದೆ ವ್ಯತ್ಯಯ ಆಗುವುದಿಲ್ಲ ಎಂದು ಹೇಳಿತ್ತು. ಆದರೆ, ಹವಾಮಾನ ಇಲಾಖೆ ಲೆಕ್ಕಾಚಾರ ತಪ್ಪಿದೆ. ಇದರಿಂದ ಮುಂದಿನ ಮೂರು ತಿಂಗಳು ಮಳೆ ಹೇಗಾಗಲಿದೆ ಎನ್ನುವ ಪ್ರಶ್ನೆ ಕಾಡಿದೆ.
2018 ಮತ್ತು 2019ರ ಅವಧಿಯಲ್ಲಿ ಕೇರಳ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿದಿತ್ತು. ಪರಿಣಾಮ ಪ್ರವಾಹವೇ ಸೃಷ್ಟಿಯಾಗಿಬಿಟ್ಟಿತ್ತು, ಆದರೆ, ಈಗ ಈ ರಾಜ್ಯದ ಜನರು ಮಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಮೇ ಕೊನೆಯಲ್ಲಿ ಹಾಗೂ ಜೂನ್ ಆರಂಭದಲ್ಲಿ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ಜನರಲ್ಲಿ ಆಶಾಭಾವ ಮೂಡಿತ್ತು. ಆದರೆ ನಂತರದ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಇದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ