Monkey: ಅನ್ನ ಹಾಕಿದವರ ಮೇಲೆಯೇ ಅಟ್ಯಾಕ್! ಕೊನೆಗೂ ಬಂಧಿಯಾಯ್ತು ಹುಚ್ಚು ಮಂಗ

ಹುಚ್ಚು ಮಂಗನನ್ನು ಬಂಧಿಸಿದ ಅರಣ್ಯಾಧಿಕಾರಿಗಳು

ಹುಚ್ಚು ಮಂಗನನ್ನು ಬಂಧಿಸಿದ ಅರಣ್ಯಾಧಿಕಾರಿಗಳು

ಅನ್ನ ಹಾಕಿ ಆರೈಕೆ ಮಾಡಿದ ಜನರ ಮೇಲೆಯೇ ಮಂಗ ಡೆಡ್ಲೀ ಅಟ್ಯಾಕ್ ಮಾಡಿದ್ದು, ತಬ್ಬಿಬ್ಬುಗೊಂಡ ಗ್ರಾಮಸ್ಥರು ಅದನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಮಂಗನ ದಾಳಿಗೆ ಗುರಿಯಾದವರಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

  • Share this:

ಹುಬ್ಬಳ್ಳಿ: ಜನರ ಪ್ರೀತಿಗೆ (Love) ಪಾತ್ರವಾಗಿದ್ದ ಮಂಗನೇ ಜನರ ಮೇಲೆ ದಾಳಿ (Attack) ಮಾಡಿದ್ದರಿಂದ ಗ್ರಾಮಸ್ಥರು ನಿದ್ರೆಗೆಡುವ ಪರಿಸ್ಥಿತಿ ನಿರ್ಮಾಣವಾದ ಘಟನೆ ಹುಬ್ಬಳ್ಳಿ (Hubballi) ತಾಲೂಕಿನ ಹಳ್ಯಾಳದಲ್ಲಿ ನಡೆದಿದೆ. ಮಂಗನ (Monkey) ಹುಚ್ಚಾಟಕ್ಕೆ ಜನ ಪೆಚ್ಚಾಗಿದ್ದಾರೆ. ಜನರನ್ನು ಕಂಡ ಕಂಡಲ್ಲಿ ಕಚ್ಚಿ ಮೈತುಂಬ ಗಾಯಗೊಳಿಸುತ್ತಿದ್ದ ಮಂಗ ಕ್ಷಣಾರ್ಧದಲ್ಲಿ ಅಲ್ಲಿಂದ ಎಸ್ಕೇಪ್ ಆಗುತ್ತಿತ್ತು. ಎರಡು ದಿನ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಗ್ರಾಮಸ್ಥರು ಮಂಗನ ಹಿಡಿಯೋಕೆ ಪ್ರಯತ್ನಿಸಿದ್ದಾರೆ. ಯಾರ ಮೇಲೆ ಯಾವಾಗ ದಾಳಿ ಮಾಡುತ್ತೋ ಅನ್ನೋ ಆತಂಕ ಜನರನ್ನು ಆವರಿಸಿತ್ತು. ಕೈ ತುತ್ತು ನೀಡಿ ಬೆಳೆಸಿದ ಮಂಗನಿಂದಲೇ ಕೃತ್ಯ ನಡೆದಿದೆ. ಹಲವು ಜನರಿಗೆ ಮನಬಂದಂತೆ ಮಂಗ ಕಚ್ಚಿದೆ. ಗಂಭೀರವಾಗಿ ಗಾಯಗೊಂಡ ಗ್ರಾಮಸ್ಥರಿಗೆ ಕಿಮ್ಸ್ ನಲ್ಲಿ (Kims) ಚಿಕಿತ್ಸೆ ನೀಡಲಾಗುತ್ತಿದೆ. ಮಂಗಗಳ ಜೊತೆಗೆ ಗ್ರಾಮದ ಜನ ಉತ್ತಮ ಒಡನಾಟ ಹೊಂದಿದ್ದರು. ಮನೆಯ ಸದಸ್ಯರಂತೆ ಊಟ ನೀಡಿ ಉಪಚಾರ ಮಾಡ್ತಿದ್ದರು.


ಹುಚ್ಚು ಹಿಡಿದ ಮಂಗನಿಂದ ದಾಳಿ


ಇಷ್ಟುದಿನ ಅನ್ಯೋನ್ಯವಾಗಿದ್ದ ಮಂಗಗಳ ಗುಂಪಿನಲ್ಲಿ ಒಂದು ಮಂಗಕ್ಕೆ ಹುಚ್ಚು ಹಿಡಿದಿದೆ ಎನ್ನಲಾಗಿದೆ. ಹುಚ್ಚು ಹಿಡಿದ ಮಂಗ ಗ್ರಾಮದ ಹಲವರ ಮೇಲೆ ದಾಳಿ ಮಾಡಿದೆ. ಐವರನ್ನು ಗಂಭೀರವಾಗಿ ಗಾಯಗೊಳಿಸಿದೆ. ಪ್ರೀತಿಯಿಂದ ಮಂಗನ ಜೊತೆಗೆ ಒಡನಾಟ ಬೆಳಿಸಿಕೊಂಡಿದ್ದವರು ಏಕಾಏಕಿ ಶಾಕ್ ಆಗಿದ್ದಾರೆ. ಗ್ರಾಮದಲ್ಲಿ ಅಶಾಂತಿಯನ್ನು ಹುಟ್ಟು ಹಾಕಿದ್ದ ಮಂಗನ ಹಿಡಿಯೋಕೆ ಕಾರ್ಯಾಚರಣೆ ನಡೆಸಲಾಗಿತ್ತು.


ಹುಚ್ಚು ಮಂಗನನ್ನು ಹಿಡಿದ ಗ್ರಾಮಸ್ಥರು


ಅರಣ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ನೆರವಿನಿಂದ ಕೊನೆಗೂ ಹುಚ್ಚು ಮಂಗನನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಸೂಕ್ತ ಚಿಕಿತ್ಸೆ ನೀಡಿದ ನಂತರ ಮಂಗ ಅರಣ್ಯಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಕುರಿತು  ಪ್ರತಿಕ್ರಿಯಿಸಿರುವ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಸಿ, ಹುಚ್ಚಾಟ ನಡೆಸಿದ ಮಂಗವನ್ನು ಹಿಡಿದು ಮುಂಡಗೋಡ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲಾಗಿದೆ. ಹೀಗಾಗಿ ಯಾರೂ ಆತಂಕ ಪಡೋ ಅಗತ್ಯವಿಲ್ಲ ಎಂದಿದಾರೆ.


ಇದನ್ನೂ ಓದಿ: Drinks: ಇದು ಕೂಗೋ ಕೋಳಿ ಅಲ್ಲ, ಕುಡುಕ ಕೋಳಿ! ಈ ಹುಂಜ ಪ್ರತಿ ತಿಂಗಳು 2 ಸಾವಿರ ರೂಪಾಯಿಯ ಎಣ್ಣೆ ಕುಡಿಯುತ್ತೆ!


ಪಬ್, ಬಾರ್ ಮಾಲೀಕರಿಗೆ ವಾರ್ನ್


ಪಬ್ ಗಳಲ್ಲಿ ಮ್ಯೂಸಿಕ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಪಬ್ ಮಾಲೀಕರಿಗೆ ಹುಬ್ಬಳ್ಳಿ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. ಹುಬ್ಬಳ್ಳಿ ನಗರದ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿರೋ ಪೊಲೀಸರು,  ಪಬ್ ಗಳ ಮೇಲೆ ಅಂಕುಶ ಹಾಕೋಕೆ ಸಿದ್ಧತೆ ನಡೆಸಿದ್ದಾರೆ. ಗೋಕುಲ ರೋಡ್ ಪೊಲೀಸ್ ಠಾಣೆ ಪಿಐ ಕಾಲಿಮಿರ್ಚಿ ನೇತೃತ್ವದಲ್ಲಿ ಸಭೆ ನಡೆಯಿತು. ಗೋಕುಲ ರೋಡ್ ಠಾಣೆ ವ್ಯಾಪ್ತಿಯ ಬಾರ್ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.


ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಸಭೆ


ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ಬಾರ್ ಮತ್ತು ಪಬ್ ಗಳಲ್ಲಿ ಮಾಲೀಕರಿಂದ ವಿಪರೀತ ಶಬ್ದ ಮಾಲಿನ್ಯವಾಗುತ್ತಿದೆ. ಮದುವೆ ಸಮಾರಂಭ ಆಯೋಜಿಸಿ, ಸೌಂಡ್ ಹಾಕಿ ನ್ಯೂಸೆನ್ಸ್ ಕ್ರಿಯೇಟ್ ಮಾಡುತ್ತಿದ್ದಾರೆಂದು ಆರೋಪಿಸಿ ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಸಭೆ ಮಾಡಲಾಯಿತು.


ಇದನ್ನೂ ಓದಿ: Dog's Loyalty: ಶೂಟ್‌ ಔಟ್‌ ವೇಳೆ ಹೀರೋ ಆದ ನಾಯಿ, ತಾನು ಸತ್ತು ಮಾಲೀಕನನ್ನು ಬದುಕಿಸಿದ ಶ್ವಾನ!


ಪೊಲೀಸರಿಂದ ಎಚ್ಚರಿಕೆ


ಬಾರ್ ಗಳಲ್ಲಿ ಅನಗತ್ಯ ಧ್ವನಿವರ್ಧಕ ಬಳಸುವಂತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತ ಪರವಾನಗಿ ಪಡೀಬೇಕು. ಸಮಯಕ್ಕೆ ಸರಿಯಾಗಿ ಬಾರ್ ಕ್ಲೋಸ್ ಮಾಡಬೇಕು.  ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದ ಮಾಲೀಕರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳೋದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ಎಚ್ಚರಿಕೆ ನೀಡಿದ್ದಾರೆ.


(ವರದಿ: ಶಿವರಾಮ ಅಸುಂಡಿ)

top videos
    First published: