• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Monkey: ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಕುಳಿತು ಊಟ ಮಾಡಿದ ಮಂಗ; ಅಪರೂಪದ ವಿಡಿಯೋ ನೋಡಿ

Monkey: ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಕುಳಿತು ಊಟ ಮಾಡಿದ ಮಂಗ; ಅಪರೂಪದ ವಿಡಿಯೋ ನೋಡಿ

ಹೆದರಿಕೆ ಇಲ್ಲದೆ ಮಹಿಳೆಯೊಂದಿಗೆ ಕುಳಿತು ಊಟ ಮಾಡಿದ ಕೋತಿ

ಹೆದರಿಕೆ ಇಲ್ಲದೆ ಮಹಿಳೆಯೊಂದಿಗೆ ಕುಳಿತು ಊಟ ಮಾಡಿದ ಕೋತಿ

ಅಂಗನವಾಡಿ ಕಾರ್ಯಕರ್ತೆ ತಟ್ಟೆಯಲ್ಲಿ ಆಹಾರವನ್ನು ಹಾಕಿದರೂ ಅವರ ಜೊತೆಗೆ ಕುಳಿತು ಹೆದರದೆ ಊಟ ಮಾಡಿರುವ ಅಪರೂಪದ ದೃಶ್ಯಗಳು ಸ್ಥಳೀಯರ‌ ಮೊಬೈಲ್ ನಲ್ಲಿ ಸೆರೆಯಾಗಿದೆ.

 • News18 Kannada
 • 4-MIN READ
 • Last Updated :
 • Gadag, India
 • Share this:

ಗದಗ: ಅಂಗನವಾಡಿ ಕಾರ್ಯಕರ್ತೆಯರು (Anganwadi Workers) ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಬಳಿ ಬಂದ ಕೋತಿಯೊಂದು (Monkey) ಯಾವುದೇ ಅಂಜಿಕೆ ಇಲ್ಲದೆ ಅವರೊಂದಿಗೆ ಕುಳಿತು ಊಟ (Lunch) ಮಾಡಿರುವ ಅಪರೂಪದ ಘಟನೆ ಗದಗ (Gadaga) ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ. ಶಿರಹಟ್ಟಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ (Women and Child Development Department) ಕಚೇರಿ ಆವರಣದಲ್ಲಿ ಘಟನೆ ನಡೆದಿದೆ. ಸಭೆಯೊಂದರಲ್ಲಿ ಭಾಗಿಯಾಗಲು ಬಂದಿದ್ದ ಅಂಗನವಾಡಿ ಕಾರ್ಯಕರ್ತೆಯರು ಊಟದ ಸಮಯದಲ್ಲಿ ಮರದ ಕೆಳಗೆ ಊಟಕ್ಕೆ ಕುಳಿತಿದ್ದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಬಾಗಿರತಿ ಸಾತಪುತೆ ಮಂಗನಿಗೆ ತುತ್ತು ಮಾಡಿ ಊಟ ಮಾಡಿಸಿದ್ದಾರೆ.


ಅಂಗನವಾಡಿ ಕಾರ್ಯಕರ್ತೆ ನಾಗಲಕ್ಷ್ಮಿ ಕುಲಕರ್ಣಿ, ಲಕ್ಷ್ಮಿ ನವಲೆ, ರೂಪಾ ಕಟ್ಟಿಮನಿ ಹಾಗೂ ಭಾಗೀರತಿ ನಾಲ್ಕು ಜನ ಊಟ ಮಾಡುವಾಗ ಹಸಿದು ಬಂದ ಮಂಗನಿಗೆ ಊಟ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಮಹಿಳೆಯರು ತಟ್ಟೆಯಲ್ಲಿ ಆಹಾರವನ್ನು ಹಾಕಿದರೂ ಅವರ ಜೊತೆಗೆ ಕುಳಿತು ಹೆದರದೆ ಊಟ ಮಾಡಿರುವ ಅಪರೂಪದ ದೃಶ್ಯಗಳು ಸ್ಥಳೀಯರ‌ ಮೊಬೈಲ್ ನಲ್ಲಿ ಸೆರೆಯಾಗಿದೆ.


ಇದನ್ನೂ ಓದಿ:  BS Yediyurappa: ಶಾಸಕಿಯ ಹೆಗಲ ಮೇಲೆ ಕೈಹಾಕಿ ನನ್ನ ಜೊತೆಗಿದ್ದಾರೆ ಎಂಬ ಮಾಜಿ ಸಿಎಂ ಬಿಎಸ್​​ವೈ
ಅಕ್ರಮ ಅಂಗಡಿ, ಮನೆಗಳು ತೆರವು


ವಿಜಯಪುರದಲ್ಲಿ ಇಂದು ಜೆಸಿಬಿಗಳು ಘರ್ಜಿಸಿವೆ. ವಿಜಯಪುರ ನಗರದ ಅತಾವುಲ್ಲಾ ಸರ್ಕಲ್ ಬಳಿ ಫುಟ್‌ಪಾತ್​ನಲ್ಲಿ ಅತಿಕ್ರಮವಾಗಿ ನಿರ್ಮಿಸಿದ್ದ ಅಂಗಡಿ ಮತ್ತು ಮನೆಗಳ ತೆರವು ಕಾರ್ಯಾಚರಣೆ ನಡೆದಿದೆ.


ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ್ದ ಅಂಗಡಿ ಮತ್ತು ಮನೆಗಳ ತೆರವು ಕಾರ್ಯಾಚರಣೆ ನಡೆದಿದೆ. ಅತಿಕ್ರಮಣ ಮಾಡಿದ್ದವರಿಗೆ ನೋಟಿಸ್ ನೀಡಿ ತೆರವು ಕಾರ್ಯಾಚರಣೆ ನಡೆಸಲಾಗ್ತಿದೆ. ಪಾಲಿಕೆ ಆಯುಕ್ತ, ಉಪ ಆಯುಕ್ತರ ಸಮ್ಮುಖದಲ್ಲಿ ತೆರವು ಕಾರ್ಯಚರಣೆ ನಡೆಯುತ್ತಿದೆ.
ಮಚ್ಚಿನಿಂದ ಹೊಡೆದು ಪತ್ನಿಯನ್ನು ಕೊಲೆಗೈದ ಪತಿ


ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ (30) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿ ಪತಿ ಮಹೇಶ್​​ನನ್ನು ಪೊಲೀಸರು ಬಂಧಿಸಿದ್ದಾರೆ.


ದಂಪತಿಗಳ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ಆಗಾಗ್ಗೆ ಜಗಳ ನಡೆಯುತ್ತಿತ್ತು, ಇಂದು ಜಗಳ ಜಗಳ ತಾರಕ್ಕೇರಿದೆ. ಕೋಪದಲ್ಲಿ ಪತಿ ಮಹೇಶ್​ ಮಚ್ಚಿನಿಂದ ಹೊಡೆದು ಪತ್ನಿಯನ್ನು ಕೊಲೆಗೈದಿದ್ದಾನೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

First published: