ಎಣ್ಣೆ ಕುಡಿಸಿದವರ ಮೇಲೆ ರಾಂಗ್ ಆದ ಕೋತಿ: ಬಾರ್​ನಲ್ಲಿ ಮಂಗನಾಟ


Updated:February 13, 2018, 6:20 PM IST
ಎಣ್ಣೆ ಕುಡಿಸಿದವರ ಮೇಲೆ ರಾಂಗ್ ಆದ ಕೋತಿ: ಬಾರ್​ನಲ್ಲಿ ಮಂಗನಾಟ

Updated: February 13, 2018, 6:20 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಫೆ.13): ಬಾರ್ ಗೆ ಬಂದಿದ್ದ ಕೋತಿಯೊಂದಕ್ಕೆ ಪುಂಡರು ಮದ್ಯ ಕುಡಿಸಿ, ಇದೀಗ ಕುಡಿಯುವುದನ್ನು ಚಟ ಮಾಡಿಕೊಂಡ ಕೋತಿ ಪ್ರತಿ ನಿತ್ಯ ಬಾರ್ ಬರಲಾರಂಭಿಸಿದೆ. ಆದರೆ ಕಳೆದ ರಾತ್ರಿ ಕಮ್ಮನಹಳ್ಳಿಯ ದಿವಾಕರ್ ಬಾರ್​ನಲ್ಲಿ ನಶೆ ಏರಿದ ಮಂಗನ ಪುಂಡಾಟ ಹೆಚ್ಚಾಗಿದೆ.

ಮದ್ಯದ ಅಮಲೇರಿಸಿಕೊಂಡ ಕೋತಿ ಸ್ಥಳೀಯರ ಮೇಲೆರಗಲು ಯತ್ನಿಸಿದೆ. ಇದರಿಂದ ಭಯಬಿದ್ದ ಗ್ರಾಹಕರು ಟೇಬಲ್ ಬಿಟ್ಟು ಓಡಿ ಹೋಗಿದ್ದಾರೆ. ಬಳಿಕ ಸುಧಾರಿಸಿಕೊಂಡ ಜನರು ಪ್ರಾಣಿ ದಯಾ ಸಂಘಕ್ಕೆ ಕರೆ ಮಾಡಿದ್ದಾರೆ. ರಾತ್ರಿ 2:30 ವರೆಗೂ ಕೋತಿಯನ್ನು ಹಿಡಿದು ರಕ್ಷಿಸುವ ಕಾರ್ಯ ನಡೆದಿದೆ. ಸದ್ಯ ಕೋತಿಗೆ ಕುಡಿಸಿದವರ ಮೇಲೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ