HOME » NEWS » State » MONKEY DISEASE AT CHIKKAMAGLURU BRING PANIC OF MONKEY DISEASE AMONG LOCALS HK

ಕಾಫಿ ನಾಡಿಗೆ ಕಾಲಿಟ್ಟ ಮಂಗನ ಕಾಯಿಲೆ - ಕೊಪ್ಪ ತಾಲೂಕಿನಲ್ಲಿ ವೈರಸ್ ಪತ್ತೆ

ಇದೀಗ ಕೆಎಫ್​​ಡಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜನರಿಗೆ ಔಷಧಿ ನೀಡಲು ವೈದ್ಯರ ತಂಡ ಮುಂದಾಗಿದೆ

G Hareeshkumar | news18-kannada
Updated:January 24, 2020, 10:20 AM IST
ಕಾಫಿ ನಾಡಿಗೆ ಕಾಲಿಟ್ಟ ಮಂಗನ ಕಾಯಿಲೆ - ಕೊಪ್ಪ ತಾಲೂಕಿನಲ್ಲಿ ವೈರಸ್ ಪತ್ತೆ
ಔಷಧಿ ಸಿಂಪಡಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ
  • Share this:
ಚಿಕ್ಕಮಗಳೂರು (ಜ.24) : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೆಎಫ್ಡಿ ವೈರಸ್ ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿಗ್ರಾಮದಲ್ಲಿ ವೈರಸ್ ಪತ್ತೆಯಾಗಿದ್ದು ಮಂಗನ ಕಾಯಿಲೆ ಭೀತಿಯಲ್ಲಿ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.

ಜನವರಿ 9ರಂದು ಪ್ರಾಣಿಗಳ ಉಣ್ಣೆಯಲ್ಲಿ ಪಾಸಿಟಿವ್ ಅಂಶ ಇರೋದನ್ನ ಶಿವಮೊಗ್ಗ ಪ್ರಯೋಗಾಲಯ ಪತ್ತೆಹಚ್ಚಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 35 ಮಂಗಗಳು ಸಾವನ್ನಪ್ಪಿದ್ದವು, ಅದರಲ್ಲಿ 18 ಮಂಗಗಳ ಅಂಗಾಂಗ ಪರೀಕ್ಷೆ ನಡೆಸಲಾಗಿತ್ತು. ಆ ವೇಳೆ ಒಂದು ಮಂಗದ ದೇಹದಲ್ಲಿ ಪಾಸಿಟಿವ್ ವೈರಸ್ ಪತ್ತೆಯಾಗಿತ್ತು. ಅಲ್ಲದೆ ಕೊಪ್ಪ ತಾಲೂಕಿನ ಜಯಪುರದ ವ್ಯಕ್ತಿಯೊಬ್ಬರ ದೇಹದಲ್ಲೂ ಕೂಡ ಪಾಸಿಟಿವ್ ಅಂಶ ಪತ್ತೆಯಾಗಿತ್ತು.

ಇದೀಗ ಕೆಎಫ್​​ಡಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜನರಿಗೆ ಔಷಧಿ ನೀಡಲು ವೈದ್ಯರ ತಂಡ ಮುಂದಾಗಿದೆ. ಜಿಲ್ಲಾ ವಿಚಕ್ಷಣ ಅಧಿಕಾರಿ ಮಂಜುನಾಥ್ ನೇತೃತ್ವದ ತಂಡದಿಂದ ತರೀಕೆರೆ ಮೂಡಿಗೆರೆ ಕೊಪ್ಪ ತಾಲ್ಲೂಕಿನ ನೂರಾರು ಜನರಿಗೆ ಔಷಧಿ ನೀಡಲಾಗುತ್ತಿದೆ. ಅಲ್ಲದೆ ಮಂಗನ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

chikkamagaluru
ಜನರಿಗೆ ಲಸಿಕೆ ಹಾಕುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳು


ಕಳೆದ ವರ್ಷ ಜಿಲ್ಲೆಯಲ್ಲಿ 35 ಮಂಗಗಳು ಸಾವನ್ನಪ್ಪಿದವು. 18 ಮಂಗಗಳ ಅಂಗಾಗ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಒಂದು ಮಂಗದ ದೇಹದಲ್ಲಿ ಪಾಜಿಟಿವ್ ವೈರಸ್ ಪತ್ತೆಯಾಗಿತ್ತು. ಕಳೆದ ವರ್ಷ ಕೊಪ್ಪದ ಜಯಪುರದ ಹಾಡುಗಾರು ಗ್ರಾಮದಲ್ಲಿ ಒಬ್ಬರಲ್ಲಿ ಪಾಜಿಟಿವ್ ಅಂಶ ಪತ್ತೆಯಾಗಿತ್ತು. ಮುಂಜಾಗ್ರತಾ ಕ್ರಮ ಕೈಗೊಂಡಿರುವ ಆರೋಗ್ಯ ಇಲಾಖೆಯು ಜಿಲ್ಲೆಯ ತರಿಕೇರೆ, ಮೂಡಿಗೆರೆ, ಕೊಪ್ಪ ತಾಲೂಕಿನ ಹಲವು ಗ್ರಾಮದಲ್ಲಿ ಜನರಿಗೆ ಔಷಧಿ ವೈದ್ಯರು ನೀಡಿದ್ದಾರೆ.

ಇದನ್ನೂ ಓದಿ : ಭದ್ರ ನದಿ ಸೇರುತ್ತಿದೆ ಮಾಂಸ ತ್ಯಾಜ್ಯ; ಮೊಸಳೆ ಭೀತಿಯಲ್ಲಿ ಚಿಕ್ಕಮಗಳೂರಿನ ಜನರು

ಇದೀಗ ಮತ್ತೆ ಮಂಗನ ಕಾಯಿಲೆಯ ರೋಗ ಬಂದಿರುವುದರಿಂದ ಜಿಲ್ಲಾಡಳಿತಕ್ಕೆ ಬಿಸಿ ತುಪ್ಪವಾಗಿದೆ. ಪ್ರಯೋಗಾಲಯದಿಂದ ವರದಿ ಬಂದ ಮೇಲೆ ಇಲ್ಲಿನ ವಾಸ್ತವ ಸ್ಥಿತಿಗತಿಯ ಬಗ್ಗೆ ಮನವರಿಕೆಯಾಗಲಿದೆ. 
Youtube Video
First published: January 24, 2020, 9:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories