• Home
  • »
  • News
  • »
  • state
  • »
  • Hubballi: ವಾಣಿಜ್ಯ ನಗರಿಗೆ ಮಂಕಿ ಕ್ಯಾಪ್ ಕಳ್ಳನ ಎಂಟ್ರಿ ; ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಸರಣಿ ಕಳ್ಳತನ

Hubballi: ವಾಣಿಜ್ಯ ನಗರಿಗೆ ಮಂಕಿ ಕ್ಯಾಪ್ ಕಳ್ಳನ ಎಂಟ್ರಿ ; ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಸರಣಿ ಕಳ್ಳತನ

ಮಂಕಿ ಕ್ಯಾಪ್ ಕಳ್ಳ

ಮಂಕಿ ಕ್ಯಾಪ್ ಕಳ್ಳ

ಈತ ಮಾಡಿದ ಬಹುತೇಕ ಮನೆಗಳಲ್ಲಿ ಯಾರೂ ಇರಲಿಲ್ಲ. ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಟಾರ್ಗೆಟ್ ಮಾಡುವ ಕಳ್ಳ, ತನ್ನ ಕರಾಮತ್ತು ತೋರಿಸಿ ಎಸ್ಕೆಪ್ ಆಗುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಜೊತೆ ಧಾರವಾಡದ ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.

  • Share this:

ಹುಬ್ಬಳ್ಳಿ: ಹುಬ್ಬಳ್ಳಿ ವಾಣಿಜ್ಯ ನಗರಿ, ಛೋಟಾ ಮುಂಬೈ ಅಂತಲೇ ಖ್ಯಾತಿ ಪಡೆದಿದೆ. ಇಂತಹ ನಗರಕ್ಕೆ ಇದೀಗ ಆಗಂತುಕನೋರ್ವ ಎಂಟ್ರಿ ಕೊಟ್ಟಿದ್ದಾನೆ. ಮಂಕಿ ಕ್ಯಾಪ್ ಸ್ಪೆಷಲಿಸ್ಟ್ (Monkey Thieve) ಆಗಿರೋ ಇವನು ಹುಬ್ಬಳ್ಳಿಯ (Hubballi) ವಿವಿಧ ಬಡಾವಣೆಗಳಲ್ಲಿ ಕೈಚಳಕ ತೋರಿಸಿ ಕಳ್ಳತನ (Theft) ಮಾಡಿ ಎಸ್ಕೇಪ್ ಆಗಿದ್ದಾನೆ. ಬೆಳಗಿನ ಜಾವ ಯಾರೂ ಇಲ್ಲದ ಮನೆಗಳಿಗೆ ನಗ್ಗುವ ಇವನು, ಕಣ್ಣು ಮಿಟುಕಿಸುವ ವೇಳೆಯಲ್ಲಿ ಕಳ್ಳತನ ಮಾಡಿ, ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಇದರಿಂದ ಜನರು ತೀವ್ರ ಆತಂಕಗೊಂಡಿದ್ದರೆ. ಪೊಲೀಸರಿಗೆ ಇವನು ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾನೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳ್ಳರ ಕೈಚಳಕ ಜೋರಾಗಿದೆ. ನಗರದಲ್ಲಿ ಮತ್ತೆ ಸರಣಿ ಕಳ್ಳತನ ಪ್ರಕರಣ ನಡೆದಿದೆ.


ಕೇಶ್ವಾಪುರ, ಮಯೂರಿ ಎಸ್ಟೇಟ್ ಮತ್ತಿತರ ಕಡೆ ಸರಣಿ ಕಳ್ಳತನ ನಡೆದಿದೆ. ರಾತ್ರಿ ಹೊತ್ತು ಖದೀಮರು ರಾಜಾರೋಷವಾಗಿ ಬಂದು ಕಳ್ಳತನ ಮಾಡ್ತಿದ್ದಾರೆ. ಮನೆಗಳಿಗೆ ನುಗ್ಗಿ ಚಿನ್ನ, ಬೆಳ್ಳಿ, ನಗದು ಕದಿಯುತ್ತಿದ್ದಾರೆ. ಯಾರೂ ಇಲ್ಲದ ಮನೆಗಳೇ ಕಳ್ಳರ ಟಾರ್ಗೆಟ್ ಆಗಿವೆ.


ಪ್ರಹ್ಲಾದ್ ಜೋಶಿ ಮನೆ ಸಮೀಪದಲ್ಲಿಯೇ ಕಳ್ಳತನ


ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಯ ಸಮೀಪದ ಮನೆಯಲ್ಲಿಯೂ ಕಳ್ಳತನ ನಡೆದಿದೆ. ಮಯೂರಿ ಎಸ್ಟೇಟ್​​ನಲ್ಲಿ ಐದಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನವಾಗಿದೆ.


ಶಾರದಾ ಎನ್ನುವವರ ಮನೆಯಲ್ಲಿ 3 ಲಕ್ಷ ಮೌಲ್ಯದ ಬೆಳ್ಳಿ ಆಭರಣ, 25 ಸಾವಿರ ರೂಪಾಯಿ ನಗದು ಕಳುವಾಗಿದೆ. ಮತ್ತೊಂದು ಮನೆಯಲ್ಲಿ ಚಿನ್ನಾಭರಣ, ನಗದು ಕಳ್ಳತನವಾಗಿದೆ. ಒಬ್ಬನೇ ಕಳ್ಳನಿಂದ ಸರಣಿ ಕಳ್ಳತನ ನಡೆದಿದೆ. ಬಾಗಿಲಿನ ಬೀಗ ಒಡೆದು ಒಳನುಗ್ಗಿ ಕಳ್ಳತನ ಮಾಡಲಾಗಿದೆ. ಕಳ್ಳನ ಚಲನವಲನದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಏಕಾಏಕಿ ಕಳ್ಳತನ ಹೆಚ್ಚಿರೋದ್ರಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ.


ಯಾರೂ ಇಲ್ಲದ ಮನೆಗಳೇ ಇವನ ಟಾರ್ಗೆಟ್


ಮಂಕಿ ಕ್ಯಾಪ್ ಕಳ್ಳನ ಕೈಚಳಕ ಕೇವಲ ಒಂದೇ ಬಡಾವಣೆಗೆ ಸೀಮಿತವಾಗಿಲ್ಲ. ವಿವಿಧ ಬಡಾವಣೆಗಳಲ್ಲಿ ಸಿಸಿ ಕ್ಯಾಮೆರಾದಲ್ಲಿ ಇವನ ದೃಶ್ಯಗಳು ಸೆರೆಯಾಗಿವೆ. ಎಲ್ಲಾ ಕಡೆಯೂ ಮಂಕಿ ಕ್ಯಾಪ್ ಹಾಕಿಕೊಂಡು, ಮನೆ ಗೋಡೆಗಳ ಮೇಲೆ ಜಂಪ್ ಮಾಡಿ, ಬಾಗಿಲ ಬಿಗ ಒಡೆದು ಕಳ್ಳತನ ಮಾಡುತ್ತಿದ್ದಾನೆ.


ಈತ ಮಾಡಿದ ಬಹುತೇಕ ಮನೆಗಳಲ್ಲಿ ಯಾರೂ ಇರಲಿಲ್ಲ. ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಟಾರ್ಗೆಟ್ ಮಾಡುವ ಕಳ್ಳ, ತನ್ನ ಕರಾಮತ್ತು ತೋರಿಸಿ ಎಸ್ಕೆಪ್ ಆಗುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಜೊತೆ ಧಾರವಾಡದ ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.


ಜನತೆಯಲ್ಲಿ ಹೆಚ್ಚಿದ ಆತಂಕ


ಇಪ್ಪತ್ತು ವರ್ಷಗಳಿಂದ ಇದೇ ಮನೆಯಲ್ಲಿದ್ದೇವೆ. ಪತಿಯ ವರ್ಗಾವಣೆ ಕಾರಣಕ್ಕೆ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಶಿಫ್ಟ್ ಆಗಿದ್ದವು. ಆಗಾಗ ಬಂದು ಹೋಗುತ್ತಿದ್ದೇವೆ. ಇಷ್ಟರೊಳಗೆ ಈ ರೀತಿ ಕಳ್ಳತನವಾಗಿದೆ. ಈ ಘಟನೆಯಿಂದಾಗಿ ಮನೆಯಲ್ಲಿ ಇರಲು ಸಹ ಭಯ ಆಗ್ತಿದೆ. ನಮ್ಮ ಬಡಾವಣೆಯೊಂದರಲ್ಲಿಯೇ ಐದಕ್ಕೂ ಹೆಚ್ಚು ಮನೆಗಳು ಕಳ್ಳತನವಾಗಿವೆ. ಹೀಗೆ ಆದ್ರೆ ಜೀವನ ಮಾಡೋದು ಹೇಗೆ ಅಂತ ಮಯೂರಿ ಎಸ್ಟೇಟ್ ನಿವಾಸಿ ಶಾರದಾ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ:  Shivamogga: ಭಜರಂಗದಳದ ಕಾರ್ಯಕರ್ತನ ಹತ್ಯೆ ಯತ್ನ ಕೇಸ್​ಗೆ ಬಿಗ್ ಟ್ವಸ್ಟ್​; ಸುನಿಲ್ ವಿರುದ್ಧ ದೂರು ದಾಖಲು


ಈ ಕುರಿತು ಅಶೋಕ ನಗರ ಸೇರಿ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಮಂಕಿ ಕ್ಯಾಪ್ ಕಳ್ಳ ಮಾತ್ರ ಪೊಲೀಸರ ಬಲೆಗೆ ಬಿದ್ದಿಲ್ಲ. ಈತನ ಜೊತೆ ಮತ್ತಿನ್ಯಾರಾದರೂ ಇದ್ದಾರೆಯಾ ಅನ್ನೋದರ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕಳ್ಳನನ್ನು ಬಂಧಿಸಿ, ನೆಮ್ಮದಿ ನೀಡುವಂತೆ ಸಾರ್ವಜನಿಕರು ಪೊಲೀಸರನ್ನು ಆಗ್ರಹಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: