ಉತ್ತರ ಕನ್ನಡ: ಗಂಟಲಲ್ಲಿ ಸಮೋಸ ಸಿಲುಕಿ ಬಿಕ್ಕು ಸಾವು

ಒಂದು ದಿನದ ಹಿಂದೆ ಅಂದರೆ ಸೋಮವಾರ ತನ್ನ ಕೊಠಡಿಯಲ್ಲಿ ಬಿಕ್ಕು ಸಮೋಸಾ ತಿನ್ನುತ್ತಿದ್ದರು. ಈ ವೇಳೆ ಸಮೋಸ ಗಂಟಲಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಬಿಕ್ಕಳಿಕೆ ಬಂದು ಉಸಿರಾಡಲು ಸಾಧ್ಯವಾಗದೇ ಬಿಕ್ಕು ಸಾವನ್ನಪ್ಪಿದ್ಧಾರೆ.

ಮಂಗೋಲಿಯಾ ಬಿಕ್ಕು

ಮಂಗೋಲಿಯಾ ಬಿಕ್ಕು

 • Share this:
  ಉತ್ತರ ಕನ್ನಡ(ಜೂ.30): ಸಮೋಸ ಗಂಟಲಲ್ಲಿ ಸಿಲುಕಿದ ಪರಿಣಾಮ ಉಸಿರಾಡಲಾಗದೇ ಬಿಕ್ಕು ಒಬ್ಬರು ಸಾವನ್ನಪ್ಪಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ಸೋಮವಾರ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

  ಮಂಗೋಲಿಯಾ ದೇಶದ ಬಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ (18) ಎಂಬುವರು ಮೃತಬಿಕ್ಕು ಎಂದು ಗುರುತಿಸಲಾಗಿದೆ. ಈ ಬಿಕ್ಕು ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ ನಂ.2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಿದ್ದರು ಎನ್ನಲಾಗಿದೆ.

  ಒಂದು ದಿನದ ಹಿಂದೆ ಅಂದರೆ ಸೋಮವಾರ ತನ್ನ ಕೊಠಡಿಯಲ್ಲಿ ಬಿಕ್ಕು ಸಮೋಸಾ ತಿನ್ನುತ್ತಿದ್ದರು. ಈ ವೇಳೆ ಸಮೋಸ ಗಂಟಲಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಬಿಕ್ಕಳಿಕೆ ಬಂದು ಉಸಿರಾಡಲು ಸಾಧ್ಯವಾಗದೇ ಬಿಕ್ಕು ಸಾವನ್ನಪ್ಪಿದ್ಧಾರೆ.

  ಇದನ್ನೂ ಓದಿ: ಕೊರೋನಾ ತಡೆ ಸಂಬಂಧ ಖಾಸಗಿ ವೈದ್ಯಕೀಯ ಕಾಲೇಜು ಮುಖ್ಯಸ್ಥರ ಜತೆ ಸಿಎಂ ಸಭೆ: ಇಲ್ಲಿವೆ ಮುಖ್ಯಾಂಶಗಳು

  ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೆಯೇ ಬಿಕ್ಕು ಮೃತ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
  First published: